ಆರೋಗ್ಯದ ಕಾಳಜಿಗೆ ಅಶ್ವಗಂಧ
Team Udayavani, Aug 6, 2019, 7:05 AM IST
ಅಶ್ವಗಂಧ ಎಂದು ಸಂಸ್ಕೃತದಲ್ಲಿ ಕರೆಯಲ್ಪಡುವ ಈ ಮೂಲಿಕೆಯು ಮನುಷ್ಯನ ದೇಹ ಮತ್ತು ಮನಸ್ಸಿನ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರಬಲ್ಲ ಶಕ್ತಿಯನ್ನು ಹೊಂದಿರುವ ಪ್ರಕೃತಿಯ ಕೊಡುಗೆಯೇ ಸರಿ. ಅಲ್ಲದೆ ಇದು ನಮ್ಮ ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುವಲ್ಲಿಯೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹೀಗಿರುವ ಬಹೂಪಯೋಗಿ ಅಶ್ವಗಂಧದ ಕೆಲವು ಉಪಯೋಗಗಳ ಬಗ್ಗೆ ಮಾಹಿತಿ ಇಲ್ಲಿದೆ. ಆಂಗ್ಲ ಭಾಷೆಯಲ್ಲಿ ಇದನ್ನು ಹಾರ್ಸ್ ಸೆ¾ಲ್ ಎಂದು ಕರೆಯುವುದುಂಟು.
ಪ್ರಯೋಜನಗಳು
ಅಶ್ವಗಂಧ ಆಯುರ್ವೇದದಲ್ಲಿ ಮಹತ್ವದ ಸ್ಥಾನ ಪಡೆದಿದೆ. ನಮ್ಮ ದೇಹಕ್ಕಾಗುವ ಆಯಾಸವನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿಯೂ ಇದು ನಮಗೆ ಸಹಕಾರಿ. ದೇಹ ಮತ್ತು ಮೆದುಳು ಈ ಎರಡನ್ನೂ ಸುಸ್ಥಿತಿಯಲ್ಲಿಡುವ ಕೆಲಸವನ್ನು ಅಶ್ವಗಂಧ ಮಾಡುತ್ತದೆ. ಜತೆಗೆ ಕಾರ್ಟಿಸೋಲ್ ಅನ್ನು ಕಡಿಮೆ ಮಾಡುವಲ್ಲಿಯೂ ಅಶ್ವಗಂಧದ ಬಳಕೆಯನ್ನು ನಾವು ಕಾಣಬಹುದು.
ಮೆದುಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿಯೂ ಇದು ಸಹಕಾರಿ. ಆಕ್ಸೆ„ಟಿಯ ಆರಂಭದ ಹಂತದಲ್ಲಿಯೇ ಅಶ್ವಗಂಧ ಬಳಕೆ ಮಾಡಿದೆವೆಂದಾದಲ್ಲಿ ಅದನ್ನು ಶಮನಗೊಳಿಸಲು ಸಾಧ್ಯ.
ಮಾನಸಿಕವಾಗಿ ಕುಗ್ಗಿ ಹೋಗುವಿಕೆಯಂತಹ ಕಠಿನ ಪರಿಸ್ಥಿತಿಗಳಿಂದ ಹೊರಬರುವ ನಿಟ್ಟಿನಲ್ಲಿಯೂ ಅಶ್ವಗಂಧದ ಔಷಧವನ್ನು ಬಳಸಲಾಗುತ್ತದೆ.
ನ್ಯಾಚುರಲ್ ಹೀಲಿಂಗ್‌ಗೆ
ಪ್ರತಿಯಾಗಿ ಅಶ್ವಗಂಧವನ್ನು ಬಳಕೆ ಮಾಡುವುದು ಸಹ ಆಯುರ್ವೇದದಲ್ಲಿ ಸಾಮಾನ್ಯ. ಕ್ಯಾನ್ಸರ್ ಕಾಯಿಲೆ ಬರುವುದನ್ನು ತಡೆಯುವ ಶಕ್ತಿಯನ್ನೂ ಅಶ್ವಗಂಧ ಹೊಂದಿದೆ. ಸ್ತನ, ಶ್ವಾಸಕೋಶ, ಕರುಳು ಹಾಗೂ ಮೆದುಳಿನ ಕ್ಯಾನ್ಸರ್ ಇತ್ಯಾದಿಗಳನ್ನು ತಡೆಯುವಂತಹ ಅಪೂರ್ವ ಔಷಧವಾಗಿಯೂ ಅಶ್ವಗಂಧ ಬಳಕೆಯಲ್ಲಿದೆ. ಪುರುಷರಲ್ಲಿ ವೀರ್ಯಾಣುಗಳು ಹೆಚ್ಚಾಗುವುದು ಮತ್ತು ಅವರು ಸದೃಢತೆಯನ್ನು ಕಾಪಾಡಿಕೊಳ್ಳುವುದಕ್ಕೂ ಆಯುರ್ವೇದದಲ್ಲಿ ಅಶ್ವಗಂಧವನ್ನೇ ಔಷಧವಾಗಿ ಸೂಚಿಸುವ ವಾಡಿಕೆ ಇದೆ.
ಸುಮಾರು ಮೂರು ತಿಂಗಳುಗಳ ಕಾಲ ಅಶ್ವಗಂಧದ ಚಿಕಿತ್ಸೆಯನ್ನು ನೀಡುವ ಮೂಲಕ ಪುರುಷರಲ್ಲಿನ ಲೈಂಗಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತದೆ.
ಜತೆಗೆ ಮನುಷ್ಯನಿಗೆ ಬೇಕಾದ ದೈಹಿಕ ಸದೃಢತೆಯನ್ನು, ಮಾಂಸಖಂಡಗಳಿಗೆ ಶಕ್ತಿಯನ್ನು ತುಂಬುವ ನಿಟ್ಟಿನಲ್ಲಿಯೂ ಅಸ್ವಗಂಧ ಪೂರಕವೇ ಹೌದು.
- ಭುವನ ಬಾಬು, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.