ಗ್ರಾಹಕ ಸ್ನೇಹಿ ಟಾಪ್ 5 ಬೈಕ್‌ಗಳು
Team Udayavani, Sep 28, 2019, 5:00 AM IST
ಆಕರ್ಷಕ ಮತ್ತು ದುಬಾರಿ ಬೈಕುಗಳನ್ನು ಕೊಂಡು ಕೊಳ್ಳುವ ಕ್ರೇಜ್ ಇಂದು ಹೆಚ್ಚಾಗಿದೆ. ಇವುಗಳ ನಡುವೆ ನಾವು ನೀಡಿದ ಹಣಕ್ಕೆ ಉತ್ತಮವೆನಿಸುವ ಬೈಕ್‌ಗಳೂ ಇದ್ದು ಒಂದಷ್ಟು ಬೇಡಿಕೆ ಇವೆ. ಹಬ್ಬದ ಖರೀದಿಗೆ ಉತ್ತಮ ಆಯ್ಕೆ ಯಾಗಬಲ್ಲ, ಅಂದಾಜು 100 ಸಿ.ಸಿ. ಸಾಮರ್ಥ್ಯದ ಕಿಸೆಗೂ ಹಿತವೆನಿಸುವ ಬೈಕ್‌ಗಳ ಪಟ್ಟಿ ಇಲ್ಲಿದೆ.
ಬಜಾಜ್ ಪ್ಲಾಟಿನಂ
ಬಜಾಜ್ ಪ್ಲಾಟಿನಂ ಕಡಿಮೆ ದರ, ಅಧಿಕ ಮೈಲೇಜ್, ಸುದೀರ್ಘ ಬಾಳಿಕೆಯ ಎಂಜಿನೊಂದಿಗೆ ಮಾರುಕಟ್ಟೆ ಪ್ರವೇಶಿಸಿತ್ತು. ಒಂದು ಲೀಟರ್ ಪೆಟ್ರೋಲ್ ಹಾಕಿದರೆ ಇದು ಸುಮಾರು 90-100 ಕಿ.ಮೀ. ಮೈಲೇಜ್ ಕೊಡುತ್ತದೆ. ಇದು 102 ಸಿಸಿ ಎಂಜಿನ್, 8.1 ಬಿಎಚ್‌ಪಿ ಸಾಮರ್ಥ್ಯ, 7,500 ಆರ್‌ಪಿಎಂ ಹೊಂದಿದೆ.
ಹೀರೋ ಸ್ಪೆಂಡರ್ ಐ ಸ್ಮಾರ್ಟ್
“ಹೀರೋ ಸ್ಪೆಂಡರ್ ಐ ಸ್ಮಾರ್ಟ್’ನ ಇಂಧನ ದಕ್ಷತೆ ಉತ್ತಮವಾಗಿದ್ದು, ಒಂದು ಲೀಟರ್‌ಗೆ 92 ಮೈಲೇಜ್ ನೀಡುತ್ತದೆ. ಏರ್ ಕೂಲ್ಡ್ ಆಗಿದ್ದು, ಸಿಂಗಲ್ ಸಿಲಿಂಡರ್ ಇರುವ ಬೈಕ್ ಇದಾಗಿದ್ದು, 110 ಸಿಸಿ ಮೈಲೇಜ್, 8.24ಪಿಎಸ್ ಸಾಮರ್ಥ್ಯ ಹೊಂದಿದೆ.
ಟಿವಿಎಸ್ ಸ್ಟಾರ್ ಸಿಟಿ ಪ್ಲಸ್
ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಹೊಸ ಆವೃತ್ತಿಯಲ್ಲಿ ಬಿಡುಗಡೆಯಾಗಿದೆ. ಕಿಕ್‌ಸ್ಟಾರ್ಟ್, ಎಲೆಕ್ಟ್ರಿಕ್, ಕಿಕ್ ಸ್ಟಾರ್ಟ್ ಸೇರಿದಂತೆ ಸುಮಾರು 5ಕ್ಕೂ ಹೆಚ್ಚು ಆವೃತ್ತಿಗಳಲ್ಲಿ ಲಭ್ಯ. 109.7 ಸಾಮರ್ಥ್ಯದ ಸಿಸಿ ಹೊಂದಿದ್ದು, 7,000 ಆರ್‌ಪಿಎಂನೊಂದಿಗೆ 8.28 ಬಿಎಚ್‌ಪಿ, ಕಾಬ್ಯುìಯರೇಟರ್ ತಂತ್ರಜ್ಞಾನ, 86 ಕಿ.ಮೀ. ಮೈಲೇಜ್ ನಿರೀಕ್ಷಿಸಬಹುದು.
ಹೋಂಡಾ ಡ್ರೀಮ್ ನಿಯೋ
ಹೋಂಡಾ ಡ್ರೀಮ್ ಗ್ರಾಹಕರ ಡ್ರೀಮ್ ಬೈಕಾಗಿದೆ. ಸುಮಾರು 4 ಬಣ್ಣಗಳಲ್ಲಿ ಲಭ್ಯವಿದ್ದು, 110 ಸಿಸಿ ಸಾಮರ್ಥ್ಯದ ಎಂಜಿನ್, 8.25 ಬಿಎಚ್‌ಪಿ-7500 ಆರ್‌ಪಿಂ ಬಲ ಹೊಂದಿದೆ. ಸಂಸ್ಥೆಯೇ ಹೇಳುವಂತೆ 74 ಕಿ.ಮೀ. ಮೈಲೇಜ್ ಹೊಂದಿದೆ.
ಯಮಹಾ ಸಲುಟೋ ಆರ್‌ಎಕ್ಸ್
ಯಮಹಾದ ಸಲುಟೋ ಆರ್‌ಎಕ್ಸ್ 110 ಸಿಸಿ ಬೈಕಾಗಿದೆ. 82 ಕಿ.ಮೀ. ಮೈಲೇಜ್ ಹೊಂದಿದ್ದು, 7 ಬಿಎಚ್‌ಪಿ /7000 ಆರ್‌ಪಿಎಂ ಸಾಮರ್ಥ್ಯ ಇದಕ್ಕಿದೆ. ಇದೇ ಮಾದರಿಯಲ್ಲಿ ಅಧಿಕ ಸಿಸಿಯ
ಬೈಕುಗಳೂ ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.