ಯಕ್ಷರಿಂದ ಹುಟ್ಟಿದ್ದೇ ಯಕ್ಷಗಾನ


Team Udayavani, Nov 30, 2019, 4:29 AM IST

zx-16

ಮಕ್ಕಳೇ, ಯಕ್ಷಗಾನ ಎಂದರೆ ನಿಮಗೆಲ್ಲ ಅಚ್ಚುಮೆಚ್ಚು ತಾನೇ? ನೃತ್ಯ, ಮಾತುಗಾರಿಕೆ, ಹಾಡುಗಾರಿಕೆ, ವೇಷ -ಭೂಷಣ ಮುಂತಾದವುಗಳನ್ನು ಒಳಗೊಂಡ ಈ ಕಲೆ ನಮ್ಮ ಸಂಸ್ಕೃತಿಯ ಪ್ರತೀಕ. ಉಡುಪಿ, ಕಾಸರಗೋಡು ಒಳಗೊಂಡಂತೆ ಅವಿಭಜಿತ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮಂತಾದೆಡೆಗಳಲ್ಲಿ ಬಯಲಾಟ ಎಂದು ಕರೆಯುವ ಯಕ್ಷಗಾನ ಹೆಚ್ಚು ಪ್ರಚಲಿತದಲ್ಲಿದೆ. ಹಿಂದೆಲ್ಲ ಪೌರಾಣಿಕ ಕಥೆಗಳನ್ನು ಪ್ರಸಂಗಗಳಾಗಿ ಪ್ರದರ್ಶಿಸಲಾಗುತ್ತಿತ್ತು. ಕ್ರಮೇಣ ಇದರಲ್ಲಿ ಐತಿಹಾಸಿಕ, ಸಾಮಾಜಿಕ ಕಥೆಗಳನ್ನು ಅಳವಡಿಸಲು ಆರಂಭಿಸಿದರು. ಇತ್ತೀಚೆಗೆ ಚಲನಚಿತ್ರದ ಕಥೆಯನ್ನೂ ಪ್ರಸಂಗವಾಗಿಸಿದ ಉದಾರಣೆಯೂ ಇದೆ.

ಪ್ರಕಾರ‌ಗಳು
ಯಕ್ಷಗಾನದಲ್ಲಿ ತೆಂಕುತಿಟ್ಟು ಮತ್ತು ಬಡಗುತಿಟ್ಟು ಎನ್ನುವ ಎರಡು ಪ್ರಕಾರ‌ಗಳಿವೆ. ಕಾಸರಗೋಡು, ಮಂಗಳೂರು ಮುಂತಾದೆಡೆ ತೆಂಕುತಿಟ್ಟು ಪ್ರಕಾರ ಹೆಚ್ಚು ಪ್ರಚಲಿತದಲ್ಲಿದ್ದರೆ, ಉಳಿದೆಡೆ ಬಡಗುತಿಟ್ಟು ಜನಪ್ರಿಯವಾಗಿದೆ. ಹಿಂದೆ ರಾತ್ರಿಯೆಲ್ಲ ಯಕ್ಷಗಾನ ಪ್ರದರ್ಶಿಸಲಾಗುತ್ತಿತ್ತು. ಕ್ರಮೇಣ ಸೀಮಿತ ಅವಧಿಗೆ (ಕಾಲಮಿತಿ) ಒಗ್ಗಿಸಲಾಯಿತು. ಈಗಲೂ ಇಡೀ ದಿನ ನಡೆಯುವ ಯಕ್ಷಗಾನಕ್ಕೆ ಬಹಳಷ್ಟು ಪ್ರೇಕ್ಷಕರಿದ್ದಾರೆ, ಮಾರಣಕಟ್ಟೆ, ಕಟೀಲು ಮುಂತಾದ ಮೇಳಗಳ ಆಟಗಳಿಗೆ ಹಲವು ವರ್ಷಗಳ ಕಾಲ ಬುಕ್ಕಿಂಗ್‌ ಇದೆ ಎನ್ನುವುದು ಈ ಕಲೆಯ ಜನಪ್ರಿಯತೆ ಕುಂದಿಲ್ಲ ಎನ್ನುವುದಕ್ಕೆ ಸಾಕ್ಷಿ.

ಮೇಳಗಳು
ಯಕ್ಷಗಾನ ಕಲೆಯನ್ನು ಊರಿಂದೂರಿಗೆ ತೆರಳಿ ಪ್ರದರ್ಶಿಸುವ ತಂಡಗಳಿಗೆ ಮೇಳ ಎಂದು ಹೆಸರು. ಭಾಗವತರು, ಚೆಂಡೆ, ಮದ್ದಳೆ, ಚಕ್ರತಾಳದವರು, ವೇಷಧಾರಿಗಳು, ವೇದಿಕೆ ಸಿದ್ಧಪಡಿಸುವ ಕುಶಲಕರ್ಮಿಗಳು, ಸಹಾಯಕರು ಮುಂತಾದ ಸುಮಾರು 40 ಸದಸ್ಯರನ್ನು ಒಳಗೊಂಡ ತಂಡ. ಧರ್ಮಸ್ಥಳ, ಕಟೀಲು, ಮಾರಣಕಟ್ಟೆ, ಮಂದಾರ್ತಿ, ಹನುಮಗಿರಿ, ಸಾಲಿಗ್ರಾಮ, ಪೆರ್ಡೂರು, ಸುಂಕದಕಟ್ಟೆ, ಕಮಲಶಿಲೆ, ಹಟ್ಟಿಯಂಗಡಿ, ಕೋಟ ಅಮೃತೇಶ್ವರಿ, ಬಪ್ಪನಾಡು, ಸಸಿಹಿತ್ಲು, ದೇಂತಡ್ಕ, ಬೆಂಕಿನಾಥೇಶ್ವರ, ಹಿರಿಯಡಕ, ಸೌಕೂರು, ಮಂಗಳಾದೇವಿ ಮುಂತಾದ ಮೇಳಗಳು ಪ್ರಸಿದ್ಧವಾಗಿವೆ. ಹರಕೆ ಬಯಲಾಟ, ಸೇವೆಯಾಟಗಳಲ್ಲದೆ ಟೆಂಟ್‌ ಆಟಗಳನ್ನು ಆಡುವ ಮೇಳಗಳೂ ಇವೆ.

ಚೌಕಿ
ಯಕ್ಷಗಾನ ವೇಷ ಹಾಕುವ ಸ್ಥಳವನ್ನು ಚೌಕಿ ಎನ್ನುತ್ತಾರೆ. ವೇಷ ಭೂಷಣ, ಆಲಂಕಾರಿಕ ವಸ್ತುಗಳನ್ನು ಇಲ್ಲಿ ಇರಿಸಲಾಗುತ್ತದೆ. ಕಲಾವಿದರೆಲ್ಲ ವೇಷ ಹಾಕಿದ ಮೇಲೆ ಚೌಕಿಯಲ್ಲಿ ದೇವರಿಗೆ ಪೂಜೆ ನಡೆಸಲಾಗುತ್ತದೆ. ಅನಂತರ ಪ್ರಸಂಗ ಆರಂಭಿಸುವುದು ರೂಢಿ.

ತಾಳಮದ್ದಳೆ
ತಾಳಮದ್ದಳೆ ಎನ್ನುವುದು ಯಕ್ಷಗಾನದ ಇನ್ನೊಂದು ಪ್ರಮುಖ ಪ್ರಕಾರ. ಇದು ಯಕ್ಷಗಾನದ ಪ್ರಸಂಗವನ್ನೇ ಆಯ್ದು ಪ್ರಸ್ತುತಪಡಿಸುವುದಾದರೂ ಪ್ರಸ್ತುತಿಯಲ್ಲಿ ವಾಚಿಕಾಭಿನಯಕ್ಕೆ ಹೆಚ್ಚು ಮಹತ್ವ. ಇಲ್ಲಿ ವೇಷಭೂಷಣ, ನೃತ್ಯಗಳಿರುವುದಿಲ್ಲ. ಭಾಗವತರು, ಹಿಮ್ಮೇಳ ಇರುತ್ತದೆ. ವೇಷಧಾರಿಗಳ ಬದಲು ಅರ್ಥಧಾರಿಗಳು ಇರುತ್ತಾರೆ. ಕುಳಿತಲ್ಲಿಯೇ ಸಂಭಾಷಣೆ ಹೇಳುತ್ತಾರೆ. ಮಳೆಗಾಲದಲ್ಲಿ ತಾಳಮದ್ದಳೆಗಳು ಆಗುವುದು ಹೆಚ್ಚು.

ಭಾಗವತರು
ಯಕ್ಷಗಾನದ ಜೀವಾಳ ಭಾಗವತರೇ. ಅವರು ರಂಗ ನಿರ್ದೇಶಕರು. ಇಲ್ಲಿ ಪಾತ್ರಧಾರಿಗಳು ಅಭಿ ನಯಿಸುವ ಕಥಾನಕವನ್ನು ಕಾವ್ಯ ರೂಪದಲ್ಲಿ ಹಾಡಲಾಗುತ್ತದೆ. ಭಾಗವತರ ಹಾಡುಗಾರಿಕೆಗೆ ತಕ್ಕಂತೆ ಪಾತ್ರಧಾರಿಗಳು ನೃತ್ಯದ ಮೂಲಕ ಅಭಿನಯಿಸು ತ್ತಾರೆ. ಕಥೆಗೆ ತಕ್ಕ ಭಾವಾಭಿನಯ ಮುಖ್ಯ ವಾದುದು.

ಯಕ್ಷಗಾನದ ಪಿತಾಮಹ-ಪಾರ್ತಿಸುಬ್ಬ
ಕಾಸರಗೋಡಿನ ಕುಂಬಳೆಯ ಪಾರ್ತಿಸುಬ್ಬ ಅವರನ್ನು ಯಕ್ಷಗಾನದ ಪಿತಾಮಹ ಎಂದೇ ಕರೆಯಲಾಗುತ್ತದೆ. ಯಕ್ಷಗಾನವನ್ನು ಆಮೂಲಾಗ್ರ ಸುಧಾರಣೆ ಮಾಡಿ, ಪ್ರಸಂಗದ ಸಾಹಿತ್ಯ ರಚಿಸಿದವರು ಪಾರ್ತಿಸುಬ್ಬ. ಇಂದು ಯಕ್ಷಗಾನ ವಿಶ್ವವ್ಯಾಪಿಯಾಗಲು ಮೂಲ ಕಾರಣವಾದವರು ಅವರು. ರಾಮಾಯಣದ ಪ್ರಸಂಗಗಳನ್ನು ಅವರು ರಚಿಸಿದ್ದು, ಈಗಲೂ ಅದನ್ನು ಪ್ರದರ್ಶಿಸಲಾಗುತ್ತದೆ. ಪಾರ್ತಿಸುಬ್ಬ ಕಾಲಮಾನದಲ್ಲಿ ಇಂದಿಗೂ ಗೊಂದಲವಿದೆ. 1600-1700 ಇರಬಹುದು ಎನ್ನುವುದು ಒಂದು ವಾದವಾದರೆ 1760ರಿಂದ 1830 ಎನ್ನುವವರೂ ಇದ್ದಾರೆ.

ಪ್ರಸಂಗ ಎಂದರೇನು?
ಯಾವುದಾದರೊಂದು ಕಥಾನಕವನ್ನು ಆಯ್ದುಕೊಂಡು ಪ್ರಸ್ತುತಪಡಿಸಲಾಗುತ್ತದೆ. ಇದನ್ನು ಪ್ರಸಂಗ ಎಂದು ಕರೆಯಲಾಗುತ್ತದೆ. ದೇವಿ ಮಹಾತೆ¾, ಧರ್ಮಸ್ಥಳ ಕ್ಷೇತ್ರ ಮಹಾತೆ¾, ನಳದಮಯಂತಿ, ಭೀಷ್ಮ ಪರ್ವ, ಸೀತಾ ಪರಿತ್ಯಾಗ, ಸತ್ಯ ಹರಿಶ್ಚಂದ್ರ, ಕೃಷ್ಣ ಸಂಧಾನ, ಕರ್ಣಾವಸಾನ, ಕೃಷ್ಣಾರ್ಜುನ, ಶರಸೇತುಬಂಧನ, ಕುಮಾರವಿಜಯ, ತ್ರಿಪುರ ಮಥನ, ದಕ್ಷಾಧ್ವರ, ಶ್ವೇತಕುಮಾರ ಚರಿತ್ರೆ, ಕವಿರತ್ನ ಕಾಳಿದಾಸ, ಚಂದ್ರಹಾಸ … ಮುಂತಾದವು ಕೆಲವು ಜನಪ್ರಿಯ ಪ್ರಸಂಗಗಳು ಪ್ರಚಲಿತದಲ್ಲಿವೆ.

ಉಗಮವಾಗಿದ್ದು ಯಾವಾಗ?
ಯಕ್ಷಗಾನದ ಮೊದಲ ಉಲ್ಲೇಖ ಸಾರ್ಣದೇವನ “ಸಂಗೀತ ರತ್ನಾಕರ’ (ಕ್ರಿ.ಶ. 1210) ಕೃತಿಯಲ್ಲಿ ಜಕ್ಕ ಎಂದಿದ್ದು ಕ್ರಮೇಣ ಯಕ್ಕಲಗಾನ ಎಂದು ಕರೆಸಿಕೊಂಡಿತು ಎನ್ನಲಾಗುತ್ತಿದೆ. ಗಂಧರ್ವಗಾನ ಎನ್ನುವ ಗಾನ ಪದ್ಧತಿಯಿಂದ ಗಾನ ಸ್ವತಂತ್ರ ಜಾನಪದ ಶೈಲಿಯಿಂದ ನೃತ್ಯ ರೂಪುಗೊಂಡಿತೆಂದು ಶಿವರಾಮ ಕಾರಂತರ ಸಂಶೋಧನ ಕೃತಿ “ಯಕ್ಷಗಾನ ಬಯಲಾಟ’ದಲ್ಲಿ ಉಲ್ಲೇಖೀಸಲಾಗಿದೆ. ಕ್ರಿ.ಶ. 1500ರ ಕಾಲಘಟದಲ್ಲಿ ಯಕ್ಷಗಾನ ಜನಪ್ರಿಯವಾಗಿತ್ತು ಎಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ.

ವಿವಿಧ ವೇಷಗಳು
ಪುಂಡು ವೇಷ, ರಾಜ (ಕಿರೀಟ) ವೇಷ, ಸ್ತ್ರೀ ವೇಷ, ರಾಕ್ಷಸ ವೇಷ, ಬಣ್ಣದ ವೇಷ, ಕೋಡಂಗಿ ಮುಂತಾದವು ಯಕ್ಷಗಾನದ ಪ್ರಮುಖ ವೇಷಗಳು. ಪ್ರತಿ ವೇಷಕ್ಕೂ ಪ್ರತ್ಯೇಕ ವೇಷಭೂಷಣ, ಕಿರೀಟ ಇರುತ್ತದೆ. ಕಿರೀಟವಿಲ್ಲದ ವೇಷಗಳೂ ಹಲವು ಇವೆ. ಅದೇ ರೀತಿ ಬಡಗು ತಿಟ್ಟು ಮತ್ತು ತೆಂಕು ತಿಟ್ಟಿನ ವೇಷಗಳಲ್ಲಿ, ಹಾಡು – ಕುಣಿತಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ.

ಪ್ರತೀತಿ ಇದೆ
ಯಕ್ಷರಿಂದ ಹುಟ್ಟಿದ್ದು ಯಕ್ಷಗಾನ ಎಂದು ಹೇಳಲಾಗುತ್ತದೆ. ಹಿಂದೆ ಯಕ್ಷರು ಯಕ್ಷಗಾನ ಆಡುತ್ತಿದ್ದರು ಎನ್ನುವ ಪ್ರತೀತಿ ಇದೆ. ಮನೋರಂಜನೆಗಾಗಿಯೇ ಇದು ರೂಪುಗೊಂಡಿತ್ತು ಎನ್ನುವುದರಲ್ಲಿ ಸಂಶಯವಿಲ್ಲ.
– ಈಶ್ವರಪ್ರಸಾದ್‌ ಪಿ.ವಿ., ಹಿರಿಯ ಕಲಾವಿದರು, ಧರ್ಮಸ್ಥಳ ಮೇಳ

-  ರಮೇಶ್‌ ಬಳ್ಳಮೂಲೆ

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.