ಟ್ರೆಡ್‌ಮಿಲ್‌ನಲ್ಲಿ ಈ ತಪ್ಪು ಮಾಡಬೇಡಿ
Team Udayavani, Mar 3, 2020, 4:07 AM IST
ಟ್ರೆಡ್‌ಮಿಲ್‌ನಲ್ಲಿ ಓಡುವುದು ಬಹುತೇಕರ ಇಷ್ಟದ ವ್ಯಾಯಾಮ. ಜಿಮ್‌ಗೆ ಹೋದಾಗ ಮೊದಲು ಎಲ್ಲರ ಗಮನ ಹರಿಯುವುದು ಟ್ರೆಡ್‌ಮಿಲ್ ಕಡೆಗೆ. ಸಾದಾರಣವಾಗಿ ಈ ಮೆಷಿನ್ ಖಾಲಿ ಇರುವುದೇ ಇಲ್ಲ. ಹೊರಗಡೆ ಓಡಲು ಸಾಧ್ಯವಾಗದವರಿಗೆ ಈ ಮೆಷಿನ್ ಅತ್ಯುತ್ತಮ ಪರಿಹಾರ ಮಾರ್ಗ. ಆದರೆ ಸಾಮಾನ್ಯವಾಗಿ ಟ್ರೆಡ್‌ಮಿಲ್ ಬಳಸುವಾಗ ಕೆಲವೊಂದು ತಪ್ಪುಗಳು ನಮಗೆ ಗೊತ್ತಿಲ್ಲದಂತೆ ಘಟಿಸುತ್ತವೆ. ಅದನ್ನು ಗಮನಿಸಿದರೆ ನಮ್ಮ ವ್ಯಾಯಾಮ ಪರಿಪೂರ್ಣವಾಗುತ್ತದೆ.
ದಾಪುಗಾಲು ಇಡಬೇಡಿ
ಟ್ರೆಡ್‌ಮಿಲ್‌ನಲ್ಲಿ ದಾಪುಗಾಲು ಇಡುವುದು ಸುರಕ್ಷತೆ ದೃಷ್ಟಿಯಿಂದ ಅಷ್ಟು ಒಳ್ಳೆಯದಲ್ಲ. ಇದರಿಂದ ನಿಮ್ಮ ಗಮನ ಬೇರೆಡೆ ಹರಿದು ಕೆಳಗೆ ಬೀಳಲು ಕಾರಣ ವಾಗಬಹುದು. ಕೆಳಗೆ ನೋಡುತ್ತಾ ದಾಪು ಗಾಲು ಇಡುವುದು ನಿಮ್ಮ ಬೊಜ್ಜನ್ನು ಕರಗಿ ಸಲು ಸಹಾಯ ಮಾಡುವುದೇನೋ ಹೌದು. ಆದರೆ ಮೊಣಕಾಲಿನಲ್ಲಿ ನೋವು ಕಾಣಿಸಿ ಕೊಳ್ಳ ಬಹುದು. ಆದ್ದರಿಂದ ಈ ಬಗ್ಗೆ ಎಚ್ಚರ ವಹಿಸಿ.
ಮೆಷಿನ್‌ನ ಆಧಾರ ಬಳಸಬೇಡಿ
ಸಾಧಾರಣವಾಗಿ ಟ್ರೆಡ್‌ಮಿಲ್ ಬಳಸು ವಾಗ ಮಾಡುವ ಮುಖ್ಯ ತಪ್ಪು ಎಂದರೆ ಬದಿಯಲ್ಲಿರುವ ಆಧಾರ (ಬಾರ್) ಹಿಡಿದುಕೊಳ್ಳುವುದು. ನೀವು ಇಂತಹ ಹವ್ಯಾಸ ಹೊಂದಿದ್ದರೆ ಅದನ್ನು ಈಗಲೇ ಬಿಟ್ಟು ಬಿಡಿ. ಹೊರಗಡೆ ಓಡಾಡುವಂತೆ ಸಹಜ ವಾಗಿ ಟ್ರೆಡ್‌ಮಿಲ್‌ನಲ್ಲೂ ನಡೆ ದಾಡಿ. ಬೇಕಾದರೆ ವೇಗ ಸ್ವಲ್ಪ ಕಡಿಮೆ ಮಾಡಿ.
ವಾರ್ಮ್ ಅಪ್ ಮಾಡಿ
ಪ್ರತಿ ವ್ಯಾಯಾಮದ ಮುನ್ನ ಮತ್ತು ಅನಂತರ ವಾರ್ಮ್ ಅಪ್ ಮಾಡುವುದು ಅತೀ ಮುಖ್ಯ. ಇದು ಟ್ರೆಡ್‌ಮಿಲ್ ವ್ಯಾಯಾಮಕ್ಕೂ ಅನ್ವಯಿಸುತ್ತದೆ. ಕೆಲವರು ಇದ್ದಕ್ಕಿದ್ದಂತೆ ಟ್ರೆಡ್‌ಮಿಲ್‌ನಲ್ಲಿ ವೇಗವಾಗಿ ಓಡಾಟ ಆರಂಭಿಸುತ್ತಾರೆ. ಇದು ತಪ್ಪು. ಆರಂಭದಲ್ಲಿ ಕೆಲವು ವಾರ್ಮ್ಅಪ್ ವ್ಯಾಯಾಮ ಮಾಡಿ ಕಡಿಮೆ ವೇಗದಲ್ಲಿ ಟ್ರೆಡ್‌ಮಿಲ್ ಬಳಸಬೇಕು. ಇದ್ದಕ್ಕಿದ್ದಂತೆ ವೇಗವಾಗಿ ಓಡಾಡುವುದರಿಂದ ನಿಮ್ಮ ಶರೀರ ಬಳಲುತ್ತದೆ. ಮೊದಲು ನಡಿಗೆ ಆಮೇಲೆ ಜಾಗಿಂಗ್ ಅನಂತರ ಓಟ ಆರಂಭಿಸಬೇಕು.
ಒಂದೇ ರೀತಿಯ ವ್ಯಾಯಾಮ ಬೇಡ
ಟ್ರೆಡ್‌ಮಿಲ್‌ನಲ್ಲಿ ವಿವಿಧ ಬಗೆಯ ವ್ಯಾಯಾಮ ಮಾಡಲು ಅವಕಾಶ ಗಳಿವೆ. ನೀವು ಒಂದೇ ಬಗೆಯ ವ್ಯಾಯಾಮ ವನ್ನು ನಿರಂತರ ಮಾಡುತ್ತಿದ್ದರೆ ಕ್ರಮೇಣ ನಿಮ್ಮ ಕೊಬ್ಬು ಕರಗುವ ಪ್ರಮಾಣ ಕಡಿಮೆಯಾಗುತ್ತದೆ. ಆದ್ದರಿಂದ ಪ್ರತಿ ಎರಡು-ಮೂರು ವಾರಗಳಿಗೊಮ್ಮೆ ವ್ಯಾಯಾಮ ವಿಧಾನ ಬದಲಾಯಿಸಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.