ಬಾಯಿಯ ವಾಸನೆ ನಿವಾರಣೆಗೆ ಮನೆಮದ್ದು
Team Udayavani, Jan 7, 2020, 5:42 AM IST
ಬಾಯಿಯ ದುರ್ಗಂಧ ಹಲವರನ್ನು ಕಾಡುವ ಬಹುದೊಡ್ಡ ಸಮಸ್ಯೆ ಆಗಿದೆ.ಇದಕ್ಕೆ ಮುಖ್ಯ ಕಾರಣ ಆಹಾರದಲ್ಲಿ ವ್ಯತ್ಯಾಸ, ಅಲರ್ಜಿ ಸಮಸ್ಯೆ, ಇತರ ಆರೋಗ್ಯ ಸಮಸ್ಯೆಗಳು. ಆದರೆ ಇದು ಶಾಶ್ವತ ಸಮಸ್ಯೆಯೇನಲ್ಲ.
ಸರಳವಾದ ಮನೆಮದ್ದಿನ ಮೂಲಕ ಇದನ್ನು ಪರಿಹರಿಸ ಬಹುದು. ಬಾಯಿ ದುರ್ಗಂಧಕ್ಕೆ ಮುಖ್ಯ ಕಾರಣ ಆಹಾರ ಸೇವನೆಯಲ್ಲಾಗುವ ಬದಲಾವಣೆ. ಸರಿಯಾದ ಸಮಯಕ್ಕೆ ಆಹಾರ ಸೇವಿಸದಿರುವುದು ಹಾಗೂ ಅನಿಯಮಿತ ಆಹಾರ ಸೇವನೆಯು ಕೂಡ ಇದಕ್ಕೆ ಕಾರಣವಾಗುತ್ತದೆ. ಅಲ್ಲದೇ ಬಾಯಿ ಒಣಗುವಿಕೆ, ನಿರ್ಜಲೀಕರಣ, ಮಾದಕ ವಸ್ತುಗಳ ಸೇವನೆ ಹಾಗೂ ಕೆಲವು ಆಹಾರಗಳು ಬಾಯಿ ವಾಸನೆಯನ್ನುಂಟು ಮಾಡುತ್ತವೆ. ಇದಕ್ಕೆ ಪರಿಹಾರ ಮನೆಯಲ್ಲೇ ಇದೆ.
ಬಾಯಿ ಒಣಗುವುದನ್ನು ತಪ್ಪಿಸಿ ಧಾರಾಳವಾಗಿ ನೀರು ಕುಡಿಯಿರಿ. ಯಾವುದಾದರೂ ಸಿಹಿ ಪದಾರ್ಥ ಸೇವಿಸಿ ಇದು ಬಾಯಿಯ ದುರ್ನಾತವನ್ನು ನಿವಾರಿಸುತ್ತದೆ.
ಆಹಾರ ಬದಲಾಯಿಸಿ
ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮೊದಲಾದ ಮಸಾಲೆ ಪದಾರ್ಥ, ಸಕ್ಕರೆಯುಕ್ತ ಆಹಾರ ಪದಾರ್ಥಗಳ ಸೇವನೆಯನ್ನು ಆದಷ್ಟು ಕಡಿಮೆಗೊಳಿಸಿ. ಆ್ಯಪಲ್, ಮೊಸರಿನಂತಹ ಪದಾರ್ಥಗಳನ್ನು ಬೆಳಗ್ಗಿನ ಆಹಾರದೊಂದಿಗೆ ಸೇವಿಸುವುದರಿಂದ ಬಾಯಿ ವಾಸ ನೆಯನ್ನು ತಡೆಗಟ್ಟಬಹುದು.
ಹಲ್ಲಿನ ಜತೆ ನಾಲಗೆಯನ್ನು ಪ್ರತಿನಿತ್ಯ ಶುಚಿಗೊಳಿಸಬೇಕು. ಇನ್ನು ಮೊಸರಿನಲ್ಲಿ ಲ್ಯಾಕ್ಟೋಬೇಸಿಲ್ಲಸ್ ಎಂಬ ಅಂಶವಿದ್ದು ಇದು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ. 8 ವಾರಗ ಳವರೆಗೆ ನಿರಂತರವಾಗಿ ಮೊಸರನ್ನು ಸೇವಿಸುವುದರಿಂದ ಬಾಯಿ ಯ ದುರ್ಗಂಧವನ್ನು ತಡೆಗಟ್ಟಬಹುದು. ಇನ್ನು ಬೇಕಿಂಗ್ ಸೋಡಾದಿಂದ ಬಾಯಿ ಮುಕ್ಕಳಿಸುವುದರಿಂದಲೂ ಸಮಸ್ಯೆ ಪರಿಹಾರ ಸಾಧ್ಯ. ಬಾಯಿ ವಾಸನೆ ತಡೆಗೆ ಗ್ರೀನ್ ಟೀ ಉತ್ತಮ ಪರಿಹಾರ.
-ಸುಶ್ಮಿತಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.