ನಿತ್ಯ ಜೀವನದಲ್ಲಿ ಮಹಿಳೆಯರು ಮಾಡಬೇಕಾದ ಯೋಗಾಸನಗಳು


Team Udayavani, Jan 28, 2020, 5:37 AM IST

lead

ಭಾರತದ ಆತ್ಮದರ್ಶನ ಶಾಸ್ತ್ರಗಳಲ್ಲಿ ಯೋಗ ವಿಜ್ಞಾನವೂ ಒಂದು ಭಾಗವಾಗಿದೆ. ನಮ್ಮ ಅಂತರಂಗವನ್ನು ಶುದ್ಧ ಮಾಡಿ ಬಹಿರಂಗವನ್ನು ಉತ್ತಮಗೊಳಿಸಲು ಬಳಸುವ ಮಾಧ್ಯಮವೇ ಯೋಗ ವಿಜ್ಞಾನ. ಇದರ ಅರಿವು ಮತ್ತು ಅಭ್ಯಾಸ ಮನದ ಶಾಂತಿ, ಸಮಾಧಾನ, ಏಕಾಗ್ರತೆ, ಪ್ರಸನ್ನತೆ ಯನ್ನು ಕಾಯ್ದುಕೊಳ್ಳಲು ಇರುವಂತಹ ಮಾರ್ಗ. ಗೊಂದಲ, ದುಃಖದಿಂದಿರುವ ಮನಸ್ಸಿನ ಚಂಚಲ ಪ್ರವೃತ್ತಿ ಯನ್ನು ನಿವಾರಿಸಿ, ಅದನ್ನು ಏಕಾಗ್ರಗೊಳಿಸಿ, ಒಳ್ಳೆಯ ಸಂಸ್ಕಾರ, ಶಾಂತಸ್ಥಿತಿಯನ್ನು ಹೊಂದುವುದೇ ಯೋಗ.
ಯೋಗಾಭ್ಯಾಸಗಳನ್ನು ಅಷ್ಟಾಂಗಗಳೆಂದು ಕರೆದಿ ದ್ದಾರೆ. ಆಸನ (ಶಾರೀರಿಕ ಅಭ್ಯಾಸ), ಪ್ರಾಣಾಯಾಮ (ಉಸಿರಾಟದ ಕ್ರಮಗಳು), ಧ್ಯಾನ (ಮನಸ್ಸಿನ ಏಕಾಗ್ರತೆಯ ಸ್ಥಿತಿ) ಪ್ರಮುಖ. ಯೋಗ ವಿಜ್ಞಾನದ ನಿಯಮಗಳಿಗನುಸಾರವಾಗಿ ಅಭ್ಯಾಸಿದಾಗ ಸರ್ವತೋ ಮುಖವಾದ ಪ್ರಯೋಜನಗಳನ್ನು ಪಡೆಯಬಹುದು.

ಮಧ್ಯ ವಯಸ್ಸಿನ ಮಹಿಳೆಯರಲ್ಲಿ ಬೊಜ್ಜು, ಋತು ಚಕ್ರ ವ್ಯತ್ಯಯ, ಋತುಬಂಧದ ಲಕ್ಷಣಗಳು, ಬೆನ್ನು ನೋವು, ಮಂಡಿ ನೋವು, ಮಾನಸಿಕ ಉದ್ವಿಗ್ನತೆ, ಮಾನಸಿಕ ಖನ್ನತೆ ಇವೆಲ್ಲವೂ ಸಾಮಾನ್ಯವಾಗಿ ಕಂಡು ಬರುವ ತೊಂದರೆಗಳು. ಆನುವಂಶೀಯತೆ, ದೈಹಿಕ ವ್ಯಾಯಾಮದ ಕೊರತೆ, ಸರಿಯಲ್ಲದ ಆಹಾರಕ್ರಮ, ಅಸಮತೋಲನ ಜೀವನ ಶೈಲಿ, ಮಾನಸಿಕ ಒತ್ತಡ, ಹಾರ್ಮೋನುಗಳ ಅಸಮತೋಲನ ಪ್ರಮುಖ ಕಾರಣಗಳಾಗಿರುತ್ತವೆ. ಈ ಎಲ್ಲ ತೊಂದರೆಗಳನ್ನು ಕಡಿಮೆಗೊಳಿಸಲು ಮತ್ತು ನಿವಾರಿ ಸಲು ಸಾತ್ತಿ$Ìಕ ಆಹಾರ ಕ್ರಮ ಮತ್ತು ಸಕಾರಾತ್ಮಕ ಜೀವನ ಶೈಲಿಯ ಜತೆಗೆ ಯೋಗಾಭ್ಯಾಸ ಮಾಡುವುದು ಉತ್ತಮ.

ದಿನವೂ ಮಾಡಬಹುದಾದ ಯೋಗಗಳು
ವಜ್ರಾಸನ, ಸುಪ್ತವಜ್ರಾಸನ, ತಾಡಾಸನ, ಕಟಿಪರಿವರ್ತ ನಾಸನ, ಅರ್ಧಚಂದ್ರಾಸನ, ತ್ರಿಕೋನಾಸನ, ಪಾರ್ಶ್ವ ಕೋನಾಸನ, ಪ್ರಸಾರಿತ ಪಾದೋತ್ಥಾನಾಸನ, ಪಶ್ಚಿಮ ತಾನಾಸನ, ಪೂರ್ವತಾನಾಸನ, ಜಾನುಶೀರ್ಷಾಸನ, ಉಪವಿಷ್ಟಕೋನಾಸನ, ಬದ್ಧಕೋನಾಸನ, ಪವನಮು ಕ್ತಾಸನ, ಭುಜಂಗಾಸನ, ಶಲಭಾಸನ, ಧನುರಾಸನ, ಪರ್ಯಂಕಾಸನ, ವಕ್ರಾಸನ, ಮಾರ್ಜಾಲಾಸನ, ಜಠರ ಪರಿವರ್ತನಾಸನ ಮುಂತಾದ ಆಸನಗಳನ್ನು ಮಹಿಳೆ ಯರು ಅವರವರ ಶಾರೀರಿಕ ಇತಿಮಿತಿಗಳು ಮತ್ತು ನೋವನ್ನು ಗಮನಿಸಿಕೊಂಡು ಅಭ್ಯಾಸ ಮಾಡಬಹುದು.

ಮಾನಸಿಕ ವಿಶ್ರಾಂತಿ
ಜೀರ್ಣಕ್ರಿಯೆ, ಅಂಗಾಂಗಗಳ ಆರೋಗ್ಯ, ಮಂಡಿಕೀಲುಗಳ ಕ್ಷಮತೆ, ಹಾರ್ಮೋನುಗಳ ಸ್ರಾವ, ಗರ್ಭಕೋಶದ ಆರೋಗ್ಯ ಉತ್ತಮಗೊಂಡು ಶರೀರವು ಸದೃಢವಾಗುತ್ತದೆ. ಅಧಿಕ ತೂಕ, ಬೊಜ್ಜು ನಿವಾರಣೆ ಯಾಗುತ್ತದೆ. ಮಕರಾಸನ, ಶವಾಸನಗಳ ಅಭ್ಯಾಸದಿಂದ ಶರೀರದಲ್ಲಿ ಸರಿಯಾದ ರಕ್ತ ಪರಿಚಲನೆಯಾಗಿ, ಶಾರೀರಿಕ ಮತ್ತು ಮಾನಸಿಕ ವಿಶ್ರಾಂತಿ ದೊರೆಯುತ್ತದೆ.

ಉಸಿರಾಟ ಕ್ರಮ ಸುಧಾರಿಸುತ್ತದೆ
ಅನುಲೋಮ  ವಿಲೋಮ, ನಾಡೀ ಶುದ್ಧಿ, ಸೂರ್ಯ ಭೇದನ, ಶೀತಲೀ, ಉಜ್ಜಾಯೀ, ಸೀತ್ಕಾರೀ, ಭ್ರಾಮರೀ, ಭಸಿŒಕಾ ಮುಂತಾದ ಪ್ರಾಣಾಯಾಮಗಳನ್ನು ಅವರವರ ಅಗತ್ಯಕ್ಕೆ ಅನುಸಾರವಾಗಿ ಅಭ್ಯಾಸ ಮಾಡು ವುದರಿಂದ ಉಸಿರಾಟ ಕ್ರಮ ಸರಿಯಾಗಿ ಶರೀರದಲ್ಲಿ ತ್ರಿದೋಷಗಳ ಮತ್ತು ಪ್ರಾಣಶಕ್ತಿಯ ಕೆಲಸಗಳು ಉತ್ತಮವಾಗುತ್ತವೆೆ. ಇದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದರೊಂದಿಗೆ ಚಿತ್ತವೃತ್ತಿಗಳು ಕಡಿಮೆ ಯಾಗುತ್ತವೆ. ಪ್ರಣವ ಧ್ಯಾನ, ಸೋಹಂ ಧ್ಯಾನ, ಜ್ಯೋತಿದ್ಯಾನ ಅಭ್ಯಾಸದಿಂದ ನರಮಂಡಲದ ಮೇಲೆ ಪರಿಣಾಮವಾಗಿ ಮಾನಸಿಕ ಉದ್ವಿಗ್ನತೆ, ಖನ್ನತೆ, ಮಾನಸಿಕ ಒತ್ತಡಗಳನ್ನು ಕಡಿಮೆಗೊಳಿಸಬಹುದು.

ಒಂದು ತಾಸು ಮೀಸಲಿಡಿ

ಮಹಿಳೆಯರು ತಮ್ಮ ದೈನಂದಿನ ಜೀವನದಲ್ಲಿ ಒಂದು ತಾಸು ಕಾಲ ಅವರವರ ಶರೀರ ಪ್ರಕೃತಿಗೆ ಅನುಗುಣವಾಗಿ ಯೋಗಾಭ್ಯಾಸ ಮಾಡುವುದರಿಂದ ಉತ್ತಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಪಡೆಯಬಹುದು. ಇದರಿಂದ ಮಧುಮೇಹ, ರಕ್ತದೊತ್ತಡ, ಹೃದಯದ ರೋಗಗಳು ಮತ್ತು ಅನೇಕ ಮನೋದೈಹಿಕ ಹಾಗೂ ಮಾನಸಿಕ ರೋಗಗಳು ಬರದಂತೆ ತಡೆಗಟ್ಟಬಹುದು.

ಪಿಸಿಒಡಿ ಸಮಸ್ಯೆಗೆ ಮದ್ದು
ಇತ್ತೀಚಿನ ದಿನಗಳಲ್ಲಿ ಪಿಸಿಒಡಿ ಸಮಸ್ಯೆಯಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬಳಲುತ್ತಿದ್ದಾರೆ. ವಿಶ್ವದಾದ್ಯಂತ ಮಹಿಳೆಯರು ಈ ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ. ಪಿಸಿಒಡಿ (ಪೊಲಿ ಕಿಸ್ಟಿಕ್‌ ಒವರಿಯನ್‌ ಡಿಸೀಸಸ್‌) ಇದು ಸಂತಾನೋತ್ಪತ್ತಿಗೆ ಸಂಬಂಧಿತ ಸಮಸ್ಯೆಯಾಗಿದೆ. ಮಿಲನದ ಸಂದರ್ಭದಲ್ಲಿ ಹೆಣ್ಣಿನ ಅಂಡಾಶಯದಿಂದ ಹೆಚ್ಚಿನ ಪ್ರಮಾಣದ ಮೊಟ್ಟೆಗಳು ಉತ್ಪತ್ತಿಯಾಗದೇ ಇರುವುದಕ್ಕೆ ಪಿಸಿಒಡಿ ಎಂದು ಕರೆಯಲಾಗುತ್ತದೆ. ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಕಾಲೇಜು ಹುಡುಗಿಯರಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುವುದಿದೆ. ಇದು ಹಲವು ಕಾರಣಕ್ಕೆ ಕಾಣಿಸಿಕೊಳ್ಳುತ್ತದೆ. ಇಂತಹ ಸಮಸ್ಯೆ ಇದ್ದು ಸಂತಾನ ವೃದ್ಧಿಯಾಗದೇ ಇದ್ದರೆ ಯೋಗದ ಮೂಲಕ ಅದನ್ನು ಸರಿಪಡಿಸಬಹುದಾಗಿದೆ. ಥೈರಾಯ್ಡ ಸಮಸ್ಯೆಗಳು ಇದ್ದರೂ ಮಕ್ಕಳಾಗುವ ಸಾಧ್ಯತೆ ಕಡಿಮೆ ಇದೆ. ಇಂತಹ ಸಮಸ್ಯೆಯಿಂದ ಬಳಸಲುತ್ತಿರುವ ಮಹಿಳೆಯರು ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ರೂಢಿಸಿಕೊಂಡರೆ ಈ ಸಮಸ್ಯೆಯಿಂದ ಹೊರಬರಬಹುದು.

ಸಾಲಂಬ ಸರ್ವಾಂಗ ಆಸನ, ಭುಜಂಗಾಸನ, ಧನುರಾಸನ, ಪಶ್ಚಿಮ ಉತ್ಥಾನ ಆಸನ, ಅರ್ಧ ಸಾಲಂಭ ಆಸನ ಮೊದಲಾದ ಆಸನಗಳನ್ನು ಪ್ರಯತ್ನಿಸಬಹುದು.

 -ಡಾ. ಅನ್ನಪೂರ್ಣಾ ಕೆ. ಆಚಾರ್ಯ,
ಎಚ್‌ಒಡಿ, ಯೋಗ ಚಿಕಿತ್ಸಾ ವಿಭಾಗ, ಕೆಎಂಸಿ

ಟಾಪ್ ನ್ಯೂಸ್

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

crime

Siddapura: ಬೈಕಿಗೆ ಕಾರು ಡಿಕ್ಕಿ; ಸವಾರರು ಗಂಭೀರ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Untitled-1

Kasaragod Crime News: ಬೈಕ್‌ ಕಳವು; ಇಬ್ಬರ ಬಂಧನ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.