ಡಯಟ್ ಆರೋಗ್ಯಕರವಾಗಿರಲಿ
Team Udayavani, Jan 22, 2019, 8:44 AM IST
ದೇಹದ ತೂಕ ಇಳಿಸಬೇಕು ಎನ್ನುವವರು ಸಮತೋಲಿತ ಆಹಾರ ಸೇವನೆ ಹಾಗೂ ಆರೋಗ್ಯಕರ ದಿನಚರಿಯನ್ನು ಪಾಲಿಸುವುದು ಬಹುಮುಖ್ಯ. ವಾರ ಅಥವಾ ತಿಂಗಳಲ್ಲಿ ದೇಹದ ತೂಕ ಇಳಿಸಬೇಕು ಎಂಬ ಬಗ್ಗೆ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡು ಆ ಗುರಿಯನ್ನು ತಲುಪಲು ಯಾವುದೇ ಒತ್ತಡವಿಲ್ಲದೆ ಜೀವನಪದ್ಧತಿ ಪಾಲನೆ ಮಾಡುವುದು ಅಗತ್ಯ.
ತೂಕ ಇಳಿಸುವಿಕೆ ನಿಧಾನಗತಿ ಹಾಗೂ ಆರೋಗ್ಯಕರವಾಗಿರಬೇಕು. ತ್ವರಿತಗತಿಯ ಡಯೆಟ್ ದೀರ್ಘಕಾಲದ ಪ್ರಯೋಜನಗಳನ್ನು ನೀಡಲು ಸಾಧ್ಯವಿಲ್ಲ. ಹೀಗಾಗಿ ಆರೋಗ್ಯಕರ ಡಯೆಟ್‌ಗೆ ಹೆಚ್ಚಿನ ಮಹತ್ವ ನೀಡಬೇಕು. ಇದಕ್ಕಾಗಿ ಪಾಲಿಸಬೇಕಾದ ಪ್ರಮುಖ 5 ಅಂಶಗಳು ಇಲ್ಲಿವೆ
•ಸಂಸ್ಕರಿಸಿದ ಆಹಾರಕ್ಕೆ ನೋ
ಸಂಸ್ಕರಿಸಿದ ಆಹಾರ ಎಂದರೆ ಬೇರೆನೂ ಅಲ್ಲ ಪ್ಯಾಕ್ ಆಗಿರುವ ಆಹಾರಗಳು. ಪ್ಯಾಕ್ ಆಗಿರುವ ಆಹಾರಗಳಿಗೆ ಕೆಡದಂತೆ ರಾಸಾಯನಿಕಗಳನ್ನು ಹಾಕಿರುತ್ತಾರೆ. ಈ ರಾಸಾಯನಿಕಗಳು ದೇಹಕ್ಕೆ ಹಾಗೂ ಆರೋಗ್ಯಕ್ಕೆ ಉತ್ತಮವಲ್ಲ. ಇದು ಸ್ಥೂಲಕಾಯತೆಗೆ ಕಾರಣವಾಗಬಹುದು. ಇದಕ್ಕಾಗಿ ತಾಜಾ ಹಣ್ಣುಗಳು, ಧವಸ ಧಾನ್ಯಗಳು ಅಥವಾ ಬೀಜಗಳಿಗೆ ಮೊರೆಹೋಗುವುದು ಉತ್ತಮ.
•ಸಕ್ಕರೆ, ಉಪ್ಪಿನಾಂಶದ ಕುರಿತು ನಿಗಾ ಇರಲಿ
ನಿತ್ಯದ ಆಹಾರದಲ್ಲಿರುವ ಸಕ್ಕರೆ ಹಾಗೂ ಉಪ್ಪಿನ ಪ್ರಮಾಣ ಕೂಡ ತೂಕ ಇಳಿಸುವಿಕೆಯ ಪ್ರಮುಖ ಅಂಶ. ಇದಕ್ಕಾಗಿ ತಾಜಾ ಪಾನೀಯ (ನಿಂಬೆ ರಸ, ಎಳ ನೀರು), ನೈಸರ್ಗಿಕವಾಗಿ ಸಿಹಿ ಅಂಶವುಳ್ಳ ಜೇನುತುಪ್ಪ ಹಾಗೂ ಬೆಲ್ಲವನ್ನು ಉಪಯೋಗಿಸಿ.
•5 ಬಾರಿ ಸಣ್ಣ ಆಹಾರವಿರಲಿ
ಎಲ್ಲರೂ ನಿತ್ಯ ಮೂರು ಹೊತ್ತು ಆಹಾರ ಸೇವಿಸುವುದು ಸಾಮಾನ್ಯ. ಇದರ ನಡುವೆ ಎರಡು ಬಾರಿ ಸ್ನಾಕ್ಸ್ ಗಳನ್ನು ತಿಂದರೆ ರಕ್ತದಲ್ಲಿನ ಸಕ್ಕರೆ ಅಂಶ ಹಾಗೂ ದೇಹದಲ್ಲಿರುವ ಶಕ್ತಿಯನ್ನು ನಿಯಂತ್ರಣ ಮಾಡಬಹುದು. ಈ ಸ್ನಾಕ್ಸ್ ನೈಸರ್ಗಿಕವಾಗಿರಬೇಕು. ಇದಕ್ಕಾಗಿ ಹಣ್ಣುಹಂಪಲು, ಸಲಾಡ್ ಅಥವಾ ಒಣಹಣ್ಣುಗಳನ್ನು ಸೇವಿಸಬಹುದು.
• ಸಾಫ್ಟ್ ಡ್ರಿಂಕ್ಸ್, ಕಾಫಿ, ಟೀ ಬೇಡ
ಬಾಯರಿಕೆಯಾದಾಗ ದಾಹ ತೀರಿಸುವ ಸಲುವಾಗಿ ಎಲ್ಲರೂ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಾರೆ. ಇನ್ನು ಅತಿಯಾಗಿ ಕಾಫಿ, ಟೀ ಸೇವನೆಯೂ ಒಳ್ಳೆಯದಲ್ಲ. ಇದರಲ್ಲಿ ಹೆಚ್ಚಿನ ಕ್ಯಾಲೋರಿ ಹಾಗೂ ಸಕ್ಕರೆ ಅಂಶಗಳಿರುತ್ತವೆ. ಹೀಗಾಗಿ ಇವುಗಳನ್ನು ಬಿಟ್ಟು ಬ್ಲ್ಯಾಕ್ ಟೀ, ಗ್ರೀನ್ ಟೀ, ನಿಂಬೆರಸ, ನೀರು ಕುಡಿಯುವುದು ಉತ್ತಮ. ಆರೋಗ್ಯಕರ ಡಯೆಟ್ ಎಂದರೆ ಪ್ರತಿಯೊಂದು ಹೆಜ್ಜೆಯಲ್ಲಿಯೂ ಸರಿಯಾದ ಆಯ್ಕೆಗಳನ್ನು ಮಾಡಿಕೊಳ್ಳುವುದು ಎಂಬುದು ನೆನಪಿರಲಿ
••ರಮ್ಯಾ ಕೆದಿಲಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.