ಹೋರಾಟದ ಹಾದಿಯನ್ನು ತೆರೆದಿಟ್ಟ ಧೀಮಂತ ಮಹಿಳೆಯರು
Team Udayavani, Oct 10, 2018, 4:15 PM IST
ನಮ್ಮೊಳಗಿನ ಧೈರ್ಯ, ಆತ್ಮವಿಶ್ವಾಸ, ಜಗತ್ತನ್ನು ಬದಲಿಸುವ ಶಕ್ತಿಯನ್ನು ಜಾಗೃತಗೊಳಿಸುವ ಕೃತಿ ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು. ನೇಮಿಚಂದ್ರ ಅವರು ಬರೆದಿರುವ ಈ ಕೃತಿಯಲ್ಲಿ ಪುರುಷ ಪ್ರಧಾನ ಸಮಾಜದಲ್ಲಿ ಹೋರಾಟದ ಬದುಕು ನಡೆಸಿದ ಅನೇಕ ಮಹಿಳೆಯರ ಸಾಧನೆಯ ಕುರಿತು, ಹೋರಾಟದ ಬದುಕಿನ ಬಗ್ಗೆ ಇಲ್ಲಿ ವರ್ಣಿಸಿದ್ದಾರೆ.
ಘಟನೆ 1
ಆಫ್ರಾಬೆನ್ 17ನೇ ಶತಮಾನದಲ್ಲಿ ತಮ್ಮ ಕೃತಿಗಳ ಮೂಲಕ ಅನುಭವಗಳನ್ನು ನಿರ್ಭೀತಿಯಿಂದ ತೆರೆದಿಟ್ಟು, ಪುರುಷ ಪ್ರಧಾನತೆಯನ್ನು ಪ್ರಶ್ನಿಸಿದ್ದರು. ಇವರು ಸ್ತ್ರೀವಾದಿ ಚಿಂತನೆಯನ್ನು ತಮ್ಮ ಬದುಕು ಮತ್ತು ಬರಹದ ಮೂಲಕ ಬಿತ್ತರಿಸಿದ್ದಾರೆ. ಹಾರ್ಬಲ್‌ಡೌನ್ ಎಂಬ ಹಳ್ಳಿಯಲ್ಲಿ ಜನಿಸಿದ ಆಫ್ರಾ ಬೆನ್ ಆರಂಭದಲ್ಲಿ ಗೂಢಾಚಾರಳಾಗಿ ಕೆಲಸ ಮಾಡಿದ ಅನುಭಗಳು ಆಕೆಯನ್ನು ಛಿದ್ರಗೊಳಿಸಿದ್ದವು. ಅನಂತರ ಹೊಟ್ಟೆಪಾಡಿಗಾಗಿ ನಾಟಕಗಳನ್ನು ಬರೆದು ಜೀವನ ಸಾಗಿಸುತ್ತಾರೆ.
ಘಟನೆ 2
ಸೆರೆಮನೆಯಲ್ಲಿಯೇ ಸ್ವತಂತ್ರ ಹಕ್ಕಿಯಾಗಿ ತಮ್ಮ ಬದುಕನ್ನು ಕಂಡ ಆಂಗ್ ಸಾನ್ ಸೂಕಿ. 15 ವರ್ಷಗಳ ಕಾಲ ಗೃಹ ಬಂಧನದಲ್ಲಿದ್ದು, ಅನಂತರ ಹೋರಾಟದ ಬದುಕು ರೂಪಿಸಿಕೊಂಡರು. ಈಕೆ ತನ್ನ ತಾಯಿನಾಡಿಗೋಸ್ಕರ ತನ್ನ ತವರೂರಿನಲ್ಲಿಯೇ ಇದ್ದು, ಹೋರಾಟಗಾರ್ತಿಯಾಗಿ ಜೀವನ ನಡೆಸಿದ ಅಸಾಧಾರಣ ಕಥೆಯನ್ನು ವಿವರಿಸುತ್ತದೆ. ತಂದೆ, ತಾಯಿ ಯಾರೂ ಇಲ್ಲದೆ ಒಬ್ಬಂಟಿಯಾದ ಸಾನ್ ಸೂಕಿ ಉನ್ನತ ಶಿಕ್ಷಣ ಪಡೆದು ಸಂಘಟನೆಗಳಲ್ಲಿ ಭಾಗಿಯಾಗುತ್ತಾರೆ. ಮಿಲಿಟರಿ ಸರ್ವಾಧಿಕಾರಿಗಳನ್ನು ಹೊಡೆದುರುಳಿಸಲು ಅಹಿಂಸಾತ್ಮಕ ಹೋರಾಟವನ್ನು ನಡೆಸುತ್ತಾರೆ.
ಘಟನೆ 3
ಮಂಗಳೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿ, ಅನಂತರ ತಂದೆಯೊಂದಿಗೆ ವಿದೇಶಕ್ಕೆ ಹೋಗಿ ಅಲ್ಲಿ ಶ್ರೀಮಂತ ಹುಡುಗನನ್ನು ಮದುವೆಯಾಗಿ ತದನಂತರ ಕಣ್ಣೀರಿನ ಜತೆ ಜೀವಿಸಿದ ಕಥೆ. ಕೌಟುಂಬಿಕ ಕ್ರೌರ್ಯದಿಂದ ಹೊರಬಂದ ಫ್ಲೇವಿಯಾ ಎಂಬ ವರು ನೂರು ಸೋಲಿನ ಅಂಚಿನಲ್ಲಿಯೂ ಜಯದ ಕನಸು ಕಂಡವರು. ಗಂಡನ ಹೊಡೆತಗಳಿಂದ ಪೆಟ್ಟು ತಿಂದು, ತಮ್ಮ ಬರಹಗಳಿಂದ ಕೌಟುಂಬಿಕ ಶೋಷಣೆಯನ್ನು ಬಯಲಿಗೆಳೆಯುತ್ತಾರೆ. ಮದುವೆಯ ಅನಂತರ ಎಂ.ಎ ಪದವಿ ಪಡೆದು, ಸಾಕಷ್ಟು ಶೋಷ ಣೆ ಅನುಭವಿಸಿದರೂ ಮಕ್ಕಳಿಗಾಗಿ ಗಂಡನೊಂದಿಗೆ ಬದುಕುತ್ತಾರೆ. ಇವೆಲ್ಲವುಗಳ ನಡುವೆ ಕುಗ್ಗದ ಆತ್ಮವಿಶ್ವಾಸದಿಂದ ಎಲ್‌ಎಲ್‌ಬಿ ಪದವಿ ಮುಗಿಸಿ, ಉನ್ನತ ಹುದ್ದೆಯನ್ನೇರಿ ಕಾನೂನಿನ ಮೂಲಕ ಮಹಿಳಾ ಹಕ್ಕುಗಳ ಪರ ಹೋರಾಡುತ್ತಾರೆ. ಇಂತಹ ಹಲವಾರು ಸಾಧಕ ಮಹಿಳೆಯರ ಯಶೋಗಾಥೆಯನ್ನು ವರ್ಣಿಸಿರುವ ಈ ಕೃತಿ ನೊಂದವರಿಗೆ, ಸಾಧಕರಾಗಬೇಕು ಎನ್ನುವವರಿಗೆ ಸ್ಫೂರ್ತಿಯಾಗಿದೆ.
ಶ್ರುತಿ ನೀರಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.