ವಿಷಕಾರಿ ಕಪ್ಪೆ

Team Udayavani, Sep 15, 2018, 3:05 PM IST

15-seoctember-12.jpg

ಆಕರ್ಷಕ ಮೈಬಣ್ಣ ಹೊಂದಿರುವ ಡಾರ್ಟ್‌ ಕಪ್ಪೆಗಳು ಡೆಂಡ್ರೊಬಾಟಿಡಾಯೆ ವಂಶಕ್ಕೆ ಸೇರಿದ್ದಾಗಿದೆ. ಇವುಗಳ ಮೈ- ಹಳದಿ, ಕಿತ್ತಳೆ, ಕೆಂಪು, ಹಸುರು, ಕಪ್ಪು ಅಥವಾ ಕಡು ನೀಲಿ ಬಣ್ಣದಿಂದ ಕೂಡಿರುತ್ತವೆ.ಬಣ್ಣದಿಂದಲೇ ಇವು ವಿಷಕಾರಿ ಎನ್ನುವ ಸಂದೇಶ ವೈರಿಗಳಿಗೆ ರವಾನೆಯಾಗುತ್ತದೆ. ಅಲ್ಲದೇ ಚರ್ಮದಿಂದ ಕೆಟ್ಟ ವಾಸನೆ ಹೊರ ಸೂಸುತ್ತವೆ. ಇವುಗಳಲ್ಲಿ ಅನೇಕ ಪ್ರಜಾತಿಗಳಿದ್ದು, ಅವುಗಳಲ್ಲಿ ಗೋಲ್ಡನ್‌ ಡಾರ್ಟ್‌ ಕಪ್ಪೆ 10 ಮನುಷ್ಯನನ್ನು ಸಾಯಿಸುವಷ್ಟು ವಿಷವನ್ನು ಹೊಂದಿರುತ್ತದೆ.

ಬೆನ್ನಿನಲ್ಲಿರುತ್ತೆ ಅಪಾಯಕಾರಿ ವಿಷ
ಡಾರ್ಟ್‌ ಕಪ್ಪೆಗಳಿಗೆ ಅಪಾಯಕಾರಿ ವಿಷ ಬೆನ್ನಿನಲ್ಲಿರುವ ಗ್ರಂಥಿಗಳಲ್ಲಿ ಸಂಗ್ರಹವಾಗಿರುತ್ತದೆ. ಅಪಾಯ ಎದುರಾದಾಗ ಗ್ರಂಥಿಗಳ ಮೂಲಕ ವಿಷ ಹೊರಹಾಕುತ್ತದೆ. ಆದರೆ, ಈ ವಿಷ ದೇಹದ ಒಳಕ್ಕೆ ಪ್ರವೇಶಿಸುವುದಿಲ್ಲ. ಗಾಯವಾದ ಭಾಗಕ್ಕೆ ವಿಷ ತಗುಲಿದಾಗ ಮಾತ್ರ ಪ್ರಾಣಕ್ಕೆ ಸಂಚಕಾರ ಉಂಟಾಗುತ್ತದೆ. ಹೀಗಾಗಿ ಇವುಗಳನ್ನು ಬರಿಗೈಯಿಂದ ಮುಟ್ಟಿದರೂ ಏನೂ ಆಗುವುದಿಲ್ಲ. ಆದರೆ ವಿಷ ಒಮ್ಮೆ ರಕ್ತಕ್ಕೆ ಸೇರಿದರೆ ಸಾವಿನಿಂದ ಪಾರು ಮಾಡಲು ಯಾವುದೇ ಚಿಕಿತ್ಸೆ ಇಲ್ಲ.

ಡಾರ್ಟ್‌ ಕಪ್ಪೆಗಳ ಇನ್ನೊಂದು ವಿಶೇಷವೆಂದರೆ, ಮೊಟ್ಟೆಗಳನ್ನು ಇವು ಬೆನ್ನಿನ ಮೇಲೆ ಇಟ್ಟುಕೊಂಡು ಪೋಷಿಸುತ್ತವೆ. ಮೊಟ್ಟೆಗಳನ್ನು ಬೀಳದಂತೆ ನೋಡಿಕೊಳ್ಳುತ್ತವೆ. ಮೊಟ್ಟೆಗಳನ್ನು ಬೆನ್ನಿನ ಮೇಲೆ ಇಟ್ಟು ಕೊಂಡು ಹೋಗಿ ಗಿಡಗಳ ಸುಳಿಯಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಬಿಟ್ಟು ಬರುತ್ತವೆ.  

ವಿಷಕಾರಿಯಾಗಿದ್ದು ಹೇಗೆ?
ಡಾರ್ಟ್‌ ಕಪ್ಪೆಗಳು ಸೇವಿಸುವ ಕೆಲವೊಂದು ವಿಷಕಾರಿ ಇರುವೆ, ಕ್ರಿಮಿಕೀಟ ಮತ್ತು ಸಸ್ಯಗಳಿಂದ ಇವುಗಳ ದೇಹದಲ್ಲಿ ವಿಷ ಸಂಗ್ರಹ ವಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಇವು ತಮ್ಮ ಅಂಟಾದ ನಾಲಿಗೆಯ ಮೂಲಕ ಬೇಟೆಯಾಡುತ್ತವೆ. ಇತರ ಕಪ್ಪೆಗಳಂತೆ ಡಾರ್ಟ್‌ ಕಪ್ಪೆಗಳಿಗೆ ಈಜಾಡಲು ಬರುವುದಿಲ್ಲ. ಇವು ನೆಲಅಥವಾ ಮರದ ಮೇಲೆಯೇ ವಾಸಿಸುತ್ತವೆ. 

ಟಾಪ್ ನ್ಯೂಸ್

Udupi-DC

Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

1-qeqeqe

HMPV ಸೋಂಕಿಗೆ ಆತಂಕ ಬೇಡ: ಐಸಿಎಂಆರ್‌

canada

Facing Dissent: ಕೆನಡಾ ಪ್ರಧಾನಿ ಹುದ್ದೆಗೆ ಟ್ರುಡೋ ರಾಜೀನಾಮೆ

ಬೋಳಂತೂರಿನಲ್ಲಿ ಮನೆ ದೋಚಿದ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ?

ಬೋಳಂತೂರಿನಲ್ಲಿ ಮನೆ ದೋಚಿದ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ?

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

1-wewwewq

Tamil actor ವಿಶಾಲ್‌ಗೆ ಅನಾರೋಗ್ಯ?: ಅಭಿಮಾನಿಗಳಿಗೆ ಆತಂಕ

1-kumb

Mahakumbh 2025; ವಕ್ಫ್ ಮಂಡಳಿಗೆ ಸೇರಿದ ಜಾಗದಲ್ಲಿ ಕುಂಭಮೇಳ: ಮೌಲ್ವಿ ವಿವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi-DC

Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

1-qeqeqe

HMPV ಸೋಂಕಿಗೆ ಆತಂಕ ಬೇಡ: ಐಸಿಎಂಆರ್‌

canada

Facing Dissent: ಕೆನಡಾ ಪ್ರಧಾನಿ ಹುದ್ದೆಗೆ ಟ್ರುಡೋ ರಾಜೀನಾಮೆ

ಬೋಳಂತೂರಿನಲ್ಲಿ ಮನೆ ದೋಚಿದ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ?

ಬೋಳಂತೂರಿನಲ್ಲಿ ಮನೆ ದೋಚಿದ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ?

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.