ಉಸಿರಾಟದ ಸಮಸ್ಯೆ ನಿರ್ಲಕ್ಷ್ಯ ಬೇಡ
Team Udayavani, Jun 11, 2019, 5:50 AM IST
ವಯಸ್ಸು ಹೆಚ್ಚಾಗುತ್ತಿದಂತೆ ಒಂದೊಂದು ಆರೋಗ್ಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತದೆ. ಜೀವನ ಕ್ರಮಗಳ ಮೇಲೆ ಆರೋಗ್ಯ ನಿಂತಿರುತ್ತದೆ. ಹಿರಿ ಜೀವಗಳಲ್ಲಿ ಸಾಮಾನ್ಯವಾಗಿ ಶ್ವಾಸಕೋಶದ ಸಮಸ್ಯೆ, ಉಸಿರಾಟದ ತೊಂದರೆಗಳು ಕಾಣಿಸುತ್ತದೆ. ಶ್ವಾಸಕೋಶದ ಕಾರ್ಯದಲ್ಲಿ ವ್ಯತ್ಯಯವುಂಟಾಗುತ್ತದೆ. ಸ್ವಲ್ಪ ಹೊತ್ತ ಅತ್ತ ಇತ್ತ ಓಡಾಡಿದರೂ ಸಹಜವಾಗಿ ಉಸಿರಾಡಲು ಕಷ್ಟ ಪಡುವ ಅದೆಷ್ಟೋ ಹಿರಿಜೀವಿಗಳು ನಮ್ಮ ಮುಂದಿದ್ದಾರೆ. ಹಿರಿಯರಲ್ಲಿ ಕಾಡುವ ಅನೇಕ ಸಮಸ್ಯೆಗಳಲ್ಲಿ ಉಸಿರಾಟದ ಸಮಸ್ಯೆಯೂ ಒಂದು.
ಕಾರಣಗಳು
ಅಸ್ತಮಾ, ಸ್ಥೂಲಕಾಯತೆ, ಜೀವನ ಕ್ರಮ, ವಯಸ್ಸಿನ ಸಂಬಂಧಿ ಕಾಯಿಲೆಗಳು ಹೀಗೆ ಉಸಿರಾಟದ ಸಮಸ್ಯೆಗಳಿಗೆ ಅನೇಕ ಕಾರಣಗಳಿವೆ. ಧೂಮಪಾನ ಮಾಡುವುದರಿಂದ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚು. ಧೂಮಪಾನ ದಿನದಿಂದ ದಿನಕ್ಕೆ ಶ್ವಾಸಕೋಶ ಕ್ಷೀಣಿಸುತ್ತಾ ಹೋಗುತ್ತದೆ. ಅಶುದ್ಧ ಗಾಳಿ ಸೇವನೆ ಮಾಡುವುದರಿಂದ ಶ್ವಾಸ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ. ಧೂಳು, ವಾಹನಗಳ ಹೊಗೆ ಸೇರಿದ ಗಾಳಿ ಸೇವಿಸುವುದರಿಂದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚು . ದೇಹದಲ್ಲಿ ಬೊಜ್ಜು ತುಂಬಿಕೊಂಡಿದ್ದರೆ ಉಸಿರಾಟದ ಸಮಸ್ಯೆ ಉಂಟಾಗುತ್ತವೆ. ಪರಿಹಾರಗಳು ಹಿರಿಯ ವಯಸ್ಸಿನಲ್ಲಿ ಉಂಟಾಗುವ ಶ್ವಾಸಕೋಶದ ಸಮಸ್ಯೆಯನ್ನು ಸಂಪೂರ್ಣ ಪರಿಹರಿಸಲು ಸಾಧ್ಯವಿಲ್ಲ. ಆದರೆ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಸಾಧ್ಯ.
ವ್ಯಾಯಾಮ
ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮ ಮಾಡಿದರೆ ಉಸಿರಾಟದ ಸಮಸ್ಯೆಯನ್ನು ನಿಂತ್ರಿಸಲು ಸಾದ್ಯ. ಆದರೆ ಪರಿಣಿತರ ಸಲಹೆಯಂತೆ ವ್ಯಾಯಾಮ ಮಾಡುವುದು ಉತ್ತಮ.
ಸರಿಯಾದ ನಿದ್ದೆ
ಕಡಿಮೆ ನಿದ್ದೆ ಅನಾರೋಗ್ಯಕ್ಕೆ ಆಹ್ವಾನ. ಸರಿಯಾದ ನಿದ್ದೆಯಿಲ್ಲದಿದ್ದರೆ ದೇಹದ ಕಾರ್ಯಚಟುವಟಿಕೆಯಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚು.
ವೈದ್ಯರ ಸಲಹೆ
ವಯಸ್ಸಾದಂತೆ ಯಾವುದೇ ಆರೋಗ್ಯ ಸಮಸ್ಯೆ ಎದುರಾದರೂ ಮೊದಲಿಗೆ ವೈದ್ಯರ ಸಲಹೆಗಳನ್ನು ಪಡೆಯುವುದು ಮುಖ್ಯ. ಸಮಸ್ಯೆ ಉಲ್ಬಣಗೊಳ್ಳದಂತೆ ಆರಂಭದಲ್ಲೇ ಎಚ್ಚರ ವಹಿಸಿ ವೈದ್ಯರ ಸಲಹೆಗಳನ್ನು ಪಾಲಿಸುವುದು ಉತ್ತಮ. ವೈದ್ಯರ ಭೇಟಿಯಿಂದ ಸಮಸ್ಯೆಯ ಕಾರಣ, ಪರಿಹಾರ, ತೀವ್ರತೆ ಎಲ್ಲ ಇಳಿದು ಬರುತ್ತದೆ. ಆಮ್ಲಜನಕ ಸೇವನೆ, ದೇಹದಲ್ಲಿರುವ ಇಂಗಾಲದ ಡೈ ಆಕ್ಸೆ„ಡ್ ಹೊರಬಿಡುವುದು ಶ್ವಾಸಕೋಶದ ಕಾರ್ಯ. 40ರ ಅನಂತರ ಶ್ವಾಸಕೋಶದ ಕಾರ್ಯದಲ್ಲಿ ವ್ಯತ್ಯಾಸವಾಗಿ ಸಮಸ್ಯೆಗಳು ಉಂಟಾಗುತ್ತವೆ. ಉಸಿರಾಟದ ತೊಂದರೆ ನಿಯಂತ್ರಣದಲ್ಲಿಡಲು ಚಟುವಟಿಕೆ ಪೂರಕ.
ಆಹಾರದಲ್ಲಿ ನಿಯಂತ್ರಣ
ಆಹಾರ ಸೇವನೆಯಲ್ಲಿ ನಿಯಂತ್ರಣ ವಯಸ್ಸಾದ ಮೇಲೆ ಆಹಾರ ಸೇವನೆಯ ಮೇಲೆ ನಿಯಂತ್ರಣ ಸಾಧಿಸಿಕೊಂಡರೆ ಉಸಿರಾಟದ ಸಮಸ್ಯೆ ಕೊಂಚ ನೆಮ್ಮದಿ ಪಡೆಯಬಹುದು. ಎಣ್ಣೆಯಲ್ಲಿ ಕರಿದ ಆಹಾರ, ಜಂಕ್ ಫುಡ್‌ಗಳಿಂದ ಆದಷ್ಟು ದೂರವಿರುವುದು ಒಳ್ಳೆಯದು.
– ರಂಜಿನಿ ಮಿತ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.