ಮನೆಯಲ್ಲೇ ಇದೆ ಆರೋಗ್ಯದ ಗುಟ್ಟು
Team Udayavani, Oct 1, 2019, 5:10 AM IST
ನಮ್ಮ ದಿನನಿತ್ಯದ ಆಹಾರದಲ್ಲಿ ಮಸಾಲ ಪದಾರ್ಥಗಳನ್ನು ಹೆಚ್ಚಾಗಿ ಬಳಸುತ್ತೇವೆ. ಅವು ತನ್ನದೇ ಆದ ಸುವಾಸನೆಯನ್ನು ಹೊಂದಿವೆ. ಇವು ಆಹಾರವನ್ನು ರುಚಿಯಾಗಿಸುವುದು ಮಾತ್ರವಲ್ಲದೆ ಆರೋಗ್ಯವನ್ನು ಸುಧಾರಿಸುವಲ್ಲೂ ಮುಖ್ಯ ಪಾತ್ರವಹಿಸುತ್ತವೆ ಎಂಬುದು ಹಲವು ಸಂಶೋಧನೆಗಳಿಂದ ಈಗಾಗಲೇ ಸಾಬೀತಾಗಿದೆ. ಅಡುಗೆ ಮನೆಯಲ್ಲೇ ದೊರೆಯುವ ಈ ಮಸಾಲೆ ಪದಾರ್ಥಗಳಿಂದ ಆರೋಗ್ಯವನ್ನು ಕಾಪಡಿಕೊಳ್ಳಬಹುದು. ಯಾವ ಮಸಾಲ ಪದಾರ್ಥಗಳಲ್ಲಿ ಯಾವ ಪ್ರಯೋಜನವಿದೆ ಎಂಬ ಮಾಹಿತಿ ಇಲ್ಲಿದೆ.
1 ಸೋಂಪು
ಪ್ರತಿ ದಿನ ಮನೆಯಲ್ಲಿ ಬಳಸುವ ಮಸಾಲ ಪದಾರ್ಥಗಳಲ್ಲಿ ಒಂದು ಸೋಂಪು. ಇದು ಆಹಾರದಲ್ಲಿ ಪರಿಮಳವನ್ನು ಹೆಚ್ಚಿಸಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮಾತ್ರವಲ್ಲದೇ ಇದು ಉರಿಯೂತವನ್ನು ಕಡಿಮೆ ಮಾಡಿ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ.
2 ಕರಿಮೆಣಸು
ಮನೆಯಲ್ಲಿ ಹೆಚ್ಚಾಗಿ ಬಳಸುವ ಕರಿಮೆಣಸು ಕೂಡ ಆರೋಗ್ಯ ವೃದ್ಧಿಗೆ ಸಹಾಯ ಮಾಡುತ್ತದೆ. ಒಂದು ಚಿಟಿಕೆ ಕರಿಮೆಣಸು ನಾವು ಸೇವಿಸುವ ಆಹಾರದಲ್ಲಿ ಇದ್ದಲ್ಲಿ ಶೀತ, ಕೆಮ್ಮಿನಿಂದ ದೂರವಿರಬಹುದು. ಅಷ್ಟೇ ಅಲ್ಲ. ಕರಿಮೆಣಸು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಚರ್ಮದ ಅನೇಕ ಸಮಸ್ಯೆಗಳಿಗೂ ಇದು ರಾಮಬಾಣ
3 ಕಪ್ಪು ಜೀರಿಗೆ
ಕಪ್ಪು ಜಿರಿಗೆಯ ಎಣ್ಣೆ ಆಸ್ತಮಾ, ಅಲರ್ಜಿ ಮತ್ತು ಇನ್ನಿತರ ಉಸಿರಾಟದ ಸಮಸ್ಯೆಗಳನ್ನು ತಡೆಹಿಡಿಯುವಲ್ಲಿ ಮುಖ್ಯ ಪಾತ್ರ ವಹಿಸುವುದಲ್ಲದೆ ರೋಗ ನಿರೋಧಕವಾಗಿಯೂ ಕೆಲಸ ಮಾಡುತ್ತದೆ. ಇದರ ಬೀಜಗಳಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಹೆಚ್ಚಿದ್ದು, ಅಸ್ವಸ್ಥವಾಗುವುದನ್ನು ತಡೆಯಲು ಉಳಿದ ಮಸಾಲ ಪದಾರ್ಥಗಳಿಗಿಂತ ಉತ್ತಮ. ಜೀರಿಗೆ ಕೂಡ ಜೀರ್ಣಕ್ರಿಯೆಗೆ ಸಹಾಯ ಮಾಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
4 ಲವಂಗ
ಲವಂಗ ಸಾಮಾನ್ಯವಾಗಿ ಎಲ್ಲ ರೋಗಕ್ಕೂ ಮದ್ದಾಗಿದ್ದು, ನಂಜು ನಿರೋಧಕವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಉತ್ಕೃಷ್ಟವಾದ ರೋಗ ನಿರೋಧಕಗಳಿದ್ದು, ಖನಿಜಗಳು, ಕೊಬ್ಬಿನಾಮ್ಲಗಳು, ಫೈಬರ್, ಜೀವಸತ್ವಗಳನ್ನು ಹೊಂದಿದೆ. ಲವಂಗ ವಿಶೇಷವಾಗಿ ನೋವು ನಿರೋಧಕವಾಗಿ ಕೆಲಸ ಮಾಡುತ್ತದೆ. ಹಲ್ಲು ನೋವು, ಹೊಟ್ಟೆ ನೋವಿಗೆ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.
5 ದಾಲ್ಚಿನ್ನಿ
ಇದು ಎಲ್ಲರ ನೆಚ್ಚಿನ ಮಸಾಲವಾಗಿದ್ದು ದೇಹಕ್ಕೆ ಬರುವ ಕಾಯಿಲೆಗಳನ್ನು ತಡೆಯುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಊರಿಯೂತ ನಿವಾರಣೆಗೆ ಇದು ಸಹಕಾರಿ ಮತ್ತು ಹೊಟ್ಟೆ ಉಬ್ಬುವುದನ್ನು ಕೂಡ ಕಡಿಮೆ ಮಾಡುತ್ತದೆ.
- ಪ್ರೀತಿ ಭಟ್ ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.