ವಿಜ್ಞಾನ ಕ್ಷೇತ್ರದಲ್ಲೂ ಮಹಿಳಾ ಪಾರುಪತ್ಯ
Team Udayavani, Oct 22, 2018, 12:48 PM IST
ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ತಮಗೆ ಸಿಕ್ಕ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಇದಕ್ಕೆ ವಿಜ್ಞಾನ ಕ್ಷೇತ್ರವೂ ಹೊರತಲ್ಲ. ಕುಟುಂಬ ನಿರ್ವಹಣೆಯ ಜತೆಗೆ ಈ ಕ್ಷೇತ್ರದಲ್ಲಿ ಪರಿಣತಿ ಹೊಂದುವುದು ಸಾಮಾನ್ಯವಲ್ಲ. ಇದು ಇತ್ತೀಚೆಗಿನ ಪ್ರಕ್ರೀಯೆಯಂತೂ ಇಲ್ಲ. 1912ರಿಂದಲೂ ಮಹಿಳೆಯರು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದು ವಿಶೇಷ.
ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ತನ್ನ ಛಾಪನ್ನು ಮೂಡಿಸುತ್ತಿದ್ದಾರೆ. ವೃತ್ತಿ, ಪ್ರವೃತ್ತಿಗಳಲ್ಲಿ ತನ್ನ ಕಾರ್ಯಕ್ಷಮತೆ, ತಾನು ಪುರುಷರಿಗಿಂತ ಏನೂ ಕಡಿಮೆಯಿಲ್ಲ ಎಂಬಂತೆ ಅವರಿಗೆ ಸರಿ ಸಮಾನಾಗಿ ತಾನು ದುಡಿಯುವ ಮೂಲಕ ಮತ್ತು ತನ್ನೆಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಮಹಿಳೆಯರು ಗೆದ್ದು ತೋರಿಸಿದ್ದಾರೆ. ಮನೆಗೆಲಸ ಮಾಡುವುದರಿಂದ ಹಿಡಿದು ಪೈಲಟ್, ವಿಜ್ಞಾನಿಯಾಗುವಲ್ಲಿಯವರೆಗೂ ಅವಳಿಂದು ಸಮರ್ಥಳು. ಭಾರತದಲ್ಲಿ ಪ್ರಸ್ತುತ ದಿನಮಾನಗಳಲ್ಲಿ ವಿಜ್ಞಾನ ವಿಷಯದಲ್ಲಿ ಶಿಕ್ಷಣ ಪಡೆಯುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ವಿಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ ಮಾಡುವುದು ಸುಲಭದ ಮಾತಲ್ಲ.
ಪ್ರಯೋಗ ಶೀಲತೆ, ಕೆಲಸದ ಒತ್ತಡದೊಂದಿಗೆ ಸಮಯಾವಕಾಶದ ಹೊಂದಾಣಿಕೆ ಇವೆಲ್ಲದರ ನಡುವೆ ಸಂಸಾರ, ಮಕ್ಕಳು, ಮನೆ. ಇವೆಲ್ಲವನ್ನು ನಿಭಾಯಿಸಿಕೊಂಡು ಯಶಸ್ಸು ಗಳಿಸಿಕೊಂಡ ಮಹಿಳೆಯರಿವರು.
ಆನಂದೀ ಬಾಯಿ ಜೋಶಿ
ಡಾ| ಜೋಶಿ ಅವರು ವೆಸ್ಟರ್° ಮೆಡಿಸಿನ್‌ನಲ್ಲಿ ಪದವಿ ಪಡೆದ ಭಾರತದ ಮೊದಲ ಮಹಿಳಾ ಡಾಕ್ಟರ್ ಎಂಬ ಖ್ಯಾತಿ ಹೊಂದಿದವರು. ಮಹಾರಾಷ್ಟ್ರದ ಕಲ್ಯಾಣ್ ಪ್ರದೇಶದ ಶ್ರೀಮಂತ ಕುಟುಂಬದಲ್ಲಿ ಡಾ| ಜೋಶಿ ಜನಿಸಿದರಾದರೂ, ಕೆಲ ಸಮಯದಲ್ಲಿಯೇ ಅವರ ಕುಟುಂಬ ತಮ್ಮೆಲ್ಲಾ ಶ್ರೀಮಂತಿಕೆಯನ್ನು ಕಳೆದುಕೊಳ್ಳುವ ಸ್ಥಿತಿ ಬಂದೊದಗುತ್ತದೆ. ತಮ್ಮ 9 ನೇ ವಯಸ್ಸಿನಲ್ಲಿಯೇ ವೈವಾಹಿಕ ಬಂಧನಕ್ಕೆ ಸಿಲುಕಿದ ಜೋಶಿ, ತಮ್ಮ 14 ನೇ ವರ್ಷದಲ್ಲಿಯೇ ಪುತ್ರನನ್ನು ಪಡೆದರೂ, ಕೆಲವೇ ಸಮಯದಲ್ಲಿ ಆ ಮಗು ಕೊನೆಯುಸಿರೆಳೆಯುತ್ತದೆ. ಅದರೊಂದಿಗೆ ಜೋಶಿ ಅವರೂ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಾರೆ.
ತಮ್ಮ ಪುತ್ರ ಅನಾರೋಗ್ಯದಿಂದ ಬಳಲಿ ಮರಣವನ್ನಪ್ಪಿದ ಘಟನೆಯ ಅನಂತರ ಅವರು ವಿದೇಶದಲ್ಲಿ ವೈದ್ಯಕೀಯ ತರಬೇತಿ ಪಡೆದು ಡಾಕ್ಟರ್ ಆಗುತ್ತಾರೆ. ಅವರ ಅಧ್ಯಯನದ ವಿಚಾರದಲ್ಲಿ ಅವರ ಪತಿಯೂ ಅವರಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. 1886ರಲ್ಲಿ ತಮ್ಮ ಎಂಡಿ ಶಿಕ್ಷಣವನ್ನು ಪೆನ್ಸಿಲ್ವೇನಿಯಾದ ಮಹಿಳಾ ವೈದ್ಯಕೀಯ ಅಧ್ಯಯನ ಶಾಲೆಯಲ್ಲಿ ಪಡೆಯುತ್ತಾರೆ. ಅನಂತರ ಭಾರತಕ್ಕೆ ಹಿಂದಿರುಗಿದ ಅವರು ಕೋಲ್ಹಾಪುರದ ಆಲ್ಬರ್ಟ್ ಎಡ್ವರ್ಡ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಲು ಆರಂಭಿಸುತ್ತಾರೆ.
ಜಾನಕೀ ಅಮ್ಮಾಳ್
ಹೆಚ್ಚಿನ ಮಹಿಳೆಯರು ಶಿಕ್ಷಣದ ವಿಚಾರಕ್ಕೆ ಬಂದಾಗ ಕಲೆ, ಸಂಗೀತ ಇತ್ಯಾದಿಗಳನ್ನು ಅಧ್ಯಯನ ವಿಚಾರವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಜಾನಕೀ ಅಮ್ಮಾಳ್ ಬಾಟನಿಯನ್ನು ತಮ್ಮ ಅಧ್ಯಯನ ವಿಷಯವಾಗಿ ಆಯ್ದುಕೊಳ್ಳುತ್ತಾರೆ. ತದ ನಂತರದಲ್ಲಿ ಸೈಟೋಜೆನೆಟಿಕ್ ಮತ್ತು ಫಿಟೋಜಿಯೋಗ್ರಫಿಯಲ್ಲಿ ಸಂಸೋಧನೆ ನಡೆಸುತ್ತಾರೆ. 1951ರ ವರೆಗೆ ಯುನೈಟೆಡ್ ಕಿಂಗ್ ಡಮ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅನಂತರ ಭಾರತಕ್ಕೆ ಹಿಂದಿರುಗುತ್ತಾರೆ. ಇಲ್ಲಿ ಬಾಟನಿಕಲ್ ಸರ್ವೇ ಆಫ್ ಇಂಡಿಯಾ ಸಂಸ್ಥೆಯ ಪ್ರಧಾನ ನಿರ್ದೇಶಕರಾಗಿ ಜವಾಬ್ದಾರಿ ನಿರ್ವಹಿಸುತ್ತಾರೆ.
ಕಮಲಾ ಸೊಹೋನಿ
ಮಹಿಳೆ ಎನ್ನುವ ಕಾರಣಕ್ಕೆ ಐಐಎಸ್‌ಸಿ ರಿಸರ್ಚ್ ಫೆಲೋಶಿಫ್ ಸಿಗದೇ ಹೋದಾಗ, ಸೈಂಟಿಫಿಕ್ ಡಿಸಿಪ್ಲನ್ ವಿಚಾರದಲ್ಲಿ ಪಿಎಚ್.ಡಿ. ಪಡೆದವರು ಕಮಲಾ. ಪ್ರೊ| ಸಿವಿ ರಾಮನ್ ಅವರು ಐಐಎಸ್‌ಸಿ ನಿರ್ದೇಶಕರಾಗಿದ್ದಾಗ, ಅವರ ಕೈಕೆಳಗೆ ಸಂಶೋಧನೆ ನಡೆಸಿದ ಮೊದಲ ಮಹಿಳಾ ವಿದ್ಯಾರ್ಥಿನಿ. ಅವರ ಕಾರ್ಯ ವೈಖರಿಯನ್ನು ಗಮನಿಸಿದ ರಾಮನ್, ಕೆಲಸದಲ್ಲಿನ ಅವರ ನಿಷ್ಠೆಯನ್ನು ಗುರುತಿಸಿ ಅವರಿಗೆ ಹೆಚ್ಚಿನ ಅಧ್ಯಯನ ನಡೆಸುವುದಕ್ಕೆ ಅನುವು ಮಾಡಿಕೊಟ್ಟರು.ಕೇಂಬ್ರಿಡ್ಜ್ ವಿಶ್ವ ವಿದ್ಯಾಲಯದಲ್ಲಿ ಅಧ್ಯಯನ ನಡೆಸಿದ ಇವರ ಪ್ರಬಂಧ, ಸೈಟೋಕ್ರೊಮಿಕ್ ಸಿ ಎಂಬ ವಿಷಯದ ಬಗ್ಗೆ ಸುಮಾರು 40 ಪುಟಗಳ ಅಧ್ಯಯನ ಸತ್ಯವನ್ನು ಒಳಗೊಂಡಿದೆ. ಅಲ್ಲದೆ ನ್ಯೂಟ್ರಿಷಿಯ ನ ಲ್ ವ್ಯಾಲ್ಯೂ ಆಫ್ ನೀರಾ ಎಂಬ ವಿಷಯದ ಬಗ್ಗೆ ಯೂ ಅಧ್ಯಯನ ನಡೆಸಿದ್ದಾರೆ. ಅಲ್ಲದೆ ಬಡ ಮಕ್ಕಳಿಗೆ ಆಹಾರ ಎಂಬ ವಿಷಯದ ಕುರಿತಾಗಿಯೂ ಕಮಲಾ ತಮ್ಮ ಸಂಶೋಧನೆಯಲ್ಲಿ ಬೆಳಕು ಚೆಲ್ಲಿದ್ದಾರೆ.
ಅನ್ನಾ ಮನಿ
ಅನ್ನಾ ಮನಿ ಒರ್ವ ಪ್ರಖ್ಯಾತ ಭೌತಶಾಸ್ತ್ರಜ್ಞೆ ಮತ್ತು ಹವಾಮಾನ ತಜ್ಞೆ. ಇವರೂ ತಮ್ಮ ಸಂಶೋಧನಾ ಸಮಯವನ್ನು ಸಿವಿ ರಾಮನ್ ಅವರ ಕೈಕೆಳಗೆಯೇ ನಡೆಸಿದವರು. ಅನಂತರ ಹವಾಮಾನ ತಜ್ಞೆಯಾಗಿ ವೃತ್ತಿ ಜೀವನ ಆರಂಭಿಸಿದ ಇವರು ಇಂಡಿಯನ್ ಮೆಟಿಯೊರೋಲಾಜಿಕಲ್ ಡಿಪಾರ್ಟ್‌ಮೆಂಟ್‌ನ ಡೆಪ್ಯುಟಿ ಡೈರೆಕ್ಟರ್ ಜನರಲ್ ಆಗಿ ನಿವೃತ್ತಿ ಹೊಂದಿದರು. ಅಲ್ಲದೆ ಇವರು ಭೌತವಿಜ್ಞಾನ ಮತ್ತು ಹವಾಮಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ.
ಚಾರುಸೀತಾ ಚಕ್ರವರ್ತಿ
ಇವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ಟೆ ಕ್ನಾಲಜಿಯಲ್ಲಿ ರಸಾಯನಶಾಸ್ತ್ರದ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದವರು. ಯುಎಸ್‌ಎಯಲ್ಲಿ ಹುಟ್ಟಿ ಭಾರತದ ಪೌರತ್ವಪಡೆದುಕೊಂಡು ಇಲ್ಲಿಯೇ ವಾಸಿಸುತ್ತಿದ್ದಾರೆ.ಇವರ ಕೆಲಸಕ್ಕೆ ಶಾಂತಿ ಸ್ವರೂಪ್ ಭಟ್ನಗರ್ ಮುಂತಾದ ಅನೇಕ ಪ್ರಶಸ್ತಿಗಳು ದೊರೆತಿವೆ.
ಮಂಗಲಾ ನರ್ಲಿಕರ್
ಭಾರತದಲ್ಲಿ ಕೆಲವೇ ಕೆಲವು ಮಹಿಳಾ ಗಣಿತ ಸಂಶೋಧಕರು ಇರುವಂಥದ್ದು ಅದರಲ್ಲಿ ಮಂಗಲಾ ನರ್ಲಿಕರ್ ಕೂಡ ಅರೆಕಾಲಿಕ ವಿಜ್ಞಾನಿಯಾಗಿ ಗುರುತಿಸಿಕೊಂಡವರು. ಮದುವೆಯ ಅನಂತರ ಗಣಿತವಿಷಯದಲ್ಲಿ ಪಿಎಚ್.ಡಿ. ಮುಗಿಸಿ ಮುಂಬಯಿ ಮತ್ತು ಪುಣೆ ವಿಶ್ವವಿದ್ಯಾ ನಿಲಯದ ಮಕ್ಕಳಿಗೆ ಗಣಿತ ವಿಷಯವನ್ನು ಸುಲಭದ ರೀತಿಯಲ್ಲಿ ಕಲಿಸಿ ಕೊಡುತ್ತಿದ್ದರು. ಇದು ಅವರ ವೈಶಿಷ್ಟ್ಯಗಳಲ್ಲಿ ಒಂದು.
ದರ್ಶನ್ ರಂಗನಾಥನ್
ಇವರು ಬಯೋ ಆರ್ಗ್ಯಾನಿಕ್ ರಸಾಯನ ಶಾಸ್ತ್ರದಲ್ಲಿ ಹಾಗೂ ಪ್ರೋಟಿನ್ ಫೋಲ್ಡಿಂಗ್‌ನಲ್ಲಿ ಪ್ರವರ್ತಕ ಕೆಲಸಕ್ಕೆ ಹೆಸರುವಾಸಿಯಾದವರು. ಅಣು ವಿನ್ಯಾಸ, ಪ್ರಮುಖ ಜೈವಿಕ ಪ್ರಕ್ರಿಯೆಗಳ ರಾಸಾಯನಿಕ ಸಿಮ್ಯುಲೇಶನ್, ನ್ಯಾನೊಟ್ಯೂಬ್‌ಗಳ ಸಂಶ್ಲೇಷಣೆಯಲ್ಲಿ ಮೀರಿಸಲಾಗದ ಸಾಧನೆ ಮಾಡಿದವರು.
ಈಕೆಗೆ ಈ ಕೆಲಸಗಳನ್ನು ಮಾಡಲು ಇನ್ನಷ್ಟು ಶಕ್ತಿ ತುಂಬಿದ್ದು ಆಕೆಯ ಮನೆಯವರು ಅದರಲ್ಲೂ ಆಕೆಯ ಗಂಡ ಅವಳಿಗೆ ಎಲ್ಲಾ ವಿಷಯಗಳಲ್ಲಿ ಸಹಾಯ ಮಾಡುತ್ತಿದ್ದರು ಅವರು ಕೂಡ ಕಾನ್ಪುರದ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರದ ಪ್ರೊಫೆಸರ್ ಆಗಿದ್ದರಿಂದ ಇವರಿಗೆ ಇನ್ನೂ ಅನುಕೂಲವಾಗಿತ್ತು. 1998ರಲ್ಲಿ ಅವರು ಐಐಸಿಟಿ ಹೈದರಾಬಾದ್‌ನಲ್ಲಿ ಉಪನಿರ್ದೇಶಕರಾಗಿ ಸೇರಿಕೊಂಡರು. ಅವರ ಈ ಸಾಧನೆ ಎಲ್ಲರ ಗಮನಸೆಳೆದಿತ್ತಾದರೂ 2001 ರಲ್ಲಿ ಕ್ಯಾನ್ಸರ್ ನಿಂದಾಗಿ ಅವರು ಪ್ರಾಣತೆತ್ತರು. ಅವರ ಪತಿ ಅವರ ದ್ವೈವಾರ್ಷಿಕಕ್ಕೆ ದರ್ಶನ್ ರಂಗನಾಥನ್ ಎನ್ನುವ ಸ್ಮಾರಕ ಕಟ್ಟಿಸಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅದ್ಭುತ ಸಾಧನೆ ಮಾಡುವವರಿಗೆ ದಾರಿ ದೀಪವಾಗಿದ್ದಾರೆ.
ಮಹಾರಾಣಿ ಚಕ್ರವರ್ತಿ
ಮಹಾರಾಣಿ ಚಕ್ರವರ್ತಿಯವರು ಅಣ್ವಿಕ ಜೀವಶಾಸ್ತ್ರಜ್ಞೆ. 1981 ರಲ್ಲಿ ಇವರು ಮೊದಲ ಬಾರಿಗೆ ಪ್ರಯೋಗಶಾಲೆಯಲ್ಲಿ ಕೋರ್ಸ್ ಪ್ರಾರಂಭಿಸಿ ಅಲ್ಲಿ ಡಿಎನ್‌ಹಾಗೂ ಮುಂತಾದವುಗಳ ಬಗ್ಗೆ ತಂತ್ರಗಳನ್ನು ಕಂಡು ಹುಡುಕಿದವರು.ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. 2007 ರಲ್ಲಿ ಇವರು ಪ್ರೊಫೆಸರ್ ದರ್ಶನ್ ರಂಗನಾಥನ್ ಮೆಮೊರಿಯಲ್ ಅವಾರ್ಡ್ ತಮ್ಮದಾಗಿಸಿಕೊಂಡಿದ್ದಾರೆ.
ಭುವನಾ ಬಾಬು, ಪ್ರೀತಿ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.