ಗಮನ ಸೆಳೆಯುತ್ತಿರುವ ವಯರ್‌ಲೆಸ್ ಹೆಡ್‌ಸೆಟ್
Team Udayavani, Nov 8, 2019, 4:42 AM IST
ಬ್ಯುಸಿಯಾದ ಲೈಫ್ನಲ್ಲಿ ನಮಗೆ ಮೊಬೈಲ್ ಫೋನ್‌ನಲ್ಲಿ ಮಾತನಾಡುವಷ್ಟು ಸಮಯವಿಲ್ಲದಂತಾಗಿದೆ. ಅಷ್ಟು ಒತ್ತಡದ ಮಧ್ಯೆ ಪ್ರೀತಿಪಾತ್ರರಲ್ಲಿ ಮಾತನಾಡಲು, ಹಾಡು ಕೇಳಲು ವಯರ್‌ಲೆಸ್ ಹೆಡ್‌ಸೆಟ್‌ಗಳಿಂದ ಸಾಧ್ಯ. ಮಾರುಕಟ್ಟೆಯಲ್ಲಿ ಗಮನಸೆಳೆಯುತ್ತಿರುವ ಹೆಡ್‌ಸೆಟ್‌ಗಳ ಬೇಡಿಕೆ ಇಂದು ಹೆಚ್ಚುತ್ತಿದೆ. ಸದ್ಯದ ಟ್ರೆಂಡ್, ಬೇಡಿಕೆ ಮುಂತಾದ ವಿಚಾರಗಳ ಮಾಹಿತಿಯನ್ನು ಈ ಲೇಖನ ತಿಳಿಸುತ್ತದೆ.
ಇಂದಿನ ಬ್ಯುಸಿ ಟೈಮ್‌ನಲ್ಲಿ ಕಿಸೆಯಲ್ಲಿದ್ದ ಮೊಬೈಲ್‌ಫೋನ್ ತೆಗೆದು ಕಾಲ್ ರಿಸೀವ್ ಮಾಡಲು ಸಮಯವಿಲ್ಲ. ಹೀಗಿರುವಾಗ ಕಿವಿಯಲ್ಲೊಂದು ಬ್ಲೂಟೂಥ್ ಹೆಡ್‌ಸೆಟ್ ಇದ್ದರೆ ಹೇಗೆ ಎಂದು ಯೋಚನೆ ಮಾಡೋರೆ ಹೆಚ್ಚು. 3.5 ಎಂ.ಎಂ. ಆಡಿಯೋ ಜಾಕ್ ಹೊಂದಿರುವ ವೈರ್‌ಗಳಿರುವ ಇಯರ್‌ಫೋನ್‌ಗಳು ನಿಧಾನವಾಗಿ ತೆರೆಮರೆಗೆ ಸರಿಯುತ್ತಿವೆ. ಈ ಜಾಗಕ್ಕೆ ಈಗ ವಯರ್‌ಲೆಸ್ ಬ್ಲೂಟೂಥ್ ಹೆಡ್‌ಸೆಟ್‌ಗಳು ಕಾಲಿಡುತ್ತಿವೆ.
ಮಾರುಕಟ್ಟೆಯಲ್ಲಿಂದು ವಿವಿಧ ಬಗೆಯ ಬ್ಲೂಟೂಥ್ ಹೆಡ್‌ಸೆಟ್‌ಗಳು ಕಾಲಿಟ್ಟಿವೆ. ಪ್ರಮುಖವಾಗಿ ಎರಡು ಬಗೆಯ ಬ್ಲೂಟೂಥ್ ಹೆಡ್‌ಸೆಟ್‌ಗಳಿಗೆ ಬೇಡಿಕೆ ಇದೆ. ಪೆನ್ನಿನ ಕ್ಯಾಪಿನಂತಿರುವ ಒಂದೇ ಕಿವಿಗೆ ಹಾಕುವ ಹೆಡ್‌ಸೆಟ್ ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿಬಿಟ್ಟಿದೆ. ಆನ್‌ಲೈನ್ ಸಹಿತ ಮಾಮೂಲಿ ಮಾರುಕಟ್ಟೆಯಲ್ಲಿ ಇದನ್ನು ಕೊಂಡುಕೊಳ್ಳುವ ಮಂದಿ ಹೆಚ್ಚಿದ್ದಾರೆ. ಫೋನ್‌ಗೆ ಬಂದಂತಹ ಕರೆಗಳನ್ನು ಸ್ವೀಕರಿಸಲು ಈ ಹೆಡ್‌ಸೆಟ್‌ಗಳು ಸೂಕ್ತ. ಒಂದೇ ಕಿವಿಗೆ ಇದನ್ನು ಹಾಕಲು ಸಾಧ್ಯವಿರುವುದರಿಂದ ಹಾಡುಗಳನ್ನು ಕೇಳಲು ಸೂಕ್ತವೆನಿಸುವುದಿಲ್ಲ.
ಟ್ರೆಂಡ್ ಸೃಷ್ಟಿ
ಆಡಿಯೋ ಜಾಕ್ ಇಲ್ಲದೆ ಎರಡೂ ಕಿವಿಗೆ ಹಾಕುವಂತಹ ಹೆಡ್‌ಸೆಟ್‌ಗಳು ಮತ್ತೂಂದೆಡೆ ಟ್ರೆಂಡ್ ಆಗಿವೆ. ಎರಡೂ ಬದಿಯಲ್ಲಿ ಕಿವಿಗಳಿಗೆ ಸಿಕ್ಕಿಸಿಕೊಳ್ಳಲು ಸ್ಪೀಕರ್ ಇರುತ್ತದೆ. ಮೊಬೈಲ್ ಬ್ಲೂಟೂಥ್ ಮುಖೇನ ಇದು ಕಾರ್ಯನಿರ್ವಹಿಸುತ್ತದೆ. ಸುಮಾರು 15 ಮೀ. ಅಂತರದಲ್ಲಿದ್ದರೂ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಈ ಇಯರ್‌ಫೋನ್‌ಗಳು ಹೊಂದಿರುತ್ತವೆ.
ಮಾರುಕಟ್ಟೆಯಲ್ಲಿ ಬ್ಲೂಟೂಥ್ ಹೆಡ್‌ಸೆಟ್ ಕೊಂಡುಕೊಳ್ಳುವ ಮಂದಿ ಚಾರ್ಜ್ ಬ್ಯಾಕಪ್ ಯಾವ ರೀತಿ ಇದೆ ಎನ್ನುವುದನ್ನು ಪರೀಕ್ಷಿಸುತ್ತಿದ್ದಾರೆ. ಒಂದು ಬಾರಿ ಚಾರ್ಜ್ ಮಾಡಿದರೆ ಎಷ್ಟು ಗಂಟೆಗಳ ಸ್ಟಾಂಡ್ ಬೈ ಇದೆ ಎಂಬುವುದನ್ನು ಖಾತ್ರಿ ಪಡಿಸಿಕೊಂಡು ಖರೀದಿ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಇನ್‌ವಿಸಿಬಲ್ ಹೆಡ್‌ಸೆಟ್‌ಗೆ ಬೇಡಿಕೆ ಹೆಚ್ಚಿದೆ. ಅಂದಹಾಗೆ ಈ ರೀತಿಯ ಹೆಡ್‌ಸೆಟ್‌ಗಳು ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿದ್ದು, ಈ ಹೆಡ್‌ಸೆಟ್‌ಗಳ ಗಾತ್ರ ತುಂಬಾ ಸಣ್ಣದಾಗಿರುತ್ತದೆ. ಕಿವಿಯ ತೂತಿನಷ್ಟೇ ಸಣ್ಣದಾಗಿದ್ದು, ಇವುಗಳ ಮುಖೇನ ಕರೆ ಸ್ವೀಕರಿಸುವದರ ಜತೆಗೆ ಹಾಡು ಕೇಳಲು ಸಾಧ್ಯವಿದೆ.
ಪ್ರಮುಖ ಕಂಪೆನಿಗಳ ಇಯರ್‌ಫೋನ್
ಮಾರುಕಟ್ಟೆಯಲ್ಲಿ ಸದ್ಯ ಸ್ಯಾಮ್‌ಸಂಗ್ ಸಂಸ್ಥೆಯ ಎಚ್‌ಎಂ1100 ಬ್ಲೂಟೂಥ್ ಹೆಡ್‌ಸೆಟ್ ಟ್ರೆಂಡ್ ಆಗಿದ್ದು, 7 ಗಂಟೆ ಟಾಕ್‌ಟೈಮ್ ಹಾಗೂ 400 ಗಂಟೆಗಳ ಸ್ಟಾಂಡ್ ಬೈ ಇದೆ ಸುಮಾರು 980 ರೂ. ಇದೆ. ಜಬ್ರಾ ಸಂಸ್ಥೆಯ ಹೆಡ್‌ಸೆಟ್ 6 ಗಂಟೆ ಟಾಕ್‌ಟೈಂ ಮತ್ತು 8 ದಿನಗಳ ಸ್ಟಾಂಡ್ ಬೈ ಸಾಮರ್ಥ್ಯವಿದ್ದು, 2,000 ರೂ. ಬೆಲೆ ಹೊಂದಿದೆ. ಪ್ಯಾನಸೋನಿಕ್ ವೊಯಾಗರ್ ಪ್ರೊ ಹೆಡ್‌ಸೆಟ್ 6 ಗಂಟೆ ಟಾಕ್‌ಟೈಮ್, 12 ದಿನ ಸ್ಟಾಂಡ್ ಬೈ ಇದ್ದು 8,000 ರೂ. ಬೆಲೆ ಹೊಂದಿದೆ.
ಪ್ರಮುಖ ಎಲೆಕ್ಟ್ರಾನಿಕ್ ಉತ್ಪನ್ನಗಳ ಬ್ರ್ಯಾಂಡ್ ಆದಂತಹ ಟ್ಯಾಗ್ ಝೀರೊಜಿ ಎಂಬ ಬ್ಲೂಟೂಥ್ ಹೆಡ್‌ಸೆಟ್ ಇತ್ತೀಚೆಗೆಯಷ್ಟೇ ಮಾರುಕಟ್ಟೆಗೆ ಪರಿಚಯಿಸಿದೆ. ಹೈಡೆಫಿನೇಶನ್ ಶಬ್ದದ ನಿಖರತೆಯೊಂದಿಗೆ 6.11 ಎಂಎಂಗಳ ಅವಳಿ ಸಾಧನವನ್ನು ಹೊಂದಿದೆ. ಇದು ಕ್ವಾಲ್‌ಕಾಮ್ 2020 ಚಿಪ್‌ಸೆಟ್ ಮತ್ತು ವಿ.5.0 ಬ್ಲೂಟೂಥ್ ವರ್ಷನ್ ಹೊಂದಿದ್ದು, ಸುಮಾರು 4,999 ರೂ. ಹೊಂದಿದೆ.
ಮೊಬೈಲ್ ಜತೆ ಹೆಡ್‌ಸೆಟ್ ಉಚಿತ
ಕೆಲವೊಂದು ಮೊಬೈಲ್ ಬ್ರ್ಯಾಂಡ್ ಕಂಪೆನಿಯು ಮೊಬೈಲ್ ಖರೀದಿಗೆ ಗ್ರಾಹಕರಿಗೆ ಬ್ಲೂಟೂಥ್ ಹೆಡ್‌ಸೆಟ್ ಉಚಿತವಾಗಿ ನೀಡುತ್ತದೆ. ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಮಂಗಳೂರಿನ ಕೆಲವೊಂದು ಶಾಪ್‌ಗ್ಳಲ್ಲಿಯೂ ಈ ಆಫರ್‌ಗಳಿವೆ.
ಸೂಕ್ತ ಆಫರ್
ಬ್ಲೂಟೂಥ್ ವಯರ್‌ಲೆಸ್ ಹೆಡ್‌ಸೆಟ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಇತ್ತೀಚಿನ ದಿನಗಳಲ್ಲಿ ಮಾಮೂಲಿ ಹಗ್ಗದಂತಿರುವ ಇಯರ್ ಫೋನ್ ಖರೀದಿ ಮಾಡುವವರು ಕಡಿಮೆ. ಇದೇ ಕಾರಣಕ್ಕೆ ವಯರ್‌ಲೆಸ್ ಬ್ಲೂಟೂಥ್‌ಗಳಿಗೆ ಆಫರ್‌ಗಳು ಕೂಡ ಇವೆ. ಕಡಿಮೆ ಬೆಲೆಯಿಂದ ಹಿಡಿದು ಸಾವಿರಾರು ರೂ. ದರದ ಹೆಡ್‌ಸೆಟ್ ಮಾರುಕಟ್ಟೆಯಲ್ಲಿವೆೆ.
– ಮದನ್, ಉದ್ಯಮಿ
- ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.