ಟಿಎಂಆರ್ ಪದ್ಧತಿ ಜಾನುವಾರು ಆಹಾರಕ್ಕೆ ವರದಾನ
Team Udayavani, Oct 13, 2019, 5:37 AM IST
ನಮ್ಮಲ್ಲಿ ಭತ್ತದ ಹುಲ್ಲು, ಕರಡ ಹೆಚ್ಚಾಗಿ ಲಭ್ಯವಿರುವ ಜಾನುವಾರು ಆಹಾರವಾಗಿದೆ. ಅವುಗಳನ್ನು ಸೇವಿಸುವ ಪ್ರಮಾಣ ಶೇ. 1ರಿಂದ 15ರಷ್ಟು ಮಾತ್ರ ಅಂದರೆ 10 ಕೆ.ಜಿ. ತಿನ್ನುವ ಜಾನುವಾರು 5 ಕೆ.ಜಿ. ಮಾತ್ರ ತಿನ್ನುತ್ತದೆ. ಇದರಿಂದ 5 ಕೆ.ಜಿ. ಒಣ ಪದಾರ್ಥ ಕಡಿಮೆಯಾಗಿ ಅದರಲ್ಲೂ ನಾರಿನಂಶ ಕಡಿಮೆಯಾಗಿ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಅದಕ್ಕಾಗಿ ಟಿಎಂಆರ್ ತಣ್ತೀ ಅಳವಡಿಸಿದಲ್ಲಿ ಸಮಸ್ಯೆ ಪರಿಹಾರ.
ಕರಾವಳಿ ಮತ್ತು ಮಲೆನಾಡಿನಲ್ಲಿ ನಮ್ಮ ರೈತರು ಜಾನುವಾರುಗಳಿಗೆ ಸಾಕಷ್ಟು ಆಹಾರ ನೀಡಿದರೂ ಬಯಲು ಸೀಮೆಯ ರೈತರ ಜಾನುವಾರುಗಳಿಗೆ ಹೋಲಿಸಿದರೆ ಅಷ್ಟೊಂದು ಆರೋಗ್ಯವಂತವಾಗಿರುವುದಿಲ್ಲ ಎಂಬ ಕೊರಗು ಇಲ್ಲಿಯ ರೈತರಲ್ಲಿದೆ. ಸಾಮಾನ್ಯವಾಗಿ ಭತ್ತದ ಹುಲ್ಲು, ಕರಡ, ಹಸಿರು ಮೇವು, ಹಿಂಡಿ ಮಿಶ್ರಣವನ್ನು ಇಲ್ಲಿಯವರು ಉಪಯೋಗಿಸಿದರೆ, ಬಯಲು ಸೀಮೆಯವರು ಜೋಳದ ದಂಟು, ಭತ್ತದ ಹುಲ್ಲು ಹಾಕುತ್ತಾರೆ. ಅವರು ಹಿಂಡಿಯನ್ನು ಅಷ್ಟಾಗಿ ಬಳಸುವುದಿಲ್ಲ. ಹವಾಮಾನ ವ್ಯತ್ಯಾಸ ಒಂದನ್ನು ಬಿಟ್ಟರೆ ಆಹಾರದ ಮೂಲದಲ್ಲಿ ವ್ಯತ್ಯಾಸ ಇಲ್ಲದಿದ್ದರೂ ಆರೋಗ್ಯದಲ್ಲಿ ಮಾತ್ರ ಅಜಗಜಾಂತರ ಇದೆ.
ಆರೋಗ್ಯವಂತ ಜಾನುವಾರುಗಳಿಗೆ ತನ್ನ ದೇಹ ತೂಕದ ಶೇ. 2ರಿಂದ 3ರಷ್ಟು ಒಣ ಪದಾರ್ಥದ ಆವಶ್ಯಕತೆ ಇದೆ. ಒಣಹುಲ್ಲು, ತಿಂಡಿ ಮಿಶ್ರಣ ಸೇರಿ ಇದನ್ನು ನಿರ್ಧರಿಸಬೇಕು. ಒಟ್ಟಾರೆ ಶೇ. 70ರಿಂದ 75ರಷ್ಟು ನಾರಿನ ಪದಾರ್ಥಗಳಾದ ಹುಲ್ಲು, ಸೊಪ್ಪು, ಕರಡ, ಜೋಳದ ದಂಟು ಇತ್ಯಾದಿ ಇರಬೇಕು. ಒಣ ಪದಾರ್ಥ ಸೇವನೆ ಕಡಿಮೆಯಾಗುತ್ತಿದ್ದಂತೆ ಹಿಂಡಿ ಮಿಶ್ರಣ ಹಾಕಿ ಜಾಸ್ತಿ ಮಾಡಿದರೂ ನಾರಿನಂಶದ ಕೊರತೆಯಿಂದ ಇವುಗಳು ಆರೋಗ್ಯವಂತವಾಗಿರುವುದಿಲ್ಲ.
ಜಾನುವಾರುಗಳು ಮೂಲತಃ ಒಣಹುಲ್ಲು, ಕರಡ, ಸೊಪ್ಪು ಇತ್ಯಾದಿ ತಿಂದು ಬದುಕುವ ಪ್ರಾಣಿ. ಹೆಚ್ಚು ಉತ್ಪಾದನೆ ಮಾಡುವುದಕ್ಕೆ ಹಿಂಡಿ ಮಿಶ್ರಣ ಹಾಕಲಾಗುತ್ತದೆ. ಆದರೆ ಒಣಹುಲ್ಲು, ಕರಡ ಕಡಿಮೆ ಮಾಡಿದಲ್ಲಿ ಅವುಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಹುಲ್ಲನ್ನು ಹಾಕದೇ ಬರೀ ಹಿಂಡಿ ಮಿಶ್ರಣದಿಂದ ಯಾವ ಜಾನುವಾರುಗಳೂ ಬದುಕಲಾರವು. ಅದೇ ಉತ್ತಮ ಗುಣಮಟ್ಟದ ಹುಲ್ಲನ್ನು ಹಾಕಿದರೆ ಹಿಂಡಿಯ ಮಿಶ್ರಣ ಇಲ್ಲದೆ ಇವುಗಳು ಆರೋಗ್ಯವಾಗಿ ಇರಬಲ್ಲವು. ಆದ್ದರಿಂದ ರೈತರು ಆಹಾರ ಹಾಕುವ ಪದ್ಧತಿಯಲ್ಲಿ ಬದಲಾವಣೆ ಮಾಡಿ ಟಿಎಂಆರ್ ತಣ್ತೀ ಅಳವಡಿಸಿದಲ್ಲಿ ಈ ಎಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಇದರ ಹೊರತಾಗಿ ಇನ್ನೂ ಅನೇಕ ಪರೋಕ್ಷ ಪ್ರಯೋಜನವನ್ನು ಈ ಪದ್ಧತಿಯಲ್ಲಿ ಪಡೆಯಬಹುದು. ಹೈನುಗಾರಿಕೆ, ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಈ ತಣ್ತೀ ಅಳವಡಿಸಿದಲ್ಲಿ ಯಾವುದೇ ಹೆಚ್ಚು ಖರ್ಚು ಇಲ್ಲದೆ ಇದ್ದ ವ್ಯವಸ್ಥೆಯಲ್ಲೇ ಹೆಚ್ಚು ಹಾಲಿನ ಉತ್ಪಾದನೆ ಮಾಡಬಹುದಾಗಿದೆ.
ಟಿಎಂಆರ್ ಪದ್ಧತಿ ಎಂದರೇನು?: ಟಿಎಂಆರ್ ಪದ್ಧತಿ ಎಂದರೆ (ಟೋಟಲ್ ಮಿಕ್ಸ್‌ಡ್ ರೇಶನ್) ಒಟ್ಟಾರೆ ಮಿಶ್ರಣ ಆಹಾರ ಎಂದರ್ಥ. ಈ ಪದ್ಧತಿಯಲ್ಲಿ ಹುಲ್ಲು, ಹಸಿಹುಲ್ಲು, ಕರಡ ಇತ್ಯಾದಿಗಳನ್ನು ಸಣ್ಣದಾಗಿ ಕತ್ತರಿಸಿ ಅವುಗಳಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಹಿಂಡಿ, ಲವಣ ಮಿಶ್ರಣ, ಉಪ್ಪು, ಬೆಲ್ಲ ಸೇರಿಸಿ ಜಾನುವಾರು ಗಳಿಗೆ ನೀಡುವ ಪದ್ಧತಿಯೇ “ಟಿಎಂಆರ್ ಪದ್ಧತಿ’ ಎಂದು ಕರೆಯುತ್ತಾರೆ. ಇದನ್ನು ಇವುಗಳ ದೇಹದ ತೂಕ, ಹಾಲಿನ ಉತ್ಪಾದನೆ, ಗರ್ಭಧಾರಣೆಗೆ ಅನುಗುಣವಾಗಿ ನೀಡಬೇಕು.
ಟಿಎಂಆರ್ ಪದ್ಧತಿಯ ಉಪಯೋಗ
1 ಒಟ್ಟಾರೆ ಒಣ ಪದಾರ್ಥ ಸೇವನೆ ಹೆಚ್ಚಳ. ಹುಲ್ಲು ರುಚಿಕರವಾಗಿರುವುದರಿಂದ ಜಾನುವಾರುಗಳು ಕಷ್ಟಪಟ್ಟು ತಿನ್ನದೇ ಇಷ್ಟಪಟ್ಟು ತಿನ್ನುತ್ತವೆ.
2 ಒಣ ಹುಲ್ಲು ಪೋಲು ತಡೆಗಟ್ಟಬಹುದು.
3 ಹಾಲಿನ ಪ್ರಮಾಣದಲ್ಲಿ ಹೆಚ್ಚಳ. ಪ್ರತಿಯೊಂದು ಕೆ.ಜಿ. ಒಣ ಮೇವಿನ ಹೆಚ್ಚುವರಿ ಸೇವನೆಯಿಂದ 0.9ರಿಂದ 1.5 ಲೀಟರ್ ಹಾಲು ಹೆಚ್ಚು ಉತ್ಪಾದನೆ ಮಾಡಬಹುದು.
4 ಜಿಡ್ಡಿನ ಪ್ರಮಾಣದಲ್ಲಿ ಹೆಚ್ಚಳ. ಜಾನುವಾರಿನ ಹೊಟ್ಟೆಯಲ್ಲಿ ರಸಸಾರ 6.2ರಿಂದ 6.8 ಇರುವುದರಿಂದ ಹೊಟ್ಟೆಯಲ್ಲಿ ಕ್ರಿಮಿಗಳು ಹೆಚ್ಚು ತಯಾರಾಗಿ ನೀರಿನ ಪದಾರ್ಥದ ಜೀರ್ಣಕ್ರಿಯೆ ಹೆಚ್ಚಾಗಿ ಆ್ಯಸಿಟಿಕ್ ಆಮ್ಲ ಹೆಚ್ಚು ತಯಾರಾಗಿ ಹಾಲಿನಲ್ಲಿ ಜಿಡ್ಡಿನ ಪ್ರಮಾಣ ಹೆಚ್ಚಳವಾಗುತ್ತದೆ.
5 ಆಹಾರ ಪದ್ಧತಿಯ ಏರುಪೇರಿನಿಂದ ಆಗುವ ಅಜೀರ್ಣ ತಡೆಗಟ್ಟಿದಂತಾಗುತ್ತದೆ.
6 ಗಮನಾರ್ಹವಾದ ಸಸಾರಜನಕ ಉತ್ಪಾದನೆಯಾಗುತ್ತದೆ. ರಸಸಾರ 6.2ರಿಂದ 6.8ರಲ್ಲಿ ಹೊಟ್ಟೆಯಲ್ಲಿರುವ ಕ್ರಿಮಿ ವೃದ್ಧಿಯಾಗಿ ಸಸಾರಜನಕ ಪ್ರಮಾಣ ಹೆಚ್ಚಳವಾಗುತ್ತದೆ.
7 ಲವಣ, ಹಿಂಡಿ ಮಿಶ್ರಣ ಪ್ರತ್ಯೇಕವಾಗಿ ನೀಡುವ ಆವಶ್ಯಕತೆ ಇಲ್ಲ.
8 ಈ ಪದ್ಧತಿಯಲ್ಲಿ ಜಾನುವಾರುಗಳು ಹುಲ್ಲು, ಹಿಂಡಿಯನ್ನು ಸಾವಕಾಶವಾಗಿ ಜಗಿದು ತಿನ್ನುವುದರಿಂದ ಜೊಲ್ಲಿನ ಪ್ರಮಾಣ ಹೆಚ್ಚಳವಾಗುತ್ತದೆ. ಇದು ಆಹಾರದೊಂದಿಗೆ ಸರಿಯಾಗಿ ಬೆರೆತು ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ.
9 ರೈತರು ಈ ಮಿಶ್ರಣವನ್ನು ಕನಿಷ್ಠ 3ರಿಂದ 4 ಬಾರಿ ನೀಡಬೇಕು. ಇದರಿಂದ ಆಹಾರ ಸಮಪ್ರಮಾಣದಲ್ಲಿ ಹೊಟ್ಟೆಗೆ ಸೇರಿ ತಿಂದ ಆಹಾರದ ಸಂಪೂರ್ಣ ಪ್ರಯೋಜನ ಇದಕ್ಕೆ ಲಭಿಸುತ್ತದೆ.
10 ಹಸಿರು ಮೇವು ಬಳಸುವಾಗ ಬಾಡಿಸಿ ನೀಡುವುದು ಉತ್ತಮ.
11 ಒಣ ಮೇವನ್ನು ಪುಷ್ಪೀಕರಿಸಿ ನೀಡುವ ಪದ್ಧತಿ ಅನುಸರಿಸುವ ರೈತರೂ ಸಹ ಈ ಹುಲ್ಲನ್ನು ಟಿಎಂಆರ್ ಪದ್ಧತಿ ಬಳಸಿ ನೀಡಬಹುದಾಗಿದೆ.
12 ಮಲೆನಾಡಿನಲ್ಲಿ ಹಾಳೆ, ಹೊಂಬಾಳೆ ಇತ್ಯಾದಿ ಕೃಷಿ ಉತ್ಪನ್ನ ಸಹ ಕಟಾವು ಮಾಡಿ ಈ ಪದ್ಧತಿ ಬಳಸಿ ನೀಡಬಹುದಾಗಿದೆ.
13 ಹಸಿ, ಒಣಹುಲ್ಲು ಎರಡೂ ಲಭ್ಯವಿದ್ದಾಗ ಶೇ. 50 ಒಣ ಹುಲ್ಲು, ಶೇ. 50 ಹಸಿಹುಲ್ಲು ಬೆರೆಸಿ ನೀಡುವುದು ಒಳ್ಳೆಯದು.
14 ಈ ತಣ್ತೀದಲ್ಲಿ ಅತಿ ಕೆಳಮಟ್ಟದ ಸಾಮಾನ್ಯ ಕ್ರಮದಲ್ಲಿ ಉಪಯೋಗಿಸಲಾಗದೆ ಇರುವ ಪದಾರ್ಥಗಳನ್ನು ಬಳಸಬಹುದಾಗಿದೆ. ಉದಾ: ಕಬ್ಬಿನ ಸಿಪ್ಪೆ.
- ಜಯಾನಂದ ಅಮೀನ್, ಬನ್ನಂಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.