ಪಾದದ ಬಿರುಕಿಗೆ ಮುಕ್ತಿ
Team Udayavani, Dec 10, 2019, 4:32 AM IST
ಚಳಿಗಾಲದಲ್ಲಿ ಕಾಲಿನ ಹಿಮ್ಮಡಿಯಲ್ಲಿ ಬಿರುಕು ಕಾಣಿಸಿಕೊಳ್ಳುವುದು ಸಹಜ. ಕಾಲಿನ ಸೌಂದರ್ಯಕ್ಕೆ ಇದು ಕಪ್ಪು ಚುಕ್ಕೆ. ಜತೆಗೆ ಇದು ನೋವೂ ನೀಡುತ್ತದೆ. ಕೆಲವೊಂದು ಚರ್ಮಗಳಿಗೆ ಸಾಮಾನ್ಯವಾಗಿ ಈ ಸಮಸ್ಯೆ ಹುಟ್ಟಿನಿಂದಲೇ ಇರುತ್ತದೆ. ಚಳಿಗಾಲದಲ್ಲಿ ಬರುವ ಸಮಸ್ಯೆಗೆ ಮನೆಯಲ್ಲಿಯೇ ಸುಲಭ ಪರಿಹಾರ ಕಂಡುಕೊಳ್ಳಬಹುದು.
ಕಾಲಿನ ಹಿಮ್ಮಡಿಯಲ್ಲಿ ಬಿರುಕಿಗೆ ಹಲವು ಕಾರಣಗಳಿರುತ್ತದೆ. ಸಾಮಾನ್ಯವಾಗಿ ಕಾಲಿನ ಬಿರುಕು ಚಳಿಗಾಲದಲ್ಲಿ ಹೆಚ್ಚಾಗುತ್ತದೆ. ಇದರಿಂದ ಕಾಳಿನ ಸಿಪ್ಪೆ ಏಳುವುದರಿಂದ ಕಾಲಿನ ಸೌಂದರ್ಯವೂ ಹಾಳಾಗುತ್ತದೆ.
1 ವ್ಯಾಸ್‌ಲಿನ್ ಮತ್ತು ಲಿಂಬೆ
ವ್ಯಾಸ್‌ಲಿನ್ ಮತ್ತು ಲಿಂಬೆಯನ್ನು ಕಾಲಿಗೆ ಹಚ್ಚುವುದರಿಂದ ಕಾಲಿನ ಬಿರುಕು ಕಡಿಮೆಯಾಗುತ್ತದೆ. ಪ್ರತಿದಿನ ಕಾಲಿಗೆ ವ್ಯಾಸ್‌ಲಿನ್ ಹಚ್ಚುವುದರಿಂದ ಕಾಲಿನ ಬಿರುಕು ಕಡಿಮೆಯಾಗುತ್ತದೆ.
2 ಜೇನು ತುಪ್ಪ
ಜೇನು ತುಪ್ಪವನ್ನು ನಿಯಮಿತವಾಗಿ ಹಚ್ಚುವುದರಿಂದ ಪಾದದ ಬಿರುಕು ನಿಧಾನವಾಗಿ ಕಡಿಮೆಯಾಗುತ್ತದೆ.
3 ವೈಟ್ ವಿನಗರ್ ಮತ್ತು ಲೈಸನೆರ್
ಬಿಸಿ ನೀರಿಗೆ ವಿನಗರ್, ಲೈಸನೆರ್ ಹಾಕಿ ಕಾಲನ್ನು ಅದರಲ್ಲಿ ಸ್ವಲ್ಪ ಮುಳುಗಿಸಿಟ್ಟರೆ ಬಿರುಕು ಇರುವ ಕಾಲು ಸ್ವಚ್ಛವಾಗುತ್ತದೆ.
4 ವೆಜಿಟೇಬಲ್ ಆಯಿಲ್
ಕಾಲಿಗೆ ವೆಜಿಟೇಬಲ್ ಆಯಿಲ್ ಹಚ್ಚಿ ಒಂದು ರಾತ್ರಿಯಿಡಿ ಹಾಗೆ ಬಿಟ್ಟರೆ ನಿಧಾನಕ್ಕೆ ಕಾಲಿನ ಬಿರುಕು ಕಡಿಮೆಯಾಗುತ್ತದೆ.
5 ಓಟ್‌ಮೀಲ್ ಮತ್ತು ಆಲಿವ್ ಎಣ್ಣೆ
ಓಟ್‌ಮೀಲ್ ಮತ್ತು ಆಲಿವ್ ಎಣ್ಣೆಗೆ ಕಾಲಿನ ಬಿರುಕು ಕಡಿಮೆಗೊಳಿಸುವ ಶಕ್ತಿಯಿದೆ. ಓಟ್ಸ್ ಅನ್ನು ಪೇಸ್ಟ್ ಮಾದರಿಯಲ್ಲಿ ಮಾಡಿ ಕಾಲಿಗೆ ಹಚ್ಚಿದರೆ ಬಿರುಕು ಕಡಿಮೆಯಾಗುತ್ತದೆ. ಆಲಿವ್ ಆಯಿಲ್ ಅನ್ನು ಹಚ್ಚಿ 30 ನಿಮಿಷಗಳ ಕಾಲ ಹಾಗೇ ಬಿಡಬೇಕು.
6 ಎಳ್ಳೆಣ್ಣೆ
ಎಳ್ಳೆಣ್ಣೆಯನ್ನು ಹಚ್ಚಿದರೆ ಬಿರುಕು ಕಡಿಮೆಯಾಗುತ್ತದೆ. ರಾತ್ರಿ ಮಲಗುವಾಗ ಒಡೆದ ಕಾಲಿನ ಭಾಗಕ್ಕೆ ಸ್ವಲ್ಪ ಎಳ್ಳೆಣ್ಣೆ ಹಚ್ಚಬೇಕು. ಕ್ರಮೇಣ ಹಿಮ್ಮಡಿ ಸುಂದರವಾಗಿ ಕಾಣುತ್ತದೆ.
- ರಂಜಿನಿ ಮಿತ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.