ವಿಶ್ರಾಂತಿಯಿಂದ ಅರ್ಧ ಕಾಯಿಲೆ ವಾಸಿ
Team Udayavani, Nov 12, 2019, 5:50 AM IST
ಬದಲಾಗುವ ಹವಾಮಾನ ಮತ್ತು ನಗರಗಳಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಕಾಯಿಲೆಗಳ ಬಾಧೆಯೂ ಅಧಿಕ. ಅದರಲ್ಲೂ ಇತ್ತೀಚೆಗಿನ ಹವಾಮಾನವಂತೂ ಕಾಯಿಲೆಗಳಿಗೆ ಹೇಳಿ ಮಾಡಿಸಿದಂತಿದೆ. ಮೋಡ ಕವಿದ ವಾತಾವರಣ, ತೀವ್ರ ಬಿಸಿ, ವಿಪರೀತ ಸೆಕೆ, ಅಲ್ಲಲ್ಲಿ ಕಾಣಿಸಿಕೊಳ್ಳುವ ಹನಿ ಮಳೆ ಮುಂತಾದವು ರೋಗ ಕಾಣಿಸಿಕೊಳ್ಳಲು ಕಾರಣ. ಜ್ವರ, ಮೈ-ಕೈ, ತಲೆ ನೋವು, ನೆಗಡಿ ಸದ್ಯ ಸಾಮಾನ್ಯವಾಗಿ ಎಲ್ಲರಿಗೂ ಬಾಧಿಸಬಲ್ಲ ಆರೋಗ್ಯ ಸಮಸ್ಯೆ. ಈ ರೀತಿಯ ತತ್‌ಕ್ಷಣದ ಹವಾಮಾನ ಬದಲಾವಣೆಯೂ ನಮ್ಮ ದೇಹದ ಮೇಲೆಯೂ ಕೂಡ ಪ್ರತಿಕೂಲ ಪರಿಣಾಮ ಬಿರುತ್ತದೆ. ಇದರಿಂದ ನಾವು ದೇಹವನ್ನು ಕಾಪಾಡಿಕೊಳ್ಳುವುದು ಅಗತ್ಯ. ಅದಕ್ಕಾಗಿ ವೈದ್ಯರ ಸಲಹೆಗಳನ್ನು ಅನುಸರಿಸಬೇಕಾಗುತ್ತದೆ. ಅಲ್ಲದೇ ವೈಯಕ್ತಿಕವಾಗಿ ಕೂಡ ನಾವು ಹಲವಾರು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.
ಹವಾಮಾನ ಬದಲಾವಣೆಯಿಂದ ನಮ್ಮ ದೇಹದಲ್ಲಿ ಆರೋಗ್ಯದ ಸಮಸ್ಯೆ ಕಂಡುಬಂದರೆ ನಾವು ಏನು ಮಾಡಬೇಕು. ನಾವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗೆಗಿನ ಮಾಹಿತಿ ಇಲ್ಲಿದೆ.
ವಿಶ್ರಾಂತಿ ಅಗತ್ಯ
ಚಳಿಯಿಂದ ನಡುಗಲು ಆರಂಭ ವಾದಾಗ ಯಾವುದೋ ಕಾಯಿಲೆಯ ಲಕ್ಷಣ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ. ತಕ್ಷಣ ಔಷಧ ತೆಗೆದುಕೊಳ್ಳಲು ಮುಂದಾಗಿತ್ತೀರಿ. ಆದರೆ ಇದು ತಪ್ಪು ಎನ್ನುತ್ತದೆ ಅಧ್ಯಯನ. ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಮೊದಲು ವಿಶ್ರಾಂತಿ ಪಡೆದುಕೊಳ್ಳಬೇಕು ಎಂಬುದು ತಜ್ಞರ ಅಭಿಮತ. ಇದರಿಂದ ನಿಮ್ಮ ದೇಹದಲ್ಲಿ ಆಯಾಸ ಕಡಿಮೆಯಾಗುತ್ತದೆ. ಒಂದು ರೀತಿಯಲ್ಲಿ ಮಾನಸಿಕವಾಗಿಯೂ ಕಾಯಿಲೆಯನ್ನು ಎದುರಿಸಲು ನೀವು ಸಿದ್ಧರಾಗುತ್ತೀರಿ. ಚೆನ್ನಾಗಿ ನಿದ್ರೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಕಂಡು ಬರುತ್ತದೆ. ಬಳಲಿಕೆ, ಆಯಾಸವು ಇಲ್ಲದಂತಾಗುತ್ತದೆ.
ಬಿಸಿ ನೀರು ಸೇವಿಸಿ
ಹವಾಮಾನ ವೈಪರೀತ್ಯದಿಂದಾಗಿ ನಮಗೆ ಜ್ವರ ಬಂದರೆ ನಾವು ಮುನ್ನೆಚ್ಚರಿಕೆ ಕ್ರಮವಾಗಿ ಕಾಯಿ, ಆರಿಸಿದ ಬಿಸಿ ನೀರನ್ನು ಸೇವಿಸಬೇಕು. ಇದರಿಂದಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ವೈದ್ಯರ ಸಲಹೆ ಅಗತ್ಯ
ವೈರಲ್ ಫೀವರ್ ಬಂದಾಗ ಮೊದಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದು ಕೊಂಡ ಅನಂತರ ಅಗತ್ಯವಾಗಿ ವೈದ್ಯರ ಸಲಹೆ ಗಳನ್ನು ತೆಗೆದುಕೊಳ್ಳಬೇಕು. ಇದರಿಂದ ಮುಂದೆ ಬರುವ ಎಲ್ಲ ಗೊಂದಲಗಳಿಗೆ ಪರಿಹಾರ ಕಂಡು ಕೊಂಡಂತಾಗುತ್ತದೆ.
ಮೃದು ಆಹಾರ ಸೇವಿಸಿ
ಜ್ವರ, ಶೀತ ಇಂತಹ ವೈರಲ್ ಫಿವರ್ ಬಂದಾಗ ನಾವು ಹೆಚ್ಚಾಗಿ ಗಟ್ಟಿ ಆಹಾರ ಪದಾರ್ಥ ಸೇವನೆ ಮಾಡುವುದಕ್ಕಿಂತ ಮೃದು ಆಹಾರವನ್ನು ಸೇವಿಸಬೇಕು. ಈ ಸಮಯದಲ್ಲಿ ದೇಹವೂ ಗಟ್ಟಿ ಪದಾರ್ಥವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇರುವುದಿಲ್ಲ ಎಂಬುದು ವೈದ್ಯರ ಅಭಿಪ್ರಾಯ. ಅದಕ್ಕಾಗಿ ಮೃದು ಆಹಾರ ಸೇವನೆ ಒಳೆÉಯದು ಎಂಬುದು ಅವರ ಸಲಹೆ.
- ರಮೇಶ್ ಬಳ್ಳಮೂಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.