ಇಂದಿನ ಯೋಚನೆ ನಾಳೆಯ ಚಿಂತನೆ
Team Udayavani, Jan 20, 2020, 5:45 AM IST
ಭಾರತವೂ ಶರಣರ, ಮಹಾತ್ಮರ, ಆಧ್ಯಾತ್ಮಿಕ ಚಿಂತಕರ, ಮಹಾಪುರುಷರು ಹುಟ್ಟಿದ ನಾಡು. ದೇಶದ ಕಟ್ಟುವ ಕೈಂಕರ್ಯದಲ್ಲಿ ಇವರ ಮಾರ್ಗೋಪದೇಶಗಳು ಪ್ರಮುಖ ಪಾತ್ರ ವಹಿಸಿವೆ. ಅವರ ಚಿಂತನೆಗಳೇ ಅಷ್ಟು ಪರಿಣಾಮಕಾರಿ ಮತ್ತು ಪ್ರಬಲವಾಗಿರುತ್ತಿದ್ದವು ಎಂಬುವುದನ್ನು ನಾವು ಗೊತ್ತುಪಡಿಸಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ನಮಗೆ ಇಂತಹ ಮಹಾನ್ ವ್ಯಕ್ತಿಗಳ ಮಾರ್ಗದರ್ಶನದ ಅಧ್ಯಯನ ಅತ್ಯಗತ್ಯ.
ಈ ವಿಚಾರದ ಪ್ರಸ್ತಾವನೆಗೆ ಒಂದು ಬಹುಮುಖ್ಯ ಕಾರಣವೂ ಇದೆ. ಬಹುತೇಕ ಯುವಜನರು ತಮ್ಮ ಜೀವನದ ಬಗೆಗಿನ ತಾತ್ಸಾರಗಳನ್ನು ಗಮನಿಸಿದಾಗ ನಾವು ಮರುಕಪಡುವುದು ಸಹಜ. ಜೀವನವನ್ನು ಪ್ರೀತಿಸುವುದಕ್ಕಿಂತ ಹೆಚ್ಚು ನಾವು ತಾತ್ಸಾರವಾಗಿ ನೋಡಿದಾಗ ಖೇದ ಉಂಟಾಗುತ್ತದೆ. ಈ ನೆಲೆಯಲ್ಲಿ ನಾವು ಉತ್ತಮ ಚಿಂತನೆಗಳನ್ನು ರೂಢಿಸಿಕೊಳ್ಳುವುದು ಆವಶ್ಯಕ.
ನಮ್ಮ ಜೀವನವನ್ನು ರೂಪಿಸುವಲ್ಲಿ ನಮ್ಮ ಯೋಚನೆಗಳು ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತವೆ. what we think, we became (ಇಂದು ನಾವು ಏನು ಯೋಚಿಸುತ್ತೇವೆಯೋ, ನಾವು ನಾಳೆ ಅದೇ ಆಗುತ್ತೇವೆ ) ಎಂದು ಬುದ್ಧ ಹೇಳುತ್ತಾನೆ. ಇದರಂತೆ ನಮ್ಮ ಜೀವನದಲ್ಲಿ ನಾವು ಇಂದು ಮಾಡುವ ಯೋಚನೆಗಳು ನಮ್ಮ ನಾಳೆಯನ್ನು ಸೃಷ್ಟಿಸುತ್ತವೆ. ಅದಕ್ಕಾಗಿ ಇಂದೇ ನಾವು ಒಳ್ಳೆಯದ್ದನ್ನು ಯೋಚಿಸಬೇಕಾಗುತ್ತದೆ.
ನಮ್ಮ ಯೋಚನೆಗಳು ಹೇಗೆ ಇರಬೇಕು ಎಂಬ ಮಾದರಿ ನೋಡಿದಾಗ ಮನೆಯ ನಿರ್ಮಾಣದಂತೆಯ ಯೋಚನೆಗಳನ್ನು ನಿರ್ಮಿಸಿಕೊಳ್ಳಬೇಕಾಗಿದೆ. ಒಂದು ಮನೆಯನ್ನು ಹಂತ-ಹಂತವಾಗಿ ಹೇಗೆ ಮಾದರಿಯಾಗಿ ನಿರ್ಮಿಸುತ್ತಾರೋ, ನಾವು ಕೂಡ ಪ್ರತಿಯೊಂದು ಹಂತದಲ್ಲೂ ಕೂಡ ಹಾಗೇ ನಮ್ಮನ್ನು ರೂಢಿಸಿಕೊಳ್ಳಬೇಕಾಗಿದೆ. ಒಂದು ಮನೆಗೆ ಬುನಾದಿಯೇ ಬಹುಮುಖ್ಯ. ಕಲ್ಲು, ಮಣ್ಣು, ಜಲ್ಲಿ ಅಥವಾ ಇನ್ನೇನೂ ಹಾಕಿ ಒಟ್ಟಾರೆಯಾಗಿ ಮನೆಯನ್ನು ಗಟ್ಟಿಯಾಗಿರುವಂತೆ ಬುನಾದಿ ಗಟ್ಟಿ ಮಾಡಿಕೊಳ್ಳುತ್ತೇವೆ. ಪ್ರಾಥಮಿಕ ವಯಸ್ಸಿನಲ್ಲಿಯೇ ಉತ್ತಮ ಯೋಚನೆಗಳಿಂದ ನಮ್ಮನ್ನು ಗಟ್ಟಿ ಮಾಡಿಕೊಳ್ಳಬೇಕಾಗಿದೆ. ಇದಕ್ಕೆ ಬೇಕಾದ ಅಗತ್ಯ ಅಧ್ಯಯನ, ಬೋಧನೆ, ಮಾರ್ಗದರ್ಶನ ಪಡೆದುಕೊಳ್ಳಬೇಕಾಗಿದೆ.
ಮೊದಲು ದೇಹ ಮತ್ತು ಮನಸ್ಸುಗಳನ್ನು ಶುದ್ಧಗೊಳಿಸಬೇಕಾಗಿದೆ. ಆಗ ಮಾತ್ರ ನಮ್ಮಲ್ಲಿ ಕೂಡ ಶುದ್ಧವಾದ ಯೋಚನೆಗಳು ಬರಲು ಸಾಧ್ಯ. ಇದಕ್ಕೆ ವಚನಕಾರ ಬಸವಣ್ಣ ಬಹಿರಂಗ, ಅಂತರಂಗ ಶುದ್ಧಿ ಮಾಡಿಕೊಳ್ಳಲು ಕರೆ ನೀಡುತ್ತಾರೆ. ಮನಸ್ಸಿನ ಕುರಿತು ಸ್ವಾಮಿ ವಿವೇಕಾನಂದರು ಹೇಳುವಂತೆ, ನಮ್ಮ ಮನಸ್ಸು ಪರಿಶುದ್ಧವಾದಾಗ, ಅದೇ ಗುರುವಾಗಿ ಎಲ್ಲವೂ ನಿಂತು ಬೋಧಿಸುತ್ತದೆ. ಹೀಗಾಗಿ ಮೊದಲು ಮನಸ್ಸು ಶುದ್ಧಿಗೆ ಮುಂದಾದಾಗ ಮಾತ್ರ ನಾವು ನಾವು ಗುರುವಾಗಲು ಸಾಧ್ಯ. ನಮ್ಮ ನಾಳೆಯ ದಿನಗಳು ಸುಂದರವಾಗಿರಬೇಕಾದರೆ ನಮ್ಮ ಇಂದಿನ ಯೋಚನೆಗಳು ಸುಂದರವಾಗಿರಬೇಕು ಎಂಬುದು ನಮ್ಮ ಆಶಯ.
-ಕವಿರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ
Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್. ಸಂತೋಷ್ ಹೆಗ್ಡೆ
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Kota: ಸಾಸ್ತಾನ ಟೋಲ್: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.