ಬಾಟಲಿಯೊಳಗೆ ತರಹೇವಾರಿ ತರಕಾರಿ
Team Udayavani, Jun 23, 2019, 5:00 AM IST
ನೀರು, ತಂಪು ಪಾನೀಯ ಇನ್ನಿತರ ಪ್ಲಾಸ್ಟಿಕ್ ಬಾಟಲಿಗಳ ಮರುಬಳಕೆ ಅಪರೂಪ. ಒಮ್ಮೆ ಉಪಯೋಗಿಸಿದ ಅನಂತರ ಬಿಸಾಡುವ ವಸ್ತುಗಳಾಗಿ ಇವು ಪರಿಸರದ ವಿನಾಶಕ್ಕೆ ಕಾರಣ ವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಶಿರಸಿಯ ತೋಟಗಾರಿಕಾ ಮಹಾ ವಿದ್ಯಾಲಯದಲ್ಲಿ ಮಾತ್ರ ಈ ಪ್ಲಾಸ್ಟಿಕ್ ಬಾಟಲಿಗಳು ಪರಿಸರ ಜಾಗೃತಿ ಸಂದೇಶ ಬೀರುತ್ತಿವೆ.
ಏನಿದು ಮಾದರಿ?
ಇಲ್ಲಿ ಅನುಪಯುಕ್ತ ನೀರಿನ ಬಾಟಲ್ಗಳೇ ತರಕಾರಿ ಸೊಪ್ಪಿನ ಗಿಡಗಳನ್ನು ಬೆಳೆಸುವ ಕುಂಡಗಳಾಗಿವೆ. ಒಂದಲ್ಲ, ಎರಡಲ್ಲ, ಹತ್ತಾರು ಜಾತಿಯ ಸೊಪ್ಪಿನ ಬೀಜಗಳನ್ನು ಬಿತ್ತಿ ಫಸಲು ತರುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಆಸಕ್ತಿಕರವಾಗಿ ತರಕಾರಿ ಅಂತರಿಕ್ಷ ಗಾರ್ಡನ್ ನಿರ್ಮಿಸಿದೆ. ತೋಟಗಾರಿಕಾ ವಿದ್ಯಾರ್ಥಿಗಳಿಗೆ ಇದು ವೆಜಿಟೆಬಲ್ ವರ್ಟಿಕಲ್ ಗಾರ್ಡನ್ ಆಗಿದೆ!
ಬರೀ ಬಟಾಲಿಗಳಲ್ಲ
ಇಲ್ಲಿ ಬಾಟಲಿಗಳು ಕೇವಲ ಬಾಟಲಿಗಳಲ್ಲ. ಅವು ಕೊಳೆಯದ ತ್ಯಾಜ್ಯಗಳೂ ಅಲ್ಲ . ಸುಮಾರು 65ಕ್ಕೂ ಹೆಚ್ಚು ನೀರಿನ ಬಾಟಲಿಗಳನ್ನು ಸಂಗ್ರಹಿಸಿ ಅವುಗಳನ್ನು ಅಡ್ಡಲಾಗಿ ಕೊರೆದು, ದಾರದಲ್ಲಿ ಕಾಲೇಜಿನ ಮುಂಭಾಗದಲ್ಲಿ ಇರುವ ಕಂಬಕ್ಕೆ ಕಟ್ಟಿ ಒಂದು ಆಕಾರ ನೀಡಿದ್ದಾರೆ. ಮನೆ ಮನೆಗಳಲ್ಲಿ ಪ್ರತಿ ಯೊಬ್ಬರೂ ಮಾಡ ಬಹುದಾದ ಮಾದರಿ ಯನ್ನು ಸಿದ್ಧಗೊಳಿಸಿದ್ದಾರೆ.
ಕೊರೆದ ಬಾಟಲಿಗಳ ಒಳಗೆ ನಾರಿನ ಪುಡಿ ಹಾಕಿ ಸೊಪ್ಪಿನ ಬೀಜ ಗಳನ್ನು ಬಿತ್ತಲಾಗಿದೆ. ನಾಲ್ಕು ಬದಿಯಲ್ಲಿ ಕಂಬಗಳನ್ನು ನಿಲ್ಲಿಸಿ ಅದಕ್ಕೆ ಅಡ್ಡಲಾಗಿ ಹಾಕಿದ ಪಟ್ಟಿಗಳಿಗೆ ಎರಡು ಬದಿಯಲ್ಲಿ ಬಳ್ಳಿಗಳನ್ನು ಕಟ್ಟಿದ ಬಾಟಲಿಗಳನ್ನು ತೂಗು ಹಾಕಲಾಗಿದೆ. ನೀರು ತುಂಬದಂತೆ ಬಾಟಲಿಗಳ ಅಡಿ ಭಾಗದಲ್ಲಿ ಸಣ್ಣ ರಂಧ್ರ ಮಾಡಲಾಗಿದೆ. ಹರಿವೆ ಸೊಪ್ಪು, ಮೆಂತೆ, ಸಬ್ಬಸಗಿ, ಕೊತ್ತಂಬರಿ, ಪಾಲಕ್, ಈರುಳ್ಳಿ ಸೇರಿದಂತೆ ಹದಿನೈದಕ್ಕೂ ಅಧಿಕ ಸೊಪ್ಪಿನ ಬೀಜ ಹಾಕಲಾಗಿದೆ. ಅವುಗಳಲ್ಲಿ ಈಗ ಎಲೆಗಳೂ ಬಂದಿವೆ.
ಒಂದು ಕಡೆ ನಗರದಲ್ಲಿ ಬೇಕಾಬಿಟ್ಟಿ ಬಾಟಲಿಗಳನ್ನು ಎಸೆಯುವವರು ಇದ್ದಾರೆ. ಜತೆಗೆ ಕೃಷಿ ಮಾಡಲು ಜಮೀನಿಲ್ಲ ಎಂದು ಕೊರಗುವವರೂ ಇದ್ದಾರೆ. ಇಂಥವರು ಈ ಕೃಷಿ ಮಾದರಿಯನ್ನು ಮಾಡಲು ಪ್ರಯತ್ನಿಸಬಹುದು.
••••ರಾಘವೇಂದ್ರ ಬೆಟ್ಟಕೊಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
America: ಎಚ್-1ಬಿ ವೀಸಾ ವ್ಯವಸ್ಥೆ ಸುಧಾರಣೆ ಬೇಕು: ಒಂದೇ ದಿನದಲ್ಲಿ ಮಸ್ಕ್ ಉಲ್ಟಾ!
Authortiy: ವರ್ಷದಲ್ಲಿ ದಾಖಲೆಯ 17 ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿದ ಕೆಇಎ
ಫ್ರಾನ್ಸ್ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್ ಫಿಲಿಯೋಜಾ ನಿಧನ
ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್
Mangaluru; ಪ್ರತ್ಯೇಕ ಚೆಕ್‌ಬೌನ್ಸ್ ಪ್ರಕರಣ: ಇಬ್ಬರು ಖುಲಾಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.