ಡ್ರೈಫ್ರುಟ್ಸ್ ಸೇವಿಸಿ ದೇಹದ ತೂಕ ನಿಯಂತ್ರಿಸಿ
Team Udayavani, Jan 7, 2020, 5:47 AM IST
ಆರೋಗ್ಯ ಉತ್ತಮವಾಗಿರಬೇಕು ಎಂಬುದು ಎಲ್ಲರ ಬಯಕೆ. ಅದಕ್ಕಾಗಿ ಸಾಕಷ್ಟು ಕಸರತ್ತು ಮಾಡಿದರೂ ಪ್ರಯೋಜನ ವಾಗುವುದಿಲ್ಲ ಎಂದು ದೂರುವವರು ಅನೇಕರಿದ್ದಾರೆ. ಆದರೆ ವರ್ಕ್‌ಔಟ್ ಮಾತ್ರ ಸಾಕಾಗುವುದಿಲ್ಲ. ಆಹಾರದಲ್ಲೂ ಪಥ್ಯ ಅನುಸರಿಸಬೇಕು. ಆಗ ಮಾತ್ರ ದೇಹದ ತೂಕ ಸಮತೋಲನದಲ್ಲಿರಿಸಲು ಸಾಧ್ಯವಿದೆ.
ಆಹಾರ ಅಭ್ಯಾಸದಲ್ಲಿ ಆರೋಗ್ಯಕ್ಕೆ ಪೂರಕವಾಗುವಂತಹ ಆಹಾರದ ಸೇವನೆ ಅಗತ್ಯ. ವಾರದ ಒಂದು ದಿನ ಅಥವಾ ತಿಂಗಳಿನಲ್ಲಿ ಒಂದು ಬಾರಿ ಬಾಯಿ ಚಪಲಕ್ಕಾಗಿ ಜಂಕ್‌ಫುಡ್ ಅಥವಾ ಆಯಿಲ್ ಫುಡ್‌ಗಳನ್ನು ಸೇವಿಸುವುದರಲ್ಲಿ ತೊಂದರೆಯಿಲ್ಲ. ಆದರೆ ಹಸಿವಾದಾಗ, ಏನಾದರೂ ತಿನ್ನಬೇಕು ಎಂದೆನಿಸಿದಾಗ ಡ್ರೈಫ್ರುಟ್ಸ್ ಗಳನ್ನು ತಿನ್ನಬಹುದು. ಒಣಹಣ್ಣುಗಳಲ್ಲಿ ಫೈಬರ್, ಪ್ರೊಟೀನ್ ಹಾಗೂ ಒಮೆಗಾ-3 ಹೆಚ್ಚಿನ ಪ್ರಮಾಣದಲ್ಲಿರುತ್ತವೆ.
ಇವುಗಳು ತೂಕ ಇಳಿಸುವಿಕೆ, ಮೆದುಳಿನ ಕಾರ್ಯ ಹಾಗೂ ಹೃದಯದ ಆರೋಗ್ಯಕ್ಕೆ ಪೂರಕವಾದವುಗಳು. ಹೀಗಾಗಿ ವಿವಿಧ ಒಣಹಣ್ಣುಗಳಿಂದ ತುಂಬಿರುವ ಒಂದು ಕಪ್ ಒಣಹಣ್ಣುಗಳನ್ನು ಸೇವಿಸಿದರೆ ದೇಹಕ್ಕೆ ಬೇಕಾದ ಎಲ್ಲ ರೀತಿಯ ಪೋಷಕಾಂಶಗಳು ಒಟ್ಟಿಗೆ ದೊರೆಯುತ್ತವೆ. ಈ ಮಿಶ್ರ ಒಣ ಹಣ್ಣುಗಳಿಂದಾಗಿ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಮೆಗ್ನೇಷಿಯಂ, ಝಿಂಕ್, ಕಬ್ಬಿಣ, ರೋಗ ನಿರೋಧಕ, ಫೈಬರ್ ಮುಂತಾದ ಖನಿಜ ದೇಹಕ್ಕೆ ಸೇರುತ್ತವೆ. ಒಂದು ಕಪ್ ತಾಜಾ ಹಣ್ಣುಗಳಿಗಿಂತ ಒಂದು ಕಪ್ ಒಣಹಣ್ಣುಗಳಲ್ಲಿ ಫೈಬರ್ ಅಂಶ ದುಪ್ಪಟ್ಟು ಪ್ರಮಾಣದಲ್ಲಿರುತ್ತದೆ. ಒಣ ಹಣ್ಣುಗಳು ಜೀರ್ಣಕ್ರಿಯೆ ಉತ್ತಮಗೊಳ್ಳುವುದಕ್ಕೆ ಸಹಕಾರಿ ಯಾಗಿವೆ.
ಒಣಹಣ್ಣುಗಳು ಉತ್ತಮ ಕೊಲೆಸ್ಟ್ರಾಲ್‌ಗಳ ಪ್ರಮಾಣವನ್ನು ಹೆಚ್ಚಿಸಿ ಕೆಟ್ಟ ಕೊಲೆಸ್ಟ್ರಾಲ್‌ಗಳನ್ನು ಕಡಿಮೆಗೊಳಿಸುತ್ತವೆ. ಅಲ್ಲದೆ ರಕ್ತದೊತ್ತಡ, ಸಕ್ಕರೆ ಅಂಶ, ಥೈರಾಯ್ಡಗಳ ನಿಯಂತ್ರಣ, ಹೃದಯದ ಉತ್ತಮ ಕಾರ್ಯನಿರ್ವಹಣೆ, ಚರ್ಮದ ಆರೋಗ್ಯ, ಕೂದಲಿನ ಆರೋಗ್ಯಕ್ಕೆ ಪೂರಕವಾಗುತ್ತವೆ. ಆರೋಗ್ಯದ ಸಮ ತೋಲನಕ್ಕೆ ಉತ್ತಮ ಆಹಾರ ಸೇವನೆ ಅಗತ್ಯ. ಆದರೆ ಮಿತವಾದ ಬಳಕೆಯೂ ಮುಖ್ಯ. ತೂಕ ಇಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಇವುಗಳ ಅತಿಯಾದ ಸೇವನೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.