ವೃತ್ತಿ ಶ್ರೇಷ್ಠತೆಯನ್ನು ಎತ್ತಿ ಹಿಡಿದಿರುವ ವಿಶ್ವಕರ್ಮ
Team Udayavani, Sep 17, 2018, 1:19 PM IST
ಜಗತ್ತಿನಲ್ಲಿ ನಡೆಯುವ ಕರ್ಮವೆಲ್ಲ ಕರ್ಮವಲ್ಲ. ಯಾವ ಕರ್ಮದಿಂದ ಒಮ್ಮೆಲೇ ಜೀವನೋಪಾಯವು ನಡೆದು ಪ್ರಪಂಚ ಜ್ಞಾನಕ್ಕೂ ಉಪಕಾರವಾಗುವುದೋ ಅದೇ ಕರ್ಮ. ಅದೇ ಕರ್ಮಯೋಗ, ವಿ-ಶ್ವ- ಕ- ರ್ಮ. ಹೀಗೆ ಬದುಕಿನಲ್ಲಿ ಕರ್ತವ್ಯವೇ ಶ್ರೇಷ್ಠ ಎಂದು ಸಾರಿದವರು ವಿಶ್ವಕರ್ಮ. ವಿಶ್ವವನ್ನು ರಚನೆ ಮಾಡಿದ ಪರಮಾತ್ಮನೆಂದೇ ಕರೆಯಲ್ಪಡುವ ವಿಶ್ವಕರ್ಮ ಅವರನ್ನು ದೇವಶಿಲ್ಪಿ ಎಂದೂ ಕರೆಯಲಾಗುತ್ತದೆ. ಸೆ. 17 ಅಂದರೆ ಇಂದು ಜಗತ್ತಿನಾದ್ಯಂತ ವಿಶ್ವಕರ್ಮ ಜಯಂತಿಯನ್ನು ಆಚರಿ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ಸಾರಿದ ಸಂದೇಶವನ್ನು ಅನುಸರಿಸಿಕೊಂಡು ಬಂದವರು ಹೇಳಿರುವ ಕೆಲವೊಂದು ಮಾತುಗಳು ಇಲ್ಲಿವೆ.
ಧರ್ಮ, ಸಂಸ್ಕೃತಿ, ಆಚರಣೆ, ನಂಬಿಕೆಗಳು ಯಾವುದೇ ಇರಲಿ ಎಲ್ಲ ಜ್ಞಾನಿಗಳು ಸಾರುವುದು ಮಾನವೀಯತೆಯನ್ನು. ಮನಸ್ಸು ಶುದ್ಧವಾಗಿದ್ದರೆ ನಾವು ಮಾಡುವ ಕೆಲಸ ಕಾರ್ಯಗಳು ಶುದ್ಧವಾಗಿರುತ್ತದೆ. ಇದರಿಂದ ಆತ್ಮೋನ್ನತಿ ಪಡೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ನಾವು ಸತ್ಪಥದಲ್ಲಿ ಸಾಗಬೇಕು, ಸತ್ ಚಿಂತನೆಯನ್ನು ಮಾಡಬೇಕು. ವಿಶ್ವಕರ್ಮ ಸಮುದಾಯದ ಆಚರಣೆ, ಸಂಸ್ಕೃತಿಯೂ ಇದೇ ಆಗಿದೆ.
ವಿಶ್ವಕರ್ಮನನ್ನು ದೇವರೆಂದು, ತಮ್ಮ ಗುರುಗಳೆಂದು ಭಾವಿಸುವ ವಿಶ್ವಕರ್ಮ ಸಮುದಾಯ ಅವರು ತೋರಿಸಿಕೊಟ್ಟಿರುವ ದಾರಿಯಲ್ಲಿ ಇಂದಿಗೂ ಮುನ್ನಡೆಯುತ್ತಿದೆ. ವಿಶ್ವಕರ್ಮ ಸಮುದಾಯದ ಹಿರಿಯರು ಹೇಳಿರುವ, ದೇವನಾದ ವಿಶ್ವಕರ್ಮನ ಕೆಲವು ಸಂದೇಶಗಳನ್ನು ವಿಶ್ವಕರ್ಮ ಪೂಜಾ ದಿನದ ಹಿನ್ನೆಲೆಯಲ್ಲಿ ಇಂದು ಎಲ್ಲರೂ ಮತ್ತೊಮ್ಮೆ ಸ್ಮರಿಸಿಕೊಳ್ಳಲೇಬೇಕಿದೆ. ಅವರು ತೋರಿಸಿಕೊಟ್ಟ ಹಾದಿಯಲ್ಲಿ ಮುನ್ನಡೆಯಲು ನಾವೂ ಬದ್ಧರಾಗಬೇಕಿದೆ. ಹಾಗಿದ್ದಾಗ ಮಾತ್ರ ಉತ್ತಮ ಸಮಾಜ, ನೆಮ್ಮದಿಯ ಬದುಕು ನಮ್ಮದಾಗುವುದು.
ನಿಜವಾದ ಜ್ಞಾನ
‘ಸೃಷ್ಟಿಕರ್ತನ ವಿಶ್ವರೂಪ ದರ್ಶನ, ವೈಜ್ಞಾನಿಕ ದರ್ಶನ ಮತ್ತು ತತ್ತ್ವಾನೇಷಕನ ತಣ್ತೀ ದರ್ಶನ ಇವುಗಳ ಸಮನ್ವಯ ಅತ್ಯವಶ್ಯ. ಈ ಸಮನ್ವಯದಿಂದ ಲಭಿಸುವ ಜ್ಞಾನವೇ ನಿಜವಾದ ಜ್ಞಾನ.’ ಜ್ಞಾನ ಎಂಬುದಕ್ಕೆ ಮಿತಿ ಇಲ್ಲ. ಅದು ವಿಶ್ವರೂಪ. ಅದನ್ನು ಪಡೆಯಲು, ನೋಡಲು ಅಪಾರ ಸಾಧನೆ ಅಗತ್ಯ ಎಂಬುದನ್ನು ಸಾರುವ ಈ ಮಾತುಗಳು ಇಂದಿನ ಸಮುದಾಯ ಅರ್ಥಮಾಡಿಕೊಳ್ಳಬೇಕಿದೆ. ನಾವು ಮಾತ್ರ ಜ್ಞಾನಿಗಳು ಇತರರು ಅಜ್ಞಾನಿಗಳು ಎಂದು ಬೀಗುವ ಮನಸ್ಸುಗಳು ನಾವು ತಿಳಿಯದ್ದು ಸಾಕಷ್ಟಿದೆ. ಅದನ್ನು ತಿಳಿದುಕೊಳ್ಳಬೇಕು ಎಂಬ ಕುತೂಹಲವನ್ನು ತಮ್ಮೊಳಗೆ ಸೃಷ್ಟಿಸಿಕೊಳ್ಳಬೇಕಿದೆ.
ತಳಹದಿ ಗಟ್ಟಿಯಾಗಿರಲಿ
‘ಯಾವ ಒಂದು ಸಮಾಜವು ಆಗಲಿ ತನ್ನ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಲು ಧಾರ್ಮಿಕ ತಳಹದಿ ಬಹುಮುಖ್ಯ. ಆ ತಳಹದಿ ಸುಭದ್ರವಾಗಿ ನಿಲ್ಲಲು ಧಾರ್ಮಿಕ ಸಾಹಿತ್ಯ ಅತ್ಯಂತ ಪ್ರಧಾನವಾದದ್ದು’. ಅಭಿವೃದ್ಧಿಯ ಪಥದಲ್ಲಿ ಸಾಗುವಾಗ ತಳ ಹದಿ ಭದ್ರವಾಗಿ ಇಲ್ಲದೇ ಇದ್ದರೆ ಸಾಧನೆಯ ಹಾದಿಯನ್ನು ಕ್ರಮಿಸಲು ಸಾಧ್ಯವಿಲ್ಲ. ಪ್ರತಿಯೊಂದು ಸಾಧನೆಯ ಹಿಂದೆ ಧಾರ್ಮಿಕ ತಳಹದಿ ಅಂದರೆ ನಮ್ಮ ಸಂಸ್ಕಾರ, ಆಚಾರ, ವಿಚಾರಗಳು ಬಹುಮುಖ್ಯ ಪಾತ್ರವಹಿಸುತ್ತವೆ. ಅದನ್ನು ಗಟ್ಟಿಮಾಡಿಕೊಂಡರೆ ಬದುಕಿನ ದಾರಿ ಸುಗಮವಾಗುವುದು.
ಹಿನ್ನಡೆಗೆ ಅವಿದ್ಯೆ, ಸೋಮಾರಿತನವೇ ಕಾರಣ
‘ಅವಿದ್ಯೆ ಮತ್ತು ಸೋಮಾರಿತನವೇ ನಮ್ಮ ಸಾಮಾಜಿಕ ಹಿನ್ನಡೆಗೆ ಪ್ರಮುಖ ಕಾರಣ.’ ಬದುಕಿನಲ್ಲಿ ಸೋಲು ಉಂಟಾದಾಗ ಅದಕ್ಕೆ ಇನ್ಯಾರನ್ನೋ ಜರಿ ಯುವ ಬದಲು ನಮ್ಮ ತಪ್ಪು ಏನಿದೆ ? ಎಂಬ ಚಿಂತನೆ ನಡೆಸಬೇಕು. ಆಗ ಜ್ಞಾನ ಗಳಿಕೆಯಲ್ಲಿ ಆಗಿರುವ ಲೋಪ ಮತ್ತು ಎಲ್ಲೋ ಕೆಲವೆಡೆ ನಾವು ತೋರಿದ ನಿರ್ಲಕ್ಷ್ಯ ಅಥವಾ ಸೋಮಾರಿತನ ಎದ್ದು ಕಾಣುತ್ತದೆ. ಜ್ಞಾನ ಗಳಿಕೆ ಮತ್ತು ಮಾಡುವ ಕೆಲಸದಲ್ಲಿ ನಾವು ಯಾವತ್ತೂ ಸೋಮಾರಿತನ ಮಾಡಬಾರದು ಎಂಬುದನ್ನೇ ಈ ಸಂದೇಶ ಸಾರಿದೆ. ‘ನಮ್ಮಲ್ಲಿ ಹಣವು ಬೇಕಾದಷ್ಟಿದ್ದರೆ ಯಾವ ರೀತಿ ಬೇಕಾದರೂ ಖರ್ಚು ಮಾಡಲು ಅಡ್ಡಿಯಿಲ್ಲ. ಹಾಗಿಲ್ಲದಿರುವಾಗ ಬದುಕಿನ ಅವಶ್ಯಕತೆಗಳಿಗೆ ಮಾತ್ರ ಅದನ್ನು ಉಪಯೋಗಿಸಿಕೊಳ್ಳುವುದು ಬುದ್ಧಿವಂತಿಕೆ’. ಹಣ ಮತ್ತು ಜ್ಞಾನ ಇವೆರಡನ್ನೂ ಸಮರ್ಥವಾಗಿ ನಿಭಾಯಿಸಿ
ಕೊಂಡು ಹೋಗಬಲ್ಲವನೇ ಸಾಧಕನಾಗುತ್ತಾನೆ ಎಂಬ ಅರ್ಥವೂ ಇದೆ.
ಮನಸ್ಸೇ ಎಲ್ಲ ಕ್ರಿಯೆಗಳ ಮೂಲ
‘ಈ ಸೃಷ್ಟಿಯ ಸಕಲ ವ್ಯಾಪಿಯಾಗಿರುವ ಮನಸ್ಸೆ ಎಲ್ಲ ಕ್ರಿಯೆಗಳ ಮೂಲ.’ ಹೀಗಾಗಿ ಮನಸ್ಸನ್ನು ಸರಿಯಾಗಿ ಇಟ್ಟು ವುಕೊಳ್ಳುವುದು, ಒಳ್ಳೆಯ ಉದ್ದೇಶಕ್ಕಾಗಿ ಬಳಸಿಕೊಳ್ಳುವುದು ಬಹುಮುಖ್ಯ ಎನ್ನುವುದು ವಿಶ್ವಕರ್ಮರು ಸಾರಿದ ಸಂದೇಶಗಳಲ್ಲಿ ಒಂದಾಗಿದೆ.
ನಿಜವಾದ ತ್ಯಾಗಿ
‘ಯಾವ ವ್ಯಕ್ತಿ ಕರ್ಮ ಫಲ ತ್ಯಾಗ ಮಾಡುತ್ತಾನೋ ಅವನೇ ನಿಜವಾದ ತ್ಯಾಗಿ’ ಎನ್ನುವುದು ವಿಶ್ವಕರ್ಮ ಸಮುದಾಯ ನಂಬಿಕೊಂಡು ಬಂದ ಇನ್ನೊಂದು ವಿಶ್ವಕರ್ಮರ ಸಂದೇಶ. ಯಾವುದೇ ಕೆಲಸ ಮಾಡುವಾಗ ಅದರ ಫಲದ ಬಗ್ಗೆ ಚಿಂತನೆ ಮಾಡಬಾರದು. ಕರ್ಮಫಲವನ್ನು ತ್ಯಾಗ ಮಾಡಿದರೆ ಮಾತ್ರ ನಿಜವಾದ ತ್ಯಾಗಿಯಾಗಲು ಸಾಧ್ಯವಿದೆ.
ನಾವು ಮಾಡಿದ ಕರ್ಮವನ್ನು ಭಗವಂತನಿಗೆ ಅರ್ಪಿಸುವುದನ್ನು ಕಲಿಯಬೇಕು. ಎಲ್ಲರಲ್ಲಿಯೂ ಪರಮಾತ್ಮನೇ ಇದ್ದಾನೆ ಎಂಬ ಬುದ್ಧಿಯಿಂದ ನಾವು ಎಲ್ಲ ಕರ್ಮವನ್ನು ಆಶಾರಹಿತರಾಗಿ ನಿರಭಿಮಾನದಿಂದ ಮಾಡಬೇಕು. ಹಾಗಿದ್ದಾಗ ಮಾತ್ರ ಕರ್ಮಫಲ ಶುಭವಾಗಿರಲು ಸಾಧ್ಯವಿದೆ ಎನ್ನುವ ಅರ್ಥವೂ ಇದರಲ್ಲಿದೆ.
ಕರ್ಮ ಮಾಡುವಾಗ ಮನಸ್ಸು ಸಮಸ್ಥಿತಿಯಲ್ಲಿರಬೇಕು. ಗೆದ್ದಾಗ ಅಥವಾ ಸೋತಾಗ ಮನಸ್ಸಿನ ಸಮಸ್ಥಿತಿಯನ್ನು ಕಳೆದುಕೊಳ್ಳಬಾರದು. ಇಂಥ ಸಮಸ್ಥಿತಿಯು ಯೋಗವೆಂದೆನಿಸಿಕೊಳ್ಳುವುದು. ಇದು ನಮ್ಮನ್ನು ಬದುಕಿನ ಉನ್ನತಿಯೆಡೆಗೆ ಕರೆದುಕೊಂಡು ಹೋಗುವುದು. ಆಗಲೇ ಶರೀರ ಮತ್ತು ಮನಸ್ಸುಗಳನ್ನು ಹತೋಟಿಯಲ್ಲಿಡಲು ಸಾಧ್ಯವಾಗುವುದು.
‘ಮನುಷ್ಯನಲ್ಲಿ ಮೊದಲು ಹುಟ್ಟಿದ್ದು ಜ್ಞಾನ ಅನಂತರ ಬೆಳೆ ದದ್ದು ಭಕ್ತಿ’. ಹೀಗಾಗಿ ಜ್ಞಾನಗಳಿಸುವುದು ಎಲ್ಲಕ್ಕಿಂತಲೂ ಶ್ರೇಷ್ಠವಾದದ್ದು. ಜ್ಞಾನ ಗಳಿಕೆಯಿಂದಷ್ಟೇ ಭಕ್ತಿ ಹುಟ್ಟಲು ಸಾಧ್ಯವಿದೆ ಎಂಬ ಅರ್ಥವೂ ಇದರಲ್ಲಿದೆ.
ನಿಜವಾದ ಧರ್ಮ
‘ಸಾಮಾಜಿಕ ಪರೋಪಕಾರ, ಇನ್ನೊಬ್ಬರ ಒಳಿತಿಗಾಗಿ ಶರೀರವನ್ನು ಸವೆಸುವುದೇ ನಿಜವಾದ ಧರ್ಮ’ ಎನ್ನುವುದು ವಿಶ್ವಕರ್ಮರ ಸಂದೇಶಗಳಲ್ಲಿ ಒಂದಾಗಿದೆ. ಇದರ ಅರ್ಥಪ್ರತಿಯೊಬ್ಬರೂ ತಮ್ಮ ಬದುಕನ್ನು ಇನ್ನೊಬ್ಬರ ಒಳಿತಾಗಾಗಿ ಮೀಸಲಿಡಬೇಕು. ಆಗ ನಾವು ಸತ್ಪಥದಲ್ಲಿ ನಡೆದಂತಾಗುತ್ತದೆ. ಇದರಿಂದ ಪ್ರೇಮ, ಕನಿಕರಗಳ ನದಿಯಾಗಿ ನಾವು ಹರಿಯುತ್ತೇವೆ. ಎಲ್ಲ ಜೀವಿಗಳ ಮನಸ್ಸಿನೊಳಗೆ ನೆಲೆಯಾಗುತ್ತೇವೆ. ಸ್ವಾರ್ಥದಿಂದ ನಮ್ಮನ್ನು ನಾವು ದೂರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಆಗ ನಾವು ಉನ್ನತಿಯೆಡೆಗೆ ಸಾಗಲು ಸಾಧ್ಯವಿದೆ ಎಂಬ ಅರ್ಥವೂ ಇದೆ.
ಕರ್ಮವೇ ಜೀವನ; ಅಕರ್ಮವೇ ಸಾವು
‘ಕರ್ಮ ಎಂದರೆ ಕೇವಲ ಯಾಜ್ಞಿಕ ಕ್ರಿಯೆ ಅಥವಾ ಆಚಾರವೆಂದು ಅರ್ಥವಲ್ಲ. ತನ್ನ ಜೀವನಕ್ಕಾಗಿ ಅನ್ಯರ ಹಿತಕ್ಕೆ ಧಕ್ಕೆಯುಂಟು ಮಾಡದಂತೆ ನಡೆಸುವ ಎಲ್ಲ ಕ್ರಿಯೆಗಳೂ ಕರ್ಮ ಎಂದು ಕರೆಯಲ್ಪಡುತ್ತವೆ.’ ನಾವು ಮಾಡುವ ಕೆಲಸ ಯಾವುದೇ ಇರಲಿ ಇತರರಿಗೆ ತೊಂದರೆಯನ್ನುಂಟು ಮಾಡಬಾರದು. ಸ್ವಾರ್ಥ ಮನೋಭಾವದಿಂದ ನೆರವೇರಿಸುವ ಕರ್ಮಗಳು ಬಂಧನವಾದರೆ ನಿಸ್ವಾರ್ಥ ಭಾವದಿಂದ ನಡೆಸುವ ಕರ್ಮಗಳು ಮುಕ್ತಿಯತ್ತ ಕೊಂಡೊಯ್ಯುತ್ತವೆ ಎನ್ನುವುದು ವಿಶ್ವಕರ್ಮರ ಸಂದೇಶಗಳಲ್ಲಿ ಒಂದು.
ನಾವು ಮಾಡುವ ಕೆಲಸಗಳೇ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ಹೀಗಿರುವಾಗ ಕೆಲಸ ಮಾಡುವಾಗ ನಿಸ್ವಾರ್ಥ ಮನೋಭಾವ ನಮ್ಮದಾಗಿದ್ದರೆ ಅದರ ಫಲಾಫಲದ ಚಿಂತೆ ಇಲ್ಲದೇ ಇದ್ದರೆ ಅದು ನಮ್ಮನ್ನು ನೆಮ್ಮದಿಯೆಡೆಗೆ ಕೊಂಡೊಯ್ಯುತ್ತದೆ.
‘ಕರ್ಮವೇ ಜೀವ, ಜೀವನ,ಅಕರ್ಮವೇ ಸಾವು, ಜಡತ್ವ. ಕರ್ಮನಿರತ ವ್ಯಕ್ತಿಯ ಮನಸ್ಸಿನಲ್ಲಿ ಯಾವುದೇ ಕೆಟ್ಟ ವಾಸನೆಗಳು ಗೂಡು ಕಟ್ಟಲು ಸಾಧ್ಯವಿಲ್ಲ.’ ಎನ್ನುವ ಈ ಮಾತಿನಲ್ಲಿ ಕರ್ಮದಿಂದ ನಾವು ನೆಮ್ಮದಿಯಾದ ಬದುಕು ಕಾಣಲು ಸಾಧ್ಯವಿದೆ. ನಮ್ಮ ಕರ್ತವ್ಯಗಳನ್ನು ನಾವು ನಿರ್ವಹಿಸಿಕೊಂಡಿದ್ದರೆ ಮನಸ್ಸು ನೆಮ್ಮದಿಯಾಗಿರುತ್ತದೆ. ಇಲ್ಲವಾದರೆ ಕೆಟ್ಟ ಯೋಚನೆಗಳು ಮನಸ್ಸಿನಲ್ಲಿ ಹುಟ್ಟಿಕೊಳ್ಳ ತೊಡಗುತ್ತವೆ. ಹೀಗಾಗಿ ನಮ್ಮನ್ನು ನಾವು ಸತ್ಕರ್ಮದಲ್ಲಿ ತೊಡಗಿಸಿಕೊಳ್ಳುವುದು ಬಹುಮುಖ್ಯ ಎನ್ನುವುದು ವಿಶ್ವಕರ್ಮರು ಸಾರಿದ ಸಂದೇಶಗಳಲ್ಲಿ ಬಹುಮುಖ್ಯವಾದುದು. ಈ ಜಗತ್ತಿನಲ್ಲಿ ಯಾವ ಕರ್ಮಕ್ಕೂ ಫಲವೆಂಬುದಿಲ್ಲದೆ ಇರುವುದಿಲ್ಲ. ಕರ್ಮವಿಲ್ಲದೆ ಫಲವನ್ನು ಪಡೆಯಲು ಸಾಧ್ಯವಿಲ್ಲ. ಕರ್ಮವು ಅನಿವಾರ್ಯ. ಕರ್ಮವನ್ನನುಸರಿಸಿ ಫಲವು ಶುಭವಾಗಬಹುದು ಅಥವಾ ಅಶುಭವಾಗಬಹುದು ಎನ್ನುವ ವಿಶ್ವಕರ್ಮರ ಸಂದೇಶಗಳಲ್ಲಿ ಕರ್ಮ ಫಲ ಖಂಡಿತಾ ಎಲ್ಲರಿಗೂ ಧಕ್ಕುತ್ತದೆ ಎನ್ನುವ ಅರ್ಥ ವನ್ನೂ ಒಳಗೊಂಡಿದೆ.
‘ಸೃಷ್ಟಿಕರ್ತನ ವಿಶ್ವರೂಪ ದರ್ಶನ, ವೈಜ್ಞಾನಿಕ ದರ್ಶನ ಮತ್ತು ತತ್ತ್ವಾನೇಷಕನ ತತ್ತ್ವ ದರ್ಶನ ಇವುಗಳ ಸಮನ್ವಯ ಅತ್ಯವಶ್ಯ. ಈ ಸಮನ್ವಯದಿಂದ ಲಭಿಸುವ ಜ್ಞಾನವೇ ನಿಜವಾದ ಜ್ಞಾನ.
‘ಕರ್ಮ ಎಂದರೆ ಕೇವಲ ಯಾಜ್ಞಿಕ ಕ್ರಿಯೆ ಅಥವಾ ಆಚಾರ ವೆಂದು ಅರ್ಥವಲ್ಲ. ತನ್ನ ಜೀವನಕ್ಕಾಗಿ ಅನ್ಯರ ಹಿತಕ್ಕೆ ಧಕ್ಕೆಯುಂಟು ಮಾಡದಂತೆ ನಡೆಸುವ ಎಲ್ಲ ಕ್ರಿಯೆಗಳೂ ಕರ್ಮ ಎಂದು ಕರೆಯಲ್ಪಡುತ್ತವೆ.
ಸಂಗ್ರಹ: ವಿದ್ಯಾ ಕೆ. ಇರ್ವತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.