ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ
Team Udayavani, Mar 17, 2020, 4:46 AM IST
ಇತರರ ಮುಂದೆ ಸುಂದರವಾಗಿ ಕಾಣಬೇಕೆನ್ನುವುದು ಪ್ರತಿಯೊಬ್ಬರ ಹಂಬಲವಾಗಿರುತ್ತದೆ. ಹೀಗಿದ್ದಾಗಲೇ ಸಹಜ ಅಂದಕ್ಕಿಂತ ಮಾರುಕಟ್ಟೆಯ ಕೃತಕ ಅಂದಕ್ಕೆ ಮೊರೆಹೋಗುತ್ತೇವೆ. ಪರಿಣಾಮ ಅಲರ್ಜಿ, ಕಪ್ಪು ಕಲೆ, ಸೋರಿಯಾಸಿಸ್, ಕಜ್ಜಿ ತುರಿಕೆ ಹೀಗೆ ನಾನಾ ವಿಧದ ಚರ್ಮದ ಸಮಸ್ಯೆಯಿಂದ ಬಳಲುತ್ತಾರೆ. ಇಂತಹ ಸಮಸ್ಯೆ ಪರಿಹಾರಕ್ಕೆ ರಾಸಾಯನಿಕ ಅಂಶಗಳ ಮೊರೆ ಹೋಗದೇ ಮನೆಯಲ್ಲಿಯೇ ದೊರೆಯುವ ನೈಸರ್ಗಿಕ ವಿಧಾನದ ಕುರಿತು ಸರಳ ಟಿಪ್ಸ್ ಇಲ್ಲಿ ತಿಳಿಸಲಾಗಿದೆ.
ಅಲರ್ಜಿ
ಗಂಧವನ್ನು ತೇಯ್ದು, ಲಿಂಬೆ ರಸ ಮತ್ತು ಚಿಟಿಕೆ ಉಪ್ಪು ಬೇರೆಸಿದ ಪೇಸ್ಟ್ ಅನ್ನು ಅಲರ್ಜಿ ಇದ್ದಲ್ಲಿಗೆ ಹಾಕಿರಿ ಹೀಗೆ ವಾರಕ್ಕೆ 4 ರಿಂದ ಐದು ಬಾರಿ ಮಾಡಿದರೆ ಅಲರ್ಜಿ ತುರಿಕೆ ಕಡಿಮೆಯಾಗುತ್ತದೆ.
5 ಚಮಚ ಲಿಂಬೆ ರಸ, 3 ರಿಂದ 4 ಚಮಚ ತೆಂಗಿನ ಎಣ್ಣೆಗೆ ಬೆರೆಸಿ ಅದನ್ನು ಅಲರ್ಜಿ ಇದ್ದಲ್ಲಿಗೆ ಹಚ್ಚಿಕೊಂಡರೆ ಚರ್ಮದ ಕೆಂಪು ಕಲೆ ಬೀಳುವುದನ್ನು ತಡೆಗಟ್ಟಬಹುದು.
ಕ್ಯಾರೆಟ್, ಮುಳ್ಳು ಸೌತೆ ಕಾಯಿ, ಬಿಟ್ರೂಟ್‌ನ್ನು ಜ್ಯೂಸ್ ಮಾಡಿ ವಾರಕ್ಕೆ ಮೂರು ಬಾರಿ ಸೇವಿಸಿದರೆ ತುರಿಕೆ ಮತ್ತು ಅಲರ್ಜಿ ಕಲೆಯನ್ನು ನಿವಾರಿಸಬಹುದಾಗಿದೆ.
ಇವೆಲ್ಲದರೊಂದಿಗೆ ಅಲರ್ಜಿಗೆ ಕಾರಣವಾಗುವ ಆಹಾರ ಪದಾರ್ಥಗಳನ್ನು ಸೇವಿಸದಿರುವುದು ಪ್ರಾಥಮಿಕ ಹಂತದಲ್ಲಿಯೇ ಅಲರ್ಜಿ ಸಮಸ್ಯೆ ನಿವಾರಿಸಬಹುದಾಗಿದೆ.
ಕಪ್ಪು ಕಲೆ
ಕಪ್ಪು ಕಲೆ ಕೈ ಕಾಲು, ಮುಖ ಮತ್ತು ಕುತ್ತಿಗೆ ಭಾಗದಲ್ಲಿ ಹೆಚ್ಚಾಗಿ ಕಾಣಸಿಗುತ್ತಿದ್ದು ಇದರ ನಿವಾರಣೆಗೆ ಸಾಸಿವೆ ಅತ್ಯುತ್ತಮ ಮದ್ದು ಎನ್ನಬಹುದು. ಸಾಸಿವೆ ಎಣ್ಣೆಯಲ್ಲಿ ಎರುಸಿನ್ ಮತ್ತು ಲಿನೋವಿಕ್ ಆಮ್ಲವು ಲಭ್ಯವಿದ್ದು ಚರ್ಮದ ಪೋಷಣೆಗೆ ಇದನ್ನು ಬಳಸುತ್ತಾರೆ.
ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಕಾಲು, ಕೈ ಮತ್ತು ಮುಖಕ್ಕೆ ಮಸಾಜ್ ಮಾಡಬೇಕು ಬಳಿಕ ಉಗುರು ಬೆಚ್ಚನೆ ನೀರಿನಲ್ಲಿ ಸೋಪಿನಿಂದ ತೊಳೆಯಬೇಕು. ಈ ರೀತಿ ಮಾಡಿದರೆ ಚರ್ಮದ ಕಪ್ಪುಕಲೆ ನಿವಾರಣೆಯಾಗುವುದು.
ಕಿತ್ತಳೆ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿಕೊಳ್ಳಿ. ರೋಸ್ ವಾಟರ್‌ನೊಂದಿಗೆ ಬೆರೆಸಿ ಪೆಸ್ಟ್ ಮಾಡಿಕೊಂಡು ಕಲೆ ಕಂಡುಬಂದಲ್ಲಿ ಹಚ್ಚಿಕೊಳ್ಳಬೇಕು. ವಾರಕ್ಕೆ ನಾಲ್ಕು ಬಾರಿ ಹೀಗೆ ಮಾಡಿದರೆ ಕಲೆ ನಿವಾರಣೆಯಾಗುತ್ತದೆ.
ಹಾಲಿಗೆ ಚಿಟಿಕೆ ಅಡುಗೆ ಸೋಡ ಬೆರೆಸಿ ಪೇಸ್ಟ್ ಮಾಡಿ ಕಲೆ ಕಂಡು ಬಂದಲ್ಲಿಗೆ ಹಚ್ಚಿಕೊಂಡು ಉಗುರು ಬೆಚ್ಚನೆ ನೀರಿನಲ್ಲಿ ತೊಳೆಯಬೇಕು.
* ಅರ್ಧ ಈರುಳ್ಳಿಗೆ ಲಿಂಬೆ ರಸವನ್ನು ಬೆರೆಸಿ ಪೆಸ್ಟ್ ಮಾಡಿ ಮುಖ, ಕೈ ಮತ್ತು ಕಾಲಿಗೆ ಹಚ್ಚಿಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.