ಐವತ್ತರ ಅನಂತರ ಆರೋಗ್ಯದ ಬಗ್ಗೆ ಇರಲಿ ಕಾಳಜಿ
Team Udayavani, Apr 30, 2019, 6:00 AM IST
ಯೌವನದಲ್ಲಿ ದೇಹದ ಬಗ್ಗೆ ಕಾಳಜಿ ಹೊಂದಿರುವ ಅದೆಷ್ಟೋ ಮಂದಿ 50 ದಾಟಿದಂತೆ ದೇಹಾರೋಗ್ಯದ ಮೇಲಿನ ಉತ್ಸಾಹವನ್ನೇ ಕಳೆದುಕೊಂಡು ಬಿಡುತ್ತಾರೆ. ಇದರಿಂದಾಗಿ ವೃದ್ಧಾಪ್ಯದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.50 ವರ್ಷ ದಾಟಿದ ಬಳಿಕ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ಆದರೆ ಒಳ್ಳೆಯ ಜೀವನ ಕ್ರಮದಿಂದ ದೇಹವನ್ನು ಚುರುಕಾಗಿರಿಸಲು ಸಾಧ್ಯ. ನಿಯಮಿತ ಆಹಾರ ಸೇವನೆ, ಸಮಯಕ್ಕೆ ಸರಿಯಾಗಿ ನಿದ್ದೆ, ಒತ್ತಡ ರಹಿತ ಜೀವನ ಇವೆಲ್ಲ ಆರೋಗ್ಯ ಸಮತೋಲನಕ್ಕೆ ಕಾರಣಗಳಾಗಿ ರುತ್ತದೆ.
ಆಹಾರ ಮಿತವಾಗಿರಲಿ
ಆಹಾರ ಕ್ರಮದಲ್ಲಿ ನಿಯಂತ್ರಣವಿದ್ದರೆ 50ರ ಬಳಿಕ ಟೈಪ್ 2 ಡಯಾಬಿಟೀಸ್, ಸ್ಥೂಲಕಾಯಿಲೆಯಂಥ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ. ಹೆಚ್ಚು ತರಕಾರಿ, ಹಣ್ಣು ಹಂಪಲು, ಡ್ರೈ ಫೂಟ್ಸ… , ಕೊಬ್ಬು ರಹಿತ ಆಹಾರ , ಮೀನು, ಪ್ರೋಟಿನ್ ಉಳ್ಳ ಪದಾರ್ಥಗಳ ಸೇವನೆ ಮಾಡಬೇಕು. ಉಪ್ಪು, ಹುಳಿ, ಖಾರ, ಸಕ್ಕರೆ ಪದಾರ್ಥ ಮಿತವಾಗಿ ಬಳಸಿದಷ್ಟು ಉತ್ತಮ.
ಆರೋಗ್ಯ ತಪಾಸಣೆ
ಪಾರಂಪರಿಕ ಕಾಯಿಲೆಗಳು ಕೆಲವೊಮ್ಮೆ 50 ವರ್ಷದ ಬಳಿಕ ಬಾಧಿಸುವ ಸಾಧ್ಯತೆ ಇದೆ. ಬಿಪಿ, ಡಯಾಬಿಟಿಸ್ ಇತ್ಯಾದಿಗಳು ವಂಶ ಪಾರಂಪರ್ಯದಿಂದ ಬರುವುದರಿಂದ ತಿಂಗಳಿಗೆ ಒಂದು ಬಾರಿ ದೇಹದ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಬೇಕು. ನುರಿತ ವೈದ್ಯರಿಂದ ಸಲಹೆ ಪಡೆದು ಕಣ್ಣಿನ ತಪಾಸಣೆ, ರಕ್ತದೊತ್ತಡ ಕುರಿತು ಜಾಗರೂಕರಾಗಿರಬೇಕು. ವೈದ್ಯರು ನೀಡುವ ಮಾತ್ರೆಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವ ಮೂಲಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.
ಯೋಗಾಸನಗಳಿಗೆ ಸಮಯವಿರಲಿ
50 ವರ್ಷ ದಾಟಿದ ಬಳಿಕ ಪ್ರತಿನಿತ್ಯ ಬೆಳಗ್ಗೆ ಬೇಗ ಎದ್ದು ಒಂದು ತಾಸು ನಡಿಗೆ, ದಿನಕ್ಕೆ 7ರಿಂದ 8 ತಾಸು ನಿದ್ದೆ, ಯೋಗಾಸನಗಳು ಅವಶ್ಯ. ದುರಾಭ್ಯಾಸದಿಂದ ದೂರ ಉಳಿದಲ್ಲಿ ಮತ್ತಷ್ಟು ಆರೋಗ್ಯ ಉತ್ತಮವಾಗಿರುತ್ತದೆ. ದಿನಕ್ಕೆ 2ರಿಂದ 3 ಲೀಟರ್ ನೀರು ಸೇವನೆ ಚಯಾಪಚನ ಕ್ರಿಯೆಗೆ ಸಹಾಯವಾಗಲಿದೆ. ರೋಗ ಲಕ್ಷಣ ಗೋಚರಿಸುವ ಮೊದಲು ಆರೋಗ್ಯ ಕಾಳಜಿ ಇದ್ದಲ್ಲಿ ಸಂಭವಿಸಬಹುದಾದ ಆಘಾತವನ್ನು ತಡೆಯಬಹುದು. ಸ್ನಾಯು ಸಂಬಂಧಿಸಿದ ವ್ಯಾಯಾಮ ತೂಕವನ್ನು ಸಮತೋಲದಲ್ಲಿ ಇರಿಸುತ್ತದೆ. ಪ್ರಾಣಾಯಾಮ ಮಾಡುವುದರಿಂದ ಒತ್ತಡ ನಿವಾರಣೆಯಾಗಿ ಮನಸ್ಸು ದಿನ ಪೂರ್ತಿ ಸಕ್ರಿಯವಾಗುತ್ತದೆ.
-ಧನ್ಯಾ ಶ್ರೀ ಬೋಳಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.