ಹಳೆ ಸಾಕ್ಸ್ ಮರು ಬಳಕೆಗೆ ಟಿಪ್ಸ್
Team Udayavani, Sep 1, 2018, 2:25 PM IST
ಅಂದದ ಕಾಲಿಗೆ ಚಂದದ ಕಾಲುಚೀಲ. ಹಳೆಯದಾದ ಮೇಲೆ?… ಸುಂದರವಾದ ಪಾದಗಳ ರಕ್ಷಣೆಗೆ ಕಾಲುಚೀಲಗಳನ್ನು ಬಳಸುವ ನಾವು, ಅದು ಬಣ್ಣ ಕಳೆದುಕೊಂಡು ಹಳೆಯದಾಯಿತು ಎಂದಾಕ್ಷಣ ಎಸೆದು ಬಿಡುತ್ತೇವೆ. ಆದರೆ ದೂಳು, ಅಲರ್ಜಿಯಿಂದ ನಮ್ಮ ಕಾಲಿಗೆ ರಕ್ಷಣೆ ನೀಡುವ ಕಾಲುಚೀಲಗಳು ಹಳೆಯದಾದ ಮೇಲೆಯೂ ಬೇರೆ ಬೇರೆ ಕೆಲಸಗಳಿಗೆ ಉಪಯೋಗಕ್ಕೆ ಬರುತ್ತದೆ. ಕಸದಿಂದ ರಸ ಅಂದರೆ ಅನುಪಯುಕ್ತ ವಸ್ತುಗಳನ್ನೂ ಉಪಯುಕ್ತ ವಸ್ತುಗಳನ್ನಾಗಿ ಪರಿವರ್ತಿಸುವುದು ಒಂದು ಸುಂದರ ಕಲೆ. ಅದಕ್ಕೆ ಸಾಕ್ಸ್ ಕೂಡಾ ಹೊರತಾಗಿಲ್ಲ. ಹೌದು ನಮ್ಮ ದೈನಂದಿನ ಜೀವನದಲ್ಲಿ ಹಳೆಯ, ಎಸೆಯುವ ಸಾಕ್ಸ್‌ಗಳನ್ನು ಹೇಗೆಲ್ಲಾ ಉಪಯೋಗಕಾರಿಯಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಇಲ್ಲಿದೆ ಒಂದಷ್ಟು ಟಿಪ್ಸ್.
ಬಾಡಿ ಸ್ಕ್ರಬರ್ ಆಗಿ ಬಳಸಿ
ಎಸೆಯಲು ಎತ್ತಿಟ್ಟ ಸಾಕ್ಸ್ ಅನ್ನು ಸ್ವಚ್ಛಗೊಳಿಸಿ, ಅದರೊಳಕ್ಕೆ ಸಾಬೂನು ತುಂಬಿಸಿ. ಅನಂತರ ಅದರಿಂದ ದೇಹವನ್ನು ಉಜ್ಜುವುದರಿಂದ (ಬಾಡಿ ಸ್ಕ್ರಬ್) ದೇಹ ಹೆಚ್ಚು ಸ್ವಚ್ಛವಾಗಿರುವಂತೆ ಕಾಪಾಡಿಕೊಳ್ಳಬಹುದು. ಅಲ್ಲದೆ ಬ್ರಶ್ ಗಳ ಸಹಾಯದಿಂದ ದೇಹ ಶುಚಿಗೆ ಪ್ರಯತ್ನಿಸಿದಾಗ ಸೂಕ್ಷ್ಮ ತಂತುಗಳಿಗೆ ಹಾನಿಯಾಗುವ ಸಾಧ್ಯತೆಗಳೂ ಇರುತ್ತವೆ. ಆದ್ದರಿಂದ ಮೃದುವಾದ ಸಾಕ್ಸ್‌ಗಳನ್ನು ಬಳಸಿ ಸ್ಕ್ರಬ್ ಮಾಡಿದಾಗ ದೇಹಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಇದು ಆರೋಗ್ಯಕರವೂ ಹೌದು.
ಮನೆಯ ಸ್ವಚ್ಛತೆಯಲ್ಲಿ ಹಳೆಯ ಸಾಕ್ಸ್‌ಗಳು
ಮನೆಯ ಅಡುಗೆ ಕೋಣೆ, ಕಿಟಕಿ, ಟಿವಿ ಸ್ಟಾಂಡ್ ಸಹಿತ ಇನ್ನಿತರ ಉಪಕರಣಗಳು ದೂಳಿನಿಂದ ತುಂಬಿದ್ದರೆ, ಹಳೆಯ ಸಾಕ್ಸನ್ನು ಸೋಪ್ ವಾಟರ್‌ನಿಂದ ಅದ್ದಿ, ಧೂಳು ತುಂಬಿದ ಕಡೆಗಳಲ್ಲೆಲ್ಲ ತಿಕ್ಕಿದಾಗ ಮನೆ ಸ್ವಚ್ಛವಾಗುತ್ತದೆ.
ನೋವು ನಿವಾರಿಸಲು ಶಾಖ ನೀಡಲು
ಉಳುಕು ಅಥವಾ ಇನ್ನಿತರ ರೀತಿಯಲ್ಲಿ ದೇಹದ ಬೇರೆ ಬೇರೆ ಭಾಗಗಳಲ್ಲಿ ನೋವು- ಬಾವುಗಳಾದ ಸಂದರ್ಭದಲ್ಲಿ ಅದಕ್ಕೆ ಶಾಖ ನೀಡುವುದು ಉತ್ತಮ ಪರಿಹಾರ. ಇಂತಹ ಸಂದರ್ಭದಲ್ಲಿ ಹಳೆಯ ಸಾಕ್ಸ್‌ಗಳನ್ನು ಬಳಕೆ ಮಾಡಿ ಶಾಖ ನೀಡಬಹುದು. ಸಾಕ್ಸನ್ನು ಬಿಸಿ ನೀರಿನಲ್ಲಿ ಅದ್ದಿ ನೋವಿನ ಭಾಗಗಳಿಗೆ ಕಾವು ಕೊಟ್ಟಾಗ ನೋವೂ ಶಮನವಾಗುತ್ತದೆ.
ಐಸ್ ಪ್ಯಾಕ್ ಬಳಕೆಗೆ
ಮುಖ, ದೇಹದ ಇತರ ಭಾಗಗಳಿಗೆ ಐಸ್ ಪ್ಯಾಕ್‌ನಿಂದ ಮಸಾಜ್ ಮಾಡುವವರು ಹಳೆಯ ಸಾಕ್ಸ್‌ನೊಳಗೆ ಮಂಜುಗಡ್ಡೆ ತುಂಬಿ ಐಸ್ ಪ್ಯಾಕ್ ಮಾಡಿಕೊಂಡು, ಮಸಾಜ್ ಮಾಡಬಹುದು.
ಕಪ್ಪು ಹಲಗೆ ಶುಚಿಗೊಳಿಸಲು
ಶಾಲಾ ಕಾಲೇಜುಗಳಲ್ಲಿ ಕಪ್ಪು ಹಲಗೆಗಳ ಬಳಕೆ ಹೆಚ್ಚು. ಬೋರ್ಡ್ ಹಳೆಯದಾದಂತೆ ಅದಕ್ಕೆ ಅಂಟಿದ ಅಕ್ಷರಗಳನ್ನು ಡಸ್ಟರ್‌ನಲ್ಲಿ ಉಜ್ಜಿದರೂ ಹೋಗದೆ ಉಳಿದಿರುತ್ತವೆ. ಇಂತಹ ಸಂದರ್ಭದಲ್ಲಿ ಹಳೆಯ ಸಾಕ್ಸ್‌ನೊಳಕ್ಕೆ ಹತ್ತಿ ಅಥವಾ ಬಟ್ಟೆ ತುಂಬಿ, ನೀರಿನಲ್ಲಿ ಅದ್ದಿ ಬೋರ್ಡ್ ಉಜ್ಜಿದಾಗ ಕಪ್ಪು ಹಲಗೆ ಶುಭ್ರವಾಗುತ್ತದೆ. ಮಾತ್ರವಲ್ಲದೆ ಬರೆದ ಅಕ್ಷರಗಳು ಹೆಚ್ಚು ಬ್ರೈಟ್ ಆಗಿ ಕಾಣಿಸಲು ಸಾಧ್ಯವಾಗುತ್ತದೆ.
ಹಳೆಯದಾಯಿತು ಅಂತ ಹೊಸತನ್ನು ಕೊಳ್ಳುವುದರತ್ತವೇ ಚಿತ್ತ ಹರಿಸುವ ನಾವು, ಹಳೆಯ ವಸ್ತುಗಳಿಗೆ ಮತ್ತೆ ಮರುಜೀವ ನೀಡಲು ಸಾಧ್ಯವೇ ಎಂದು ಯೋಚಿಸುವುದಿಲ್ಲ. ಎಸೆಯುವ ಮುನ್ನ ಒಮ್ಮೆ ಯೋಚಿಸಿ. ಆಗ ನಿಮ್ಮ ಸಾಕ್ಸ್‌ಗಳೂ ನಿಮ್ಮ ಯೋಚನೆಗೆ ತಕ್ಕಂತೆ ಮರು ನವೀಕರಣ ಹೊಂದಬಹುದು.
. ಗೊಂಬೆಗಳ ತಯಾರಿ ಸಾಕ್ಸ್ ಹಳೆಯದಾಗಿದೆ. ಇನ್ನು ಬಳಸೋದಿಕ್ಕಂತೂ ಬರಲ್ಲ. ಹಾಗಾದ್ರೆ ಒಂದು ಕೆಲಸ ಮಡಿ, ಎಸೆಯೋದಕ್ಕಿಂತ ಅದರೊಳಗೆ ಹತ್ತಿ ತುಂಬಿ, ರಬ್ಬರ್ ಬ್ಯಾಂಡ್‌ಗಳನ್ನು ಬಳಕೆ ಮಾಡುವ ಮೂಲಕ ಬೇರೆ ಬೇರೆ ಆಕೃತಿಯ ಗೊಂಬೆಗಳನ್ನು ತಯಾರಿಸಬಹುದು. ತಯಾರಿಸುವುದು ಹೇಗೆ ಅಂತ ಯೋಚಿಸುವವರಿಗೆ ಇದ್ದೇ ಇದೆಯಲ್ಲ ಸಹಾಯ ಮಡುವುದಕ್ಕೆ ಇಂಟರ್‌ನೆಟ್.
ಭುವನಾ ಬಾಬು ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.