ಕೊರೊನಾ ವೈರಸ್‌ ಏನು? ಮುಂಜಾಗ್ರತೆ ಹೇಗೆ?


Team Udayavani, Feb 4, 2020, 5:04 AM IST

AAAAA

ಕೊರೊನಾ ವೈರಸ್‌ ಬಗ್ಗೆ ಇಡೀ ಜಗತ್ತಿನಲ್ಲಿ ಸುದ್ದಿಯಾಗಿದೆ. ಈ ಬಗ್ಗೆ ಕೆಲವೆಡೆ ತಪ್ಪು ಗ್ರಹಿಕೆಗಳೂ ಇವೆ. ಈ ಹಿನ್ನೆಲೆಯಲ್ಲಿ ವೈರಸ್‌ ಬಗೆಗಿನ ಪೂರ್ಣ ಮತ್ತು ಸ್ಪಷ್ಟ ಮಾಹಿತಿ ನೀಡುವುದಕ್ಕಾಗಿಯೇ ಈ ಲೇಖನ.

- ಕಳೆದ ಡಿಸೆಂಬರ್‌ನಲ್ಲಿ ಚೀನದ ವುಹಾನ್‌ ಪ್ರಾಂತ್ಯದಲ್ಲಿ ಅಸಾಮಾನ್ಯ ಬಗೆಯ ನ್ಯುಮೋನಿಯಾ ಪ್ರಕರಣಗಳು ಹೆಚ್ಚಾಗಿ ಕಂಡು ಬಂದವು. ಇದರ ಬಗ್ಗೆ ಡಿ. 31 ರಂದು ಚೀನ ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ಮಾಡಿತು.
- ಜನವರಿ 7 ರಂದು ನೋವೆಲ್‌ ಕೊರೊನಾ ವೈರಸ್‌ನ್ನು ಪತ್ತೆ ಹಚ್ಚಲಾಯಿತು. ಇದಕ್ಕೆ ತಾತ್ಕಾಲಿಕವಾಗಿ ನೋವೆಲ್‌ ಕೊರೊನಾ ವೈರಸ್‌ 2019 (nCoV&2019) ಎಂದು ಹೆಸರಿಸಡಲಾಗಿದೆ. ಹೆಚ್ಚಿನ ಪ್ರಕರಣಗಳಲ್ಲಿ, ಈ ರೋಗಕ್ಕೆ ಚೀನದ ವುಹಾನ್‌ ನಗರದ ಹುಆನನ್‌ ಸೀ ಫ‌ುಡ್‌ ಮಾರುಕಟ್ಟೆಗೆ ಸಂಬಂಧ
ಇರುವಂತೆ ಕಂಡು ಬಂದಿದೆ.
– ಡಿಸೆಂಬರ್‌ನಲ್ಲಿ 50 ಕ್ಕಿಂತಲೂ ಕಡಿಮೆ
ಪ್ರಕರಣಗಳು ವರದಿಯಾಗಿದ್ದವು. ಗಂಭೀರ ಪ್ರಕರಣಗಳು ಮತ್ತು ಕೆಲವು ಸಾವುಗಳು ಸಂಭವಿಸಿದ್ದರೂ ಮನುಷ್ಯರಿಂದ ಮನುಷ್ಯರಿಗೆ ಹರಡಿರುವುದಕ್ಕೆ ಇನ್ನೂ ಪುರಾವೆ ಸಿಕ್ಕಿರಲಿಲ್ಲ.
-ಜನವರಿಯಲ್ಲಿ ಸನ್ನಿವೇಶವೇ ಬದಲಾಯಿತು. ಪ್ರಕರಣಗಳು ಹೆಚ್ಚಳವಾದವು. ಸಾವುಗಳ ಸಂಖ್ಯೆಯೂ ಹೆಚ್ಚಾಯಿತು. ಅಂದಿನಿಂದ ಥೈಲ್ಯಾಂಡ್‌, ದಕ್ಷಿಣ ಕೊರಿಯಾ, ವಿಯೆಟ್ನಾಂ, ಯು.ಎಸ್‌.ಎ, ಸಿಂಗಾಪೂರ್‌, ಮಲೇಷ್ಯಾ, ಫ್ರಾನ್ಸ್‌, ಆಸ್ಟ್ರೇಲಿಯಾ, ನೇಪಾಲ, ಶ್ರೀಲಂಕಾ, ಯು ಎ ಇ, ಜರ್ಮನಿ, ಕೆನಡಾ ಹಾಗೂ ಭಾರತ ಒಳಗೊಂಡಂತೆ ಹಲವು ದೇಶಗಳಲ್ಲಿ ಈ ಪ್ರಕರಣಗಳು ವರದಿಯಾಗಿವೆ.
- ಈ ಸಂದರ್ಭದಲ್ಲಿ ಈ ವೈರಸ್‌ ಬಗ್ಗೆ ಸಾರ್ವಜನಿಕರಲ್ಲಿ ಕೆಲವು ತಪ್ಪು ಗ್ರಹಿಕೆಗಳೂ ಹರಡುತ್ತಿವೆ. ಸಾರ್ವಜನಿಕರ ಆರೋಗ್ಯಕ್ಕೆ ಬೆದರಿಕೆ ಇರುವುದು ನಿಜ. ಈ ಹೊತ್ತಿನಲ್ಲಿ ಭಯ ಪಡುವ ಬದಲು ಜಾಗ್ರತೆ ವಹಿಸುವುದು ಅವಶ್ಯ.

ಕೊರೊನಾ ವೈರಸ್‌ಗಳು ಎಂದರೇನು?
ಈ ವೈರಸ್‌ ಗಳು ಒಂದು ಗುಂಪಾಗಿದ್ದು, “ಕಿರೀಟ’ದಂಥ ರಚನೆ ಹೊಂದಿವೆ. ಪ್ರಾಣಿಗಳಲ್ಲಿ 50 ಕ್ಕೂ ಹೆಚ್ಚು ವಿಧದ ಕೊರೊನಾ ವೈರಸ್‌ಗಳಿದ್ದು, ಅವುಗಳಲ್ಲಿ ಕೆಲವೇ ಕೆಲವು ಮನುಷ್ಯರಲ್ಲಿ ಸೋಂಕು ಉಂಟು ಮಾಡುತ್ತವೆ.

ಈ ವೈರಸ್‌ಗಳು ಮನುಷ್ಯರಲ್ಲಿ ಯಾವ ಕಾಯಿಲೆಗಳನ್ನುಂಟು ಮಾಡುತ್ತವೆ?
CoV-NL63, CoV-229E, CoV-OC43, ಮತ್ತು CoV-HKU1ನಂಥ ವೈರಸ್‌ಗಳು ಮನುಷ್ಯರಲ್ಲಿ ಸಾಮಾನ್ಯ ಶೀತವನ್ನುಂಟು ಮಾಡುತ್ತವೆ. SARS-CoV ಯನ್ನು ಮೊದಲ ಬಾರಿ ಚೀನದಲ್ಲಿ ಗುರುತಿಸಲಾಗಿತ್ತು. MERS-CoV ಯನ್ನು ಮೊತ್ತ ಮೊದಲ ಬಾರಿ ಸೌದಿ ಅರೇಬಿಯಾದಲ್ಲಿ ಗುರುತಿಸಿದ್ದು, ಇದು ಗಂಭೀರ ಮತ್ತು ಮಾರಣಾಂತಿಕ ನ್ಯುಮೋನಿಯಾಕ್ಕೆ ಕಾರಣವಾಗುತ್ತದೆ.

ನೋವೆಲ್‌ ಕೊರೊನಾ ವೈರಸ್‌ ಎಂದರೇನು?
ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಈ ಹಿಂದೆ ಕಂಡು ಬಾರದಿದ್ದಂಥ ಕೊರೊನಾ ವೈರಸ್‌ನ್ನು ನೋವೆಲ್‌ ಕೊರೊನಾವೈರಸ್‌ ಎಂದು ಕರೆಯುತ್ತಾರೆ.
ನೋವೆಲ್‌ ಕೊರೊನಾ ವೈರಸ್‌ನ ನೈಸರ್ಗಿಕ ಮೂಲ ಯಾವುದು?
ಪ್ರಾಣಿಗಳು ಕೊರೊನಾ ವೈರಸ್‌ಗಳ ನೈಸರ್ಗಿಕ ಮೂಲ. ಬಾವಲಿಗಳು ಈ ವೈರಸ್‌ಗಳಿಗೆ ಆಶ್ರಯ ನೀಡುವ ಪ್ರಮುಖ ಜೀವಿಗಳು. ಪುನುಗು ಬೆಕ್ಕು (SARS-CoV), ), ಒಂಟೆ (MERS-CoV) ಸೇರಿದಂತೆ ಇತರ ಹಲವು ಪ್ರಾಣಿಗಳಲ್ಲಿಯೂ ಇರುತ್ತವೆ.

ಇವು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದು ಸಾಧ್ಯವಿಲ್ಲವೇ?
ಹೌದು. ಸೋಂಕುಪೀಡಿತ ಪ್ರಾಣಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಲ್ಲಿ ಮನುಷ್ಯರಿಗೂ ಹರಡುತ್ತದೆ (ಪ್ರಾಣಿಗಳನ್ನು ನೋಡಿಕೊಳ್ಳುವುದು, ಜೀವಂತ ಪ್ರಾಣಿ ಮಾರುಕಟ್ಟೆಗಳಿಗೆ ಭೇಟಿ ನೀಡುವುದು, ಬೇಯಿಸದ ಅಥವಾ ಅರ್ಧ ಬೇಯಿಸಿದ ಪ್ರಾಣಿ ಉತ್ಪನ್ನಗಳ ಸೇವನೆ).

ವೈರಸ್‌ ಸೋಂಕಿನ ರೋಗಲಕ್ಷಣಗಳೇನು?
ಇದರಲ್ಲಿ ರೋಗಲಕ್ಷಣ ರಹಿತ, ಸೌಮ್ಯ, ತೀವ್ರ ಮತ್ತು ಮಾರಣಾಂತಿಕ ಎಂಬ ಹಂತಗಳಿವೆ. ಸಾಮಾನ್ಯ ರೋಗಲಕ್ಷಣಗಳು ಜ್ವರ, ಕೆಮ್ಮು, ಏದುಸಿರು ಮತ್ತು ಉಸಿರಾಟ ಕಷ್ಟವಾಗುವುದು. ಸೋಂಕು ತೀವ್ರತೆ ಇರುವ ಪ್ರಕರಣಗಳಲ್ಲಿ ನ್ಯುಮೋನಿಯಾ, ಮೂತ್ರಪಿಂಡ ವೈಫ‌ಲ್ಯ ಮತ್ತು ಬಹುಅಂಗಾಂಗಗಳ ವೈಫ‌ಲ್ಯಕ್ಕೂ ಕಾರಣವಾಗಬಹುದು.

ಮನುಷ್ಯರಿಂದ ಮನುಷ್ಯರಿಗೆ ಹೇಗೆ ಹರಡುತ್ತದೆ?
ಸೋಂಕು ತಗುಲಿದ ವ್ಯಕ್ತಿಯ ತೀರಾ ಸನಿಹ ಸಂಪರ್ಕಕ್ಕೆ ಬರುವ ವ್ಯಕ್ತಿಗಳು ಅಂದರೆ ಕುಟುಂಬ ಸದಸ್ಯರು, ಆರೋಗ್ಯ-ಆರೈಕೆ ಕೆಲಸಗಾರರು ಮತ್ತು ಇತರ ಸೇವೆ ನೀಡುವವರಿಗೆ ಇದು ಹರಡುವ ಸಾಧ್ಯತೆ ಇದೆ. ಈ ವೈರಸ್‌ ಮುಖ್ಯವಾಗಿ ಗಾಳಿಯಲ್ಲಿನ ಕಣಗಳ (droplets ) ಮೂಲಕ ಮತ್ತು ಬೇರೆ ವಸ್ತುಗಳ (formites)ಮೂಲಕ ಹರಡುತ್ತದೆ.

ಇದಕ್ಕೆ ಲಸಿಕೆ ಲಭ್ಯವಿದೆಯೇ?
ಪ್ರಸ್ತುತ ಯಾವುದೇ ಲಸಿಕೆ ಲಭ್ಯವಿಲ್ಲ. ಲಸಿಕೆ ಅಭಿವೃದ್ಧಿಗೆ ಪ್ರಯತ್ನ ನಡೆದಿದೆ. ಇದಕ್ಕೆ ಹಲವು ವರ್ಷಗಳಲ್ಲದಿದ್ದರೂ, ಹಲವು  ತಿಂಗಳುಗಳು ತಗಲಬಹುದು.

ಚಿಕಿತ್ಸೆ ಲಭ್ಯವಿದೆಯೇ?
ಯಾವುದೇ ನಿರ್ದಿಷ್ಟ ವೈರಸ್‌ ನಿರೋಧಕ ಔಷಧಿಗಳು ಲಭ್ಯವಿಲ್ಲ. ಆದರೆ, ರೋಗಿಯ ವೈದ್ಯಕೀಯ ಪರಿಸ್ಥಿತಿಯನ್ನಾಧರಿಸಿ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಬಹುದು. ಬೆಂಬಲ ಆರೈಕೆ ಒದಗಿಸುವುದು ಹೆಚ್ಚು ಪರಿಣಾಮಕಾರಿಯಾಗಬಲ್ಲದು.

ಭಾರತದಲ್ಲಿ ಈ ವೈರಸ್‌ ವರದಿಯಾಗಿದೆಯೇ?
ಕೇರಳದಲ್ಲಿ ಮೊದಲ ಪ್ರಕರಣ ವರದಿಯಾಗಿತ್ತು.

ಈ ವೈರಸ್‌ ನಿಂದ ನಮ್ಮನ್ನು  ನಾವು ಹೇಗೆ ರಕ್ಷಿಸಿಕೊಳ್ಳಬಹುದು?
ಸೋಪ್‌ ಮತ್ತು ನೀರಿನಿಂದ ಅಥವಾ ಆಲ್ಕೋಹಾಲ್‌ ಆಧರಿತ ಹ್ಯಾಂಡ್ರಬಿ°ಂದ
(ಹ್ಯಾಂಡ್‌ ಹೈಜೀನ್‌) ಕೈಗಳನ್ನು ಆಗಾಗ್ಗೆ ತೊಳೆಯಬೇಕು. ನಿರ್ಜೀವ ವಸ್ತುಗಳನ್ನು ಮುಟ್ಟಿದ ಬಳಿಕ ಮುಖ, ಕಣ್ಣು, ಮೂಗು ಮತ್ತು ಬಾಯಿಯನ್ನು ಮುಟ್ಟಬಾರದು. ಜ್ವರ ಮತ್ತು ಕೆಮ್ಮು ಇರುವ ಯಾರೊಂದಿಗೂ ತುಂಬಾ ಹತ್ತಿರ ಹೋಗಬಾರದು. ರಕ್ಷಕ ಧರಿಸದೆ ಜೀವಂತ ಕಾಡುಪ್ರಾಣಿಗಳು ಅಥವಾ ಸಾಕು ಪ್ರಾಣಿಗಳ ಸಂಪರ್ಕಕ್ಕೆ ಹೋಗಬಾರದು.

ಆರೋಗ್ಯ ಕಾರ್ಯಕರ್ತರಿಗೂ ಹರಡಬಹುದೆ?
ಸೋಂಕುಪೀಡಿತ ಪ್ರಾಣಿಗಳಿಂದ ಅಥವಾ ರೋಗಿಗಳ ಸಂಪರ್ಕಕ್ಕೆ ಬರುವವರಿಗೆ ವೈರಸ್‌ ತಗಲುವ ಅಪಾಯ ಅತೀ ಹೆಚ್ಚು. ಕುಟುಂಬ ಸದಸ್ಯರು ಮತ್ತು ಆರೋಗ್ಯ ಕಾರ್ಯಕರ್ತರೂ ಈ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಇದೆ.

ನೋವೆಲ್‌ ಕೊರೊನಾವೈರಸ್‌ ಬಗ್ಗೆ ಅಧಿಕೃತ ಮಾಹಿತಿಯನ್ನು ನಾನು ಎಲ್ಲಿ ಪಡೆಯಬಹುದು?
ನೋವೆಲ್‌ ಕೊರೊನಾವೈರಸ್‌ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (www.who.in) ಮತ್ತು ಆರೋಗ್ಯ ಹಾಗೂ ಕೌಟುಂಬಿಕ ಕ್ಷೇಮ ಸಚಿವಾಲಯ (www.mohfw.gov.in) ಇವು ಅಧಿಕೃತ ಮಾಹಿತಿ ಮೂಲಗಳಾಗಿರುತ್ತವೆ.

ಪ್ರೊ.ಜಿ. ಅರುಣ್‌ಕುಮಾರ್‌, ನಿರ್ದೇಶಕರು, ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿ, ಮಣಿಪಾಲ.

ಟಾಪ್ ನ್ಯೂಸ್

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.