ಆ್ಯಕ್ಸಲರೇಟರ್‌ ಕೇಬಲ್‌ ಹಾಳಾದರೆ ಏನು ಮಾಡುವುದು?


Team Udayavani, Oct 18, 2019, 5:40 AM IST

e-18

ಬೈಕ್‌ ಎಂದರೆ ಆ್ಯಕ್ಸಲರೇಟರ್‌, ಕ್ಲಚ್‌ ಕೇಬಲ್‌ಗ‌ಳು ಅತಿ ಮುಖ್ಯವಾದವುಗಳು. ಅಕ್ಸಲರೇಟರ್‌ ಕೇಬಲ್‌ಗ‌ಳೂ ಕೆಲವೊಮ್ಮೆ ತುಂಡಾಗಿ ಪ್ರಯಾಣ ಭಂಗವಾಗುವುದಿದೆ. ಆಧುನಿಕ ತಂತ್ರಜ್ಞಾನದ ವ್ಯವಸ್ಥೆಯಲ್ಲಿ ಇಂತಹ ಸಮಸ್ಯೆಗಳು ಕಡಿಮೆ. ಆದರೂ ಕೆಲವೊಮ್ಮೆ ಕೇಬಲ್‌ಗೆ ಹಾನಿಯಾಗಿ ಸಮಸ್ಯೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ನೋಡೋಣ ಬನ್ನಿ.

ಸಮಸ್ಯೆ ಗುರುತಿಸುವುದು ಹೇಗೆ?
ಹೊರ ಕವರ್‌ಗೆ ಹಾನಿ
ಆ್ಯಕ್ಸಲರೇಟರ್‌ ಹೊರ ಕವರ್‌ ಸ್ಟೀಲ್‌ನಿಂದಾಗಿದ್ದು ಅದರ ಮೇಲ್ಭಾಗ ಪ್ಲಾಸ್ಟಿಕ್‌ ಕವರ್‌ ಇರುತ್ತದೆ. ಈ ಸ್ಟೀಲ್‌ ಕವರ್‌ಗೆ ಹಾನಿಯಾದರೆ, ಒಳಗಿರುವ ಕೇಬಲ್‌ಗ‌ೂ ಕೆಲವೊಮ್ಮೆ ಹಾನಿಯಾಗುತ್ತದೆ. ಹಲವು ವರ್ಷಗಳ ಬಳಕೆ ಅಥವಾ ಒಳಭಾಗದಲ್ಲಿ ಉಜ್ಜಾಟದಿಂದಾಗಿ ಕೇಬಲ್‌ಗೆ ಸಮಸ್ಯೆಯಾಗಬಹುದು.

ಆ್ಯಕ್ಸಲರೇಟರ್‌ ಪ್ರತಿಕ್ರಿಯೆ
ಆ್ಯಕ್ಸಲರೇಟರ್‌ ತಿರುವಿದರೂ, ಬೈಕ್‌ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದಾದರೆ ಕೇಬಲ್‌ ಸಮಸ್ಯೆಯೂ ಕಾರಣವಿರಬಹುದು. ಇಂತಹ ಸಂದರ್ಭದಲ್ಲಿ ಬೈಕ್‌ ಸ್ಟಾಂಡ್‌ ಹಾಕಿ ಪಾರ್ಕ್‌ ಮಾಡಿ, ಕಾಬ್ಯುಯರೇಟರ್‌ನಲ್ಲಿ ಥಾಟಲ್‌ ತಿರುಗಿಸಲು ಯತ್ನಿಸಿ. ಈಗ ಸರಿಯಾಗಿದ್ದರೆ ಅದು ಕೇಬಲ್‌ನದ್ದೇ ಸಮಸ್ಯೆ. ಇಂತಹ ಸಂದರ್ಭದಲ್ಲಿ ಕೇಬಲ್‌ ಬದಲಾವಣೆ ಅನಿವಾರ್ಯ.

ಕೇಬಲ್‌ ಬದಲಾವಣೆ ಹೇಗೆ?
ಬೈಕ್‌ ಅನ್ನು ಮೇನ್‌ ಸ್ಟಾಂಡ್‌ನ‌ಲ್ಲಿ ಪಾರ್ಕ್‌ ಮಾಡಿ ಕೇಬಲ್‌ ಹ್ಯಾಂಡಲ್‌ ಬಾರ್‌ಗೆ ಮತ್ತು ಕಾಬ್ಯುಯರೇಟರ್‌ಗೆ ಸಂಪರ್ಕ ಕಲ್ಪಿಸುತ್ತದೆ. ಈಗ ಹ್ಯಾಂಡಲ್‌ಗೆ ಸಂಪರ್ಕ ಕಲ್ಪಿಸುವ ಜಾಗದಲ್ಲಿರುವ ನಟ್‌ ಅನ್ನು ಸಡಿಸಲಗೊಳಿಸಿ. ಬಳಿಕ ಹ್ಯಾಂಡಲ್‌ನ ಗ್ರಿಪ್‌ ಅನ್ನು ತೆಗೆಯಿರಿ. ಗ್ರಿಪ್‌ನ ಒಳಗೆ ಕೇಬಲ್‌ ಸಂಪರ್ಕ ಇರುವುದು ಗೊತ್ತಾಗುತ್ತದೆ. ಬಳಿಕ ಕಾಬ್ಯುìಯರೇಟರ್‌ನಲ್ಲಿ ಇರುವ ಸಂಪರ್ಕವನ್ನೂ ಎಳೆದು ತೆಗೆಯಿರಿ.

ಹೊಸ ಕೇಬಲ್‌ ಅಳವಡಿಸುವ ವೇಳೆ ನಿರ್ದಿಷ್ಟ ಕಂಪೆನಿಯ ಕೇಬಲ್‌ ಅನ್ನೇ ಖರೀದಿಸಿ. ಕೆಲವೊಂದು ಕೇಬಲ್‌ಗ‌ಳ ಮಾದರಿ, ಉದ್ದ ಇತ್ಯಾದಿಗಳಲ್ಲಿ ವ್ಯತ್ಯಾಸವಿರಬಹುದು. ಆದ್ದರಿಂದ ಅದೇ ಮಾಡೆಲ್‌ ನೋಡಿ ತಂದು ಆರಂಭದಲ್ಲಿ ಕಾಬ್ಯುಯರೇಟರ್‌ಗೆ ಅಳವಡಿಸಿ. (ಹಳೆಯ ಮಾದರಿ ಕಾಬ್ಯುಯರೇಟರ್‌ಗಳ ಮೇಲ್ಭಾಗವನ್ನು ತೆಗೆಯಬೇಕಿರುತ್ತದೆ) ಬಳಿಕ ಕೇಬಲ್‌ ಅನ್ನು ಹ್ಯಾಂಡಲ್‌ಗೆ ಬಳಸಿ, ಹ್ಯಾಂಡ್‌ ಗ್ರಿಪ್‌ಗೆ ಮೊದಲಿನಂತೆಯೇ ಅಳವಡಿಸಿ. ಈಗ ಹ್ಯಾಂಡ್‌ಗ್ರಿಪ್‌ನ ಮೇಲ್ಭಾಗದಲ್ಲಿರುವ ನಟ್‌ ಅನ್ನು ತುಸು ಬಿಗಿಗೊಳಿಸಿ. ತುಸು ಫ್ರೀ ಪ್ಲೇ ಇರುವಂತೆ ನೋಡಿಕೊಳ್ಳಿ. ಬೈಕ್‌ ಚಾಲನೆ ಮಾಡಿ ಫ್ರೀ ಪ್ಲೇ ಸರಿಯಿದೆಯೇ ಎಂದು ಪರೀಕ್ಷಿಸಿ.

ದಾರಿ ಮಧ್ಯೆ ಸಮಸ್ಯೆಯಾದರೆ ಹೀಗೆ ಮಾಡಿ
ಆ್ಯಕ್ಸಲರೇಟರ್‌ ಕೇಬಲ್‌ ತುಂಡಾಗಿದೆ. ಬೈಕ್‌ ನಿಂತೋಗಿದೆ. ಏನು ಮಾಡೋದು? ಟೆನ್ಶನ್‌ ಬೇಡ. ಇದಕ್ಕೆ ಸುಲಭ ಉಪಾಯವಿದೆ. ಒಂದು ವೇಳೆ ಕೇಬಲ್‌ ಹ್ಯಾಂಡ್‌ ಗ್ರಿಪ್‌ ಸೇರುವ ಜಾಗದಲ್ಲಿ ತುಂಡಾಗಿದೆ ಎಂದಾದರೆ ಸಣ್ಣ ಬಟ್ಟೆಯ ಚೂರು ಇದ್ದರೆ ಅದಕ್ಕೆ ಬಿಗಿದು, ಗ್ರಿಪ್‌ಗೆ ಸುತ್ತಿ ಗ್ರಿಪರ್‌ ಅನ್ನು ಮೊದಲಿನಂತೆಯೇ ಬಳಸಬಹುದು. ಒಂದು ವೇಳೆ ಕೇಬಲ್‌ ಸಂಪರ್ಕ ಕಡಿದುಕೊಂಡಿದ್ದರೆ, ಮೈನ್‌ ಸ್ಟಾಂಡ್‌ ಹಾಕಿ ಪಾರ್ಕ್‌ ಮಾಡಿ. ಕಾಬ್ಯುಯರೇಟರ್‌ ಕೆಳಭಾಗದಲ್ಲಿ ಆ್ಯಕ್ಸಲರೇಷನ್‌ ಅಡ್ಜಸ್ಟ್‌ ಮಾಡುವ ಸ್ಪ್ರಿಂಗ್‌ ನಟ್‌ ಇರುತ್ತದೆ. ಇದನ್ನು ತುಸು ಬಿಗಿಗೊಳಿಸಿ. ಆಗ ಆರ್‌ಪಿಎಂ ಹೆಚ್ಚಾಗುತ್ತದೆ (ಅಕ್ಸಲರೇಟರ್‌ ನೀಡಿದಂತೆ) ಬಳಿಕ ಕ್ಲಚ್‌ನಲ್ಲೇ ನಿಭಾಯಿಸಿಕೊಂಡು ಚಾಲನೆ ಮಾಡಬಹುದು. ಗಮನಿಸಿ ಇದು ತುರ್ತು ಸಂದರ್ಭಕ್ಕೆ ಮಾತ್ರ ಪರಿಹಾರವಾಗಬಲ್ಲದು.

- ಈಶ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.