ಹೀರೇಕಾಯಿ ಸೇವಿಸಿ ಆರೋಗ್ಯ ವೃದ್ಧಿಸಿ
Team Udayavani, Feb 25, 2020, 3:08 AM IST
ಆಹಾರ ತುಂಬಾ ರುಚಿಯಾಗಿದ್ದು ನಾಲಿಗೆ ಚಪಲ ತೀರಿದರೆ ಅಷ್ಟೇ ಸಾಕು ಎನ್ನುವುದು ಸಾಮಾನ್ಯ ಯೋಚನೆಯಾಗಿದೆ. ಆದರೆ ನಾವು ತಿನ್ನುವ ಎಷ್ಟೋ ಆಹಾರದಲ್ಲಿ ಅಗತ್ಯ ಪೋಷಕಾಂಶ ಇದೆಯೇ ಇಲ್ಲವೇ ಎನ್ನುವುದನ್ನು ಕೂಡ ಅರಿಯುವುದಿಲ್ಲ. ರುಚಿಗೂ ಆರೋಗ್ಯಕ್ಕೂ ಆದ್ಯತೆ ನೀಡುವ ನೆಲೆಯಲ್ಲಿ ಹೀರೇಕಾಯಿ ತರಕಾರಿ ಪ್ರಧಾನ ಪಾತ್ರವಹಿಸುತ್ತದೆ.
ದೇಹದ ತೂಕ ಇಳಿಕೆಗೆ
ಹೀರೇಕಾಯಿಯಲ್ಲಿ ಅಧಿಕ ಐರನ್, ಮ್ಯಾಗ್ನಿ ಷಿಯಂ, ವಿಟಮಿನ್ ಸಿ ಅಂಶವು ಹೇರಳವಾಗಿದ್ದು ಹಲವು ರೋಗಗಳಿಗೆ ಇದು ಮನೆಮದ್ದಾಗಿದೆ. ಇದರ ನಿಯಮಿತ ಸೇವನೆಯೂ ದೇಹದ ಅನಗತ್ಯ ಕೊಬ್ಬಿನಾಂಶವನ್ನು ಹೊರಹಾಕಿ ನಮ್ಮ ಫಿಟ್‌ನೆಸ್ ಕಾಪಾಡುತ್ತದೆ. ದೇಹದ ತೂಕ ಇಳಿಕೆಗೆ ಇದರ ಸೇವನೆ ಮಾಡುವುದು ಉತ್ತಮವಾಗಿದೆ. ಇದನ್ನು ಉಪ್ಪಿನಲ್ಲಿ ಬೇಯಿಸಿ ಇಲ್ಲವೇ ಜ್ಯೂಸ್ ರೂಪದಲ್ಲೂ ಸೇವಿಸಬಹುದು. ಆದರೆ ಪಲ್ಯ ಇನ್ನಿತರ ಖಾದ್ಯ ಮಾಡುವಾಗ ಎಣ್ಣೆಯ ಅಂಶವನ್ನು ಕಡಿಮೆ ಬಳಸುವುದನ್ನು ರೂಢಿಸಿಕೊಳ್ಳಬೇಕು.
ಉರಿ ಮೂತ್ರ ಸಮಸ್ಯೆ ನಿವಾರಿಸಲು
ದೇಹದಲ್ಲಿ ಕಡಿಮೆನೀರಿನಂಶಉರಿಮೂತ್ರ ಸಮಸ್ಯೆಗೆ ಕಾರಣವಾಗಿದ್ದು ಅಂತಹ ಸಂದರ್ಭದಲ್ಲಿ ಹೀರೇಕಾಯಿ ಸೇವನೆ ಒಳ್ಳೆಯದು. ಇದರಲ್ಲಿರುವ ವಿಟಮಿನ್, ನೀರಿನಂಶ ಉರಿಮೂತ್ರದ ನೋವಿನ ಬಾಧೆ ಕಡಿಮೆ ಮಾಡುತ್ತದೆ. ಇದನ್ನು ಜೀರಿಗೆ, ಕಲ್ಲು ಸಕ್ಕರೆ, ಗಸಗಸೆಯೊಂದಿಗೆ ಬೆರೆಸಿ ಅರೆದು ಸೇವಿಸುವುದರಿಂದ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಾಗಿದೆ.
ಮೂಲವ್ಯಾಧಿ ಸಮಸ್ಯೆ ನಿವಾರಣೆಗೆ
ಹೀರೇಕಾಯಿಯಲ್ಲಿ ಕೆರೋಟಿನ್ ಅಂಶವಿದ್ದು ಇದು ನಿಮ್ಮ ರಕ್ತ ಶುದ್ಧೀಕರಿಸಲು ನೆರವಾಗುತ್ತದೆ. ಮಾತ್ರವಲ್ಲದೆ ಇದರಲ್ಲಿರುವ ಅಧಿಕ ನೀರಿನಂಶ ವು ಮೂಲವ್ಯಾಧಿ ಸಮಸ್ಯೆಯನ್ನು ನಿವಾರಿಸುವ ಸಾಮರ್ಥ್ಯ ಹೊಂದಿದೆ. ಇದನ್ನು ವಾರಕ್ಕೆ 3ರಿಂದ ನಾಲ್ಕು ಬಾರಿ ಕಡಿಮೆ ಮಸಾಲ ಅಂಶವನ್ನು ಉಪಯೋಗಿಸಿ ಅಡುಗೆ ಮಾಡಿದರೆ ಸಮಸ್ಯೆಗೆ ಪರಿಹಾರ ಕಂಡುಕೊಂಡಂತಾಗುತ್ತದೆ.
ಸಿಬ್ಬಿನ ನಿವಾರಣೆಗೆ
ಸಿಬ್ಬಿನ ಸಮಸ್ಯೆಗೆ ಇದೊಂದು ಉತ್ತಮ ಮದ್ದಿನಂತೆ ಕಾರ್ಯ ನಿರ್ವಹಿಸುತ್ತದೆ. ಹೀರೇಕಾಯಿ ಸಿಪ್ಪೆ ಅಧಿಕ ಪೋಷಕಾಂಶವನ್ನು ಹೊಂದಿದ್ದು ಅದನ್ನು ಬೆಳ್ಳುಳ್ಳಿ ಮತ್ತು ಚಿಟಿಕೆ ಉಪ್ಪಿನೊಂದಿಗೆ ಪೇಸ್ಟ್ ಮಾಡಿ ವಾರಕ್ಕೆ ನಾಲ್ಕು ಬಾರಿ ಲೇಪಿಸುವುದರಿಂದ ಸಿಬ್ಬಿನ ಒಣಾಂಶವು ಕಡಿಮೆಯಾಗಿ ತ್ವಚೆಯ ಹೊಳಪು ಹೆಚ್ಚಲು ಸಹಕಾರಿಯಾಗಿದೆ.
- ರಾಧಿಕಾ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
ಪ್ರಯಾಣಿಕರಿಗೆ ಟಿಕೆಟ್ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.