ನಿವೃತ್ತರ ಪರ ಬಡ್ಡಿ ದರ ಹಿರಿಯರ ಸದೃಢ ಜೀವನಕ್ಕಾಗಿ ವಯಾ ವಂದನಾ ಯೋಜನೆ


Team Udayavani, Mar 9, 2020, 5:43 AM IST

ನಿವೃತ್ತರ ಪರ ಬಡ್ಡಿ ದರ ಹಿರಿಯರ ಸದೃಢ ಜೀವನಕ್ಕಾಗಿ ವಯಾ ವಂದನಾ ಯೋಜನೆ

ಬಹುತೇಕ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ನಿಶ್ಚಿತ ಠೇವಣಿಯ ಮೇಲಿನ ಬಡ್ಡಿದರ ಸರಾಸರಿ ಶೇ.5ರಿಂದ ಶೇ.6ರಷ್ಟು ಇದೆ. ಈ ಸಂದರ್ಭದಲ್ಲೇ ನಿವೃತ್ತ ಹಿರಿಯ ನಾಗರಿಕರು ಹೆಚ್ಚಿನ ಬಡ್ಡಿದರ ಇರುವ ಮತ್ತು ಸುರಕ್ಷಿತ ಹೂಡಿಕೆ ಮಾಡಲು ಎದುರು ನೋಡುತ್ತಿದ್ದಾರೆ. ಅಂಥ ವರು ಅತ್ಯುತ್ತಮ ಸರಕಾರಿ ಯೋಜನೆ ಎಂಬ ಹೆಗ್ಗಳಿಕೆ ಹೊಂದಿರುವ, ಸದ್ಯದ ಮಾರುಕಟ್ಟೆಯಲ್ಲಿ ಶೇ.8ರಷ್ಟು ಬಡ್ಡಿದರ ನೀಡುವ
“ಪ್ರಧಾನಮಂತ್ರಿ ವಯಾ ವಂದನಾ ಯೋಜನೆ’ಯಲ್ಲಿ ಹಣ ಹೂಡಬಹುದು.

ದೇಶದ ಪ್ರಸ್ತುತ ಆರ್ಥಿಕ ಪರಿಸ್ಥಿತಿಯ ಏರುಪೇರಿನ ಹಿನ್ನೆಲೆಯಲ್ಲಿ ಬ್ಯಾಂಕುಗಳ ಠೇವಣಿಯ ಬಡ್ಡಿದರಗಳ ಏರುಪೇರು ಸಹಜ ಬೆಳವಣಿಗೆ. ಇತ್ತೀಚೆಗಂತೂ ಪ್ರತೀ ಮೂರು ತಿಂಗಳಿಗೊಮ್ಮೆ ಬ್ಯಾಂಕುಗಳು ತಮ್ಮ ಬಡ್ಡಿದರ ಇಳಿಸುತ್ತಿರುವುದನ್ನು ನೀವು ಗಮನಿಸುತ್ತಿರಬಹುದು. ಬಹುತೇಕ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ನಿಶ್ಚಿತ ಠೇವ ಣಿಯ ಮೇಲಿನ ಬಡ್ಡಿದರ ಸರಾಸರಿ ಶೇ.5ರಿಂದ ಶೇ.6ರಷ್ಟು ಮಾತ್ರ ಎನ್ನುವುದು ಗಮನಾರ್ಹ. ಹಿರಿಯ ನಾಗರಿಕರಿಗಾದರೆ ಇನ್ನೊಂದು ಅರ್ಧ ಪ್ರತಿಶತದಷ್ಟು ಹೆಚ್ಚಿನ ಬಡ್ಡಿದರ ನೀಡುವುದು ಬ್ಯಾಂಕ್‌ಗಳ ವಾಡಿಕೆ.

ಸಹಕಾರಿ ಬ್ಯಾಂಕ್‌ಗಳಲ್ಲಿನ ಠೇವಣಿಗೆ ಸ್ವಲ್ಪ ಹೆಚ್ಚಿನ ಬಡ್ಡಿದರ ಸಿಗಬಹುದಾದರೂ ಸರಕಾರದ ಯಾವುದೇ ಆರ್ಥಿಕ ಭದ್ರತೆಗಳಿಲ್ಲದ ಇಂಥ ಸಂಸ್ಥೆಗಳಲ್ಲಿನ ಹೂಡಿಕೆ ಅಭದ್ರ. ಹೀಗಿರುವಾಗ ನಿವೃತ್ತಿ ಹೊಂದಿರುವ ಹಿರಿಯ ನಾಗರಿಕರು ಹೆಚ್ಚಿನ ಬಡ್ಡಿದರದ ಮತ್ತು ಸುರಕ್ಷಿತ ಹೂಡಿಕೆಗಾಗಿ ಯಾವ ಯೋಜನೆ ಇದೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಒಂದು ಉತ್ತರ “ಪ್ರಧಾನಮಂತ್ರಿ ವಯಾ ವಂದನಾ ಯೋಜನೆ’.

ಹೆಚ್ಚಿನ ಬಡ್ಡಿ ದರ
ಮೂಲತಃ ಇದೊಂದು ಪಿಂಚಣಿ ಯೋಜನೆ. ಕನಿಷ್ಠ 60 ವರ್ಷ ವಯಸ್ಸಾಗಿರುವ ನಾಗರಿಕರನ್ನು ದೃಷ್ಟಿ ಯಲ್ಲಿ ಇರಿಸಿಕೊಂಡು ಕೇಂದ್ರ ಸರಕಾರ 2017ರಲ್ಲಿ ಜಾರಿಗೆ ತಂದ ಯೋಜನೆ. ಕನಿಷ್ಠ ಒಂದೂವರೆ ಲಕ್ಷದಿಂದ ಗರಿಷ್ಠ 15 ಲಕ್ಷ ರೂ.ಗಳಷ್ಟು ಮೊತ್ತವನ್ನು ಪ್ರತಿಯೊಬ್ಬ ಹಿರಿಯ ನಾಗರಿಕನೂ ಈ ಯೋಜನೆಯಡಿ ಹೂಡಬಹುದು. 10 ವರ್ಷಗಳ ದೀರ್ಘಾವಧಿಗೆ ಇರುವ ಈ ಯೋಜನೆ ಯಡಿ ಮಾಸಿಕ ಪಿಂಚಣಿಯ ದರ ಶೇ. 8ರಷ್ಟು ಮತ್ತು ವಾರ್ಷಿಕ ಪಿಂಚಣಿಯ ದರ ಶೇ.8.3ರಷ್ಟು ಎನ್ನುವುದು ವಿಶೇಷ. ಬ್ಯಾಂಕುಗಳ ಸಮಕಾಲೀನ ಬಡ್ಡಿ ದರಗ ಳೊಂದಿಗೆ ತುಲನೆ ಮಾಡುವುದಾದರೆ ಸದ್ಯಕ್ಕೆ ಈ ಬಡ್ಡಿದರ ಅತ್ಯುತ್ತಮ ಎನ್ನಬಹುದು. ಒಂದು ವೇಳೆ ಹೂಡಿಕೆಯ ಅವಧಿ ಮುಗಿಯುವ ಮುನ್ನವೇ ಅಂದರೆ, 10 ವರ್ಷ ಗಳ ಅವಧಿ ಪೂರ್ಣವಾಗುವ ಮೊದಲೇ ಹೂಡಿ ಕೆದಾರ ನಿಧನ ಹೊಂದಿದರೆ ಹೂಡಿದ್ದ ಸಂಪೂರ್ಣ ಮೊತ್ತವನ್ನು ನಾಮಿನಿಗೆ ಪಾವತಿಸಲಾಗುವುದು.

ಗಮನಿಸಬೇಕಾದ ಮುಖ್ಯ ಸಂಗತಿ
ತೆರಿಗೆ ವಿನಾಯಿತಿಯನ್ನು ಗಮನ ದಲ್ಲಿರಿಸಿಕೊಂಡು ಹೂಡಿಕೆಯ ಲೆಕ್ಕಾಚಾರದಲ್ಲಿರುವ ಹಿರಿಯ ನಾಗರಿಕರಿಗೆ ಈ ಯೋಜನೆಯಿಂದ ಯಾವು ದೇ ಲಾಭವಿಲ್ಲ. ಈ ಯೋಜನೆಯಡಿ ಹೂಡುವ ಮೊತ್ತಕ್ಕೆ ಯಾವುದೇ ನಿಯಮಗಳ ಅಡಿಯಲ್ಲಿ ತೆರಿಗೆಯ ವಿನಾಯಿತಿ ಇಲ್ಲ. ಜತೆಗೆ ಹೂಡಿಕೆದಾರ ತನ್ನ ಉಳಿದ ಆದಾಯಗಳಿಂದ ಆದಾಯ ತೆರಿಗೆಗೆ ಯೋಗ್ಯರಾಗಿದ್ದರೆ ಈ ಯೋಜನೆ ಅಲ್ಲಿನ ಹೂಡಿಕೆಯಿಂದ ಗಳಿಸಬಹುದಾದ ಪಿಂಚ ಣಿಯೂ ತೆರಿಗೆಗೆ ಅರ್ಹವಾಗುತ್ತದೆ ಎನ್ನುವುದನ್ನೂ ಹೂಡಿಕೆದಾರರು ತಿಳಿದುಕೊಳ್ಳಬೇಕು.

ವ್ಯಕ್ತಿಗತ ಮೌಲ್ಯ ಪಾಲಿಸಿ
ಇಷ್ಟಾಗಿಯೂ ಒಂದು ಉತ್ತಮ ಬಡ್ಡಿದರದ ಮತ್ತು ಸುರಕ್ಷಿತ ಸರಕಾರಿ ಹೂಡಿಕೆ “ಪ್ರಧಾನಮಂತ್ರಿ ವಯಾ ವಂದನಾ ಯೋಜನೆ’ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಳೆದ ಮೂರು ವರ್ಷಗಳಿಂದ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಯೋಜನೆ ಇದೇ ವರ್ಷ ಮಾರ್ಚ್‌ 31ರಂದು ಕೊನೆಗೊಳ್ಳಲಿದೆ. ಆಸಕ್ತರು ಸಮೀಪದ ಭಾರತೀಯ ಜೀವ ವಿಮಾ ನಿಗಮದ ಶಾಖೆಗಳಿಗೆ ತೆರಳಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ಜಿಎಸ್‌ಟಿ ಅನ್ವಯವಾಗುವುದಿಲ್ಲ
ಹಿರಿಯ ನಾಗರಿಕರ ಯೋಜನೆಯಾಗಿರುವು ದರಿಂದ ಉಳಿದ ಅನೇಕ ಯೋಜನೆಗಳಿಗೆ ಅನ್ವಯವಾಗುವ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಇದಕ್ಕೆ ಅನ್ವಯವಾಗದು ಎನ್ನುವುದು ವಿಶೇಷ. ಹೂಡಿಕೆಯ ಒಂದು ವರ್ಷದ ಅನಂತರ ಅವಧಿಪೂರ್ವ ಹಿಂಪಡೆ ಯುವಿಕೆಯ ಸೌಲಭ್ಯವೂ ಈ ಯೋಜನೆಗಿದೆ. ಸಣ್ಣದೊಂದು ನಿರ್ವಹಣ ವೆಚ್ಚದ ಕಡಿತದೊಂದಿಗೆ ಹೂಡಿಕೆಯ ಸಂಪೂರ್ಣ ಮೊತ್ತವನ್ನು ವಾಪಸು ಪಡೆ ಯುವ ನಿಯಮವೂ ಈ ಯೋಜನೆಯಡಿ ಇದೆ.

ಟಾಪ್ ನ್ಯೂಸ್

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-wqqwewq

Australia ಗೆಲುವಿಗೆ ಕಮಿನ್ಸ್‌  ನೆರವು: ಪಾಕಿಸ್ಥಾನ 203; ಆಸೀಸ್‌  8 ವಿಕೆಟಿಗೆ 204

crime

Trasi: ಕಾರು ಢಿಕ್ಕಿಯಾಗಿ ಗಾಯ; ಪ್ರಕರಣ ದಾಖಲು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.