ಬೇಸಗೆಯ ಬಿಸಿಗೆ ತಂಪು ನೀಡುವ ನೆಲ್ಲಿಕಾಯಿ


Team Udayavani, Jan 7, 2020, 5:07 AM IST

NALI

ನೆಲ್ಲಿಕಾಯಿ ಅತಿ ಹೆಚ್ಚು ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೊಂದಿದೆ. ಮಿಟಮಿನ್‌ ಸಿ ಹೇರಳವಾಗಿರುವ ನೆಲ್ಲಿಕಾಯಿ ಸ್ವಲ್ಪ ಸಿಹಿ, ಸ್ವಲ್ಪ ಕಹಿ ರುಚಿಯನ್ನು ಹೊಂದಿದ್ದು, ಬೇಸಗೆಯ ತಾಪಕ್ಕೆ ದೇಹವನ್ನು ತಂಪಾಗಿಸುವ ಗುಣ ಇದರಲ್ಲಿದೆ.ಆರೋಗ್ಯ ಗುಣಗಳುಬಿಸಿಲಿಗೆ ಕೂದಲು ಉದುರುವಿಕೆ, ಹೊಟ್ಟು ಜಾಸ್ತಿಯಾಗುವುದು ಸಾಮಾನ್ಯ.

ಇದಕ್ಕಾಗಿ 1ಅಥವಾ 2 ನೆಲ್ಲಿಕಾಯಿಗಳನ್ನು ಜಜ್ಜಿ ತಲೆಗೆ ಹಚ್ಚಿಕೊಳ್ಳುವುದರಿಂದ ಹೊಟ್ಟು ನಿವಾರಣೆಯಾಗುವುದಲ್ಲದೆ ಕೂದಲು ಸೊಂಪಾಗಿ ಬೆಳೆಯುತ್ತದೆ. ಇದನ್ನು ತೊಳೆದು ಸ್ವಲ್ಪ ಉಪ್ಪು ಹಾಕಿ ತಿಂದರೆ ಹೊಟ್ಟೆ ನೋವು ನಿವಾರಣೆಯಾಗುತ್ತದೆ.ವಾರದಲ್ಲಿ ಒಮ್ಮೆ ನೆಲ್ಲಿಕಾಯಿ ಜ್ಯೂಸ್‌ ಮಾಡಿ ಕುಡಿಯುವುದರಿಂದ ಅಸ್ತಮಾ ಕಡಿಮೆಯಾ ಗುವುದು. ಮಲಬದ್ಧತೆ ನಿವಾರಣೆಯಾಗುತ್ತದೆ. ಜೀರ್ಣಶಕ್ತಿ ವೃದ್ಧಿಸುತ್ತದೆ. ವಾತ, ಪಿತ್ತ, ಕಫ‌ ಈ ಮೂರು ದೋಷಗಳನ್ನು ನಿವಾರಿಸಲು ಸಹಕಾರಿ. ನೆಲ್ಲಿಕಾಯಿಯನ್ನು ಸಣ್ಣದಾಗಿ ಹೆಚ್ಚಿ ಅದಕ್ಕೆ ಸ್ವಲ್ಪ ಉಪ್ಪು, ಮೊಸರನ್ನು ಹಾಕಿ ಇಂಗಿನ ಮಿಶ್ರಣದಲ್ಲಿ ಅದ್ದಿ ಅದನ್ನು ಬಿಸಿಲಿಗೆ ಒಣಗಿ ಶೇಖರಿಸಿಡುವುದರಿಂದ ದೀರ್ಘ‌ಕಾಲದವರೆಗೆ ಬಳಸಬಹುದು. ಅಲ್ಲದೆ ಪ್ರಯಾಣ ಮಾಡುವಾಗ ವಾಂತಿಯ ಮತ್ತು ಗ್ಯಾಸ್‌ ತೊಂದರೆಯಿರುವವರಿಗೆ ಇದು ಸಹಕಾರಿ.ನೆಲ್ಲಿಕಾಯಿಯನ್ನು ಆಹಾರ ಪದಾರ್ಥವಾಗಿಯೂ ಬಳಸಲಾಗುತ್ತದೆ.

ಬೇಸಗೆಯ ವೇಳೆ ನೆಲ್ಲಿಕಾಯಿ ತಂಬುಳಿ ಮಾಡಿ ಸೇವಿಸುವುದರಿಂದ ದೇಹ ತಂಪಾಗುತ್ತದೆ. ಜ್ಯೂಸ್‌ ಮಾಡಿ ಕುಡಿಯುವುದರಿಂದ ಕಣ್ಣು ಉರಿ ಕಡಿಮೆಯಾಗುವುದಲ್ಲದೆ ತಂಪಿನ ಅನುಭವ ನೀಡುತ್ತದೆ. ಹೀಗೆ ವಿವಿಧ ರೀತಿಯಲ್ಲಿ ಆರೋಗ್ಯವರ್ಧಕವಾಗಿ ನೆಲ್ಲಿಕಾಯಿಯನ್ನು ಖಾರದ ಜತೆಗೆ ಸೇವಿಸದೆ ಹಾಗೆಯೇ ಅಥವಾ ಉಪ್ಪಿನ ಜತೆ ಸೇವಿಸುವುದರಿಂದ ರುಚಿಯ ಜತೆಗೆ ಆರೋಗ್ಯಕ್ಕೂ ಒಳ್ಳೆಯದು. ಹೀಗಾಗಿ ನಿತ್ಯದ ಆಹಾರಗಳಲ್ಲಿ ನೆಲ್ಲಿಕಾಯಿಯ ಬಳಕೆಯೂ ಇದ್ದರೆ ಒಳಿತು.ನೆಲ್ಲಿಯಿಂದ ಉಲ್ಲಾಸಆಯುರ್ವೇದ ಔಷಧಗಳಲ್ಲಿ ನೆಲ್ಲಿಕಾಯಿಯನ್ನು ಹೇರಳವಾಗಿ ಬಳಸುತ್ತಾರೆ.

ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಒಂದು ಚಮಚದಷ್ಟು ನೆಲ್ಲಿಕಾಯಿ ರಸವನ್ನು ಸೇವಿಸುವುದರಿಂದ ಅಜೀರ್ಣತೆ ನಿವಾರಣೆಯಾಗುವುದಲ್ಲದೆ ವಿಶಿಷ್ಟ ಉಲ್ಲಾಸ ನಮ್ಮದಾಗುತ್ತದೆ. ರಾತ್ರಿ ಮಲಗುವಾಗ ಸೇವಿಸುವುದರಿಂದ ಚೆನ್ನಾಗಿ ನಿದ್ರೆ ಬರುವುದಲ್ಲದೆ ತಿಂದ ಆಹಾರ ಚೆನ್ನಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ.

-ಪ್ರೀತಿ ಭಟ್‌ ಗುಣವಂತೆ

ಟಾಪ್ ನ್ಯೂಸ್

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.