ಕಾಮಕಸ್ತೂರಿಯಲ್ಲಿದೆ ಆರೋಗ್ಯದ ಗುಟ್ಟು
Team Udayavani, Oct 22, 2019, 4:23 AM IST
ಹಳ್ಳಿಮನೆಗಳಲ್ಲಿ ಮನೆ ಮದ್ದಾಗಿ ಕಾಮ ಕಸ್ತೂರಿಯನ್ನು ಸಾಮಾನ್ಯವಾಗಿ ಉಪಯೋಗಿಸುತ್ತಾರೆ. ಆದರೆ ಅನೇಕ ಮಂದಿಗೆ ಇದರಲ್ಲಿರುವ ಆರೋಗ್ಯಕರ ಅಂಶಗಳು ತಿಳಿದಿಲ್ಲ. ಹೇರಳವಾದ ಪ್ರೋಟಿನ್, ನಾರಿನಾಂಶ ಮತ್ತು ಕಬ್ಬಿಣಾನಾಂಶಗಳನ್ನು ಹೊಂದಿದೆ. ಇದನ್ನು ಪುರಾತನ ಆಯುರ್ವೇದ ಮತ್ತು ಪ್ರಾಚೀನ ಚೀನೀ ಔಷಧಗಳಲ್ಲಿಯೂ ಬಳಸಲಾಗುತ್ತಿದೆ.
1 ಬಾಯಿ ಹುಣ್ಣು ನಿವಾರಣೆ:
ಉಷ್ಣತೆಯಿಂದ ಬಾಯಿ ಹುಣ್ಣು ಉಂಟಾಗುವುದು ಸಾಮಾನ್ಯ. ಕಾಮ ಕಸ್ತೂರಿಯನ್ನು ನೀರಿನಲ್ಲಿ ನೆನೆ ಹಾಕಿ ಪ್ರತಿನಿತ್ಯ ಸೇವಿಸಿದರೆ ಬಾಯಿಹುಣ್ಣು ನಿವಾರಿಸಲು ಸಾಧ್ಯ. ಇದರ ಸೇವನೆಯಿಂದ ದೇಹದ ಉಷ್ಣತೆ ಕಡಿಮೆಮಾಡುತ್ತದೆ.
2 ಜೀರ್ಣಕ್ರಿಯೆಗೆ ಸಹಕಾರಿ:
ಕಾಮ ಕಸ್ತೂರಿಯಲ್ಲಿರುವ ನಾರಿನಾಂಶ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಉದರ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಜತೆಗೆ ಮಲಬದ್ಧತೆ ಮತ್ತು ಭೇದಿ ನಿವಾರಿಸಲು ಸಹಾಯಕವಾಗಿದೆ.
3 ಉರಿಯೂತ ಕಡಿಮೆ:
ಕಾಮಕಸ್ತೂರಿ ಬೀಜದ ಸೇವನೆ ಉರಿಯೂತಕ್ಕೆ ಸಂಬಂಧಿಸಿರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
4 ರೋಗ ನಿರೋಧಕ ಶಕ್ತಿ:
ಕಾಮ ಕಸ್ತೂರಿ ಬೀಜ ಸೇವನೆಯಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಜೀರ್ಣಕ್ರಿಯೆ, ತೂಕ ನಷ್ಟ, ಕೆಮ್ಮು ಮತ್ತು ಶೀತವನ್ನು ಗುಣಪಡಿಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
5 ಕೊಲೆಸ್ಟ್ರಾಲ್ ನಿವಾರಕ:
ಅಧಿಕ ಕೊಲೆಸ್ಟ್ರಾಲ್ ಮಟ್ಟ ಮತ್ತು ಅಧಿಕ ರಕ್ತದೊತ್ತಡವು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಪ್ರತಿದಿನ ಕಾಮ ಕಸ್ತೂರಿ ಬೀಜಗಳನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು.
6 ಶುದ್ದಿಕಾರಕ:
ಶರೀರದಲ್ಲಿರುವ ಮಲೀನ ಪದಾರ್ಥಗಳನ್ನು ಹೊರಹಾಕುವ ಸಾಮರ್ಥ್ಯ ಹಾಗೂ ರಕ್ತ ಶುದ್ಧ ಮಾಡುವ ಶಕ್ತಿ ಕಾಮ ಕಸ್ತೂರಿಗಿದೆ.
7 ಒತ್ತಡ ನಿವಾರಣೆ:
ಒತ್ತಡ ನಿವಾರಕವಾಗಿಯೂ ಕಾಮ ಕಸ್ತೂರಿ ಸಹಕಾರಿ. ಮಾನಸಿಕ ಒತ್ತಡ ಮತ್ತು ಖನ್ನತೆಯಿಂದ ಬಳಲುವವರ ಚಿಕಿತ್ಸೆಗಾಗಿ ಕಾಮಕಸ್ತೂರಿ ಬೀಜಗಳನ್ನು ಬಳಸಲಾಗುತ್ತದೆ.
8 ಶ್ವಾಸಕೋಶದ ಸಮಸ್ಯೆಪರಿಹಾರ:
ಕಾಮ ಕಸ್ತೂರಿ ಬೀಜದೊಂದಿಗೆ ಶುಂಠಿ ರಸ ಸೇವಿಸಿ ಕುಡಿದರೆ ಶಾಸ್ವಕೋಶದ ಸಮಸ್ಯೆ ನಿವಾರಣೆಯಾಗುತ್ತದೆ. ಕಾಮ ಕಸ್ತೂರಿ ಬೀಜಗಳ ಪಾನೀಯವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದಲ್ಲಿ ಶರೀರದ ಉಷ್ಣತೆ ಕಡಿಮೆಯಾಗುತ್ತದೆ. ಸಕ್ಕರೆ ಬೆರೆಸದೆ ಕುಡಿದರೆ, ಸಕ್ಕರೆ ಕಾಯಿಲೆ ಹತೋಟಿಗೆ ಬರುತ್ತದೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಕಡಿಮೆಯಾಗುತ್ತದೆ. ಮಹಿಳೆಯರಿಗೆ ಬೇಕಾದ ಫೋಲೇಟ…, ನಿಯಾಸಿನ್, ವಿಟಮಿನ್- ಇ ಪೋಷಕಾಂಶಗಳು ಇದರಲ್ಲಿವೆ.
– ಧನ್ಯಶ್ರೀ ಬೋಳಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.