ಮಾನಸಿಕ, ದೈಹಿಕ ದೃಢತೆಗೆ ಸೈಕ್ಲಿಂಗ್
Team Udayavani, Jan 28, 2020, 5:53 AM IST
ಸೈಕ್ಲಿಂಗ್ ಎನ್ನುವುದು ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ದೇಹ ದೃಢವಾಗಿಸಿಕೊಳ್ಳಲು ಯುವ ಜನತೆ ಸೈಕ್ಲಿಂಗ್ ಮೊರೆ ಹೋಗುತ್ತಿದ್ದಾರೆ. ಸೈಕಲ್ ತುಳಿದುಕೊಂಡು ಸ್ವಲ್ಪ ಹೊತ್ತು ಸುತ್ತಾಡಿ ಬಂದರೆ ದೇಹದ ಜತೆಗೆ ಮನಸ್ಸೂ ಹಗುರವಾಗುತ್ತದೆ. ಈ ರೀತಿಯ ವ್ಯಾಯಾಮದಿಂದಾಗುವ ಪ್ರಯೋಜನಗಳು ಹಲವು.
ಸೈಕ್ಲಿಂಗ್ ದೇಹಕ್ಕೆ ಮಾತ್ರವಲ್ಲ ಮನಸ್ಸಿನ ಮೇಲೂ ಧನಾತ್ಮಕ ಪರಿಣಾಮ ಬೀರುತ್ತದೆ. ಮನಸ್ಸು, ಶರೀರ ಹತೋಟಿಯಲ್ಲಿಡಲು ಇದು ಸಹಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು.
ಕೊಬ್ಬು ಕರಗಿಸಲು ಈ ವಿಧಾನ ಅತ್ಯುತ್ತಮ. ಸೈಕ್ಲಿಂಗ್ ಮಾಡುವುದರಿಂದ ಹೃದಯ ಬಡಿತ ಹೆಚ್ಚಾಗಿ ಕೊಬ್ಬು ವೇಗವಾಗಿ ಕರಗುತ್ತದೆ. ಅಧ್ಯಯನದ ಪ್ರಕಾರ ಸಾಧಾರಣ ವೇಗದಲ್ಲಿ ಅರ್ಧ ಗಂಟೆ ಸೈಕಲ್ ತುಳಿದು ನಿಂತ ಮೇಲೂ ಒಂದು ಗಂಟೆಗಳ ಕಾಲ ಶರೀರದ ಕ್ಯಾಲರಿ ನಾಶವಾಗುತ್ತಿರುತ್ತದೆ.
ನಿಯಮಿತವಾಗಿ ಸೈಕಲ್ ತುಳಿಯುವುದರಿಂದ ನಿದ್ರಾಹೀನತೆಯನ್ನು ದೂರ ಮಾಡಬಹುದು. ನಿದ್ರೆಯ ಕೊರತೆ ಶರೀರದ ಮೇಲೆ ಪರಿಣಾಮ ಬೀರಿ ಆರೋಗ್ಯ ಏರುಪೇರಾಗುವ ಸಾಧ್ಯತೆ ಇದೆ. ಆದ್ದರಿಂದ ನಿದ್ರಾ ಹೀನತೆಯ ಸಮಸ್ಯೆ ಇರುವವರು ಸೈಕ್ಲಿಂಗ್ ವಿಧಾನ ಬಳಸಬಹುದು.
ಹೃದಯ ರಕ್ತನಾಳದ ಆರೋಗ್ಯದ ದೃಷ್ಟಿಯಿಂದಲೂ ಸೈಕ್ಲಿಂಗ್ ಉತ್ತಮ. ಸೈಕಲ್ ತುಳಿಯುವುದಿಂದ ಹೃದಯ ಮತ್ತು ಶ್ವಾಸಕೋಶದ ಸಾಮರ್ಥ್ಯ ವೃದ್ಧಿಸುತ್ತದೆ ಎನ್ನುತ್ತದೆ ಅಧ್ಯಯನ. ರಕ್ತ ಪರಿಚಲನೆ ವೇಗ ಹೆಚ್ಚಿ ಆಮ್ಲಜನಕ ಶರೀರದ ಎಲ್ಲೆಡೆ ತಲುಪಲು ಸಹಾಯಕ.
ಸೈಕ್ಲಿಂಗ್‌ನಿಂದ ದೈಹಿಕ ಸಾಮರ್ಥ್ಯ ವೃದ್ಧಿಸುತ್ತದೆ ಮತ್ತು ಶರೀರವನ್ನು ದೃಢವಾಗಿಸುತ್ತದೆ. ವಾರದಲ್ಲಿ 30 ಕಿ.ಮೀ.ಗಿಂತ ಹೆಚ್ಚು ಸೈಕಲ್ ತುಳಿಯುವವರಿಗೆ ಹೃದಯ ಕಾಯಿಲೆ ತೀರಾ ಕಡಿಮೆ.
ಬ್ಯಾಲೆನ್ಸ್ ತಪ್ಪಿ ಬೀಳುವ ಸಾಧ್ಯತೆ ಬಿಟ್ಟರೆ ಸೈಕ್ಲಿಂಗ್‌ನಲ್ಲಿ ಅಪಾಯ ಕಡಿಮೆ.
-ಚಾರ್ವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.