ತುಟಿಗೆ ಯಾವ ಬಣ್ಣ?
Team Udayavani, Jan 24, 2020, 5:12 AM IST
ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಲಿಪ್‌ಸ್ಟಿಕ್ ನ ಪಾಲೂ ಇದೆ. ಹಲವು ಬಾರಿ ತಪ್ಪೆಸಗುವುದು ಬಣ್ಣಗಳ ಆಯ್ಕೆಯಲ್ಲಿ. ಅದಕ್ಕೆ ಇಲ್ಲಿವೆ ಕೆಲವು ಸಲಹೆಗಳು.
ಸಾಮಾನ್ಯವಾಗಿ ಹುಡುಗಿಯರು ಸೌಂದರ್ಯಪ್ರಿಯರು. ಯಾವಾಗಲೂ ತಾವು ಸುಂದರವಾಗಿ ಕಾಣಬೇಕೆಂದು ಸಹಜವಾಗಿಯೇ ಬಯಸುತ್ತಾರೆ. ಅಡಿಯಿಂದ ಮುಡಿವರೆಗೂ ಪರಿಪೂರ್ಣತೆ ಎಂಬುದು ಅವರ ಬಯಕೆ. ಬಟ್ಟೆಗೆ ತಕ್ಕಂತೆ ಸ್ಯಾಂಡಲ್ಸ್‌ಗಳು, ಹೇರ್‌ಸ್ಟೈಲ್-ಎಲ್ಲವೂ ಹೊಂದುವಂತಿರಬೇಕು. ಆದರೆ ಕೆಲವೊಮ್ಮೆ ಕೆಲವು ವಿಷಯದಲ್ಲಿ ನಮ್ಮ ಆಯ್ಕೆ ತಪ್ಪಾಗುವ ಸಾಧ್ಯತೆ ಇರುತ್ತದೆ. ಅದರಲ್ಲಿ ಲಿಪ್‌ಸ್ಟಿಕ್ ಸಹ ಒಂದು. ನಾವು ನಮ್ಮ ತುಟಿಗಳಿಗೆ, ಧರಿಸುವ ಬಟ್ಟೆಗಳಿಗೆ ಸರಿಯಾದ ಬಣ್ಣದ ಲಿಪ್‌ಸ್ಟಿಕ್ ಆಯ್ಕೆ ಮಾಡಿಕೊಳ್ಳುವುದರಲ್ಲಿ ಎಡವುತ್ತೇವೆ. ನಾವು ಯಾವ ಬಟ್ಟೆಯನ್ನು ಧರಿಸುತ್ತೇವೆಯೋ ಆ ಬಣ್ಣಕ್ಕೆ ಹೊಂದುವ ಲಿಪ್‌ಸ್ಟಿಕ್ ಬಣ್ಣ ಬಳಸಬೇಕು ಎನ್ನುತ್ತಾರೆ ಪೂರ್ಣಿಮಾ ಅವರು.
ಕೆಂಪು ಲಿಪ್‌ಸ್ಟಿಕ್
ಸಾಮಾನ್ಯವಾಗಿ ಕೆಂಪು ಬಣ್ಣವು ನಮ್ಮ ಭಾರತೀಯ ಚರ್ಮದ ಬಣ್ಣಕ್ಕೆ ಚೆನ್ನಾಗಿ ಹೊಂದು ವಂಥದ್ದು. ಇದು ನಮ್ಮ ನೈಸರ್ಗಿಕ ತುಟಿ ಬಣ್ಣಕ್ಕಿಂತ ಸ್ವಲ್ಪ ಹೆಚ್ಚಿನ ಆಕರ್ಷಣೆ ಕೊಡುತ್ತದೆ. ನೀವು ಸೀರೆ ಅಥವಾ ಲೆಹೆಂಗಾದಂತಹ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದಾಗ ಕೆಂಪು ಬಣ್ಣದ ಲಿಪ್‌ಸ್ಟಿಕ್ ಧರಿಸುವುದು ಸೂಕ್ತ. ಕೆಂಪು ಲಿಪ್‌ಸ್ಟಿಕ್‌ನ ವೈಶಿಷ್ಯತೆಯೆಂದರೆ ಎಲ್ಲದರ ಜತೆಗೂ ಹೊಂದಿ ಕೊಳ್ಳುವ ಗುಣ. ಹೆಚ್ಚು ಜನಪ್ರಿಯವೂ ಸಹ.
ಪಿಂಕ್ ಲಿಪ್‌ಸ್ಟಿಕ್
ಕೆಂಪು ಬಣ್ಣಕ್ಕಿಂತ ಭಿನ್ನವಾಗಿ ತೋರಬೇಕೆನಿಸಿ ಪಿಂಕ್ ಬಣ್ಣ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಯಾಕೆಂದರೆ ಎಲ್ಲರ ಚರ್ಮದ ಬಣ್ಣಕ್ಕೆ ಇದು ಸರಿ ಹೊಂದದು. ನಿಮ್ಮ ಚರ್ಮದ ಟೋನ್‌ಗೆ ಸೂಕ್ತವಾದ ಪಿಂಕ್ ಶೇಡ್ ಆರಿಸಿ ಬಳಸಿ. ಗುಲಾಬಿ ಬಣ್ಣದ ಉಣ್ಣೆಬಟ್ಟೆ, ಪೀಚ್, ಕ್ರೀಮ್ ಬಣ್ಣದ ಬಟ್ಟೆಗಳಿಗೆ ಸೂಕ್ತ.
ಡಾರ್ಕ್ ಲಿಪ್‌ಸ್ಟಿಕ್
ಮೆರೂನ್, ಕೆಂಪು, ನೇರಳೆ, ಚಾಕೊಲೇಟ್ ಹಾಗೂ ನೇರಳೆಯಂಥ ಗಾಢ ಬಣ್ಣಗಳನ್ನು ಸೂಕ್ತವೆನಿಸುವ ಬಟ್ಟೆಗಳೊಂದಿಗೆ ಮಾತ್ರ ಧರಿಸ ಬೇಕು. ಕಣ್ಣಿನ ಮೇಕಪ್ ಕಡಿಮೆ ಇರುವಾಗ ತುಟಿಗಳಿಗೆ ಎದ್ದು ಕಾಣುವಂತೆ ಈ ಬಣ್ಣಗ ಳನ್ನು ಬಳಸುವುದುಂಟು. ನೀವು ಹತ್ತಿ ಸೀರೆ ಅಥವಾ ಸರಳ ಕುರ್ತಿಯಂತಹ ಭಾರತೀಯ ಉಡುಪುಗಳನ್ನು ಧರಿಸಿದಾಗ, ಸರಳವಾಗಿ ಸಿಂಗರಿಸಿಕೊಂಡು, ಈ ಗಾಢ ಬಣ್ಣದ ಲಿಪ್‌ಸ್ಟಿಕ್ ಹಚ್ಚಿಕೊಂಡರೆ ಚಂದ.
ಬ್ರೌನ್ ಲಿಪ್‌ಸ್ಟಿಕ್
ದಿನಾ ಮೇಕ್ ಅಪ್ ಮಾಡುವಾಗ ನಿಮಗೆ ಕಂದು ಬಣ್ಣದ ಲಿಪ್‌ಸ್ಟಿಕ್ ಸೂಟ್ ಆಗುವುದಿಲ್ಲ. ಭಾರತೀಯ ಸ್ಕಿನ್‌ಟೋನ್‌ಗಳಿಗೆ ಈ ಬಣ್ಣ ಹೊಂದಿಕೆಯಾಗುವುದು ಕಷ್ಟ. ಆದರೆ, ಜೀನ್ಸ್, ಕುರ್ತಾಸ್, ಟ್ಯೂನಿಕ್ಸ್, ಟಾಪ್ಸ್ ಮತ್ತು ನಿಲುವಂಗಿ ಗಳಂತಹ ಬಟ್ಟೆಗಳಿಗೆ ಚಾಕೊಲೇಟ್ ಬಣ್ಣದ ಲಿಪ್ ಶೇಡ್ ಬಳಸುವುದು ಸೂಕ್ತ.
ಹೊಳಪು ಲಿಪ್‌ಸ್ಟಿಕ್
ನಿಮ್ಮ ತುಟಿಗಳನ್ನು ಆಕರ್ಷಕವಾಗಿಸಲು ಗ್ಲೋಸ್ ಲಿಪ್‌ಸ್ಟಿಕ್ ಅನ್ವಯಿಸಬಹುದು. ಇದು ನಿಮ್ಮ ತುಟಿಗಳನ್ನು ಹೊಳೆಯುವಂತೆ ಮಾಡಿ, ಹೊಳಪು ನೀಡುತ್ತದೆ. ತೆಳುವಾದ ತುಟಿಗಳನ್ನು ಪೂರ್ಣವಾಗಿ ಕಾಣುವಂತೆ ಮಾಡುತ್ತದೆ. ಹೊಳೆ ಯುವ ಸೀರೆಗಳು, ಲೆಹೆಂಗಾಗಳು ಮತ್ತು ನಿಲುವಂಗಿಗಳಿಗೆ ಈ ಲಿಪ್‌ಸ್ಟಿಕ್ ಬಳಸುವುದು ಉತ್ತಮ.
ಮ್ಯಾಟ್ ಲಿಪ್‌ಸ್ಟಿಕ್
ಲಿಪ್‌ಸ್ಟಿಕ್ ಫ್ಯಾಷನ್ ಜಗತ್ತಿನಲ್ಲಿ ಹೊಸ ಪ್ರವೃತ್ತಿ ಮ್ಯಾಟ್ ತುಟಿಗಳು. ಇದು ಕೆಲವು ವರ್ಷಗಳಿಂದ ಪ್ರಸಿದ್ಧವಾಗಿದೆ. ಇಂದಿನ ಯುವತಿಯರು ಮ್ಯಾಟ್ ತುಟಿಯನ್ನು ಪ್ರೀತಿಸುತ್ತಾರೆ. ಮ್ಯಾಟ್ ತುಟಿಗಳು ಸರಳವಾಗಿ, ಹೊಳಪು ಅಥವಾ ಆಡಂಬರವಿಲ್ಲದೆ ಕಾಣುತ್ತದೆ. ಮ್ಯಾಟ್ ತುಟಿಗಳು ವರ್ಣರಂಜಿತ, ಆಕರ್ಷಕವಾಗಿ ಕಾಣುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Parliament Session: ವಿಪಕ್ಷಗಳ ಕೋಲಾಹಲ ನಡುವೆ ಏಕ ಚುನಾವಣೆ ಮಸೂದೆ ಜೆಪಿಸಿಗೆ
ಜೋಡೋ ಯಾತ್ರೆಯಲ್ಲಿ”ನಗರ ನಕ್ಸಲರು’: ಮಹಾರಾಷ್ಟ್ರ ಸಿಎಂ ಫಡ್ನವೀಸ್
WPL 2025: ವನಿತಾ ಪ್ರೀಮಿಯರ್ ಲೀಗ್ ದಿನಾಂಕ ಅಂತಿಮ; ಬೆಂಗಳೂರಿನಲ್ಲಿಲ್ಲ ಪಂದ್ಯಗಳು
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.