ಬಾಯಾರಿಕೆಗೆ ಕಾರಣ ಹಲವು…
Team Udayavani, Apr 16, 2019, 6:00 AM IST
ನೀರಿಲ್ಲದೆ ಬದುಕುವುದು ಅಸಾಧ್ಯ. ಆರೋಗ್ಯವಂತ ದೇಹಕ್ಕೆ ಪ್ರತಿ ದಿನ 3 ಲೀಟರ್ ನೀರು ಅಗತ್ಯ. ಸಾಕಷ್ಟು ಪ್ರಮಾಣದಲ್ಲಿ ಶುದ್ಧ ನೀರು ಕುಡಿಯುವುದು ದೇಹಾರೋಗ್ಯಕ್ಕೆ ಉತ್ತಮ. ಕೆಲವೊಮ್ಮೆ ಎಷ್ಟು ನೀರು ಕುಡಿದರೂ ಮತ್ತೆ ಮತ್ತೆ ಬಾಯಾರಿಕೆ ಅನುಭವ ವಾಗುತ್ತಿರುತ್ತದೆ. ಇದು ಕೆಲವು ಕಾಯಿಲೆಗಳ ಸೂಚನೆಯೂ ಹೌದು.
1 ಅತಿಯಾದ ಉಪ್ಪು ಬಳಕೆ
ಆಹಾರದಲ್ಲಿ ಹೆಚ್ಚು ಉಪ್ಪು ಬಳಸಿದ್ದರೆ ಪದೇ ಪದೆ ಬಾಯಾರಿಕೆಯ ಅನುಭವವಾಗುತ್ತದೆ. ಯಾಕೆಂದರೆ ಉಪ್ಪು ಜೀವಕೋಶಗಳ ನೀರಿನ ಅಂಶವನ್ನು ಹೊರ ಹಾಕುತ್ತದೆ. ಪರಿಣಾಮ ಬಾಯಾರಿಕೆಯ ಅನುಭವವಾಗುತ್ತದೆ. ಪ್ರತಿ ದಿನ 5 ಗ್ರಾಂಗಿಂತ ಜಾಸ್ತಿ ಉಪ್ಪು ಬಳಸಲೇಬೇಡಿ. ಇದರಿಂದ ಬಿಪಿ ಮಾತ್ರವಲ್ಲ ಕಡಿಮೆ ನೀರು ಕುಡಿದರೆ ನಿರ್ಜಲೀಕರಣ ಎದುರಾಗುವ ಆಪಾಯವೂ ಇದೆ.
2 ವ್ಯಾಯಾಮ
ಬೆಳಗ್ಗಿನ ಜಾವ ಜಾಗಿಂಗ್, ವ್ಯಾಯಾಮ ಮಾಡುತ್ತೀರಿ ಎಂದಾದರೆ ನಿಮ್ಮ ದೇಹ ಹೆಚ್ಚಿನ ನೀರು ಬೇಡುತ್ತದೆ. ಇದರಿಂದ ದೇಹದಲ್ಲಿನ ನೀರಿನ ಅಂಶ ಬೆವರಿನ ರೂಪದಲ್ಲಿ ಹೊರ ಹೋಗುತ್ತದೆ.
3 ಬಿಸಿಲಿಗೆ ನಿಂತಿದ್ದರೆ
ಬಿಸಿಲಿಗೆ ಮೈ ಒಡ್ಡಿ ನಿಂತಿದ್ದರೆ ಬಾಯಾರಿಕೆ ಹೆಚ್ಚು. ಇದರಿಂದ ನಿರ್ಜಲೀಕರಣ ಕಾಡಬಹುದು.
4 ಮಧುಮೇಹದ ಲಕ್ಷಣ
ಅತಿಯಾದ ಬಾಯಾರಿಕೆ ಮಧುಮೇಹದ ಲಕ್ಷಣಗಳಲ್ಲಿ ಒಂದು. ಹೀಗಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ.
5 ಒಣ ಬಾಯಿ ಸಾಧ್ಯತೆ
ಒಣ ಬಾಯಿ ಕೂಡ ಅತಿಯಾದ ಬಾಯಾರಿಕೆ ಕಾರಣವಾಗಿರುತ್ತದೆ. ಲವಣ ಗ್ರಂಥಿಗಳು ಲಾಲಾರಸ ಉತ್ಪತ್ತಿ ಮಾಡದೇ ಇದ್ದಾಗ ಸಾಕಷ್ಟು ನೀರು ಕುಡಿಯಬೇಕು ಎಂದೆನಿಸಲು ಶುರುವಾಗುತ್ತದೆ.
6 ಔಷಧ ಬಳಸುವ ಪರಿಣಾಮ
ಕೆಲವು ಔಷಧಗಳು ಬಾಯಿಯ ಮೇಲೆ ಪರಿಣಾಮ ಬೀರಿ ಒಣಗಿಸುವ ಗುಣ ಹೊಂದಿವೆ. ಈ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಿ.
- ರಮೇಶ್ ಬಳ್ಳಮೂಲೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.