ಫೋಟೋ ಕ್ಲಿಕ್ಕಿಸಲು ಡಿಎಸ್‌ಎಲ್‌ಆರ್ ಕೆಮರಾವೇ ಬೇಕು
Team Udayavani, Jul 19, 2019, 5:00 AM IST
ಹೊಸ ಊರಿಗೆ ಪ್ರವಾಸ ಬೆಳೆಸಿದಾಗ, ಸಮುದ್ರ, ಪ್ರಕೃತಿಯ ವೀಕ್ಷಣೆಗೆ ಹೋದಾಗ ಅಲ್ಲಿನ ದೃಶ್ಯಗಳನ್ನು ಸೆರೆ ಹಿಡಿಯುವುದೆಂದರೆ ಎಲ್ಲರಿಗೂ ಇಷ್ಟ. ಇದಕ್ಕಾಗಿ ಡಿಎಸ್‌ಎಲ್‌ಆರ್ ಕೆಮರಾ ಬಳಕೆ ಸಮಾನ್ಯವಾಗಿತ್ತು. ಇಂದು ಮೊಬೈಲ್‌ನಲ್ಲೇ ಸ್ಪಷ್ಟ ಚಿತ್ರಗಳನ್ನು ತೆಗೆಯಬಹುದಾದ ಕಾರಣ ಅನೇಕರು ಮೊಬೈಲ್ ಅನ್ನೇ ಬಳಸುತ್ತಿದ್ದಾರೆ. ಈ ನಡುವೆಯೂ ಡಿಎಸ್‌ಎಲ್‌ಆರ್ ಕೆಮರಾದ ಮೇಲಿನ ಒಲವು ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ.
ಫೋಟೋ ಕ್ಲಿಕ್ಕಿಸಿಕೊಳ್ಳೋದು ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ.. ಅದರಲ್ಲಿಯೂ ದೊಡ್ಡ ಕೆಮರಾಗಳಲ್ಲಿ ಫೋಟೋ ಕ್ಲಿಕ್ಕಿಸಿದರೆ ಅಂದವಾಗಿ ಬರುತ್ತದೆ. ಅಲ್ಲದೆ, ಹೆಚ್ಚಿನ ರೆಸೆಲ್ಯೂಷನ್‌ನಿಂದ ಕೂಡಿರಲು ಸಾಧ್ಯ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಮಂಗಳೂರು ನಗರದಲ್ಲಿಯೂ ಡಿಎಸ್‌ಎಲ್‌ಆರ್ ಕೆಮರಾ ಟ್ರೆಂಡ್ ಹೆಚ್ಚುತ್ತಿದೆ.
ಇತ್ತೀಚೆಗೆ ಹಲವು ಕಂಪೆನಿಗಳ ಹೆಚ್ಚಿನ ಮೆಗಾಪಿಕ್ಸೆಲ್‌ಗಳಲ್ಲಿರುವ ಮೊಬೈಲ್‌ಗಳು ಬಂದಿವೆ. ಹೀಗಿದ್ದರೂ ಕೆಮರಾ ಮುಖೇನ ಫೋಟೊ ತೆಗೆಯುವುದು ಅನೇಕರಿಗೆ ಆಸಕ್ತಿ. ಏಕೆಂದರೆ, ಮೊಬೈಲ್‌ಗಳಲ್ಲಿ ತೆಗೆಯುವ ಫೋಟೊಗಳಿಗಿಂತ ಹೆಚ್ಚು ಸ್ಪಷ್ಟತೆ ಡಿಎಸ್‌ಎಲ್‌ಆರ್ ಕೆಮರಾದಲ್ಲಿ ಇರುತ್ತದೆ. ಇದೇ ಕಾರಣಕ್ಕೆ ಕಡಿಮೆ ಬೆಲೆಯ ಡಿಎಸ್‌ಎಲ್‌ಆರ್ ಕೆಮರಾಗಳಿಂದ ಲಕ್ಷಾಂತರ ರೂ. ಬೆಲೆಯ ಕೆಮರಾಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.
ಕೆಮರಾ ಉತ್ಪಾದನಾ ಸಂಸ್ಥೆಗಳಲ್ಲಿ ಕೆನಾನ್ ಕಂಪೆನಿ ಮುಖ್ಯವಾದುವು. ಈ ಕಂಪೆನಿಯ ಡಿಎಸ್‌ಎಲ್‌ಆರ್ ಕೆಮರಾಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಕೆನಾನ್ ಇಒಎಸ್ 3000ಡಿ ಕೆಮರಾ ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ ಅಂದಾಜು 20,000 ರೂ. ಬೆಲೆಗೆ ಸಿಗುತ್ತದೆ. ಈ ಕೆಮರಾದಲ್ಲಿ ಸೆಲ್ಫ್ ಟೈಮರ್, 35 ಎಕ್ಸ್ ಆಪ್ಟಿಕಲ್ ಜೂಮ್, 18 ಮೆಗಾಪಿಕ್ಸೆಲ್, ಎಚ್‌ಡಿ ವೀಡಿಯೋ ರೆಕಾರ್ಡ್, ವೈಫೈ ಸೇರಿದಂತೆ ವಿವಿಧ ವೈಶಿಷ್ಟತೆ ಇದೆ.
ಇದೇ ಕಂಪೆನಿಯ ಕೆನಾನ್ ಇಒಎಸ್ 1100ಡಿ ಡಿಎಸ್‌ಎಲ್‌ಆರ್ ಕೆಮರಾ ಸುಮಾರು 32,000 ರೂ. ಗೆ ಲಭ್ಯವಿದೆ ಸಿಎಮ್‌ಒಎಸ್ ಇಮೇಜ್ ಸೆನ್ಸಾರ್, 18-55 ಎಂ.ಎಂ. ಫೋಕಲ್ ಲೆಂಗ್¤, ಎಚ್‌ಡಿ ರೆಕಾರ್ಡಿಂಗ್, 2.7 ಟಿಎಫ್‌ಟಿ ಕಲರ್ ಎಲ್‌ಸಿಡಿ ಸ್ಕ್ರೀನ್, 12.2 ಮೆಗಾ ಪಿಕ್ಸೆಲ್ ಕೆಮರಾ, ಯುಎಸ್‌ಬಿ, ಎಚ್‌ಡಿಎಂಐ ಹೊಂದಿದೆ. ಇನ್ನು, ಕೆನಾನ್ 600ಡಿ ಕೂಡ ಅನೇಕ ಮಂದಿ ಖರೀದಿ ಮಾಡಲು ಇಷ್ಟಪಡುತ್ತಾರೆ. ಸುಮಾರು 34,000 ರೂ.ಗೆ ಈ ಕೆಮರಾ ಮಾರುಕಟ್ಟೆಯಲ್ಲಿ ಲಭ್ಯವಿದ್ದು, 18 ಮೆಗಾ ಪಿಕ್ಸೆಲ್ ಕೆಮರಾ, ಫುಲ್ ಎಚ್‌ಡಿ ರೆಕಾರ್ಡಿಂಗ್, ಸಿಎಂಒಎಸ್ ಇಮೇಜ್ ಸೆನ್ಸಾರ್, 1/4000-30 ಸೆಕೆಂಡ್ ಫೋಕಲ್ ಲೆಂಗ್¤ ಹೊಂದಿದೆ.
ಕೆಮೆರಾ ಮತ್ತೂಂದು ಕಂಪೆನಿಯಾದ ನಿಕಾನ್ ಸಂಸ್ಥೆಯ ಡಿಎಸ್‌ಎಲ್‌ಆರ್ ಕೆಮರಾಗಳು ಕೂಡ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ದೊರಕುತ್ತವೆ. ನಿಕಾನ್ ಡಿ3500 ಡಿಎಸ್‌ಎಲ್‌ಆರ್ ಕೆಮರಾ 23,999 ರೂ. ಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸಿಎಂಒಎಸ್ ಸೆನ್ಸಾರ್, 24.2 ಮೆಗಾಪಿಕ್ಸೆಲ್, 1080 ರೆಸ್ಯೂಲೇಶನ್‌ನ ವೀಡಿಯೋ ವ್ಯವಸ್ಥೆ ಇದೆ. ಇದೇ ಕಂಪೆನಿಯ ಡಿ 5100 ಡಿಎಸ್‌ಎಲ್‌ಆರ್ ಕೆಮರಾ ಸುಮಾರು 34,000 ರೂ.ಗೆ ದೊರೆಯುತ್ತದೆ. 16.2 ಮೆಗಾ ಪಿಕ್ಸೆಲ್ ವ್ಯವಸ್ಥೆ ಹೊಂದಿದೆ.
ಅದೇ ರೀತಿ ಸೋನಿ ಸಂಸ್ಥೆಯ ಐಎಲ್‌ಸಿಇ 5100 ಎಲ್ ಮಿರರ್‌ಲೆಸ್ ಕೆಮರಾ ಹೊಂದಿದ್ದು, 34,000 ರೂ.ಗೆ ಲಭ್ಯ. 24.3 ಮೆಗಾಪಿಕ್ಸೆಲ್ ವೈಶಿಷ್ಟತೆ ಹೊಂದಿದ್ದು, ವೈಫೈ, ಸಿಎಂಒಎಸ್ ಸೆನ್ಸಾರ್, ಫುಲ್ ಎಚ್.ಡಿ ಕೆಮರಾ ಹೊಂದಿದೆ. ಪ್ಯಾನಸೋನಿಕ್ 4ಕೆ ಜಿ ಕೆಮರಾ 38,000 ರೂ.ಗೆ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಎಂಒಎಸ್ ಸೆನ್ಸಾರ್, 16 ಮೆಗಾ ಪಿಕ್ಸೆಲ್ ವೈಶಿಷ್ಟತೆಯನ್ನು ಹೊಂದಿದೆ.
ಕೆಮರಾ ಖರೀದಿಗೂ ಮುನ್ನ
ಕೆಮರಾ ಖರೀದಿ ಮಾಡುವ ಬದಲು ಕೆಲವೊಂದು ವಿಷಯಗಳನ್ನು ಗಮನಹರಿಸಬೇಕು. ಡಿಎಸ್‌ಎಲ್‌ಆರ್ ಕೆಮರಾ ಖರೀದಿ ಮಾಡುವಾಗ ಮೆಗಾಪಿಕ್ಸೆಲ್ ಮುಖ್ಯವಲ್ಲ. ಏಕೆಂದರೆ, ಡಿಎಸ್‌ಎಲ್‌ಆರ್ ಕೆಮರಾ ಅಂದ ಮೇಲೆ ಹೆಚ್ಚಿನ ಮೆಗಾಪಿಕ್ಸೆಲ್ ಇರುತ್ತದೆ. ಕೆಮರಾ ಖರೀದಿ ವೇಳೆ ಬೇಕಿರುವ ಲೆನ್ಸ್ ಯಾವುದು ಎಂಬುವುದನ್ನು ತಿಳಿಯಬೇಕು. ಏಕೆಂದರೆ ಆಯಾ ಕಂಪೆನಿ ಕೆಮರಾ ಲೆನ್ಸ್ ಅದಕ್ಕೆ ಮಾತ್ರ ಉಪಯೋಗಿಸಲು ಸಾಧ್ಯ. ಸೆನ್ಸರ್ ಕ್ಲೀನಿಂಗ್ ವ್ಯವಸ್ಥೆ, ಕೆಮರಾ ಬ್ಯಾಟರಿ ಬ್ಯಾಕ್‌ಅಪ್ ಬಗ್ಗೆ ಕೂಡ ಗಮನಹರಿಸಬೇಕು.
ಆನ್‌ಲೈನ್ ಖರೀದಿ ಹೆಚ್ಚು
ಇತ್ತೀಚಿನ ದಿನಗಳಲ್ಲಿ ಡಿಎಸ್‌ಎಲ್‌ಆರ್ ಖರೀದಿ ಮಾಡಲು ಆನ್‌ಲೈನ್‌ನಲ್ಲಿ ಹೆಚ್ಚಿನ ಬೇಡಿಕೆ ಇದೆ. ಫ್ಲಿಪ್‌ಕಾರ್ಟ್, ಅಮೇಜಾನ್ ಸೇರಿದಂತೆ ವಿವಿಧ ಆನ್‌ಲೈನ್ ಖರೀದಿ ತಾಣಗಳಲ್ಲಿ ಶೋರೂಂಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ. ಇನ್ನು, ವಿವಿಧ ಆಯ್ಕೆಗಳು ಜತೆಗೆ ವಿವಿಧ ಕಂಪೆನಿ ಕೆಮರಾಗಳು ಒಂದೇ ಸೂರಿನಲ್ಲಿ ಸಿಗುತ್ತವೆ. ಅಲ್ಲದೆ, ಇಎಂಐ ಕೂಡ ಲಭ್ಯವಿರುವುದರಿಂದ ಆನ್‌ಲೈನ್ ಖರೀದಿಗೆ ಹೆಚ್ಚಿನ ಮಂದಿ ಇಷ್ಟಪಡುತ್ತಾರೆ.
- ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.