ಮನೆಯೊಳಗೆ ಫಿಟ್ನೆಸ್ ಮಂತ್ರ ಜಪಿಸಿ
Team Udayavani, Jan 7, 2020, 5:13 AM IST
ಪ್ರತಿಯೊಬ್ಬರಿಗೂ ಸದೃಢವಾದ ದೇಹವನ್ನು ಹೊಂದುವ ಆಸೆ ಇರುತ್ತದೆ. ಕೆಲವರಿಗೆ ಜಿಮ್‌ಗೆ ಹೋಗಲು ಅನುಕೂಲ ಇಲ್ಲದಿರಬಹುದು. ಜಿಮ್‌ಗೆ ಹೋಗದೆಯೂ ಮನೆಯಲ್ಲೇ ದೇಹ ಹುರಿಗೊಳಿಸಬಹುದು. ಕೆಲವು ಸರಳ ಮತ್ತು ಉಪಯುಕ್ತ ವ್ಯಾಯಾಮದ ಹವ್ಯಾಸಗಳನ್ನು ರೂಢಿಸಿಕೊಂಡು ದಿನನಿತ್ಯ ಬೆವರು ಹರಿಸಿದರೆ ಸಾಕು. ಇಂತಹ ಕೆಲವು ಸರಳ ವ್ಯಾಯಾಮಗಳ ಮಾಹಿತಿ ಇಲ್ಲಿದೆ.
ಪುಷ್ ಅಪ್ಸ್
ಪುಷ್ ಅಪ್ಸ್‌ಗಳು ಅತ್ಯಂತ ಸರಳ ವ್ಯಾಯಮ. ನಿಮ್ಮ ಕೈಗಳನ್ನು ನೆಲಕ್ಕೆ ಊರಿ ಕಾಲುಗಳನ್ನು ಉದ್ದಕ್ಕೆ ಚಾಚಿ ದೇಹ ಮತ್ತು ಕುತ್ತಿಗೆಯನ್ನು ನೇರವಾಗಿಸಬೇಕು. ನಿಧಾನವಾಗಿ ದೇಹವನ್ನು ಮೇಲೆ ಕೆಳಗೆ ಮಾಡಬೇಕು. ಕೈಗಳ ಸ್ನಾಯುಗಳು ಸದೃಢವಾಗುತ್ತವೆ. ಎದೆ ಮತ್ತು ಹೊಟ್ಟೆಯ ಭಾಗ ಗಟ್ಟಿಯಾಗುತ್ತದೆ.
ಬೈಠಕ್
ಎದೆಯ ಭಾಗದಲ್ಲಿ ಎರಡು ಕೈ ಜೋಡಿಸಿ ಸಮಸ್ಕಾರ ಮಾಡುವ ಭಂಗಿಯಲ್ಲಿ ನೇರವಾಗಿ ನಿಂತುಕೊಳ್ಳಬೇಕು. ಅನಂತರ ಕಾಲುಗಳನ್ನು ಸ್ವಲ್ಪ ಅಗಲಗೊಳಿಸಿ ಮಂಡಿಯ ಮೇಲೆ ಕುಳಿತು ಮೇಲೇಳಬೇಕು. ಹೀಗೆ ದಿನಂಪ್ರತಿ 20ರಿಂದ 30 ಬಾರಿ ಮಾಡಬೇಕು. ಮಂಡಿ, ತೊಡೆ, ಪೃಷ್ಠ ಭಾಗಗಳಿಗೆ ಹೆಚ್ಚು ಶಕ್ತಿ ದೊರೆಯುತ್ತದೆ.
ಬಸ್ಕಿ (ಸಿಟ್ ಅಪ್ಸ್)
ನೆಲದ ಮೇಲೆ ಅಂಗಾತ ಮಲಗಬೇಕು. ಕಾಲುಗಳನ್ನು ಪೃಷ್ಠ ಭಾಗದತ್ತ ಎಳೆದುಕೊಂಡು ಎರಡೂ ಕೈಗಳನ್ನು ತಲೆಯ ಕೆಳಗೆ ಸೇರಿಸಬೇಕು. ನಿಧಾನವಾಗಿ ತಲೆಯನ್ನು ಮೊಣಕಾಲಿನತ್ತ ತಂದು ಮತ್ತೆ ಮೊದಲಿನಂತೆ ಮಲಗಬೇಕು. ಬೆಳಗ್ಗೆ 10ರಿಂದ 20ಬಾರಿ ಮಾಡುವುದರಿಂದ ಕಿಬ್ಬೊಟ್ಟೆಯ ಭಾಗದಲ್ಲಿ ಮತ್ತು ಬೆನ್ನು ನೋವು ಇದ್ದರೆ ನಿವಾರಿಸಬಹುದು. ಕೊಬ್ಬು ಕರಗಿ ಹೊಟ್ಟೆಯ ಭಾಗವೂ ಸದೃಢವಾಗುತ್ತದೆ.
ಡಂಬೆಲ್ ಉರುಳಿಸುವುದು
ಮನೆಯಲ್ಲಿ ಎರಡು ಡಂಬೆಲ್ಸ್‌ಗಳಿದ್ದರೆ ಸಾಕು ಜಿಮ್‌ನಲ್ಲಿ ಮಡಬಹುದಾ ಅನೇಕ ವ್ಯಾಯಾಮಗಳನ್ನು ಇವುಗಳ ಮೂಲಕ ಮಾಡಬಹುದು. ಗಾಲಿಯಾಕಾರದ ಸರಳವಾಗಿ ಉರುಳಿಸಲು ಸಾಧ್ಯವಾಗುವಂಥ ಎರಡು ಡಂಬೆಲ್ಸ್‌ಗಳನ್ನು ಕೈಯಲ್ಲಿ ಹಿಡಿದು ಪುಷ್‌ಅಪ್ಸ್ ರೀತಿಯಲ್ಲಿ ದೇಹವನ್ನು ಇರಿಸಬೇಕು. ಅನಂತರ ದೇಹವನ್ನು ಬಿಗಿಯಾಗಿಸಿ ಡಂಬೆಲ್ಸ್ ಗಳ ಮೇಲೆ ಒತ್ತಡ ಹಾಕಿ ಹಿಂದಕ್ಕೆ ಮುಂದಕ್ಕ ಉರುಳಿಸಬೇಕು. ಇದರಿಂದ ಇಡೀ ದೇಹಕ್ಕೆ ಶ್ರಮ ಬೀಳುತ್ತದೆ. ಎದೆ ಗಟ್ಟಿಯಾಗುವುದರ ಜತೆಗೆ ದೇಹ ಹುರಿಯಾಗುತ್ತದೆ.
- ಶಿವಾನಂದ ಎಚ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.