ಮನಸ್ತಾಪಗಳನ್ನು ಮೆಟ್ಟಿ ನಿಂತಾಗ…
Team Udayavani, Nov 25, 2019, 5:35 AM IST
ಅವರು ಒಂಟಿಯಾಗಿರುವ ವೇಳೆ ಅವರತ್ತ ತೆರಳಿ ಮನಸ್ತಾಪಕ್ಕೆ ಕಾರಣವಾದ ಅಂಶಗಳನ್ನು ಚರ್ಚಿಸಲು ಪ್ರಯತ್ನಿಸಿ. ನಿಮ್ಮದೇ ತಪ್ಪು ಇದ್ದರೂ, ಇಲ್ಲದೇ ಇದ್ದರೂ ಮಾತನಾಡುವುದರಲ್ಲಿ ತಪ್ಪಿಲ್ಲ. ಯಾಕೆಂದರೆ ಎಂದೋ ಆದ ಘಟನೆ ಬಳಿಕ ಮನಸ್ಸು ಬದಲಾಗಿರುವ ಸಾಧ್ಯತೆ ಇದೆ. ಈ ಹಿಂದಿನ ಕೋಪ ಮತ್ತು ಆಕ್ರೋಶ ಅನಂತರದ ದಿನಗಳಲ್ಲಿ ತನ್ನ ಮೊನಚನ್ನು ಕಳೆದುಕೊಂಡಿರುತ್ತದೆ.
ನೆಮ್ಮದಿಯ ಜೀವನದ ಮಧ್ಯೆ ಒಂದಷ್ಟು ಮನಸ್ತಾಪಗಳು ನುಸುಳಿ ಬಿಡುತ್ತದೆ. ತುಂಬಾ ಆತ್ಮೀಯರು, ಒಲವುಳ್ಳವರು, ಸ್ನೇಹಿತರು, ಚಿರಪರಿಚಿತರು, ಸಹಪಾಠಿಗಳು-ಸಹೋದ್ಯೋಗಿಗಳು, ಕುಟುಂಬ ವಲಯದಲ್ಲಿ ಹೀಗೆ ಪಟ್ಟಿ ಮುಂದುವರಿಯುತ್ತದೆ. ನಾವು ಅಪೇಕ್ಷೆ ಪಡದ ಸಂಗತಿಗಳು ಸಂಭವಿಸಿ ನಮಗೆ ಕಿರಿಕಿರಿಯಾದಾಗ ಸಹಜವಾಗಿ ಮನಸ್ತಾಪದ ಬಾಗಿಲನ್ನು ಅದು ಬಡಿಯುತ್ತದೆ. ಇಂತಹ ಸಣ್ಣಪುಟ್ಟ ವಿಭಿನ್ನ ನಿಲುವು ಒಂದು ಸುಂದರವಾದ ಸ್ನೇಹವನ್ನು, ಸೊಗಸಾದ ಸಂಬಂಧವನ್ನು ಹಾಳುಗೆಡವುತ್ತದೆ.
ಹಾಗಾದರೆ ಇಂತಹ ಮನಸ್ತಾಪಗಳನ್ನು ಬಿಟ್ಟು ಹೊರ ಬರುವುದು ಕಠಿನವೇ? ಅಲ್ಲವೇ ಅಲ್ಲ. ಮನಸ್ತಾಪವನ್ನು ಎಳೆಯದರಲ್ಲಿಯೇ ಚಿವುಟಿ ಹಾಕುವುದು ನಮ್ಮ ನಡವಳಿಕೆಯಲ್ಲಿದೆ. ಅವನು/ಳು ಮಾತನಾಡಲಿ. ನಾನ್ಯಾಕೆ ಮಾತನಾಡಲಿ ಎಂಬ ಧೋರಣೆ ಮುಂದೆ ಬಲವಾಗುತ್ತಾ ಹೋಗುತ್ತದೆ. ನಾವಾಗಿ ಮಾತನಾಡಿದರೆ ಎಲ್ಲಿ ನನಗೆ ಕಳಂಕ ಎದುರಾಗುತ್ತದೆಯೋ ಎಂಬ ಸಂಕುಚಿತ ಭಾವನೆ ಮನದ ಮೂಲೆಯಲ್ಲಿ ಮೊಳಕೆ ಒಡೆದು ಬಿಡು ತ್ತದೆ. ಮುಂದೆ ಹೆಮ್ಮರವಾಗಿ ಅದೇ ನಮಗೆ “ನೆರಳು’ ನೀಡುತ್ತದೆ.
ಜೀವನದಲ್ಲಿ ಹಿತ ಮತ್ತು ಅಹಿತವಾದ ಅನುಭವಗಳು ಸರ್ವೇ ಸಾಮಾನ್ಯವಾದವುಗಳು. ಅವುಗಳನ್ನು ನಾವು ಯಾವ ರೀತಿ ಸ್ವೀಕರಿಸುತ್ತೇವೆ ಎಂಬುದರ ಮೇಲೆ ನಮ್ಮ ನಾಳೆಗಳು ಚಿತ್ರಿತವಾಗುತ್ತದೆ. ಮನಸ್ತಾ±ಗಳು ಎದುರಲ್ಲಿ ಬಂದಾಗ ಅವುಗಳನ್ನು ತುಂಬಾ ಗಂಭೀರವಾಗಿ ಮನಸ್ಸಿಗೆ ತೆಗೆದುಕೊಳ್ಳಬಾರದು. ಅವುಗಳನ್ನು ಮನದ ಮೂಲೆಯಲ್ಲಿ ನೆಟ್ಟು ಅದಕ್ಕೆ ನೀರೆಯುವುದರಲ್ಲಿ ಅರ್ಥವಿಲ್ಲ. ಬದ ಲಾಗಿ ಎಲ್ಲವನ್ನೂ ಶಾಂತವಾಗಿ ಸ್ವೀಕರಿಸಲು ಆರಂಭಿಸಿ. ಅವುಗಳಿಂದ ನೀವು ಕಳೆದುಕೊಳ್ಳುವುದು ಏನೂ ಇಲ್ಲ. ಶೂನ್ಯ.
ಹೇಗೆ ಮಾತನಾಡಲಿ?
ನೀವು ಒಬ್ಬರ ಜತೆ ಮಾತು ಬಿಟ್ಟು ಹಲವು ದಿನಗಳು ಕಳೆದವು ಎಂದಿಟ್ಟುಕೊಳ್ಳಿ. ಯಾವುದೋ ಒಂದು ಹಳೆಯ ಘಟನೆಗಳಿಂದ ಇಬ್ಬರೂ ಮಾತು ಮುರಿದಿರಬಹುದು. ಬಳಿಕ ಇಬ್ಬರಿಗೂ ಪಶ್ಚಾತ್ತಾಪ ಅಥವಾ ಮಾತನಾಡುವ ಆಸೆ ಚಿಗುರಿರಬಹುದು. ಆದರೆ ಅಹಂ ಅದಕ್ಕೆ ಹಸಿರು ನಿಶಾನೆ ನೀಡದೇ ಇರುವ ಕಾರಣ ಇಬ್ಬರೂ ಮಾತ ನಾಡಲೇ ಇಲ್ಲ. ಈ ಮನಸ್ಥಿತಿಯನ್ನು ಬದಲಿಸ ಬೇಕಾಗಿದೆ. ನಿಮ್ಮ ಜತೆ ಕೋಪಿಸಿಕೊಂಡವರು ಮತ್ತೆ ಮಾತನಾಡಿಸಲು ಬಂದಾಗ “ಅವರದೇ ತಪ್ಪು ಅದಕ್ಕಾಗಿ ಬಂದಿದ್ದಾರೆ’ ಎಂದು ಭಾವಿಸಿಕೊಳ್ಳಬಾರದು. ಬಹಳಷ್ಟು ಸಂದರ್ಭ ಅದೆಷ್ಟೋ ಸಂಬಂಧಗಳು ಇಂತಹ ಧೋರಣೆ ಮತ್ತು ಯೋಚನೆಯಿಂದ ಹಾಳಾಗುತ್ತವೆ. ಇಂತಹ ಮಾತುಗಳು ಕೇಳಿ ಬರಬಾರದು. ಆಗಿದ್ದು ನಡೆದು ಹೋಯ್ತು, ಇನ್ನಾದರೂ ಚೆನ್ನಾಗಿರುವ ಎಂಬ ಮಾತು ನಿಮ್ಮ ಸಂಬಂಧವನ್ನು ಅಂತ್ಯದಿಂದ ಅನಂತದವರೆಗೆ ಕೊಂಡೊಯ್ಯುತ್ತದೆ. ಯಾಕೆಂದರೆ ನಾವು ಇದ್ದಷ್ಟು ಸಮಯ ಬದುಕನ್ನು ಆನಂದಿಸಬೇಕಾಗಿದೆ. ಈ ಆನಂದಕ್ಕೆ ತೊಡಕಾಗಿರುವ ಕೆಲವು ವಿಘ್ನಗಳನ್ನು ಬಗೆ ಹರಿಸಿಕೊಂಡರೆ ಬದುಕು ನಿಜಾರ್ಥದಲ್ಲಿಯೂ ಬಂಗಾರವಾಗುತ್ತದೆ.
- ಕಾರ್ತಿಕ್ ಅಮೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.