ನೀಳವಾದ ಕೇಶರಾಶಿಗೆ ತೆಂಗಿನಕಾಯಿ ಹಾಲು
Team Udayavani, Nov 12, 2019, 5:34 AM IST
ಪ್ರತಿಯೊಬ್ಬ ಹೆಣ್ಣಿನ ಸೌಂದರ್ಯ ಅಡಗಿರುವುದು ಆಕೆಯ ಕೂದಲಿನಲ್ಲಿ. ಆಗಾಗಿ ಮಹಿಳೆಯರು ತುಸು ಹೆಚ್ಚಾಗಿಯೇ ತಮ್ಮ ಕೇಶರಾಶಿಯ ಮೇಲೆ ಎಕ್ಸ್‌ಟ್ರಾ ಕೇರ್ ತೆಗೆದುಕೊಳ್ಳುತ್ತಾರೆ. ನೀಳವಾದ ಕೂದಲನ್ನು ಪಡೆಯಬೇಕೆಂಬ ಹಂಬಲದಿಂದ ಏನೆಲ್ಲ ಸಾಹಸ ಮಾಡುತ್ತಾರೆ. ವಿವಿಧ ನಮೂನೆಯ ಎಣ್ಣೆ -ಶ್ಯಾಂಪೂ ಎಲ್ಲ ಪ್ರಯೋಗ ಮಾಡಿ ನೋಡುತ್ತಾರೆ. ಆದರೆ ಈ ಎಲ್ಲ ದುಬಾರಿ ಸೌಂದರ್ಯ ವರ್ಧಕಗಳು ಪ್ರಯೋಜನಕ್ಕೆ ಬಾರದಿದ್ದಾಗ ಕೈ ಚೆಲ್ಲಿ ಕುರುತ್ತಾರೆ. ಆದರೆ ಹೆಂಗಳೆಯರ ಅಸಹಾಯಕತೆಗೆ ಒಂದು ಸರಳ ಉಪಾಯವಿದ್ದು, ನೈಸರ್ಗಿಕ ಕೂದಲ ಬೆಳವಣಿಗೆಗೆ ಉಪಯುಕ್ತವಾಗುವ ಮಾಹಿತಿ ಇಲ್ಲಿದೆ.
ನೀಳ ಕೇಶರಾಶಿಗೆ
ತೆಂಗಿನ ಹಾಲು
ನಿಮ್ಮ ಕೂದಲು ಒಣಗಿದಂತಾಗಿ ಉದುರುತ್ತಿದೆಯೇ ? ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಸೌಂದರ್ಯ ವರ್ಧಕಗಳು ಉಪಯೋಗ ಆಗಲಿಲ್ಲವೇ. ಯೋಚಿಸಬೇಡಿ ಈ ನಿಮ್ಮ ಸಮಸ್ಯೆಗೆ ತೆಂಗಿನ ಕಾಯಿ ಹಾಲು ಪರಿಹಾರವಾಗಲಿದ್ದು, ನೈಸರ್ಗಿಕವಾದ ಕೂದಲನ್ನು ಪಡೆಯಲು ಸಹಾಯಮಾಡುತ್ತದೆ. ಇದರ ಹಾಲಿನಲ್ಲಿ ಪ್ರೊಟೀನ್‌ಮತ್ತು ಕೊಬ್ಬಿನಾಂಶವಿದ್ದು, ಕೂದಲಿನ ಬೆಳವಣಿಗೆಗೆ ಉಪಯುಕ್ತವಾಗಿದೆ. ಜತೆಗೆ ತೆಂಗಿನ ಕಾಯಿ ಹಾಲಿಗೆ ಕೂದಲು ಉದುರುವ ಸಮಸ್ಯೆಯನ್ನು ನಿಯಂತ್ರಿಸುವ ಶಕ್ತಿ ಇದ್ದು, ತೆಂಗಿನ ಹಾಲನ್ನು ಉಪಯೋಗಿಸಿದ್ದರೆ ಸಮೃದ್ಧ ಹಾಗೂ ದಟ್ಟವಾದ ಕೂದಲನ್ನು ಪಡೆಯಬಹುದು.
ಪ್ರೊಟೀನ್ ಚಿಕಿತ್ಸೆ
· ತೆಂಗಿನಕಾಯಿ ಹಾಲು, ಮೊಟ್ಟೆ, ಎಕ್ಸ್‌ಟ್ರಾ ವರ್ಜಿನ್ ಆಲಿವ್ ತೈಲ, ಆರ್ಗನ್ ತೈಲ ತೆಂಗಿನ ಎಣ್ಣೆ ಈ ಎಲ್ಲ ಸಾಮಗ್ರಿಗಳ ಮಿಶ್ರಣವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಕೂದಲಿಗೆ ಲೇಪನ ಮಾಡುವುದರಿಂದ ರಕ್ತ ಪರಿಚಲನೆ ಸರಿಯಾಗಿ ಆಗುತ್ತದೆ.
· ಕೂದಲು ಸದೃಢವಾಗಿ ಬೆಳೆಯುವುದಕ್ಕೆ ಪ್ರೊಟೀನ್‌ಮಿಶ್ರಣ ಉಪಯುಕ್ತವಾಗಿದೆ.
· ತೆಂಗಿನಕಾಯಿ ಹಾಲಿನಲ್ಲಿರುವ ಕಬ್ಬಿಣ ಮತ್ತು ಮ್ಯಾಂಗನೀಸ್ ಅಂಶ ಕೂದಲಿನ ಪೋಷಣೆಗೆ ಸಹಾಯಕವಾಗುತ್ತದೆ.
· ಆರೋಗ್ಯಕರ ಕೂದಲು ಬೆಳೆವಣಿಗೆಗೆ ಈ ಪ್ರೊಟೀನ್‌ಮಿಶ್ರಣ ಕೂದಲಿಗೆ ಹೊಳಪು ನೀಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.