ಪ್ರವಾಸಿ ವಿಮೆ ಪ್ರಯೋಜನ
Team Udayavani, Mar 9, 2020, 5:50 AM IST
ಪ್ರವಾಸವು ಶಿಕ್ಷಣ, ಉದ್ದಿಮೆ ಮತ್ತು ವೈಯಕ್ತಿಕ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. 2020ರ ವೇಳೆಗೆ ಭಾರತದ ವಿದೇಶ ಪ್ರಯಾಣ ಮಾರುಕಟ್ಟೆಯು 28 ಸಾವಿರ ಕೋಟಿ ರೂ.ಗೂ ಮೀರಿ ಬೆಳೆದಿದೆ. ಬೃಹತ್ ಉದ್ಯಮವಾಗಿ ಬೆಳೆಯುತ್ತಿರುವ ಈ ಕ್ಷೇತ್ರಕ್ಕೂ ವಿಮೆ ಇದೆ.ಈ ಹಿನ್ನೆಲೆ ಪ್ರವಾಸ ವಿಮೆ ಯೋಜನೆಯನ್ನು ಹೊಂದುವುದರಿಂದ ಆಗುವ ಪ್ರಯೋಜನಗಳೇನು, ವಿದೇಶಿ ಪ್ರವಾಸ ವಿಮೆಯ ಅಗತ್ಯವೇನು ಎಂಬಿತ್ಯಾದಿ ಮಾಹಿತಿಯನ್ನು ಇಲ್ಲಿ ನೀಡಿದ್ದಾರೆ ಸುಶ್ಮಿತಾ ಜೈನ್.
ಗೊತ್ತಿಲ್ಲದ ಭಾಷೆ, ಪರಿಚಯವಿಲ್ಲದ ಜನರು, ತಲೆಬುಡವೇ ಇಲ್ಲದ ರಸ್ತೆ, ಇಕ್ಕೆಲಗಳಲ್ಲಿ ಎದ್ದು ನಿಂತ ಬೃಹದಾಕಾರದ ಬಿಲ್ಡಿಂಗ್‌ಗಳು ಒಂದೆಡೆ ಭೀತಿ ಹುಟ್ಟಿಸಿ ಬಿಟ್ಟರೆ, ಮೊದಲ ವಿದೇಶ ಪ್ರಯಾಣ ಅಂದರೆ ಏನೋ ಒಂದು ರೀತಿಯ ಆತಂಕ. ವಿಶ್ವ ಪರ್ಯಟನೆ ಹೆಚ್ಚುತ್ತಿದ್ದಂತೆ ಪ್ರವಾಸಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನೂ ಪ್ರವಾಸಿಗರು ಎದುರಿಸಬೇಕಾಗುತ್ತದೆ. ಪಾಸ್‌ಪೋರ್ಟ್ ಕಳೆದುಹೋಗುವುದು, ವಿಮಾನ ವಿಳಂಬ ಅಥವಾ ಕೈತಪ್ಪುವುದು, ಬ್ಯಾಗ್ ಕಾಣೆಯಾಗುವುದು,ಪ್ರವಾಸ ರ¨ªಾಗುವುದು ಮತ್ತು ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾಗಬಹುದಾದ ತುರ್ತು ಪರಿಸ್ಥಿತಿಗಳು. ಯೋಗ್ಯ ವಿಮೆ ಹೊಂದಿಲ್ಲದಿದ್ದರೆ ಇವುಗಳಲ್ಲಿ ಪ್ರತಿಯೊಂದೂ ಪ್ರಯಾಣಿಕರಿಗೆ ಭಾರೀ ನಷ್ಟ ತಂದೊಡ್ಡುತ್ತವೆ. ಈ ನಷ್ಟ ಕೆಲವು ಸಾವಿರ ರೂ.ಗಳಿಂದ ಲಕ್ಷ ರೂ.ಗಳವರೆಗೂ ಇರಬಹುದು.
ಆರ್ಥಿಕ ನೆಮ್ಮದಿ ಪಡೆಯಲು ನೆರವು
ಪ್ರವಾಸ ವಿಮೆ ಸೌಲಭ್ಯವು ನೆಮ್ಮದಿಯಿಂದ ಪ್ರವಾಸ ಮಾಡಲು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ನೆರವು ಪಡೆಯಲು ಪ್ರತಿಯೊಬ್ಬರಿಗೂ ಸಹಾಯಕ. ಇತ್ತೀಚೆಗೆ ವಿಮಾ ಕಂಪನಿಗಳು ವೈದ್ಯಕೀಯ ಮತ್ತು ವೈದ್ಯಕೀಯೇತರ ವೈಯಕ್ತಿಕ ನೆಲೆಯಲ್ಲಿನ ಆಕಸ್ಮಿಕಗಳ ಜತೆಗೆ ನೈಸರ್ಗಿಕ ದುರ್ಘಟನೆಗಳು ಮತ್ತು ಭಯೋತ್ಪಾದಕ ದಾಳಿ ಸೇರಿದಂತೆ ಊಹಿಸಲಿಕ್ಕಾಗದ ದುರ್ಘಟನೆಗಳಿಗೂ ತಮ್ಮ ಸೇವೆಯನ್ನು ವಿಸ್ತರಿಸಿವೆ.
ಪ್ರವಾಸಿ ವೈದ್ಯಕೀಯ ವೆಚ್ಚ
ಶಸ್ತ್ರಚಿಕಿತ್ಸೆ ಮತ್ತು ನಿಧಾನವಾಗಿ ಗುಣಮುಖವಾಗುವುದಕ್ಕೆ ಲಕ್ಷಾಂತರ ರೂಪಾಯಿಗಳ ವೆಚ್ಚವನ್ನು ಆರೋಗ್ಯ ವಿಮೆಯಿಂದ ಭರಿಸಲು ಸಾಧ್ಯವಾಗುವುದಿಲ್ಲ. ಪ್ರವಾಸ ವಿಮೆ ಸೌಲಭ್ಯವು ಪ್ರವಾಸ ಸಂದರ್ಭದಲ್ಲಿನ ಎಲ್ಲ ವೈದ್ಯಕೀಯ ವೆಚ್ಚಗಳನ್ನು ಭರಿಸುತ್ತದೆ. ಕೆಲವು ಪಾಲಿಸಿಗಳು 69 ಲಕ್ಷ ರೂ.ಗಳಿಂದ 1.38 ಕೋಟಿ ರೂ.ವರೆಗಿನ ವೈದ್ಯಕೀಯ ಲಾಭಗಳನ್ನು ಒದಗಿಸುತ್ತವೆ.
ನಷ್ಟಗಳನ್ನು ತುಂಬಿಕೊಡುತ್ತವೆ
ಪ್ರವಾಸ ಸಂದರ್ಭದಲ್ಲಿ ಏನೆಲ್ಲ ಅನಿರೀಕ್ಷಿತಗಳು ಘಟಿಸಬಹುದೋ ಅದಕ್ಕೆಲ್ಲ ಆರ್ಥಿಕ ನೆಮ್ಮದಿ ಪಡೆಯಲು ಪ್ರವಾಸಿಗರು ವಿಮೆ ಸೌಲಭ್ಯ ಪಡೆಯುವುದು ತುಂಬ ಮುಖ್ಯವಾಗಿದೆ. ಜತೆಗೆ ಕಳೆದುಹೋದ ಲಗೇಜ್‌ಗಾಗಿ 77 ಸಾವಿರ ರೂ. ಮತ್ತು ವಿಳಂಬ ಹಾಗೂ ರದ್ದುಪಡಿಸಲಾದ ವಿಮಾನ ಯಾನಗಳಿಗಾಗಿ 1.12 ಲಕ್ಷ ರೂ. ನೀಡುವ ವಿಮೆ ಸೌಲಭ್ಯ ಒದಗಿಸುವ ಯೋಜನೆಗಳು ಎಲ್ಲ ನಷ್ಟಗಳನ್ನು ತುಂಬಿಕೊಡಲಿವೆ.
ಪ್ರೀಮಿಯಂ ಪಾಲಿಸಿ
ಪ್ರೀಮಿಯಂ ಮೊತ್ತವು ನೀವು ಕೈಗೊಳ್ಳುವ ದೇಶದ ದೂರ, ನಿಮ್ಮ ವಯಸ್ಸು, ಪ್ರವಾಸ ಅವಧಿ ಮತ್ತು ಯಾವ ರೀತಿಯ ಪ್ರವಾಸ ಎಂಬುದನ್ನು ಅವಲಂಬಿಸಿರುತ್ತದೆ. ಒಂದು ವೇಳೆ ನೀವು ಏಷ್ಯಾದ ಒಳಗೆ ಪ್ರವಾಸ ಕೈಗೊಳ್ಳುತ್ತಿದ್ದರೆ ನಿಮ್ಮ ಪ್ರೀಮಿಯಂ ಮೊತ್ತವು ಅಮೆರಿಕ ಇಲ್ಲವೇ ಕೆನಡಾ ಯಾನಕ್ಕಿಂತ ಕಡಿಮೆಯಾಗಿರುತ್ತದೆ. ಇದಕ್ಕೆ ಅಮೆರಿಕದಲ್ಲಿ ದೊರೆಯುವ ವೈದ್ಯಕೀಯ ಸೇವೆಗಳು ಮತ್ತು ಇತರ ದೇಶಗಳ ಸೇವೆಗಳಲ್ಲಿನ ವ್ಯತ್ಯಾಸ ಪ್ರಮುಖ ಕಾರಣವಿರಬಹುದು. ವಯಸ್ಸಿನ ಮೇಲೂ ಮೊತ್ತ ಹೆಚ್ಚು -ಕಡಿಮೆಯಾಗುತ್ತದೆ. ವ್ಯಾವಹಾರಿಕ ಉದ್ದೇಶದ ಒಂದು ತಿಂಗಳ ವಿದೇಶ ಪ್ರವಾಸಕ್ಕೆ 25 ವರ್ಷದ ವ್ಯಕ್ತಿಗೆ ತಗಲುವ ಪ್ರೀಮಿಯಂ ಮೊತ್ತವು 50 ವರ್ಷದ ವ್ಯಕ್ತಿ ಪಾವತಿಸುವ ಮೊತ್ತಕ್ಕಿಂತ ಕಡಿಮೆ. ಹೆಚ್ಚು ಅವಧಿಗೆ ಪ್ರವಾಸ ಕೈಗೊಳ್ಳುವವರು ಹೆಚ್ಚಿನ ಪ್ರೀಮಿಯಂ ಅನ್ನು ಪಾವತಿ ಮಾಡಬೇಕಾಗುತ್ತದೆ.
ಯಾವ ಉದ್ದೇಶದ ಭೇಟಿ ?
ಪ್ರೀಮಿಯಂ ಮೊತ್ತವು ಪ್ರವಾಸದ ಉದ್ದೇಶದ ಮೇಲೆ ನಿರ್ಧರವಾಗುತ್ತದೆ. ಖಾಸಗಿ ಪ್ರವಾಸ ಇಲ್ಲವೇ ವ್ಯಾವಹಾರಿಕ ಭೇಟಿಯಾಗಿರಬಹುದು. ಖಾಸಗಿ ಪ್ರವಾಸದ ಪಾಲಿಸಿಗಳು ಸಾಮಾನ್ಯವಾಗಿ ಒಂದು ಸಮಯ¨ªಾಗಿರುತ್ತವೆ. ಅದೇ ವ್ಯವಹಾರದ ಭೇಟಿಯಾಗಿದ್ದರೆ ಒಂದು ವರ್ಷದ ಅವಧಿಗೆ ನೀಡಲಾಗುತ್ತದೆ. ಈ ಅವಧಿಯಲ್ಲಿ ಪಾಲಿಸಿದಾರ ಹಲವು ಬಾರಿ ಸ್ವದೇಶಕ್ಕೆ ಬಂದು ಹೋಗುತ್ತಿದ್ದರೂ ಪದೇ ಪದೇ ಪಾಲಿಸಿ ಮಾಡಿಸಿಕೊಳ್ಳಬೇಕಾಗಿಲ್ಲ. ಆದರೆ ಇದಕ್ಕೆ ಕೆಲವು ನಿಬಂಧನೆಗಳಿವೆ. ಒಮ್ಮೆ ಪ್ರವಾಸದ ಅವಧಿಯು 30ರಿಂದ 45 ದಿನಗಳನ್ನು ಮೀರುವಂತಿಲ್ಲ.
ವ್ಯರ್ಥ ಎಂದು ಭಾವಿಸಬೇಡಿ
ಪ್ರವಾಸ ವಿಮೆ ವ್ಯರ್ಥ ಎಂದೇ ಭಾವಿಸುತ್ತಾರೆ. ಕಡಿಮೆ ಅವಧಿ ವಿದೇಶ ಪ್ರವಾಸ ಮಾಡುವವರಂತೂ ಈ ಬಗ್ಗೆ ಸ್ವಲ್ಪವೂ ಯೋಚಿಸುವುದೇ ಇಲ್ಲ. ಇದು ಕೇವಲ ವೈದ್ಯಕೀಯ ವೆಚ್ಚ ಮಾತ್ರವೇ ಭರಿಸುತ್ತದೆ ಎಂದುಕೊಂಡಿರುತ್ತಾರೆ. ಆದರೆ ವಿಮೆಯಿಂದ ಇರುವ ಅನುಕೂಲಗಳು ಬಹಳಷ್ಟು. ವಿಮಾನ ವಿಳಂಬವಾದರೆ, ಬ್ಯಾಗೇಜ್, ಪಾಸ್‌ಪೋರ್ಟ್ ಕಳೆದುಹೋದರೆ ಇಲ್ಲವೇ ಮೃತಪಟ್ಟರೂ ಪ್ರವಾಸಿ ವಿಮೆಯಿಂದ ಲಾಭಗಳಿವೆ.
ವಿದೇಶಿ ಪ್ರವಾಸಕ್ಕೂ ಅಗತ್ಯ
ಇಂದು ಸಾಕಷ್ಟು ಜನರು ವಿದೇಶಗಳಿಗೆ ಅಧ್ಯಯನ, ವ್ಯವಹಾರ, ಸ್ಥಳ ವೀಕ್ಷಣೆಗಾಗಿ ಹೋಗುತ್ತಲೇ ಇರುತ್ತಾರೆ. ಇಂತಹ ಸಂದರ್ಭಗಳಲ್ಲಿ ಪ್ರವಾಸಿ ವಿಮೆ ಅಗತ್ಯ. ಏಕೆಂದರೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾದಾಗ ವಿಮೆ ಮಾಡಿಸಿಕೊಳ್ಳದೆ ಇದ್ದರೆ ಜೇಬಿಗೆ ಕತ್ತರಿ ಬೀಳುವುದು ಖಂಡಿತ. ಹಾಗಾಗಿ ನಿರ್ಲಕ್ಷ್ಯ ಮಾಡದೆ ಹೊರದೇಶಗಳಿಗೆ ಹೋಗುವ ಮುನ್ನ ವಿಮೆ ಮಾಡಿಸಿಕೊಂಡರೆ ಎದುರಾಗುವ ಅನಗತ್ಯ ಖರ್ಚುಗಳನ್ನು ತಪ್ಪಿಸಬಹುದು.
ಏನೆಲ್ಲ ಒಳಗೊಳ್ಳುತ್ತದೆ ?
ಹೆಚ್ಚಿನ ಎಲ್ಲಾ ಪ್ರವಾಸ ವಿಮೆಗಳು ಆಸ್ಪತ್ರೆಗೆ ದಾಖಲಾಗುವುದರ ವೆಚ್ಚವನ್ನು ಒಳಗೊಂಡಿರುತ್ತವೆ. ಇದು ಅನಾರೋಗ್ಯಕ್ಕೊಳಗಾದ ಕಾರಣ ಇಲ್ಲವೇ ಅಪಘಾತದಿಂದ ಆಗಿರಬಹುದು. ಇಂತಹ ಸಂದರ್ಭದಲ್ಲಿ ಪಾಲಿಸಿಯು “ಮೆಡಿಕ್ಲೇಮ್ ಪಾಲಿಸಿ’ಯಾಗಿ ಕೆಲಸ ಮಾಡುತ್ತದೆ. ಇದಲ್ಲದೆ ಪ್ರವಾಸಿಗ ಮೃತಪಟ್ಟರೆ ಸ್ವದೇಶಕ್ಕೆ (ತುರ್ತು ಸಂದರ್ಭದಲ್ಲಿ) ಪಾರ್ಥಿವ ಶರೀರದ ರವಾನೆಗೆ ಪಾಲಿಸಿ ನೆರವಾಗುತ್ತದೆ.
ಮಾಹಿತಿ ಪಡೆದುಕೊಳ್ಳಿ
ಯಾವುದೇ ಪ್ರವಾಸ ವಿಮೆಯನ್ನು ಖರೀದಿ ಮಾಡುವ ಮೊದಲು ಸಾಕಷ್ಟು ಮಾಹಿತಿ ಪಡೆದು, ನಿಬಂಧನೆಗಳನ್ನು ಓದಿದರೆ ಒಳ್ಳೆಯದು. ಹೆಚ್ಚು ಹೆಚ್ಚು ಹಣ ವ್ಯಯಿಸಿ ಆಸೆಯಿಂದ ವಿದೇಶ ಪ್ರವಾಸ ಮಾಡಿ ತೊಂದರೆಗೊಳಗಾದರೆ ಪಾಲಿಸಿಯಿಂದ ಸ್ವಲ್ಪಮಟ್ಟಿಗೆ ನೆರವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಎಎನ್‌ಎಫ್‌ಗೆ ಸಿಗದ ನಕ್ಸಲರು ಸಿಎಂಗೆ ಸಿಕ್ಕಿದ್ದು ಹೇಗೆ?: ಶಾಸಕ ಸುನೀಲ್ ಕುಮಾರ್
Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
ICC ಚಾಂಪಿಯನ್ಸ್ ಟ್ರೋಫಿ ಪಾಕ್ ಕ್ರೀಡಾಂಗಣಗಳೇ ಸಜ್ಜಾಗಿಲ್ಲ !
ವಿದ್ಯುತ್ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.