ವಿಶ್ವ ಡಯಾಬಿಟೀಸ್ ದಿನ: ಡಯಾಬಿಟೀಸ್ ನಿರ್ವಹಣೆಗೆ ಯೋಗ


Team Udayavani, Nov 14, 2019, 4:54 PM IST

14-November-21

‘ಡಯಾಬಿಟೀಸ್‌ನಿಂದ ನಿಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಿ” ಎಂಬ ಧ್ಯೇಯದಿಂದ ಜಾಗೃತಿ ಮೂಡಿಸುವ ದಿನವೇ ಡಯಾಬಿಟೀಸ್ ದಿನ. ಡಯಾಬಿಟೀಸ್ ಮನುಷ್ಯನಲ್ಲಿ ಕುರುಡುತನ, ಅಂಗಛೇದನ, ಹೃದಯ ಖಾಯಿಲೆ, ಕಿಡ್ನಿ ಸಮಸ್ಯೆ, ಮಾನಸಿಕ ಖಿನ್ನತೆ ಹಾಗೂ ಬೇಗನೇ ಮರಣ ಅಪ್ಪುವ ಸಾಧ್ಯತೆಗಳನ್ನು ತಂದೊಡ್ಡಬಹುದು. ಹಲವು ಸರಳವಾದ ಕ್ರಮಗಳಿಂದ ಡಯಾಬಿಟೀಸ್‌ನ್ನು ದೂರ ಮಾಡಬಹುದು ಮತ್ತು ಡಯಾಬಿಟೀಸ್ ಬಂದಿದ್ದರೆ ನಿರ್ವಹಣೆ ಮಾಡಿಕೊಳ್ಳಬಹುದು.

ಪ್ರಪಂಚದಾದ್ಯಂತ 463 ಮಿಲಿಯನ್ ವಯಸ್ಕರು, ಭಾರತದಲ್ಲಿ 2000 ಇಸವಿಯಲ್ಲಿ 31 ಮಿಲಿಯನ್ಸ್ ಅದು 2030, 79 ಮಿಲಿಯನ್ ಡಯಾಬಿಟೀಸ್‌ನವರು ಇರಬಹುದೆಂದು ಸಂಶೋಧಕರು ವಿಶ್ಲೇಷಿಸಿದ್ದಾರೆ. ಪ್ರಸ್ತುತ ವಿಶ್ವದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ.

ಹಾಗಾದರೆ ಡಯಾಬಿಟೀಸ್ ಅಂದರೇನು? ಡಯಾಬಿಟೀಸ್ ದೀರ್ಘಕಾಲದ ಕಾಯಿಲೆಯಾಗಿದ್ದು, ಮೇದೋಜ್ಜೀರಕ ಗ್ರಂಥಿಯು ಇನ್ಸುಲಿನ್ ತಯಾರಿಸಲು ಸಾಧ್ಯವಾಗದಿದ್ದಾಗ ಅಥವಾ ದೇಹವು ಉತ್ಪಾದಿಸುವ ಇನ್ಸುಲಿನ್ ಅನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಾಗದ ಸ್ಥಿತಿಯಾಗಿದೆ. ಮೂರು ರೀತಿಯ ಡಯಾಬಿಟೀಸ್ ಕಂಡುಬರಬಹುದು. ಡಯಾಬಿಟೀಸ್ ಟೈಪ್ 1. ಅಂದರೆ ಇಲ್ಲಿ ಸ್ವಯಂರೋಗ ನಿರೋಧಕ ಕಡಿಮೆ ಕ್ರಿಯೆಯಿಂದ ಬರುವಂತದ್ದು. ಡಯಾಬಿಟೀಸ್ ಟೈಪ್ 2 ಅಂದರೆ ಇಲ್ಲಿ ಸಾಮಾನ್ಯ ಮನುಷ್ಯನ ಸ್ವಯಂಕೃತ ತಪ್ಪಿನಿಂದ ರಕ್ತದಲ್ಲಿ ಅಧಿಕ ಗ್ಲೂಕೋಸ್ ಮಟ್ಟ ಹೆಚ್ಚಾಗುವುದಾರಿಂದ ಬರುವಂತದ್ದು. ಮೂರನೇ ಡಯಾಬಿಟೀಸ್ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುತ್ತದೆ. ಡಯಾಬಿಟೀಸ್‌ಗೆ ಪ್ರಮುಖ ಕಾರಣಗಳಲ್ಲಿ ಅತಿಯಾದ ಆಹಾರ ಸೇವನೆ. ಸರಿಯಾದ ಚಾಯಾಪಚ್ಚಯ ಕ್ರಿಯೆ ಚೆನ್ನಾಗಿಲ್ಲದಿರುವುದು, ದೈಹಿಕ ಚಟುವಟಿಕೆ ಕಡಿಮೆಯಾಗಿರುವುದು, ಒತ್ತಡದ ಜೀವನ ಕ್ರಮ, ದೇಹ ತೂಕ ಹೆಚ್ಚಾಗಿರುವುದು. ಈ ಕಾರಣಗಳಿಂದ ಅತಿಯಾದ ಬಾಯರಿಕೆ ಮತ್ತು ಅತೀ ಮೂತ್ರ ಹೋಗುವುದು, ಹಸಿವು ಹೆಚ್ಚಾಗುವುದು, ಬೇಗನೇ ಸುಸ್ತಾಗುವುದು, ದೃಷ್ಟಿ ಮಂದವಾಗುವುದು, ಕೈ, ಕಾಲು ಮರಗಟ್ಟಿದಾಗೆ ಆಗುವುದು, ಗಾಯ ವಾಸಿಯಾಗಲು ಹೆಚ್ಚು ಸಮಯ ತೆಗೆಯುವುದು. ಬೇಗನೇ ತೂಕ ಕಡಿಮೆಯಾಗುವುದು. ಈ ಲಕ್ಷಣಗಳು ಕಂಡುಬಂದಾಗ ರಕ್ತ ಪರೀಕ್ಷೆಯ ಮುಖಾಂತರ ಡಯಾಬಿಟೀಸ್ ಇದೆಯೋ ಇಲ್ಲವೋ ಎಂದು ತಿಳಿದುಕೊಳ್ಳಬಹುದು.

ಪರಿಹಾರವೇನು? ಡಯಾಬಿಟೀಸ್ ಬರದ ರೀತಿಯಲ್ಲಿ ಮುಂಜಾಗ್ರತೆ ತೆಗೆದುಕೊಳ್ಳುವುದು ಮೊದಲ ಆದ್ಯತೆಯಾಗಬೇಕು ಅದಕ್ಕೆ ಒಳ್ಳೆಯ ಜೀವನ ಕ್ರಮ ಅಳವಡಿಸಿಕೊಳ್ಳಬೇಕು. ಬಂದಾಗ ವೈದ್ಯರನ್ನು ಸಂರ‍್ಕಿಸಿ ಸರ‍್ಪಕ ಔಷಧಿ, ಆಹಾರತಜ್ಞರನ್ನು ಸಂರ‍್ಕಿಸಿ ಸೂಕ್ತ ಆಹಾರ ಕ್ರಮ, ದೈಹಿಕ ಚಟುವಟಿಕೆಗೆ ಬೇಕಾದ ಕ್ರಮ. ಯೋಗ, ನಡಿಗೆ, ವ್ಯಾಯಾಮ ಮಾಡುವುದು.

ಯೋಗದಿಂದ ಹೇಗೆ ಡಯಾಬಿಟೀಸ್ ನಿರ್ವಹಣೆ: ಗುಣಪಡಿಸಲಾಗದ ಖಾಯಿಲೆಯಂತಿರುವ ಡಯಾಬಿಟೀಸ್‌ಗೆ ಜೀವನ ಪರ‍್ಯಂತ ಔಷಧಿಗೆ ಅಂಟಿಕೊಳ್ಳುವುದರ ಬದಲು ಸರಳವಾದ ಪ್ರಕೃತಿದತ್ತ ಪರಿಹಾರವನ್ನು ಕಂಡುಕೊಳ್ಳುವುದು ಉತ್ತಮ. ಯಾರಿಗೆ ವಂಶಪಾರಂರ‍್ಯವಾಗಿ ಡಯಾಬಿಟೀಸ್ ಬರಬಹುದೋ ಅಥವಾ ಪ್ರಾರಂಭಿಕ ಹಂತದ 30-40 ವರ್ಷದ ಅವಧಿಯಲ್ಲಿಯೋ ಡಯಾಬಿಟೀಸ್ ಪ್ರಾರಂಭವಾಗಿದೆಯೋ ಅಂತಹವರು ಖಂಡಿತವಾಗಿಯೂ ಪ್ರಕೃತಿದತ್ತ ಪರಿಹಾರದಲ್ಲಿ ಡಯಾಬಿಟೀಸ್ ನಿರ್ವಹಿಸಬಹುದು.

ಪ್ರಪಂಚಕ್ಕೆ ಭಾರತ ಕೊಟ್ಟ ಅಮೂಲ್ಯ ವಿದ್ಯೆಗಳಾದ ಆಯುರ್ವೇದ  ಮತ್ತು ಯೋಗ ಮನುಷ್ಯನನ್ನು ಪ್ರಕೃತಿದತ್ತ ಜೀವನ ಕ್ರಮವನ್ನು ವಿವರಿಸುತ್ತದೆ. ಯಾವಾಗ ಮನುಷ್ಯ ಪ್ರಕೃತಿಯ ವಿರುದ್ಧವಾಗಿ ಬದುಕಲು ಪ್ರಾರಂಭಿಸುತ್ತಾನೋ ಅಂದಿನಿಂದ ಅವನು ಡಯಾಬಿಟೀಸ್ ಖಾಯಿಲೆಗೆ ತಯರಾಗುತ್ತಿದ್ದಾನೆ ಎಂದರ್ಥ. ಸರಿಯಾದ ಸಮಯಕ್ಕೆ ನಿದ್ರೆ ಮಾಡದಿರುವುದು, ಆಹಾರದಲ್ಲಿ ಸಮಯ, ಪ್ರಮಾಣ, ಗುಣಮಟ್ಟವನ್ನು ನರ‍್ವಹಿಸದಿರುವುದು, ವೃತ್ತಿ ಕೌಶಲ್ಯವನ್ನು ರೂಪಿಸಿಕೊಳ್ಳದಿರುವುದು, ಋಣಾತ್ಮಕ ಜೀವನ ಹಾಗೂ ಚಿಂತನೆಗಳನ್ನು ಬೆಳೆಸಿಕೊಳ್ಳುವುದು ಇವೆಲ್ಲ ಡಯಾಬಿಟೀಸ್‌ಗೆ ಕಾರಣಗಳಾಗುತ್ತದೆ. ಅಷ್ಟಾಂಗ ಯೋಗದ ಅನುಷ್ಠಾನ ಜೀವನದಲ್ಲಿ ಪಾಲನೆ ಮಾಡುವುದೇ ಡಯಬಿಟೀಸ್‌ಗೆ ಪರಿಹಾರವಾಗಬಲ್ಲದು. ಅಷ್ಟಾಂಗ ಯೋಗವೆಂದರೆ ಯಮ, ನಿಯಮ ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಹಾಗೂ ಸಮಾದಿ. ಯಮದ ಅಹಿಂಸಾ, ಸತ್ಯ, ಆಸ್ತೇಯ ಅಪರಿಗ್ರಹ ಹಾಗೂ ಬ್ರಹ್ಮರ‍್ಯ ಪಾಲನೆ ಜೀವನದ ಭಾಗವಾದಾಗ ಸಹಜವಾಗಿದೆ ಮಾನಸಿಕ ನೆಮ್ಮದಿ ಹೊಂದಬಹುದು.ಯಾವಾಗ ಕಾಯಾ, ವಾಚಾ, ಮನಸಾ, ಹಿಂಸೆ ಮಾಡುವುದಿಲ್ಲವೋ ಅಂದಿನಿಂದ ನಮಗೆ ಶತ್ರುಗಳಿಲ್ಲ ಎಂದಾಗುತ್ತದೆ. ಇದು ನೆಮ್ಮದಿಯ ಒಂದು ಭಾಗ. ಸತ್ಯದ ಅನುಷ್ಠಾನದಿಂದ ಅದೆಷ್ಟೋ ಯೋಚನೆಗಳ ಸಂಖ್ಯೆಯಲ್ಲಿ ಕಡಿಮೆಗೊಳಿಸಿ ನೆಮ್ಮದಿಯಿಂದಿರಬಹುದು.

ಎರಡನೇ ಅಂಗ ನಿಯಮದ ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿಧಾನದಂತಹ ಅಭ್ಯಾಸವು ಶಿಸ್ತು ಮತ್ತು ಸಂಯಮವನ್ನು ಜೀವನದಲ್ಲಿ ತಂದು ಕೊಡುತ್ತದೆ. ಉದಾಹರಣೆಗೆ ನಿದ್ರೆ, ಆಹಾರ, ಕೆಲಸಗಳಲ್ಲಿ ಸಮಯವನ್ನು ತಪಸ್ಸಿಗೆ ರೂಪದಲ್ಲಿ ಅನುಷ್ಠಾನ ಮಾಡುವುದು. ವಾರಕ್ಕೆ, ತಿಂಗಳಿಗೆ, ವರ್ಷಕ್ಕೆ ಒಂದರಂತೆ ಉಪವಾಸ ಮಾಡುವುದು, (ಡಯಾಬಿಟೀಸ್ ಬಂದಿದ್ದರೆ ಕಷ್ಟ) ದಿನದ ದಿನಚರಿಯಲ್ಲಿ ಲಾಭ ನಷ್ಟ ಕಷ್ಟಸುಖಗಳನ್ನು ಈಶ್ವರ ಪ್ರಣಿಧಾನವಾಗಿ ಸರ್ವಶಕ್ತನಿಗೆ  ಸಮರ್ಪಿಸಿ ಜೀವನ ರೂಪಿಸಿಕೊಂಡಾಗ ದೇಹ ಮತ್ತು ಮನಸ್ಸು ಎರಡೂ ಆರೋಗ್ಯವಾಗಿರುತ್ತದೆ. ಮಾನಸಿಕ ಒತ್ತಡ ನಿರ್ವಹಣೆಯಲ್ಲಿ ಅಷ್ಟಾಂಗ ಯೋಗದ ಯಮ ನಿಯಮ ಭದ್ರಬುನಾದಿಯಾಗಿ, ಡಯಾಬಿಟೀಸ್ ತಡೆಯಲು ಹಾಗೂ ನಿರ್ವಹಿಸಲು ಅಭ್ಯಾಸ ಅಗತ್ಯ. ಯೋಗಾಸನಗಳು ಡಯಾಬಿಟೀಸ್‌ಗೆ ಒಂದು ಪ್ರಮುಖ ಅಸ್ತ್ರ. ಈಗಾಗಲೇ  ತಿಳಿಸಿರುವಂತೆ ದೈಹಿಕ ಚಟುವಟಿಕೆ ಕೊರತೆ, ಚಾಯಾಪಚಯ (ಜರ‍್ಣಾಂಗಕ್ರಿಯೆ) ಯ ವ್ಯತ್ಯಾಸ, ಕ್ಯಾಲರಿಬರ್ನ್ ಮಾಡುವ ಪ್ರಮಾಣ ಕದಿಮೆಯಾದಾಗ ಡಯಾಬಿಟೀಸ್ ಬರುತ್ತದೆಯೆಂದಾಗ, ಸೂರ್ಯನ ನಮಸ್ಕಾರ, ಹಲವಾರು ಯೋಗಾಸನಗಳು ಸಹಜವಾಗಿಯೇ ದೈಹಿಕ ಚಟುವಟಿಕೆ ನೀಡಿ, ಕ್ಯಾಲರಿ ಬರ್ನ್ ಆಗಿ, ಜರ‍್ಣಾಂಗಕ್ರಿಯೆ ಉತ್ತಮವಾಗಿ ಕಾರ್ಯ ನಿರ್ವಹಿಸಿ  ರೋಗ ತಡೆಯಲು ಹಾಗೂ ಡಯಾಬಿಟೀಸ್ ನರ‍್ವಹಿಸಲು ಸಹಕಾರಿಯಾಗುತ್ತದೆ. ಹಲವಾರು ತಿರುಚಿ ಮಾಡುವ ಯೋಗಾಸನಗಲು ಮೇದೋಜೀರಕ ಗ್ರಂಥಿಯ ಕಾರ್ಯವನ್ನು ಪುನರ್‌ಚೇತನಗೊಳಿಸಿ ಡಯಾಬಿಟೀಸ್‌ಗೆ ಸಹಜ ಪರಿಹಾರವನ್ನು ನೀಡುತ್ತದೆ. ಬೇಗನೇ ಆಯಾಸಗೊಳ್ಳುವುದು ಡಯಾಬಿಟೀಸ್‌ನ ಇನ್ನೊಂದು ಲಕ್ಷಣವಾದರೆ, ಯೋಗಾಭ್ಯಾಸದ ಪ್ರಾಣಾಯಾಮದ ಅಭ್ಯಾಸವು ಜೀವನದ ಪ್ರಮುಖ ಶಕ್ತಿಯಾದ ಜೀವಚೈತನ್ಯವನ್ನು ಹೆಚ್ಚಿಸುತ್ತದೆ. ಜೀವನೋಲ್ಲಾಸ ಅಥವಾ ಉತ್ಸಾಹ ಆರೋಗ್ಯವಂತರ ಲಕ್ಷಣ. ಆಲಸ್ಯ, ನಿರಾಸಕ್ತಿ, ಜಡತ್ವ, ರೋಗದ ಪ್ರಮುಖ ಲಕ್ಷಣ. ಡಯಾಬಿಟೀಸ್ ಬರಬಾರದು ಎಂದರೆ ಅಥವಾ ಬಂದರೆ ಜೀವನೋಲಸ ಹೆಚ್ಚಿಸಲು ಪ್ರಾಣಾಯಾಮ ಮಾಡಿ ದೈಹಿಕ ಹಾಗೂ ಮಾನಸಿಕವಾಗಿ ಚೈತನ್ಯಯುಕ್ತರಾಗಬಹುದು. ಇದು ಒಂದು ಸಹಜ ಪರಿಹಾರವೂ ಹೌದು.

ಪ್ರತ್ಯಾಹಾರವೆಂದರೆ ಇಂದ್ರಿಯ ನಿಗ್ರಹ ಅಥವ ಇಂದ್ರಿಯ ಜಯ, ಅತಿಯಾಗಿ ತಿನ್ನುವ ಚಪಲ ಡಯಾಬಿಟೀಸ್‌ನ ಒಂದು ಲಕ್ಷಣವಾದರೆ ಯಾವಾಗ ಯಮ, ನಿಯಮ, ಆಸನ, ಪ್ರಾಣಾಯಾಮ ಅಭ್ಯಾಸದಲ್ಲಿ ತೊಡಗಿಸಿಕೊಂಡಾಗ ಸಹಜವಾಗಿಯೇ ನಮ್ಮ ಇಂದ್ರಿಯದ ಮೇಲೆ ಹತೋಟಿ ಸಾಧಿಸಬಹುದು. ಸಮಯವಲ್ಲದ ಸಮಯದಲ್ಲಿ ತಿನ್ನುವ ಅಭ್ಯಾಸ, ಕಂಡದ್ದನ್ನು ತಿನ್ನುವ ಚಪಲ, ಅಗತ್ಯ ಇಲ್ಲದಿದ್ದರೂ ಅತಿಯಾಗಿ ತಿನ್ನುವ ಬಯಕೆ. ಇದಕ್ಕೆ ಕಡಿವಾಣ ಹಾಕುವುದು ಇಂದ್ರಿಯ ನಿಗ್ರಹ ಪ್ರತ್ಯಾಹಾರವಾಗುತ್ತದೆ. ಇಲ್ಲಿ ಕಣ್ಣು, ಕಿವಿ, ಮೂಗು, ನಾಲಗೆಯ ಮೇಲೆ ನಿಯಂತ್ರಣ ಸಾಧಿಸಿದರೆ ಮಾತ್ರ ಡಯಾಬಿಟೀಸ್ ತಡೆಯಬಹುದು ಹಾಗೂ ನಿಯಂತ್ರಿಸಬಹುದು.

ಧಾರಣ, ಧ್ಯಾನ, ಸಮಾಧಿ ಅಷ್ಟಾಂಗ ಯೋಗದ ಇನ್ನುಳಿದ ಮೂರು ಅಂಗಗಳು, ಪ್ರಾರಂಭದ ಐದು ಅಂಗಗಳ ಅನುಷ್ಠಾನವಾದಾಗ ಸಹಜವಾಗಿಯೇ ಇಂದ್ರಿಯ, ಮನಸ್ಸು, ಆತ್ಮ ಸಂತೃಪ್ತಗೊಳ್ಳುತ್ತದೆ. ಯಾವಾಗ ಈ ಸ್ಥಿತಿಯಲ್ಲಿ ಮನಷ್ಯ ಬದುಕುತ್ತಾನೋ ಅದುವೇ ಡಯಾಬಿಟೀಸ್ ತಡೆ ಅಥವಾ ನಿಯಂತ್ರಣ ಸಾಧ್ಯ. ಅತಿಯಾದ ವ್ಯಾಮೋಹ, ಆಸೆ, ಅತೃಪ್ತಿಗಳು ಡಯಾಬಿಟೀಸ್‌ಗೆ ಕಾರಣಗಳಾದರೆ, ನೆಮ್ಮದಿ, ಮನಃಶಾಂತಿ, ಆತ್ಮ ಸಂತೃಪ್ತಿ ಡಯಾಬಿಟೀಸ್ ನರ‍್ವಹಣೆ ಹಾಗೂ ತಡೆಗೆ ಒಂದು ಉಪಯುಕ್ತ ಸಾಧನವಾಗುತ್ತದೆ. ಮರ‍್ಷಿ ಪತಂಜಲಿ ಹೇಳುವಂತೆ ಅಷ್ಟಾಂಗ ಯೋಗದ ಅನುಷ್ಠಾನ ಮಾಡಿದಾಗ ಇಂದ್ರಿಯ ಜಯದೊಂದಿಗೆ ಕಾಯಾ ಸಂಪತ್ತು ಅಂದರೆ ದೇಹದ ಅಂಗಾಂಗಗಳನ್ನು ಸಂಪತ್ತಿನ ರೀತಿಯಲ್ಲಿ ಕಾಪಾಡಿಕೊಳ್ಳಬಹುದು. ಇಲ್ಲವಾದರೆ ಕಣ್ಣು ಕಳೆದುಕೊಳ್ಳಬೇಕಾದಿತ್ತು. ಅಂಗಾಂಗಗಳನ್ನು ತೆಗೆಯಬೇಕಾದಿತ್ತು, ಕಿಡ್ನಿಯನ್ನು ಕಳೆದುಕೊಳ್ಳಬೇಕಾದೀತು, ಹೃದಯ ತೊಂದರೆಗೊಳಪಡಬೇಕಾದೀತು, ನೆಮ್ಮದಿ ಕಳೆದುಕೊಂಡು ವೈಯಕ್ತಿಕವಾಗಿಯೂ, ಕೌಟುಂಬಿಕವಾಗಿಯೂ, ಸಾಮಾಜಿಕವಾಗಿಯೂ ಹೊರೆಯಾಗಬೇಕಾದಿತ್ತು. ಇಂತಹ ಎಲ್ಲಾ ದುಃಖಗಳನ್ನು ದೂರ ಮಾಡಲು ಯೋಗ ಮಾಡಿ ಎಂದು ಪತಂಜಲಿ ಯೋಗ ಸೂತ್ರದ ಒಂದು ಸೂತ್ರ “ಹೇಯಂ ದುಃಖಮ್ ಅನಾಗತಮ್’ ಎಂದು ಹೇಳುತ್ತದೆ. ಅಂದರೆ ಮುಂದೆ ಬರಬಹುದಾದ ಎಲ್ಲಾ ದುಃಖಗಳನ್ನು ದೂರ ಮಾಡವುದೇ ಯೋಗ ಎಂದರ್ಥ.

ಕುಶಾಲಪ್ಪ ಗೌಡ
ಯೋಗ ಚಿಕಿತ್ಸಕ, ಆವಿಷ್ಕಾರ ಯೋಗ
ಚಿಕಿತ್ಸಾತ್ಮಕ ಸಂಶೋಧನರ‍್ಥಿ
ಯೇನಪೋಯ ಸಂಶೋಧನಾ ಕೇಂದ್ರ
ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ), ಮಂಗಳೂರು

ಟಾಪ್ ನ್ಯೂಸ್

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.