ಮನೆಯಲ್ಲಿ ತಯಾರಿಸಿ ಪಪ್ಪಾಯಿ ಮಾಸ್ಕ್
Team Udayavani, Feb 4, 2020, 4:43 AM IST
ಪಪ್ಪಾಯಿ ಸಾಮಾನ್ಯವಾಗಿ ಎಲ್ಲ ಸ್ಕಿನ್ ಟೋನ್‌ಗಳಿಗೆ ಸೂಕ್ತವಾಗಿದೆ. ಈ ಪಪ್ಪಾಯಿ ಹಣ್ಣು ನಿಮ್ಮ ಮುಖಕ್ಕೆ ಕಾಂತಿಯನ್ನು ನೀಡುವುದರ ಜತೆಗೆ ವಿವಿಧ ರೀತಿಯ ಆರೋಗ್ಯ ಗುಣವನ್ನು ಹೊಂದಿದೆ.
ಒಣ ಚರ್ಮಕ್ಕೆ ಪಪ್ಪಾಯಿ ಮತ್ತು ಹನಿ ಫೇಸ್ ಮಾಸ್ಕ್
ಜೇನುತುಪ್ಪವು ಹೈಡ್ರೇಟಿಂಗ್ ಗುಣಗಳನ್ನು ಹೊಂದಿದೆ. ಇದು ಚರ್ಮವನ್ನು ಮೃದುವಾಗಿಸುತ್ತದೆ. 2/1 ಕಪ್ ಮಾಗಿದ ಪಪ್ಪಾಯಿ, ಹಾಲು 2 ಚಮಚ 1 ಚಮಚ ಜೇನುತುಪ್ಪ ಇದಕ್ಕೆ ಪಪ್ಪಾಯಿವನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಸ್ಮಾಶ್ ಮಾಡಿ, ಪೇಸ್ಟ್ ಮಿಶ್ರಣ ಮಾಡಿ, ಇದನ್ನು ಮುಖಕ್ಕೆ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. ವಾರದಲ್ಲಿ ಎರಡು ಬಾರಿ ಈ ರೀತಿ ಮಾಡುವುದರಿಂದ ತ್ವಚೆಯು ಸುಂದರವಾಗಿದೆ.
ಮೊಡವೆಗಳ ನಿವಾರಣೆ
1/2 ಕಪ್ ಮಾಗಿದ ಪಪ್ಪಾಯಿ, 1 ಚಮಚ, ಜೇನು ತುಪ್ಪ, 1 ಚಮಚ ನಿಂಬೆ ರಸ, 1 ಚಮಚ ಶ್ರೀಗಂಧದ ಪುಡಿ ತೆಗೆದುಕೊಳ್ಳಿ. ಈಗ ಕತ್ತರಿಸಿದ ಪಪ್ಪಾಯಿ ತುಂಡುಗಳಿಗೆ ಇದನ್ನು ಮಿಶ್ರಣ ಮಾಡಿ, ಚೆನ್ನಾಗಿ ಕಲಸಿ, ಈ ಪೇಸ್ ಪ್ಯಾಕ್‌ನ್ನು ಮುಖಕ್ಕೆ ಹಾಕಿ ಸುಮಾರು 10-15 ನಿಮಿಷಗಳ ಕಾಲ ಒಣಗಲು ಬಿಡಿ. ಅನಂತರ ತಣ್ಣೀರಿನಿಂದ ತೊಳೆಯಿರಿ. ಪ್ರತಿ 3- 4 ದಿನಗಳಿಗೊಮ್ಮೆ ಈ ರೀತಿ ಮಾಡಿದರೆ ಮುಖದ ಮೊಡವೆ ನಿವಾರಣೆಯಾಗುತ್ತದೆ.
ಚರ್ಮದ ರಂಧ್ರಗಳಿಗೆ ಸಹಾಯ
ಪಪ್ಪಾಯಿ ತುಂಡು, ಮೊಟ್ಟೆಯ ಬಿಳಿ ಭಾಗವನ್ನು ಸ್ಮಾಶ್ ಮಾಡಿ ಇದನ್ನು ಕುತ್ತಿಗೆ ಹಾಗೂ ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು 15 ನಿಮಿಷಗಳ ಕಾಲ ಹಾಗೆ ಬಿಡಿ. ಅನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆಯಿರಿ ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ.
ಪಪ್ಪಾಯಿ ಹಣ್ಣು, 2 ಚಮಚ ಮುಲ್ತಾನಿ ಮಿಟ್ಟಿ ಮಿಶ್ರಣಕ್ಕೆ ನೀರು ಅಥವಾ ರೋಸ್ ವಾಟರ್ ಹಾಕಿ ಪಪ್ಪಾಯಿಯನ್ನು ಸ್ಮಾಶ್ ಮಾಡಿ. ಅದನ್ನು ಮುಲ್ತಾನಿ ಮಿಟ್ಟಿ ಯೊಂದಿಗೆ ಬೆರೆಸಿ. ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ವಾರದಲ್ಲಿ 2 ದಿನ ಇದನ್ನು ಮುಖಕ್ಕೆ ಹಚ್ಚಿಕೊಂಡರೆ ನಿಮ್ಮ ಒಣ ಚರ್ಮವನ್ನು ಕೋಮಲವನ್ನಾಗಿಸುತ್ತದೆ.
ಟ್ಯಾನ್ ನಿವಾರಣೆ
ಚರ್ಮ ಟ್ಯಾನ್ ಆಗಿದ್ದರೆ, 1 ಟೊಮೇಟೊ ಪಪ್ಪಾಯಿ ಹಣ್ಣು ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ನಿಮ್ಮ ಮುಖದ ಟ್ಯಾನ್ ನಿವಾರಣೆ ಆಗುತ್ತದೆ.
ಡಾರ್ಕ್ ಸರ್ಕಲ್‌ಗೆ
1 ಟೀಸ್ಪೂನ್ ಹಸಿ ಹಾಲು ಮತ್ತು ಪಪ್ಪಾಯಿ ತುಂಡುಗಳನ್ನು ಹಾಕಿ ಮಿಶ್ರಣ ಮಾಡಿ, ಪೇಸ್ಟ್ ಮುಖ ಮತ್ತು ಕುತ್ತಿಗೆ ಸಮಾನವಾಗಿ ಹಚ್ಚಿಕೊಳ್ಳಿ. 10-15 ನಿಮಿಷಗಳ ಕಾಲ ಒಣಗಲು ಬಿಡಿ ಇದರಿಂದ ನಿಮ್ಮ ಕಣ್ಣಿನ ಕಪ್ಪು ಕಲೆ ನಿವಾರಣೆಯಾಗುತ್ತದೆ.
– ಪೂರ್ಣಿಮಾ ಪೆರ್ಣಂಕಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.