ಫಿಟ್ ದೇಹಕ್ಕೆ ಏರಿಯಲ್ ಯೋಗ
Team Udayavani, Oct 1, 2019, 5:00 AM IST
ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಿದಂತೆಲ್ಲಾ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುವ ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳಲಾಗುತ್ತಿದೆ. ಇತಂಹ ವಿಶಿಷ್ಟ ವ್ಯಾಯಾಮಗಳ ಪೈಕಿ ಏರಿಯಲ್ ಯೋಗವು ಒಂದು. ಪ್ರಸ್ತುತ ಏರಿಯಲ್ ಯೋಗ ಎಂಬ ವಿಶಿಷ್ಟ ಮತ್ತು ಉಪಯುಕ್ತ ವ್ಯಾಯಾಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿದೆ. ಇನ್ಸಾಗ್ರಾಂನಲ್ಲಿ ಏರಿಯಲ್ ಯೋಗದ ಚಿತ್ರಗಳು ಹೆಚ್ಚು ಹರಿದಾಡುತ್ತಿವೆ. ದೇಶದ ಪ್ರಮುಖ ನಗರಗಳಲ್ಲಿ ಏರಿಯಲ್ ಯೋಗ ತರಬೇತಿ ಕೇಂದ್ರಗಳು ಕೂಡ ಆರಂಭವಾಗಿವೆ.
ಮಾಡುವುದು ಹೇಗೆ?
ಇತರ ಯೋಗಾಭ್ಯಾಸಗಳಿಗೆ ಹೋಲಿಸಿದರೆ ಏರಿಯಲ್ ಯೋಗ ಅಭ್ಯಾಸ ಮಾಡುವುದು ತ್ರಾಸದಾಯಕ, ವಿಚಿತ್ರ ಎನಿಸುತ್ತದೆ. ಇದನ್ನು ಆರಂಭಿಸುವ ಮುನ್ನ ಸೂಕ್ತ ತರಬೇತಿ ಪಡೆದು, ದೇಹವನ್ನು ಆ ವ್ಯಾಯಾಮ ಮಾಡುವುದಕ್ಕೆ ಅನುಕೂಲವಾಗುವಂತೆ ಬದಲಿಸಿಕೊಳ್ಳಬೇಕು. ಯೋಗಾಭ್ಯಾಸಕ್ಕೆ ದೃಢವಾದ ಬಟ್ಟೆ ಬೇಕಾಗುತ್ತದೆ. ಇದನ್ನು ವ್ಯಾಯಾಮ ಮಾಡುವುದಕ್ಕೆ ನೆರವಾಗುವಂತೆ ತಯಾರಿಸಲಾಗಿರುತ್ತದೆ. ಇದನ್ನು ಸ್ವಿಂಗ್ ಅಥವಾ ಹ್ಯಾಮಾಕ್ ಎನ್ನುತ್ತಾರೆ. ಇದರಲ್ಲಿ ಹಲವು ವಿಧಗಳಿದ್ದು, ವ್ಯಾಯಾಮಕ್ಕೆ ತಕ್ಕಂತೆ ವಿವಿಧ ವಿಧಗಳಲ್ಲಿ ದೊರೆಯುತ್ತದೆ.
ಇದನ್ನು ಮೇಲ್ಛಾವಣಿಗೆ ನೇತು ಹಾಕಿ ಅದರ ಸಹಾಯದಿಂದ ಯೋಗದ ವಿವಿಧ ಆಸನಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ. ದೇಹವನ್ನು ನೆಲಕ್ಕೆ ತಾಕಿಸದಂತೆ ಅಭ್ಯಾಸ ಮಾಡುವ ಆಸನಗಳೂ ಇದ್ದು, ಸ್ವಿಂಗ್ ಸಹಾಯದಿಂದ ಮಾಡಬೇಕಾಗುತ್ತದೆ. ಇದಕ್ಕೆ ನೆರವಾಗುವಂತೆ ತರಬೇತುದಾರರ ಸಲಹೆ ಪಡೆದು ಸೂಕ್ತ ಉಡುಗೆ ಧರಿಸುವುದು ಕೂಡ ಕಡ್ಡಾಯ.
ಯೋಗಕ್ಕೆ ಹೋಲಿಸಿದರೆ, ಏರಿಯಲ್ ಯೋಗ ಅಭ್ಯಾಸ ಮಾಡುವಾಗ ದೇಹ ಹೆಚ್ಚು ಒತ್ತಡಕ್ಕೆ ಒಳಗಾಗುತ್ತದೆ. ಹೀಗಾಗಿ ಈ ಯೋಗಾಭ್ಯಾಸಕ್ಕೆ ನೆರವಾಗುವಂತೆ ಸೂಕ್ತ ಆಹಾರವನ್ನೂ ಸೇವಿಸಬೇಕು.ಆರಂಭದಲ್ಲಿ ಸುಲಭ ಆಸನಗಳನ್ನು ಅಭ್ಯಸಿಸಿ ಹಂತ ಹಂತವಾಗಿ ವಿವಿಧ ಆಸನಗಳನ್ನು ಅಭ್ಯಸಿಸುತ್ತಾ ಹೋದರೆ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬಹುದು.
ಈ ಯೋಗಾಭ್ಯಾಸದಿಂದ ದೇಹದ ಎಲ್ಲ ಅಂಗಾಂಗಗಳಿಗೆ ಕಸರತ್ತು ದೊರೆಯುತ್ತದೆ. ಎಲ್ಲ ಮಾಂಸಖಂಡಗಳು, ನರಗಳು ದೃಢವಾಗುತ್ತವೆ. ಮುಖ್ಯವಾಗಿ ಕೀಲುಗಳ ಸಮಸ್ಯೆಗೆ ಇದು ಹೆಚ್ಚು ಪರಿಣಾಮಕಾರಿ. ನಿತ್ಯ ಚಟುವಟಿಕೆ ಗಳಿಂದ ಮೂಳೆಗಳು ಮತ್ತು ಮಾಂಸಖಂಡಗಳ ಮೇಲೆ ಬೀಳುವ ಒತ್ತಡವನ್ನು ದೂರ ಮಾಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.