ಉತ್ತಮ ಆಹಾರ ಸೇವನೆಯಿಂದ ಆರೋಗ್ಯವಂತ ಕೂದಲು
Team Udayavani, Nov 12, 2019, 5:53 AM IST
ಹುಡುಗಿಯರಿಗೆ ತಲೆಕೂದಲು ಸೌಂದರ್ಯದ ಸಂಕೇತ. ಕೆಲವರಿಗೆ ಉದ್ದನೆಯ ಕೂದಲು ಇನ್ನು ಕೆಲವರಿಗೆ ಸಣ್ಣ ಕೂದಲು, ಗುಂಗುರು ಕೂದಲು ಇಷ್ಟಪಡುತ್ತಾರೆ. ಕೂದಲನ್ನು ನಾಜೂಕಾಗಿ ಬೆಳೆಸಬೇಕು. ಇಂದಿನ ಹೆಚ್ಚಿನ ಜನರಿಗೆ ಕೂದಲು ಉದುರುವುದು, ತಲೆಹೊಟ್ಟು, ಹೊಳಪು ರಹಿತ ಕೂದಲು, ತೆಳ್ಳನೆಯ ಕೂದಲು ಹೀಗೆ ಪಟ್ಟಿ ಮಾಡಿದರೆ ಹಲವಾರು ಸಮಸ್ಯೆಗಳು ಸಿಗುತ್ತವೆ. ಉತ್ತಮ ಆಹಾರ ಸೇವನೆಯಿಂದ ಈ ಸಮಸ್ಯೆಯನ್ನು ನಿವಾರಿಸಬಹುದಾಗಿದೆ.
ಮೊಟ್ಟೆಗಳು
ಮೊಟ್ಟೆ ಸೇವನೆಯಿಂದ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ತಲೆಕೂದಲನ್ನು ದಪ್ಪವಾಗಿರಿಸಿ ಬಲಪಡಿಸುತ್ತದೆ. ಮೊಟ್ಟೆಯಲ್ಲಿನ ಪ್ರೋಟೀನ್ ಮತ್ತು ಬಯೋಟಿನ್ ಅಂಶ ಇರುವುದರಿಂದ ಇವೆರಡೂ ಕೂದಲನ್ನು ಆರೋಗ್ಯಕರ ವನ್ನಾಗಿಸುತ್ತದೆ. ಹೀಗಾಗಿ ನಿಮ್ಮ ಆಹಾರ ಸೇವನೆಯಲ್ಲಿ ಮೊಟ್ಟೆಗಳನ್ನು ಹೆಚ್ಚಾಗಿ ಸೇವಿಸಿದರೆ, ನಿಮ್ಮ ಆರೋಗ್ಯವಂತ ಕೂದಲಿಗೆ ಸಹಾಯವಾಗುತ್ತದೆ.
ಮಾಂಸ
ಮಾಂಸಾಹಾರ ಕೂದಲಿಗೆ ಸಂಪೂರ್ಣವಾಗಿ ಪ್ರೊಟೀನ್‌ಅಂಶವನ್ನು ನೀಡುತ್ತದೆ. ವಿಶೇಷವಾಗಿ ಕಬ್ಬಿಣದ ಸಮೃದ್ಧ ಮೂಲವಾಗಿದೆ. ವಾರದಲ್ಲಿ 2-3 ಬಾರಿ ನಿಮ್ಮ ಆಹಾರದಲ್ಲಿ ಮಾಂಸಾಹಾರವನ್ನು ಬಳಸಿಕೊಂಡರೆ ಆರೋಗ್ಯವಂತ ಕೂದಲು ನಿಮ್ಮದಾಗುತ್ತದೆ.
ತಾಮ್ರದ ಲೋಟದಲ್ಲಿ ನೀರು ಕುಡಿಯಿರಿ
ಲೋಹಗಳು ಮತ್ತು ಖನಿಜಗಳು ಯಾವಾಗಲೂ ದೇಹದ ಮೇಲೆ ಪರಿಣಾಮ ಬೀರುತ್ತವೆ. ಅದಕ್ಕಾಗಿಯೇ ಹಳೆಯ ಕಾಲದಲ್ಲಿ ಜನರು ಚಿನ್ನ , ಬೆಳ್ಳಿ, ತಾಮ್ರ ಮತ್ತು ಹಿತ್ತಾಳೆಯ ಪಾತ್ರೆಗಳಲ್ಲಿ ಆಹಾರ ಸೇವಿಸುತ್ತಿದ್ದರು. ರಾತ್ರಿಯಿಡೀ ತಾಮ್ರದ ಗಾಜಿನಲ್ಲಿ ನೀರು ಇಟ್ಟುಕೊಂಡು ಬೆಳಗ್ಗೆ ಮೊದಲು ಅದನ್ನು ಸೇವಿಸುವುದರಿಂದ ಕೂದಲಿನ ಬೆಳವಣಿಗೆ ಮತ್ತು ದೇಹದ ಮೇಲೆ ಪ್ರಯೋಜನ ಬೀಳುತ್ತದೆ.
- ಪೂರ್ಣಿಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.