ಶೀಘ್ರದಲ್ಲೇ ಮುಗಿಯಲಿ ಫ‌ುಟ್‌ಪಾತ್‌, ಚರಂಡಿ ಕಾಮಗಾರಿ


Team Udayavani, Apr 28, 2019, 6:00 AM IST

2704MLR102

ಮಂಗಳೂರು ನಗರದಲ್ಲಿ ವಿವಿಧ ಯೋಜನೆಗಳಲ್ಲಿ ಉನ್ನತೀಕರಣಗೊಂಡಿರುವ ರಸ್ತೆಗಳ ಫ‌ುಟ್‌ಪಾತ್‌, ಚರಂಡಿ ನಿರ್ಮಾಣ ಮತ್ತು ಕೆಲವೆಡೆ ರಸ್ತೆಗಳ ಅಗಲೀಕರಣ ಕಾಮಗಾರಿಗಳು ನಡೆಯುತ್ತಿವೆ. ಬಹುತೇಕ ಕಡೆಗಳಲ್ಲಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಇನ್ನೂ ಕೆಲವೆಡೆಗಳಲ್ಲಿ ಭೂಸ್ವಾಧೀನ, ಯುನಿಲಿಟಿ ಸೇವೆಗಳ ಸ್ಥಳಾಂತರ ಮೊದಲಾದ ಸಮಸ್ಯೆಗಳಿಂದ ಕಾಮಗಾರಿಗಳು ಅಲ್ಲಲ್ಲಿ ಅರ್ಧಕ್ಕೆ ನಿಂತಿದೆ. ಇನ್ನೂ ಒಂದೂವರೆ ತಿಂಗಳಿನಲ್ಲಿ ಮಳೆಗಾಲ ಪ್ರಾರಂಭವಾಗಲಿದೆ. ಈ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯದಿದ್ದರೆ ಮುಂದಿನ ಮಳೆಗಾಲದಲ್ಲಿ ನಗರ ಸಮಸ್ಯೆಗಳನ್ನು ಎದುರಿಸುವುದು ಖಚಿತ. ಹೀಗಾಗಿ ಮಳೆ ಆರಂಭದೊಳಗೆ ಈ ಎಲ್ಲ ಕಾಮಗಾರಿಗಳಿಗೆ ಪೂರ್ತಿಗೊಳಿಸಿ ಮಳೆ ನೀರು ವ್ಯವಸ್ಥಿತವಾಗಿ ಹರಿದು ಹೋಗಲು ಅನುವು ಮಾಡಿಕೊಡುವುದು ಅವಶ್ಯವಾಗಿದೆ.

ಮಂಗಳೂರು ನಗರದಲ್ಲಿ ಸುಮಾರು 15 ವರ್ಷಗಳ ಹಿಂದೆ ರಸ್ತೆ ಕಾಂಕ್ರೀಟಿಕರಣ, ಅಗಲೀಕರಣ ಕಾಮಗಾರಿಗಳು ನಡೆದಿರುವ ರಸ್ತೆಗಳಲ್ಲಿ ಇನ್ನೂ ಕೂಡ ಫುಟ್‌ಪಾತ್‌, ಚರಂಡಿ ಕಾಮಗಾರಿಗಳು ಪೂರ್ತಿಯಾಗಿಲ್ಲ. ಉರ್ವಸ್ಟೋರ್‌ನಿಂದ ಪಿವಿಎಸ್‌ ವೃತ್ತದವರೆಗಿನ ರಸ್ತೆ ಅಗಲೀಕರಣ ಹಾಗೂ ಕಾಂಕ್ರೀಟೀಕರಣ ಕಾಮಗಾರಿ ನಡೆದು ದಶಕವಾದರೂ ಇನ್ನೂ ಫುಟ್‌ಪಾತ್‌, ಚರಂಡಿ ಕಾಮಗಾರಿಗಳು ಮುಗಿದಿಲ್ಲ.
ಪ್ರಸ್ತುತ ಈ ಕಾಮಗಾರಿಗಳನ್ನು ಕೈಗೆತ್ತಿಕೊಂಡು ನಡೆಸಲಾಗುತ್ತಿದೆ. ಇದೇ ರೀತಿಯಾಗಿ ಬಂಟ್ಸ್‌ಹಾಸ್ಟೆಲ್‌ನಿಂದ ಕದ್ರಿ ಮಲ್ಲಿಕಟ್ಟೆ ರಸ್ತೆ, ಲೇಡಿಹಿಲ್‌ನಿಂದ ಬಳ್ಳಾಲ್‌ಭಾಗ್‌, ಲೇಡಿಹಿಲ್‌ನಿಂದ ಉರ್ವ ಮಾರುಕಟ್ಟೆ, ಕರಂಗಲ್ಪಾಡಿ ರಸ್ತೆ, ಬಂಟ್‌ಹಾಸ್ಟೆಲ್‌ನಿಂದ ಅಂಬೇಡ್ಕರ್‌ ವೃತ್ತ ರಸ್ತೆ ಸಹಿತ ನಗರದಲ್ಲಿ ವಿವಿಧೆಡೆಗಳಲ್ಲಿ ಫುಟ್‌ಪಾತ್‌ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳು ಸಾಗುತ್ತಿದೆ. ಆದರೆ ಈ ಕಾಮಗಾರಿ ಆರಂಭಗೊಂಡು ತಿಂಗಳು ಕಳೆದರೂ ಇನ್ನೂ ಪೂರ್ಣಗೊಳ್ಳುವ ಹಂತಕ್ಕೆ ತಲುಪಿಲ್ಲ.

ಇನ್ನೊಂದು ಸಮಸ್ಯೆ ಎಂದರೆ ಕಾಮಗಾರಿಗಳು ಅಲ್ಲಲಿ ಸರಾಗವಾಗಿ ನಡೆಯದೆ ಮಧ್ಯೆ ಬಿಟ್ಟು ಬಿಟ್ಟು ಆಗಿರುವುದು. ಉದಾಹರಣೆಗೆ ಬಂಟ್ಸ್‌ಹಾಸ್ಟೆಲ್‌ನಿಂದ ಕರಂಗಲ್ಪಾಡಿವರೆಗಿನ ರಸ್ತೆಯಲ್ಲಿ ಎರಡು ಕಡೆ ಚರಂಡಿ ಹಾಗೂ ಫುಟ್‌ಪಾತ್‌ ಕಾಮಗಾರಿಗಳು ಅರ್ಧಕ್ಕೆ ಮೊಟಕುಗೊಂಡಿದೆ.

ವಿದ್ಯುತ್‌ ಕಂಬ ಸ್ಥಳಾಂತರವಾಗದೆ ಬಾಕಿಯುಳಿದಿದೆ. ಕೆಲವು ಕಡೆಗಳಲ್ಲಿ ರಸ್ತೆ ಅಗಲೀಕರಣಗೊಂಡಿದೆ. ಆದರೆ ಚರಂಡಿ ಫುಟ್‌ಪಾತ್‌ ಮಾಡಲು ಸ್ಥಳಾವಕಾಶವೇ ಇಲ್ಲ. ಹೊಸದಾಗಿ ಭೂಸ್ವಾಧೀನ ಮಾಡಬೇಕಾಗಿದೆ. ಇದೇ ರೀತಿ ವಿವಿಧ ಕಾರಣಗಳಿಗಾಗಿ ಹಲವೆಡೆ ಇಂತಹ ಸಮಸ್ಯೆಗಳಾಗಿದ್ದು, ಅರೆಬರೆ ಕಾಮಗಾರಿಗಳು ನಡೆದಿವೆ. ಕಾಮಗಾರಿಯನ್ನು ಪೂರ್ಣಗೊಳಿಸಿ ಮುಖ್ಯ ಚರಂಡಿಗೆ ಸಂಪರ್ಕ ಕಲ್ಪಿಸುವ ಕಾರ್ಯ ನಡೆಯದಿದ್ದರೆ ಮುಂದಿನ ಮಳೆಗಾಲದಲ್ಲಿ ಮಳೆ ನೀರು ರಸ್ತೆಗಳಲ್ಲಿ ಉಕ್ಕಿ ಹರಿದು ಕೃತಕ ನೆರೆ ತಲೆದೋರುವ ಸಾಧ್ಯತೆಗಳಿವೆ.

ಇನ್ನೂ ಹಲವು ಕಡೆಗಳಲ್ಲಿ ಫುಟ್‌ಪಾತ್‌, ಚರಂಡಿಗಳ ಕಾಮಗಾರಿಗಳನ್ನು ಕೈಗೆತ್ತಿಕೊಂಡಿಲ್ಲ. ಅಂಬೇಡ್ಕರ್‌ ವೃತ್ತದಿಂದ ಸ್ಟೇಟ್‌ಬ್ಯಾಂಕ್‌ವರೆಗೆ ರಸ್ತೆ ಕಾಂಕ್ರೀಟೀಕರಣಗೊಂಡು ಹಲವು ವರ್ಷಗಳಾದರೂ ಕೆಲವೆಡೆ ಇನ್ನೂ ಚರಂಡಿ, ಫುಟ್‌ಪಾತ್‌ ಕಾಮಗಾರಿಗಳು ಬಾಕಿಯುಳಿದಿವೆ. ನಗರದ ಕೇಂದ್ರ ಪ್ರದೇಶಗಳಾದ ರಾವ್‌ ಆ್ಯಂಡ್‌ ರಾವ್‌ ಸರ್ಕಲ್‌ನಿಂದ ಹಂಪನಕಟ್ಟೆ ಸಿಗ್ನಲ್‌ ವೃತ್ತದವರೆಗಿನ ರಸ್ತೆ (ಬಲಬದಿ) ಕೆ.ಎಸ್‌. ರಾವ್‌ ರಸ್ತೆಯಿಂದ ಪಿವಿಎಸ್‌ ವೃತ್ತ , ಗಣಪತಿ ಹೈಸ್ಕೂಲ್‌ ರಸ್ತೆ , ಕೇಂದ್ರ ಮಾರುಕಟ್ಟೆ ರಸ್ತೆ, ಭವಂತಿ ಸ್ಟ್ರೀಟ್‌, ರಾಘವೇಂದ್ರ ಮಠ ರಸ್ತೆ, ಲೇಡಿಗೋಶನ್‌ನ ಹಿಂಭಾಗದ ಬೇಬಿ ಅಲಾಬಿ ರಸ್ತೆ, ಕೊಡಿಯಾಲ್‌ ವೃತ್ತದಿಂದ ಪಿವಿಎಸ್‌ ವೃತ್ತದ ವರೆಗಿನ ರಸ್ತೆ ಸೇರಿದಂತೆ ಪ್ರಮುಖ ಪ್ರದೇಶಗಳು ಇದರಲ್ಲಿ ಸೇರಿದೆ. ಅಪೂರ್ಣ ಮತ್ತು ಅಸಮರ್ಪಕ ಫುಟ್‌ಪಾತ್‌ ಹಾಗೂ ಚರಂಡಿಯಿಂದಾಗಿ ಮಳೆ ಬಂದಾಗ ನೀರು ಪ್ರವಾಹದ ರೂಪದಲ್ಲಿ ರಸ್ತೆಯಲ್ಲಿ ಹರಿಯುತ್ತದೆ.

ಕೆಲವು ಕಡೆ ಕೊಳದ ರೂಪವನ್ನು ಪಡೆದುಕೊಳ್ಳುತ್ತದೆ. ಈ ಅವ್ಯವಸ್ಥೆಗೆ ಯೋಜನೆಯಲ್ಲಿ ಲೋಪ ಒಂದೆಡೆಯಾದರೆ. ಚರಂಡಿ ನಿರ್ಮಾಣ ಕಾರ್ಯವನ್ನು ವಹಿಸಿಕೊಂಡಿರುವ ಗುತ್ತಿಗೆ ಸಂಸ್ಥೆ ಅರ್ಧಂಬರ್ಧ ಕಾಮಗಾರಿ ನಿರ್ಮಿಸಿ ಹಾಗೆಯೇ ಬಿಟ್ಟಿರುವುದು. ಕೆಲವು ಕಡೆ ಜಾಗ ವಿವಾದ ರಸ್ತೆ ಅಗಲೀಕರಣ ಮತ್ತು ವ್ಯವಸ್ಥಿತ ಚರಂಡಿ ನಿರ್ಮಾಣಕ್ಕೆ ಅಡಚಣೆಯಾಗಿದೆ. ಇದರಿಂದಾಗಿ ಮಳೆಗಾಲದಲ್ಲಿ ಸಮಸ್ಯೆ ಮುಂದುವರಿಯಲಿದೆ.

ಕಾಮಗಾರಿಗಳು ವ್ಯವಸ್ಥಿತವಾಗಿರಲಿ
ಪ್ರಸ್ತುತ ನಡೆದಿರುವ ಚರಂಡಿ, ಫುಟ್‌ಪಾತ್‌ ಕಾಮಗಾರಿಗಳಲ್ಲಿ ಕೆಲವು ಕಡೆ ಅವ್ಯವಸ್ಥೆಗಳು ಕಂಡುಬಂದಿದೆ. ನಗರದಲ್ಲಿ ಈ ಹಿಂದೆ ನಡೆದಿದ್ದ ಚರಂಡಿ ಕಾಮಗಾರಿಗಳಲ್ಲಿ ರಸ್ತೆಯ ನೀರು ಚರಂಡಿಯೊಳಗೆ ಹೋಗಲು ಸಮರ್ಪಕ ವ್ಯವಸ್ಥೆಗಳು ಇಲ್ಲದಿರುವುದು, ಇದ್ದರೂ ಅದನ್ನು ವ್ಯವಸ್ಥಿತವಾಗಿ ಮತ್ತು ಯೋಜನಾಬದ್ಧವಾಗಿ ಮಾಡದಿರುವ ಪರಿಣಾಮ ಮಳೆಗಾಲದಲ್ಲಿ ನೀರು ಚರಂಡಿಯೊಳಗೆ ಹೋಗದೆ ನೀರಿನ ಜತೆಯೇ ಪಾದಚಾರಿಗಳು, ವಾಹನಗಳು ಸಾಗಬೇಕಾದ ಅನಿವಾರ್ಯತೆ ಇದೆ. ಹಿಂದಿನ ಕಾಮಗಾರಿಗಳಲ್ಲಿ ಕಂಡುಬಂದಿರುವ ಸಮಸ್ಯೆಗಳನ್ನು ಗಮನಿಸಿಕೊಂಡು ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳ ಸಂದರ್ಭದಲ್ಲಿ ಈ ಲೋಪಗಳನ್ನು ಸರಪಡಿಸುವ ಬಗ್ಗೆಯೂ ಕ್ರಮಗಳನ್ನು ಕೈಗೊಂಡರೆ ಉತ್ತಮ.

ಅಡಚಣೆಗಳ ನಿವಾರಣೆ
ಹೊಸದಾಗಿ ಚರಂಡಿ, ಫುಟ್‌ಪಾತ್‌ಗಳ ನಿರ್ಮಾಣದ ಜತೆಗೆ ಈ ಹಿಂದಿನ ವರ್ಷಗಳಲ್ಲಿ ಮಳೆಗಾಲದಲ್ಲಿ ಕೃತಕ ನೆರೆ ಕಂಡುಬಂದಿರುವ ರಸ್ತೆಗಳಲ್ಲಿ ಈ ಬಾರಿ ಇಂತಹ ಸಮಸ್ಯೆ ತಲೆದೋರದಂತೆ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ. ಜ್ಯೋತಿವೃತ್ತ, ಬಂಟ್‌ಹಾಸ್ಟೆಲ್‌, ಕದ್ರಿ ಕಂಬಳ, ಬಿಜೈ, ಕೆ.ಎಸ್‌.ಆರ್‌. ರಾವ್‌ ರಸ್ತೆ, ಎಂ.ಜಿ. ರಸ್ತೆ ಮುಂತಾದೆಡೆಗಳಲ್ಲಿ ಮಳೆಗಾಲದಲ್ಲಿ ರಸ್ತೆಯೇ ತೋಡು ಆಗಿ ಪರಿವರ್ತನೆಗೊಳ್ಳುತ್ತಿದೆ. ಸಂಚಾರವೂ ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಲ್ಲಿ ಮಳೆ ನೀರು ಚರಂಡಿಗೆ ಸೇರಲು ಇರುವ ಅಡಚಣೆಗಳನ್ನು ನಿವಾರಿಸಬೇಕಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಅಧಿಕಾರಿಗಳು, ಸಿಬಂದಿ ಬ್ಯುಸಿಯಾಗಿದ್ದರು. ಈಗ ಚುನಾವಣೆ ಮುಗಿದಿದೆ. ಅಧಿಕಾರಿಗಳಿಗೆ ಇತರ ಕೆಲಸಗಳಿಗೆ ಗಮನಹರಿಸಲು ಅವಕಾಶ ಸಿಕ್ಕಿದೆ. ನಗರದಲ್ಲಿ ಪ್ರಸ್ತುತ ನಡೆಯುತ್ತಿರುವ ಚರಂಡಿ, ಫುಟ್‌ಪಾತ್‌ ಕಾಮಗಾರಿಗಳ ಪ್ರಗತಿ ಹಾಗೂ ಗುಣಮಟ್ಟ ಪರಿಶೀಲನೆ ನಡೆಸಿ ಮಳೆಗಾಲ ಆರಂಭಕ್ಕೆ ಮುಂಚಿತವಾಗಿ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವುದು ಅವಶ್ಯವಾಗಿದೆ.

  - ಕೇಶವ ಕುಂದರ್‌

ಟಾಪ್ ನ್ಯೂಸ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.