ಯೋಗ ಮಾಡಲು ಯಾವ ಸಮಯ ಬೆಸ್ಟ್ ?
ಯೋಗ ಮಾಡಿ ಫಿಟ್ ಆಗಿ
Team Udayavani, Jan 14, 2020, 5:12 AM IST
ಯೋಗ ಬೆಳಗ್ಗೆಯೂ ಮಾಡಬಹುದು. ಸಂಜೆಯೂ ಮಾಡಬಹುದು. ಎರಡರ ಫಲವೂ ಬೇರೆ ಬೇರೆ.
ಯೋಗ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಆದರೆ ಯಾವ ಸಮಯದಲ್ಲಿ ಮಾಡಿದರೆ ಒಳ್ಳೆಯದು ಎಂಬ ಪ್ರಶ್ನೆ ಇದ್ದೇ ಇದೆ. ಬೆಳಗ್ಗೆ ಹಾಗೂ ಸಂಜೆ ಯೋಗ ಮಾಡುವುದರಿಂದ ಬೇರೆ-ಬೇರೆ ರೀತಿಯ ಅನುಕೂಲಗಳಿವೆ. ಈ ಯೋಗವನ್ನು ಮಾಡಲು ನಿರ್ದಿಷ್ಟ ಸಮಯದ ಗೊಂದಲವಿದ್ದರೆ ಇಲ್ಲಿದೆ ಪರಿಹಾರ.
ಯೋಗ ಪರಿಣಿತರು ಸೂರ್ಯ ಉದಯಿಸುವ ಸಮಯದಲ್ಲಿ ಯೋಗ ಮಾಡಿದರೆ ಒಳ್ಳೆಯದು ಎನ್ನುತ್ತಾರೆ. ಆದರೆ ಬೆಳಗ್ಗಿನ ಶಿಫ್ಟ್ ಕೆಲಸಕ್ಕೆ ಹೋಗುವವರಿಗೆ, ಬೆಳಗ್ಗೆ ಗಂಡ-ಮಕ್ಕಳನ್ನು ಆಫೀಸ್- ಶಾಲೆಗೆ ಕಳುಹಿಸುವ ಗೃಹಿಣಿಯರಿಗೆ ಬೆಳಗ್ಗೆಯ ಸಮಯ ಸಾಕಾಗದು. ಅಂತಹವರು ಸಂಜೆ ಯೋಗ ಅಭ್ಯಾಸ ಮಾಡಬಹುದು.
ಬೆಳಗ್ಗಿನ ಯೋಗದ ಪ್ರಯೋಜನಗಳು
ಉಲ್ಲಾಸದಿಂದ ಪ್ರಾರಂಭಿಸಬಹುದು
ಯೋಗ ಮಾಡುವುದರಿಂದ ಶರೀರಕ್ಕೆ ಉಲ್ಲಾಸ ದೊರೆಯು ವುದು, ಯಾವುದೇ ನೋವು ಇದ್ದರೆ ಮರೆಯಾಗುವುದು, ದಿನಪೂರ್ತಿ ಲವಲವಿಕೆಯಿಂದ ಇರಬಹುದು.
ಜೀರ್ಣಕ್ರಿಯೆಗೆ ಸಹಕಾರಿ
ಜೀರ್ಣಕ್ರಿಯೆಗೆ ಕ್ರಿಯೆ ಸರಿಯಾಗಿ ನಡೆಯುವಂತೆ ಮಾಡಿ ನಿಮ್ಮ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ.
ದಿನಪೂರ್ತಿ ಖುಷಿ ಖುಷಿಯಾಗಿ ಇರುವಿರಿ
ಯೋಗ ಮಾಡುವುದರಿಂದ ಪಾಸಿಟಿವ್ ಎನರ್ಜಿ ದೊರೆಯು ವುದು, ಆದ್ದರಿಂದ ಖುಷಿ ಖುಷಿಯಾಗಿ ದಿನ ಕಳೆಯುವಿರಿ.
ಯೋಗ ಸಂಜೆ ಮಾಡುವುದರ ಅನುಕೂಲಗಳು
ಒತ್ತಡ ಉಪಶಮನವಾಗುತ್ತದೆ
ಆಫೀಸ್, ಮನೆ ಕೆಲಸ ಅಂತ ಯಾವುದೇ ಒತ್ತಡವಿಲ್ಲದೆ ಆರಾಮದಾಯಕವಾಗಿ ಯೋಗ ಮಾಡಬಹುದು.
ಆಯಾಸ ಕಡಿಮೆಯಾಗುತ್ತದೆ
ಸಂಜೆ ಕೆಲಸ ಮಾಡಿ ಬಂದ ಸುಸ್ತು ಯೋಗ ಅಭ್ಯಾಸ ಮಾಡುವು ದರಿಂದ ಮಾಯವಾಗುವುದು.
ಜೀರ್ಣಕ್ರಿಯೆಗೆ ಒಳ್ಳೆಯದು
ದಿನಪೂರ್ತಿ ತಿಂದಿದ್ದು ಸಂಜೆ ಯೋಗ ಮಾಡುವುದರಿಂದ ಅರಗಿಸಿಕೊಳ್ಳಬಹುದು.
ನಿದ್ದೆ ಚೆನ್ನಾಗಿ ಬರುತ್ತದೆ
ಯೋಗ ಮಾಡುವುದರಿಂದ ಮಾನಸಿಕ ಒತ್ತಡಗಳು ದೂರವಾಗು ವುದು, ಜತೆಗೆ ನಿದ್ದೆ ಚೆನ್ನಾಗಿ ಬರುವಂತೆ ಮಾಡುವುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.