ಸಂಬಂಧಗಳ ಮೌಲ್ಯ ತಿಳಿಯಿರಿ


Team Udayavani, Mar 16, 2020, 5:37 AM IST

ಸಂಬಂಧಗಳ ಮೌಲ್ಯ ತಿಳಿಯಿರಿ

ಆಧುನಿಕ ಪ್ರಪಂಚದಲ್ಲಿ ನಮಗೆ ಬೇಕಾದ ಎಲ್ಲ ವಸ್ತುಗಳು ಸುಲಭವಾಗಿ ಸಿಗುತ್ತವೆ. ಉಡುವ ಬಟ್ಟೆಯಿಂದ ಹಿಡಿದು, ತಿನ್ನುವ ತಿನಿಸುಗಳವರೆಗೂ ಎಲ್ಲವೂ ನಮ್ಮ ಮನೆ ಬಾಗಿಲಿಗೆ ಬರುವ ತಂತ್ರಜ್ಞಾನವನ್ನು ನಾವು ದಿನನಿತ್ಯ ಬಳಸುತ್ತೇವೆ. ಅಷ್ಟೇ ಯಾಕೆ? ಹಿಂದಿನ ಕಾಲದಲ್ಲಿ ಗುರು-ಹಿರಿಯರು ಸೇರಿ ಒಂದು ಹೆಣ್ಣಿಗೆ ಗಂಡನ್ನು ಹುಡುಕುತ್ತಿರುವ ಸಂಪ್ರದಾಯಗಳು ಇಂದು ಮ್ಯಾಟ್ರಿಮೋನಿಯಂತಹ ಅಪ್ಲಿಕೇಷನ್‌ಗಳಿಂದ ಮರೆತೇ ಹೋಗಿದೆ. ಎಲ್ಲೋ ದೂರದ ಅಪರಿಚಿತರು ಪರಿಚಿತರಾಗುತ್ತಿದ್ದಾರೆ, ಸ್ನೇಹಿತರಾಗುತ್ತಿದ್ದಾರೆ.

ಇದು ಖುಷಿಯ ವಿಚಾರವೇ ಆದರೂ ನಾವು ದೂರದ ಅಪರಿಚಿತರಲ್ಲಿ ಸ್ನೇಹವನ್ನು ಹುಡುಕುವ ಭರದಲ್ಲಿ ಪಕ್ಕದ ಮನೆಯವರ ಪರಿಚಯವನ್ನೇ ಮರೆಯುತ್ತಿದ್ದೇವೆ. ಕೆಲವೊಮ್ಮೆ ದೂರದ ಅಪರಿಚಿತರಿಂದ ಅಪಾಯದ ಸುಳಿಯಲ್ಲಿಯೂ ಸಿಲುಕಿದವರು ಇದ್ದಾರೆ.

ಸಕ್ಕರೆ, ಚಹಾ ಹುಡಿ, ಅಕ್ಕಿಯಂತಹ ದಿನಬಳಕೆಯ ವಸ್ತುಗಳು ಸಿಗುತ್ತಿದ್ದ ಶೆಟ್ಟರ ಅಂಗಡಿ ಇಂದು ಬಿಕೋ ಎನ್ನುತ್ತಿದೆ. ಬದಲಿಗೆ ತಿಂಗಳ ಲೆಕ್ಕಾಚಾರದ ಜೀವನ ಎಂಬ ಹೆಸರಿನಲ್ಲಿ ಮಾಲ್‌ಗ‌ಳಿಗೆ ಜೋತು ಬಿದ್ದಿದ್ದೇವೆ. ಒಟ್ಟಾರೆಯಾಗಿ ಮನುಷ್ಯ ಮನುಷ್ಯನನ್ನೇ ಮರೆತು ಕಾಣದ ಲೋಕದ ಗುಲಾಮನಾಗುತ್ತಿದ್ದಾನೆ. ಯಾವುದೇ ಸಂದರ್ಭದಲ್ಲಿ ಸಹಾಯಕ್ಕಾಗಿ ನಿಲ್ಲುತ್ತಿದ್ದ ನೆರೆಮನೆಯವ ಇಂದು ಅವನ ಪಾಡಿಗೆ ಅವನೇ ಕೂತಿದ್ದಾನೆ. ತಪ್ಪು ನಮ್ಮದೇ. ತಂತ್ರಜ್ಞಾನ ಬಂದಿತೇನೋ ಸರಿ, ಅದನ್ನು ಯಾವುದಕ್ಕೆ ಉಪಯೋಗಿಸಬೇಕು, ಯಾವುದಕ್ಕೆ ಉಪಯೋಗಿಸಬಾರದು ಎನ್ನುವುದನ್ನು ನಾವು ತಿಳಿಯಲಿಲ್ಲ, ಮಕ್ಕಳಿಗೂ ತಿಳಿಸಲಿಲ್ಲ. ಹಿಂದಿನ ಕಾಲದಲ್ಲಿ ಒಟ್ಟಿಗೆ ಕುಳಿತು ಊಟ ಮಾಡುತ್ತ ಹರಟೆ ಹೊಡೆದು ಹೊಂದಾಣಿಕೆಯಿಂದ ಇರುತ್ತಿದ್ದ ಗಂಡ ಹೆಂಡತಿ ಇಂದು ಊಟದೊಂದಿಗೆ ಮೊಬೈಲ್‌ ಹಿಡಿದು ಮೌನವಾಗಿಬಿಟ್ಟಿದ್ದಾರೆ.

ಹೆಂಡತಿಯ ವೈಯಕ್ತಿಕ ಕಷ್ಟಗಳನ್ನು ಅರಿತು ಪ್ರೀತಿಯನ್ನು ನೀಡಿ ಕಾಳಜಿಯನ್ನು ತೋರಿಸಬೇಕಿದ್ದ ಗಂಡನಿಗೆ ಸಮಯವಿಲ್ಲ. ಮುದ್ದು ಮುದ್ದಾಗಿ ಹಠವನ್ನು ಮಾಡಿ ತನಗೆ ಬೇಕಾದುದನ್ನು ಪಡೆದುಕೊಳ್ಳುತ್ತಿದ್ದ ಹೆಂಡತಿಗೆ ಸ್ವಾಭಿಮಾನ ಬಿಡುತ್ತಿಲ್ಲ, ತಪ್ಪು ಯಾರದು?

ವಿಪರ್ಯಾಸವೆಂದರೆ ಅತ್ತಾಗ ಮಗುವನ್ನು ಆಟವಾಡಿಸಿ ನಗಿಸಬೇಕಿದ್ದ ತಾಯಿ ಇಂದು ಮೊಬೈಲ್‌ ಕೊಟ್ಟು ಸುಮ್ಮನಾಗುತ್ತಿದ್ದಾಳೆ. ಮಗುವಿನ ಮನಸ್ಸನ್ನು ಮೊಬೈಲ್‌ ಎಂಬುದಕ್ಕೆ ಅಂಟಿಸಿ ಮುಂದಕ್ಕೆ ಮಕ್ಕಳು ಹಾಳಾದರೆ ಹೊಣೆ ಯಾರು?
ಇನ್ನಾದರೂ ಎಚ್ಚೆತುಕೊಳ್ಳೋಣ, ಮನೆಯ ನಾಲ್ಕು ಗೋಡೆಗಳ ಒಳಗೆ ಮೌನಿಯಾಗದೆ ಹೊರಗಿನ ಪ್ರಪಂಚದಲ್ಲಿ ಬೆರೆಯೋಣ. ನಿಮ್ಮ ಸಂಗಾತಿಯ ಮನಸ್ಸಿನಲ್ಲಿ ಪ್ರೀತಿ ಬಿತ್ತುವ ಕೆಲಸ ನೀವೇ ಮಾಡಿ, ಮಕ್ಕಳಿಗೆ ಸ್ನೇಹ ಸಂಬಂಧಗಳ ಮೌಲ್ಯವನ್ನು ತಿಳಿಸಿ. ಮನದಲ್ಲಿ ನಾವು, ನಮ್ಮವರು ಎಂಬ ಭಾವನೆಗಳು ಬೆಳೆದರೆ ಸಕಲವು ಸುಂದರ.

-ಮೋಹನ್‌ ಕೋಟ್ಯಾನ್‌ ಪಡ್ಡಂದಡ್ಕ

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.