ವಾಚ್‌ಗಳೂ ಆಗಿವೆ ಸ್ಮಾರ್ಟ್ !


Team Udayavani, Aug 24, 2018, 1:49 PM IST

24-agust-11.jpg

ವಾಚ್‌ ಧರಿಸುವುದು ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ .. ಹಿಂದೆಲ್ಲ ಗಂಟೆ ಎಷ್ಟಾಯ್ತು ಎಂದು ನೋಡುವ ಸಲುವಾಗಿ ವಾಚ್‌ ಧರಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ವಾಚ್‌ ಕೈಯಲ್ಲಿರುವುದು ಕೂಡ ಫ್ಯಾಶನ್‌ ಆಗಿ ಬಿಟ್ಟಿದೆ. ಇಂದಿನ ಟ್ರೆಂಡಿಂಗ್‌ ದುನಿಯಾದಲ್ಲಿ ಬಗೆ ಬಗೆಯ ವಾಚ್‌ಗಳು ಮಾರುಕಟ್ಟೆಯಲ್ಲಿದ್ದು, ತರಹೇವಾರಿ ಬೆಲೆಗಳನ್ನು ಹೊಂದಿದೆ.

ಹಿಂದೆಲ್ಲ ವಾಚ್‌ ಅಂದರೆ ಅದು ಸಮಯವನ್ನು ತಿಳಿಯುವ ಸಾಧನವಾಗಿತ್ತು. ಆದರೆ ಇಂದು ವಾಚ್‌ನಲ್ಲಿ ಸಮಯ ತಿಳಿಯಬಹುದು, ಮ್ಯೂಸಿಕ್‌ ಕೇಳಬಹುದು. ಅಷ್ಟೇಕೆ ಮೊಬೈಲ್‌ನಲ್ಲಿ ಕರೆ ಬಂದರೂ, ಮಾಹಿತಿ ಪಡೆಯಬಹುದು. ಒಂದು ಮೊಬೈಲ್‌ ಯಾವ ರೀತಿಯಾಗಿ ಕೆಲಸ ಮಾಡುತ್ತದೆಯೋ ಆ ಕೆಲಸಗಳನ್ನಿಂದು ವಾಚ್‌ ಮಾಡುತ್ತಿದೆ. ಅದಕ್ಕೆ ತಕ್ಕಂತೆಯೇ ಮಾರುಕಟ್ಟೆಯಲ್ಲಿ 100 ರೂ. ನಿಂದ ಹಿಡಿದು ಕೋಟ್ಯಂತರ ರೂ. ಬೆಲೆಬಾಳುವ ವಾಚ್‌ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಬ್ರ್ಯಾಂಡ್‌ಗೆ ಪ್ರಾಶಸ್ತ್ಯ
ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಬ್ರ್ಯಾಂಡ್‌ಗೆ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಸ್ಟಾರ್‌ ಕ್ರಿಕೆಟಿಗರು, ರಾಜಕಾರಣಿಗಳು, ಸಿನಿತಾರೆಯರು ದುಬಾರಿ ವಾಚ್‌ ಧರಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಈಗಂತೂ ತೂಫಿನಾ, ಫಾಸ್ಟ್‌ಟ್ರ್ಯಾಕ್, ಸೊನಾಟ, ಫೂಸಿಲ್‌ ಸಹಿತ ವಿವಿಧ ಬ್ರ್ಯಾಂಡ್‌ಗಳ ಬೆಲೆಬಾಳುವ ವಾಚ್‌ಗಳು ವಿಶಿಷ್ಟ ವಿನ್ಯಾಸದೊಂದಿಗೆ ಕೈಗೆಟಕುವ ದರದಲ್ಲಿಯೂ ಲಭ್ಯವಿವೆ. ಲಕ್ಸುರಿ ವಾಚ್‌ ತಯಾರಿಕಾ ಕಂಪೆನಿಯಲ್ಲಿ ರೋಲೆಕ್ಸ್‌ ಸಂಸ್ಥೆ ಕೂಡ ಒಂದು. ಹೆಚ್ಚಿನ ಮಂದಿ ಗಿಫ್ಟ್ ಕೊಡುವ ಸಂದರ್ಭದಲ್ಲಿ ಈ ಕಂಪೆನಿಯ ವಾಚ್‌ ಅನ್ನೇ ಆಯ್ಕೆ ಮಾಡುತ್ತಾರೆ. ಏಕೆಂದರೆ ಮಹಿಳೆಯರ ಆಸಕ್ತಿಗೆ ಹೊಂದಿಕೊಂಡಿರುವಂತಹ ಈ ವಾಚ್‌ ಎಲ್ಲರ ಗಮನ ತನ್ನೆಡೆಗೆ ಸೆಳೆಯುತ್ತದೆ.

ಪನೆರಾಯ್‌ ಲ್ಯುಮಿನರ್‌ ಎಂಬ ಕಂಪೆನಿಯ ವಾಚ್‌ಗೆ ಸುಮಾರು 12 ಲಕ್ಷ ರೂ. ಇದೆ. ಸ್ವಿಸ್‌ ದೇಶದ ಹಾಟೆಲೆನ್ಸ್‌ ಸಂಸ್ಥೆಯ ಕೈಗಡಿಯಾರ ಖರೀದಿ ಮಾಡುವುದಾದರೆ ಬರೋಬ್ಬರಿ 8.5 ಲಕ್ಷ ರೂ. ನೀಡಬೇಕು. ಏಕೆಂದರೆ ಈ ಕೈ ಗಡಿಯಾರದ ವಾಚ್‌ ಕೇಸ್‌ನ್ನು ಚಿನ್ನ, ಪ್ಲಾಟಿನಂ ಬಳಸಿ ತಯಾರಿಸಲಾಗಿದ್ದು, ಲೆದರ್‌ ಬೆಲ್ಟ್ ಹೊಂದಿದೆ. ಒಮೆಗಾ ಮೆನ್‌ ವಾಚ್‌ ಸುಮಾರು 8 ಲಕ್ಷ ರೂ., ಗೆರ್ವಿಲ್‌ ಕಂಪೆನಿಯ 4 ಲಕ್ಷ ರೂ. ಬೆಲೆಯ ವಾಚ್‌ ಕೂಡ ಮಾರುಕಟ್ಟೆಯಲ್ಲಿದೆ.

ಹಲವು ವೈಶಿಷ್ಟ್ಯ 
ಸಾಮಾನ್ಯ ವಾಚ್‌ ಗಳ ಕಾಲ ಈಗಿಲ್ಲ. ಈಗ ಏನಿ ದ್ದರೂ ಲಕ್ಸುರಿ ಮತ್ತು ಸ್ಮಾರ್ಟ್‌ ವಾಚ್‌ ಗ ಳದ್ದೇ ದರ್ಬಾರು. ಶಿಯೋಮಿ ಅಂಗ ಸಂಸ್ಥೆಯಾದ ಹುವಾಮಿ ಕಂಪೆನಿಯು ಇತ್ತೀಚೆಗೆ ಸ್ಮಾರ್ಟ್‌ ವಾಚ್‌ ಬಿಡುಗಡೆ ಮಾಡಿದ್ದು, 1.28 ಇಂಚ್‌ ಡಿಸ್‌ಪ್ಲೇ, 2.5ಡಿ ಕವರ್ಡ್‌ ಗ್ಲಾಸ್‌, ಹೆಚ್ಚಿನ ಪ್ರಮಾಣದ ಬ್ಯಾಟರಿ ಬಾಳ್ವಿಕೆ, ಅಲ್ಲದೆ ಆಂಡ್ರಾಯ್ಡ ಮತ್ತು ಐಒಎಸ್‌ ಸಪೋರ್ಟ್‌ ಮಾಡುವ ವಾಚ್‌ ಇದಾಗಿದೆ. ಜೆಬ್ರಾನಿಕ್ಸ್‌ ಕಂಪೆನಿಯ ಸ್ಮಾರ್ಟ್‌ ಟೈಂ 100 ಎಂಬ ವಾಚ್‌ ಇದ್ದು, ಈ ವಾಚ್‌ನಲ್ಲಿ ಸಿಮ್‌ ಕಾರ್ಡ್‌, ಮೆಮೊರಿ ಕಾರ್ಡ್‌ ಅಳವಡಿಸುವ ಅವಕಾಶವಿದೆ. ನೇರವಾಗಿ ಬ್ಲೂಟೂತ್‌ ಮೂಲಕ ಸಂಪರ್ಕಿಸಬಹುದಾದ ಹೆಡ್‌ಸೆಟ್‌ ಅಳವಡಿಸಲು ಕೂಡ ಅವಕಾಶವಿದೆ. 32 ಜಿಬಿ ವರೆಗೆ ಮೆಮೊರಿ ವಿಸ್ತರಣೆ ಮಾಡಬಹುದು. 3 ಗಂಟೆವರೆಗೆ ಬ್ಲೂಟೂತ್‌ ಮೂಲಕ ಟಾಕ್‌ಟೈಂ ನೀಡುವ ಬ್ಯಾಟರಿ ಇದರಲ್ಲಿದೆ. 

ಫಿಟ್‌ ನೆಸ್‌ ಬ್ಯಾಂಡ್‌ಗಳು
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಅಂದರೆ ವಾಚ್‌ನಿಂದ ಲೇ ಮನುಷ್ಯನ ಹೃದಯಬಡಿತವನ್ನು ತಿಳಿಯಬಹುದು. ಫಿಟ್‌ ಬಿಟ್‌ ಎನ್ನುವ ಕಂಪೆನಿ ತನ್ನ ಸ್ಮಾರ್ಟ್‌ ವಾಚ್‌ನಲ್ಲಿ ಆರೋಗ್ಯದ ಕುರಿತಾದ ಅಪ್ಲಿಕೇಶನ್‌ಗಳು ಮತ್ತು ಫಿಟ್‌ನೆಸ್‌ಗೆ ಸಹಕಾರಿಯಾಗಬಲ್ಲ ಮಾಹಿತಿಗಳನ್ನು ಹೊಂದಿರುವ ಅಂಶಗಳೊಂದಿಗೆ ವಾಚ್‌ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆನ್‌ಲೈನ್‌ನಲ್ಲಿ ವಾಚ್‌ ಖರೀದಿಗೆ ಬೇಡಿಕೆ ಹೆಚ್ಚಿದ್ದು, ವಿವಿಧ ವಿನ್ಯಾಸಗಳ ವಾಚ್‌ ಆಯ್ಕೆ ಮಾಡಲು ಅವಕಾಶ ಹೆಚ್ಚಿದೆ.

ಟ್ರೆಂಡ್‌ ಆಗುತ್ತಿದೆ ವುಡನ್‌ ವಾಚ್‌
ಸಾಮಾನ್ಯ ಮಂದಿ ಬೆಲ್ಟ್ ಅಥವಾ ಚೈನ್‌ ವಾಚನ್ನು ಧರಿಸುತ್ತಾರೆ. ಆದರೆ ಈಗ ವುಡನ್‌ ವಾಚ್‌ ಕೂಡ ಟ್ರೆಂಡ್‌ ಆಗಿಬಿಟ್ಟಿವೆ. ಇನ್ನೇನು ಕೆಲ ದಿನಗಳಲ್ಲಿ ಮಂಗಳೂರು ಮಾರುಕಟ್ಟೆಗೆ ಕೂಡ ವುಡನ್‌ ವಾಚ್‌ ಲಗ್ಗೆ ಇಡಲಿದೆ. ಬೆಂಗಳೂರಿನ ವ್ಯಾಪಾರಿಯೊಬ್ಬರು ವುಡನ್‌ ವಾಚ್‌ ತಯಾರು ಮಾಡಿದ್ದು, ಈ ವಾಚ್‌ಗಳನ್ನು  www.dtree.in ಎಂಬ ತಮ್ಮ ಅಂತರ್ಜಾಲ ತಾಣದಲ್ಲಿ ಹಾಕಿದ್ದಾರೆ.

ಬೇಡಿಕೆ ಇದೆ
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ವಾಚ್‌ಗಳ ಟ್ರೆಂಡ್‌ ಬದಲಾಗಿದೆ. ಹೆಚ್ಚಾಗಿ ಸ್ಮಾರ್ಟ್‌ವಾಚ್‌ಗಳಿಗೆ ಬೇಡಿಕೆ ಇದೆ. ಅದರಲ್ಲಿಯೂ, ಬ್ಲೂಟೂತ್‌, ಆ್ಯಂಡ್ರಾಯ್ಡ ವಾಚ್‌ಗಳನ್ನು ಹೆಚ್ಚಾಗಿ ಖರೀದಿ ಮಾಡುತ್ತಾರೆ. 
– ಅಶ್ವತ್ಥ್
ವಾಚ್‌ ಅಂಗಡಿ ಮಾಲಕ

ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

POlice

Kokkada: ಕಳ್ಳತನ; ಇಬ್ಬರು ಆರೋಪಿಗಳು ವಶಕ್ಕೆ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

train-track

Mangaluru;ಹಳಿ ನಿರ್ವಹಣೆ: ರೈಲು ಸೇವೆ ವ್ಯತ್ಯಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

dw

Surathkal: ವ್ಯಕ್ತಿಯ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.