ಅಂದದ ಮನೆಗೆ ಚೆಂದದ ಕಿಟಕಿ
Team Udayavani, Feb 8, 2020, 4:53 AM IST
ಒಂದು ಮನೆಯಲ್ಲಿ ಬಾಗಿಲಿಗೆ ಎಷ್ಟು ಪ್ರಾಮುಖ್ಯ ಇರುತ್ತದೆಯೋ ಅಷ್ಟೇ ಪ್ರಾಮುಖ್ಯ ಕಿಟಕಿಗೂ ಇರುತ್ತದೆ. ಬಸ್, ರೈಲು, ವಿಮಾನ ಹೀಗೆ ಎಲ್ಲಿ ಹೋದರೂ ನನಗೊಂದು ಕಿಟಕಿಯ ಪಕ್ಕದ ಜಾಗ ಸಿಗಲಿ ದೇವೆರೇ ಅನ್ನೋ ಮಂದಿ ಸಾಕಷ್ಟಿದ್ದಾರೆ. ಹೌದು ಕಿಟಕಿಯಿಂದ ಹೊರಗೆ ದೃಷ್ಟಿ ಹಾಯಿಸಿದಾಗ ಪ್ರಕೃತಿಯ ಸೊಬಗು ಒಂದು ರೀತಿಯಾಗಿ ಕಾಣುತ್ತದೆ. ಮನೆಯಲ್ಲೂ ಕೂಡ ಕಿಟಕಿ ಪ್ರಮುಖ ಪಾತ್ರ ವಹಿಸುತ್ತದೆ. ಮನೆಗೆ ಕಿಟಕಿ ಎಷ್ಟು ಮುಖ್ಯಮತ್ತು ಪ್ರಾಮುಖ್ಯ ಮಾಹಿತಿ ಇಲ್ಲಿದೆ.
ಮನೆಯ ಅಂದ ಹೆಚ್ಚಿಸುವುದಕ್ಕೆ ಒಂದು ಸುಂದರವಾದ ಕಿಟಕಿ ಇಲ್ಲದಿದ್ದರೆ ಹೇಗೆ? ಆದರೆ ಕಿಟಕಿಯನ್ನು ಮನೆಯಲ್ಲಿ ಯಾವ ಜಾಗದಲ್ಲಿ ಇರಿಸಬೇಕು, ವಿನ್ಯಾಸ ಹೇಗಿದ್ದರೆ ಚಂದ, ಗಾತ್ರ ಎಷ್ಟು ಹೀಗೆ ಹಲವು ವಿಷಯಗಳನ್ನು ತಿಳಿದಿದ್ದರೆ ಮನೆಯ ಅಂದವನ್ನು ಇನ್ನಷ್ಟು ಹೆಚ್ಚಿಸಬಹುದು. ಸ್ವಂತ ಮನೆಯೇ ಆಗಲಿ ಅಥವಾ ಅಪಾರ್ಟ್‌ಮೆಂಟ್ ಯಾವುದೇ ಆದರೂ ಅಲ್ಲಿ ಕಿಟಕಿ ಪ್ರಮುಖ ಪಾತ್ರ ವಹಿಸುತ್ತವೆ. ಅಪಾರ್ಟ್‌ಮೆಂಟ್‌ಗಳಾದರೆ ಮನೆಕೊಳ್ಳಲು ಬರುವವರನ್ನು ಆಕರ್ಷಿಸುವ ಪೈಕಿ ಇದು ಪ್ರಮುಖ ಪಾತ್ರ ವಹಿಸುವುದರಿಂದ ಬಿಲ್ಡರ್‌ಗಳು ಸುಂದರ ಕಿಟಕಿ, ಬಾಲ್ಕನಿ ನಿರ್ಮಿಸುವಲ್ಲಿ ಹೆಚ್ಚು ಗಮನ ಹರಿಸುತ್ತಾರೆ. ಮನೆಯ ಸೌಂದರ್ಯ ಹೆಚ್ಚಿಸಲು ಕೆಲವು ವಿಶಿಷ್ಟ ವಿನ್ಯಾಸಗಳ ಮಾಹಿತಿ ಇಲ್ಲಿದೆ.
ಕಿಟಕಿಯ ವಿನ್ಯಾಸ ಹೀಗಿರಲಿ
ನೈಸರ್ಗಿಕ ಬೆಳಕು ಆರೋಗ್ಯಕರ ಜೀವನಕ್ಕೆ ಅಗತ್ಯ. ಇದರಿಂದ ನಮ್ಮ ದೇಹ, ಮನಸ್ಸು ಪ್ರಪುಲ್ಲವಾಗಿರುತ್ತದೆ. ಹಾಗಾಗಿ ಹೆಚ್ಚು ಬೆಳುಕು ಬರುವಂತಿರಲಿ. ಚಿಕ್ಕ ಮಕ್ಕಳು ಮತ್ತು ದೊಡ್ಡವರು ಹೀಗೆ ಎಲ್ಲರೂ ಕಿಟಕಿಯಿಂದಾಚೆ ನೋಡಲು ಸಾಧ್ಯವಾಗುವಂತಿರಲಿ. ಹೆಚ್ಚು ಎತ್ತರದಲ್ಲಿ ಇದ್ದರೆ ಅದು ಅಷ್ಟು ಸುಂದರವಾಗಿರುವುದಿಲ್ಲ.
ನೆಲದಿಂದ ಸೀಲಿಂಗ್‌ವರೆಗೂ ಗಾಜಿನ ಕಿಟಕಿ ನಿರ್ಮಿಸ ಬಹುದು. ಇದು ಸ್ವಲ್ಪ ವೆಚ್ಚದಾಯಕ. ಬೀಚ್, ನದಿ ತೀರದ ರೆಸಾರ್ಟ್, ಹೋಟೆಲ್ ಮತ್ತು ಅಪಾರ್ಟ್ ಮೆಂಟ್‌ಗಳಲ್ಲಿ ಇಂದು ಹೆಚ್ಚು ಪ್ರಚಲಿತದಲ್ಲಿದೆ. ಈ ರೀತಿಯ ಕಿಟಕಿಯಿಂದ ಪ್ರಕೃತಿ ಸೌಂದರ್ಯ ಸವಿಯಬಹುದು. ಇದು ಸೀಲಿಂಗ್‌ನ ಹತ್ತಿರ ಚಿಕ್ಕದಾಗಿ ಆಯತಾಕಾರದಲ್ಲಿ ನಿರ್ಮಿಸಬಹುದಾದ ಮಾದರಿ. ಇದರಿಂದ ನಿಮಗೆ ಹೊರಗಡೆ ನೋಡಲು ಸಾಧ್ಯವಿಲ್ಲ. ಆದರೆ ನೈಸರ್ಗಿಕ ಬೆಳಕು ಪಡೆಯಲು ಸಹಾಯಕ.
ವಿವಿಧ ಜಾಗಗಳಲ್ಲಿ ಕಿಟಕಿ ಹೇಗಿರಬೇಕು?
ಮನೆಯ ಎಲ್ಲ ಭಾಗಗಳಲ್ಲಿಯೂ ಒಂದೇ ರೀತಿಯಾದ ಕಿಟಕಿ ನಿರ್ಮಿಸಿದರೆ ಅದು ಸಮಂಜಸವಲ್ಲ. ಹಾಗಾಗಿ ವಿವಿಧ ಭಾಗಗಳಲ್ಲಿ ವಿವಿಧ ವಿನ್ಯಾಸಗಳಿರಲಿ. ಮಲಗುವ ಕೊಣೆಯಾದರೆ ಅಲ್ಲಿ ನಿಮ್ಮ ಮಂಚಕ್ಕೆ ನೇರವಾಗಿ ಬೆಳಕು ಬಿಳುವಂತೆ ಮಧ್ಯಮ ಪ್ರಮಾಣದ ಕಿಟಕಿ ಇರಲಿ. ಊಟದ ಕೋಣೆಯಲ್ಲಿ ವಿಶಾಲವಾದ ಮತ್ತು ಹೆಚ್ಚು ಕಿಟಕಿಗಳಿದ್ದರೆ ಊಟ ಮಾಡುವಾಗ ಒಂದೊಳ್ಳೆ ಮನಸ್ಥಿತಿ ನಿಮ್ಮದಾಗುತ್ತದೆ. ಮತ್ತು ಪರಿಸರದ ಮಧ್ಯದಲ್ಲಿರುವ ಹಾರ ಸೇವಿಸಿದ ಅನುಭವ ಲಭಿಸುತ್ತದೆ. ಅಡುಗೆ ಮನೆಯಾದರೆ ಒಲೆಯ ಪಕ್ಕದಲ್ಲೇ ಒಂದು ಕಿಟಕಿ ಇರಲಿ. ಅದು ಅಡುಗೆ ಮಾಡುವವರಿಗೆ ಹೆಚ್ಚು ಸಹಕಾರಿ. ಮಕ್ಕಳು ಓದುವ ಕೋಣೆಗಳಲ್ಲಿ ಪಾರದರ್ಶಕ ಗಾಜಿನ ವಿಶಾಲ ಕಿಟಕಿಯಿದ್ದರೆ ಅವರ ಓದಿಗೆ ಹೆಚ್ಚು ನೆರವಾಗಬಲ್ಲದು.
ಈಗ ಟ್ರೆಂಡ್ ಹೇಗಿದೆ
ಈಗೀಗ ಜನರು ರೆಟ್ರೋ ಶೈಲಿಗೆ ಮಾರು ಹೊಗುತ್ತಿದ್ದಾರೆ. ಹಳೆಯ ಶೈಲಿಯ ಗಾಜು, ಚೌಕಟ್ಟು, ವಿನ್ಯಾಸ ಹೀಗೆ ಎಲ್ಲವೂ ರೆಟ್ರೋ ಶೈಲಿಯದ್ದಾದರೂ ಅದರಲ್ಲೀ ಸ್ವಲ್ಪ ಹೊಸತನವನ್ನು ಬೆರೆಸಿ ಚೆಂದದ ಕಿಟಕಿಯನ್ನು ಅಳವಡಿಸಿಕೊಳ್ಳುವುದು ಇಂದಿನ ಟ್ರೆಂಡ್. ಹೀಗೆ ಇನ್ನು ಕಿಟಕಿಯ ಬಗ್ಗೆ ಹೆಚ್ಚು ವ್ಯಾಮೋಹ ವಿರುವವರು ಕಿಟಕಿಯ ಪಕ್ಕ ಕುಳಿತುಕೊಳ್ಳಲು ಸಾಧ್ಯವಾಗುವಂತೆ ಸ್ಥಳಾವಕಾಶ ಬಿಟ್ಟು ನಿರ್ಮಿಸುತ್ತಾರೆ. ಇದರಿಂದ ಸೂರ್ಯೋದಯ, ಸೂರ್ಯಾಸ್ತಮಾನಗಳ ಸಮಯ ಹೆಚ್ಚು ಖುಷಿ ನೀಡುತ್ತದೆ. ಅಡ್ಡ ಸರಿಬಲ್ಲ ಮತ್ತು ರೈಲು ಬೋಗಿಯಲ್ಲಿರುವಂತೆ ಮೇಲಕ್ಕೆತಯ್ತಬಲ್ಲ ಕಿಟಕಿಗಳೂ ಹೆಚ್ಚು ಟ್ರೆಂಡ್ ಆಗುತ್ತಿವೆ.
ಆಕಾರ ಗಾತ್ರ ಹೇಗಿರಬೇಕು?
ಕಿಟಕಿ ಆಕಾರಗಳು ಮತ್ತು ಗಾತ್ರಗಳನ್ನು ಆಯ್ಕೆ ಮಾಡುವಾಗ ಯಾವುದೇ ನಿರ್ದಿಷ್ಟ ವಿನ್ಯಾಸ, ನಿಯಮಗಳಿಲ್ಲ. ನಿಮ್ಮ ಮನೆ ಮತ್ತು ಗೋಡೆಗಳಿಗೆ ಹೊಂದಾಣಿಯಾಗುವ ಮತ್ತು ಮನೆಯ ಸೌಂದರ್ಯ ಹೆಚ್ಚಿಸುವ ಸಂರಚನೆಯ ಆಯತಾಕಾರ, ಚೌಕಾಕಾರ ಹಾಗೂ ಉದ್ದನೆಯ ವಿನ್ಯಾಸದ ಕಿಟಕಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಸ್ವತ್ಛಗೊಳಿಸಲು ಹೆಚ್ಚು ಸಹಾಯಕ ವಾಗುವಂತಿರಲಿ. ಕಿಟಕಿಗಳು ಯಾವಾಗಲೂ ಪೂರ್ವ ಮತ್ತು ಪಶ್ಚಿಮ ದಿಕ್ಕಿಗಿದ್ದರೆ ಹೆಚ್ಚು ಉಪಯುಕ್ತ. ಸೂರ್ಯನ ಬೆಳಕನ್ನು ಹೆಚ್ಚು ಮನೆಯೊಳಗೆ ಬರುವಂತೆ ಮಾಡುತ್ತದೆ. ಅಲ್ಲದೇ ಇತರ ದಿಕ್ಕು ಗಳಿಗೂ ಕಿಟಕಿಗಳಿರಲಿ. ಇವು ಮಳೆಗಾಲದಲ್ಲಿ ಹೆಚ್ಚು ಉಪಯುಕ್ತ.
ಕಿಟಕಿಯ ಬಳಿ ಇವೆಲ್ಲ ಇರಲಿ
ಕಿಟಕಿ ಜತೆಗೆ ಕೆಲವೊಂದಿಷ್ಟು ವಸ್ತುಗಳಿದ್ದರೆ ಅದರ ಅಂದ ಇನ್ನಷು ಹೆಚ್ಚಾಗುತ್ತದೆ. ಗಿಡಗಳ ಪಾಟ್, ಹೂವಿನ ಗಿಡ, ಹಸುರು ಬಳ್ಳಿಗಳು, ಅಕ್ವೇರಿಯಂ, ಆ್ಯಂಟಿಕ್ ವಸ್ತು, ಸುಂದರ ಕಲಾಕೃತಿ ಅಥವಾ ಗೊಂಬೆಗಳನ್ನು ಇರಿಸಿದರೆ ಕಿಟಕಿಗೆ ಹೆಚ್ಚು ಮೆರುಗು ನೀಡುತ್ತವೆ.
ಯಾವ ರೀತಿಯ ಗಾಜು ಸೂಕ್ತ?
ಕಿಟಕಿಯನ್ನು ನಿರ್ಮಿಸುವಾಗ ಅದರ ಫ್ರೆಮ್‌ನಂತೆ ಬಳಸುವ ಗಾಜಿಗೂ ಹೆಚ್ಚು ಆದ್ಯತೆ ನೀಡಬೇಕು. ಪಾರದರ್ಶಕ, ಅಪಾರದರ್ಶಕ, ನೇರಾಳತೀತ ಕಿರಣಗಳಿಂದ ರಕ್ಷಿಸುವ ಮತ್ತು ನಿಮಗೆ ಬೇಕಾದ ಬಣ್ಣದ ಗಾಜು ಬಳಸಬಹುದು. ಅದರಿಂದ ಒಳ ಬರುವ ಬೇಳಕು ಸಹ ಅದೇ ಬಣ್ಣದಲ್ಲಿರುತ್ತದೆ. ನೀವು ಕಲೋಪಾಸಕರಾಗಿದ್ದರೆ ಪಾರದರ್ಶಕ ಗಾಜಿನ ಮೇಲೆ ವಿವಿಧ ಕಲಾಕೃತಿಗಳನ್ನೂ ಬಿಡಿಸಬಹುದು. ಮಾರುಕಟ್ಟೆಗಳಲ್ಲಿ ಅನೇಕ ಫ್ರಿಂಟೆಡ್ ಹಾಳೆಗಳು ಸಿಗುತ್ತವೆ. ಅವುಗಳನ್ನು ಅಂಟಿಸಬಹುದು.
– ಶಿವಾನಂದ ಎಚ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.