ಹಲ್ಲಿನ ಆರೈಕೆ ಹೇಗೆ?
Team Udayavani, Jan 7, 2020, 4:34 AM IST
ಮುಖದ ಸೌಂದರ್ಯ ಹೆಚ್ಚಿಸಲು ನಗು ಅತ್ಯಗತ್ಯ. ಇದರ ಜತೆ ಸೌಂದರ್ಯದ ಹೊಳಪಿಗೆ ಬಿಳಿ ಹಲ್ಲುಗಳು ಮುಖ್ಯ ಪಾತ್ರ ವಹಿಸುತ್ತವೆ. ಹಲ್ಲುಗಳ ಸಂರಕ್ಷಣೆಗಾಗಿ ಪ್ರತಿದಿನ ಶುಚಿಗೊಳಿಸುತ್ತೇವೆ. ಇದು ಹಲ್ಲುನೋವು, ಒಸಡಿನಿಂದ ರಕ್ತ ಬರುವುದು, ರೂಟ್ ಕ್ಯಾನಲ್ ಮತ್ತು ಹಲವು ಹಲ್ಲುಗಳ ಸಂಬಂಧಿಸಿ ಕಾಡುವ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. ಹಲ್ಲುಗಳ ಬಗ್ಗೆ ಮುತುವರ್ಜಿ ವಹಿಸದಿದ್ದರೆ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹಲ್ಲಿನ ಆರೋಗ್ಯಕ್ಕೆ ಅವಶ್ಯವಾದ ಟಿಪ್ಸ್‌ಗಳನ್ನು ಇಲ್ಲಿ ನೀಡಲಾಗಿದೆ.
ಸಿಹಿ ತಿಂಡಿಗಳು ಹಾನಿಕಾರಕ
ಕ್ಯಾಂಡಿ, ಬಿಸ್ಕತ್, ಕೇಕ್, ಪೇಸ್ಟ್ರಿಯಂತಹ ಸಿಹಿ ತಿಂಡಿಗಳು ಆರೋಗ್ಯಕಾರಿ ಹಲ್ಲುಗಳ ಶತ್ರುಗಳು. ಇವುಗಳ ಸೇವನೆಯಿಂದ ಹಲ್ಲುಗಳಲ್ಲಿ ಕ್ಯಾವಿಟಿ, ರೂಟ್ ಕ್ಯಾನಲ್ ಸಮಸ್ಯೆಗಳು ಕಾಡುವ ಸಂಭವವಿದೆ. ಇಂತಹ ತಿಂಡಿಗಳ ಸೇವನೆಯನ್ನು ಮಿತಗೊಳಿಸುವುದು ಉತ್ತಮ.
ಹಳದಿ ಹಲ್ಲುಗಳು
ಹಳದಿ ಹಲ್ಲುಗಳು ನೋಡಲು ಕೆಟ್ಟದಾಗಿ ಕಾಣಿಸುತ್ತವೆ. ಹಲ್ಲುಗಳಲ್ಲಿ ಇರುವ ಕಲೆಗಳು ನಿಮ್ಮ ಮುಖದ ಸೌಂದರ್ಯ ಕೆಡಿಸಬಹುದು. ಇಂತಹ ಸಮಸ್ಯೆಯನ್ನು ಕಡಿಮೆ ಮಾಡಲು ಬೇಕಿಂಗ್ ಪೌಡರ್‌ನಿಂದ ಹಲ್ಲುಜ್ಜುವುದು ಉತ್ತಮ. ಟೂತ್ ಪೇಸ್ಟ್‌ಗೆ ಬದಲು ಉಪ್ಪನ್ನು ಬಳಸಬಹುದಾಗಿದೆ.
ವೈದ್ಯರ ಭೇಟಿ
ವರ್ಷದಲ್ಲಿ ಒಂದೆರಡು ಸಲವಾದರೂ ದಂತ ವೈದ್ಯರನ್ನು ಭೇಟಿಯಾಗಿ ಹಲ್ಲಿನ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಿ. ಒಸಡು ಮತ್ತು ಹಲ್ಲುಗಳ ಸಮಸ್ಯೆಯನ್ನು ತಿಳಿದುಕೊಳ್ಳಿ. ಹಲ್ಲುಗಳನ್ನು ಸ್ವತ್ಛ ಮಾಡಿಸಿಕೊಳ್ಳಿ. ಇದರಿಂದ ಹಲ್ಲುಗಳಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಬಹುದು.
ದಂತ ಹಾಗೂ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ದಿನದಲ್ಲಿ 2 ಬಾರಿ ಹಲ್ಲುಜ್ಜಬೇಕು. ಹೆಚ್ಚಿನವರು ಹಲ್ಲುಗಳಿಗೆ ಮಾತ್ರ ಬ್ರಶ್ ಮಾಡಿ, ಬಾಯಿಯ ಉಳಿದ ಭಾಗಗಳನ್ನು ಕಡೆಗಣಿಸುತ್ತಾರೆ. ನಾಲಗೆಯಲ್ಲಿ ಮೆತ್ತಿಕೊಂಡಿರುವ ಬಿಳಿ ಪದರ ತೆಗೆಯಲು ಬ್ರಶ್ ಅಥವಾ ಟಂಗ್ ಕ್ಲೀನರ್ ಬಳಸಿ. ಒಸಡುಗಳನ್ನು ಶುಚಿಗೊಳಿಸುವುದು ಅತ್ಯಗತ್ಯ. ಟೂತ್ ಬ್ರಶ್ ಅನ್ನು ಆಗಾಗ ಬದಲಾಯಿಸುತ್ತಾ ಇರಬೇಕು.
ಪೌಷ್ಟಿಕ
ಆಹಾರ ಸೇವನೆ
ಹಲ್ಲುಗಳನ್ನು ಸದೃಢಗೊಳಿಸಲು ಮತ್ತು ಅರೋಗ್ಯಕರವಾಗಿಸಲು ಕ್ಯಾಲ್ಸಿಯಂ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರ ಸೇವನೆ ಅಗತ್ಯ. ಕರಿದ ತಿಂಡಿ, ಸಿಹಿ ಪದಾರ್ಥಗಳು ಹಲ್ಲಿನ ಆರೋಗ್ಯಕ್ಕೆ ಉತ್ತಮವಲ್ಲ. ಕ್ಯಾಲ್ಸಿಯಂ ಹೇರಳವಾಗಿರುವ ಚಿಕನ್, ನಟ್ಸ್, ಹಾಲು, ಮೀನುಗಳ ಸೇವನೆ ಹಲ್ಲುಗಳನ್ನು ಗಟ್ಟಿಯಾಗಿಸುತ್ತದೆ. ಇದರ ಜತೆ ಸೇಬು ಮತ್ತು ತರಕಾರಿಗಳ ಸೇವನೆ ಒಳ್ಳೆಯದು.
-ಜಯಶಂಕರ್ ಜೆ., ಸುಬ್ರಹ್ಮಣ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.