ಟ್ರೆಂಡಿಯಾಗುತ್ತಿದೆ ಹಾಫ್‌ಡಿಸೈನ್
Team Udayavani, Sep 21, 2018, 12:59 PM IST
ಇಂದಿನ ಯುವಜನತೆ ಹೊಸತನಕ್ಕೆ ಒಗ್ಗುತ್ತಿದ್ದಾರೆ. ಹೀಗಿರುವಾಗ ಪ್ಲೈನ್ ಶರ್ಟ್ ಧರಿಸುವುದು ಹಳೇ ಫ್ಯಾಷನ್ ಅಗಿದೆ. ಅದಕ್ಕೆಂದು ಹಾಫ್ ಡಿಸೈನ್ ಬಟ್ಟೆಗಳು ಮಾರುಕಟ್ಟೆಯಲ್ಲಿ ಟ್ರೆಂಡಿಯಾಗುತ್ತಿವೆ. ಇಂದಿನ ಫ್ಯಾಶನ್‌ಗೆ ಅನುಗುಣವಾಗಿ ತರಹೇವಾರಿ ಬಟ್ಟೆಗಳು ಹೊಸ ಲುಕ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಅವುಗಳಲ್ಲಿ ಹಾಫ್ ಡಿಸೈನ್ ಬಟ್ಟೆಗಳು ಫ್ಯಾಷನ್ ಪ್ರಿಯರ ಹಾಟ್ ಫೆವರೆಟ್ ಆಗಿದೆ.
ಹೌದು .. ಹಿಂದೆಲ್ಲ ಪ್ಲೈನ್ ಶರ್ಟ್ ಧರಿಸುವುದು ಟ್ರೆಂಡ್ ಆಗಿತ್ತು,. ಆದರೆ ಇಂದು ಆ ಜಾಗವನ್ನು ಹಾಫ್ ಡಿಸೈನ್ ಶರ್ಟ್‌ಗಳು ತುಂಬಿವೆ. ಈ ಶರ್ಟ್‌ಗಳ ಮುಂಭಾಗದಲ್ಲಿ ಅರ್ಧದವರೆಗೆ ಅಂದರೆ ಪಾಕೆಟ್‌ವರೆಗೆ ಡಿಸೈನ್‌ನಿಂದ ಕೂಡಿರುತ್ತದೆ. ಉಳಿದ ಭಾಗ ಪ್ಲೈನ್ ನಿಂದ ಕೂಡಿರುತ್ತದೆ. ಹಿಂದಿನ ಭಾಗ ಕೂಡ ಪ್ಲೈನ್ ನಿಂದ ಕೂಡಿರುತ್ತದೆ. ಆದ್ದರಿಂದ ಈ ರೀತಿಯ ಶರ್ಟ್ಗಳನ್ನು ಧರಿಸುವ ಮಂದಿಗೆ ಹೊಸ ಲುಕ್ ಕಾಣುತ್ತದೆ. ಹಾಫ್ ಡಿಸೈನ್ ಟೀ – ಶರ್ಟ್‌ಗಳು ಕೂಡ ಮಾರುಕಟ್ಟೆಯಲ್ಲಿವೆ.
ಪ್ಲೈನ್ ಶರ್ಟ್‌ಗಳಿಗೆ ಡಿಸೈನ್ ಎಂಬ್ರಾಯ್ಡರಿ ವರ್ಕ್
ಸಾಮಾನ್ಯವಾಗಿ ಬಿಳಿ ಬಣ್ಣದ ಶರ್ಟ್‌ನ ಮೇಲೆ ಡಿಸೈನ್ ಇದ್ದಂತಹ ಶರ್ಟ್‌ಗಳಿಗೆ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇದೆ. ಇತ್ತೀಚಿನ ದಿನಗಳಲ್ಲಿ ಪ್ಲೈನ್ ಶರ್ಟ್‌ಗಳಿಗೆ ಡಿಸೈನ್ ಎಂಬ್ರಾಯ್ಡರಿ ವರ್ಕ್ ಮಾಡುವಂತಹ ಮಂದಿ ಇದ್ದಾರೆ. ಆದ್ದರಿಂದ ರೆಡಿಮೆಡ್ ಶರ್ಟ್ ಮಾತ್ರ ಖರೀದಿ ಮಾಡಬೇಕೆಂದಿಲ್ಲ. ಯುವತಿಯರ ಧಿರಿಸಿನಲ್ಲಿಯೂ ಈ ಹಾಫ್ ಡಿಸೈನ್ ಟ್ರೆಂಡ್ ಹೆಚ್ಚುತ್ತಿದೆ.
ಮುಖ್ಯವಾಗಿ ಸೀರೆ, ಗೌನ್, ಲೆಹೆಂಗಾಗಳಲ್ಲಿ ಈ ಮಾದರಿಯ ಬಟ್ಟೆಬರೆ ವೈವಿಧ್ಯ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬರಲಾರಂಭಿಸಿದೆ. ಸೀರೆಯ ಮೇಲಿನ ಅಥವಾ ಕೆಳಗಿನ ಭಾಗದಲ್ಲಿ ಸಂಪೂರ್ಣ ಡಿಸೈನ್ ಹೊಂದಿದ್ದು, ಇನ್ನೊಂದು ಭಾಗ ಪ್ಲೈನ್ ಮಾದರಿಯಲ್ಲಿರುತ್ತದೆ. ಡಿಸೈನ್ ಕೂಡಾ ಚುಕ್ಕಿಯಾಕಾರ ಅಥವಾ ಸಣ್ಣದಾದ ಚಿತ್ರ, ವರ್ಕ್ ಗಳನ್ನು ಹೊಂದಿರುವುದರಿಂದ ನೋಡಲು ಆಕರ್ಷಕವಾಗಿರುತ್ತದೆ.
ಹೊಸತನ
ಮೇಲಿನ ಭಾಗ ಪ್ಲೈನ್ ಆಗಿರುವ ಸೀರೆಗೆ ಡಿಸೈನ್ಡ್ ಅಥವಾ ವರ್ಕ್ ಮಾಡಿಸಿದ ಬ್ಲೌಸ್‌ನ್ನು ಧರಿಸುವುದು ಟ್ರೆಂಡಿಯಾಗಿ ಕಾಣುತ್ತದೆ. ಗೌನ್‌ನಲ್ಲಿ ಹಾಫ್ ಡಿಸೈನ್ ಒಂದು ಕಾಲದಲ್ಲಿ ಗೌನ್ ಕೇವಲ ಕೆಲವೇ ಮಂದಿಗಷ್ಟೇ ಸೀಮಿತವಾಗಿತ್ತು. ಆದರೆ ಈಗ ನಗರ, ಗ್ರಾಮೀಣ ಎಂಬ ಭೇದವಿಲ್ಲದೆ, ಎಲ್ಲೆಡೆಯೂ ಸಮಾರಂಭಗಳಿಗೆ ಗೌನ್ ಧರಿಸುವುದು ಸಾಮಾನ್ಯವಾಗಿದೆ. ಕೊಳ್ಳುವವರು ಹೆಚ್ಚಿದ್ದಾರೆಂದರೆ ಡಿಸೈನ್ ವರ್ಕರ್‌ಗಳೂ ಹೊಸತನವನ್ನೇ ಹುಡುಕುತ್ತಾರೆ ಎಂದ ಹಾಗೆ ಈ ಗೌನ್‌ನಲ್ಲಿಯೂ ಹೊಸ ಮಾದರಿಯವುಗಳು ಮಾರುಕಟ್ಟೆಗೆ ಬಂದಿವೆ.
ಸದ್ಯಕ್ಕೆ ಇದುವೇ ಹೊಸ ಸ್ಟೈಲ್
ದ್ಯಕ್ಕೆ ಚಾಲ್ತಿಯಲ್ಲಿರುವುದು ಹಾಫ್ ಡಿಸೈನ್ ಗೌನ್ ಗಳು. ಗೌನ್‌ನ ಬ್ಲೌಸ್ ಫುಲ್ ಡಿಸೈನ್ ವರ್ಕ್‌ನ್ನು ಹೊಂದಿದ್ದು, ಸ್ಕರ್ಟ್ ಪ್ಲೈನ್ ಆಗಿರುವುದು, ಅಥವಾ ಸ್ಕರ್ಟ್ ಡಿಸೈನ್‌ವುಳ್ಳದ್ದಾಗಿದ್ದು, ಬ್ಲೌಸ್ ಪ್ಲೈನ್ ಆಗಿರುವುದು ಈ ಮಾದರಿಯ ಗೌನ್‌ನ ಹೊಸ ಸ್ಟೈಲ್. ಒಂದು ಕೈಗೆ ಮಾತ್ರ ಡಿಸೈನ್, ಇನ್ನೊಂದು ಕೈ ಪ್ಲೈನ್ ಆಗಿರುವ ಗೌನ್ ಗಳೂ ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಸುತ್ತಿವೆ. ಇದರೊಂದಿಗೆ ಸ್ಕರ್ಟ್‌ನಲ್ಲಿಯೂ ಒಂದು ಭಾಗ ಮಾತ್ರ ಡಿಸೈನ್ ಹೊಂದಿರುವವು ಕೂಡ ಸಿಗುತ್ತಿವೆ.
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.