ಅರಿಶಿನ ಟೀ ನಿಮಗೆಷ್ಟು ಗೊತ್ತು ?
Team Udayavani, Jan 21, 2020, 5:49 AM IST
ಅರಿಶಿನವು ಹಲವು ಕಾಯಿಲೆಗಳಿಗೆ ಮದ್ದು. ಹೀಗಾಗಿ ಆಯುರ್ವೇದದಲ್ಲಿ ಇದಕ್ಕೆ ಪ್ರಮುಖ ಸ್ಥಾನವಿದೆ. ನಾವು ಸಾಮಾನ್ಯವಾಗಿ ಲೆಮನ್ ಟೀ, ಪುದೀನಾ ಟೀ ಸಹಿತ ಇನ್ನಿತರ ಮಾದರಿಯ ಟೀ ಗಳನ್ನು ಕುಡಿದಿರುತ್ತೇವೆ. ಅದರಲ್ಲಿ ಈಗ ಅರಿಶಿನ ಟೀ ಕೂಡ ಸೇರಿಸಿಕೊಳ್ಳಿ.
ಅರಿಶಿನ ಟೀ ಮಾಡಲು 3- 4 ಕಪ್ ನೀರನ್ನು ಬಿಸಿ ಮಾಡಿ ಅದಕ್ಕೆ 2 ಚಮಚ ಅರಿಶಿನ ಹುಡಿಯನ್ನು ಸೇರಿಸಿ 5ರಿಂದ 10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ಬಳಿಕ ಸೋಸಿ ಅಗತ್ಯವಿದ್ದಷ್ಟು ಜೇನುತುಪ್ಪ, ನಿಂಬೆ ಅಥವಾ ಕಿತ್ತಳೆ ಹಣ್ಣಿನ ಜ್ಯೂಸ್ ಬೇಕಿದ್ದರೆ ಬಾದಾಮಿ ಹಾಲು ಅಥವಾ ತೆಂಗಿನ ಹಾಲು ಸೇರಿಸಿ ಕುಡಿಯಬಹುದು. ಅರಸಿನ ಟೀ ಕುಡಿಯುವುದರಿಂದ ಹಲವು ಆರೋಗ್ಯಕರ ಲಾಭಗಳಿವೆ.
– ಮಧ್ಯ ವಯಸ್ಸಿನಲ್ಲಿ ಕಾಡುವ ಸಂಧಿ ವಾತವನ್ನು ತಡೆಗಟ್ಟುವಲ್ಲಿ ಅರಿಶಿನ ಟೀ ಪ್ರಯೋಜನಕಾರಿಯಾಗಿದೆ.
– ಅರಿಶಿನವು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ದೇಹವನ್ನು ಚೈತನ್ಯ ಶೀಲ ಗೊಳಿಸುತ್ತದೆ ಎಂಬುದು ಸಂಶೋಧನೆ ಯಿಂದ ತಿಳಿದು ಬಂದಿದೆ.
– ರಕ್ತದೊತ್ತಡ ಹೆಚ್ಚಾದಾಗ ಹೃದಯಾ ಘಾತವಾಗುವ ಸಾಧ್ಯತೆ ಇರುತ್ತದೆ. ಆದರೆ ಅರಿಶಿನ ಟೀ ರಕ್ತದೊತ್ತಡವನ್ನು ನಿಯಂತ್ರಣ ಮಾಡುವುದರಿಂದ ಹೃದಯದ ಆರೋಗ್ಯಕ್ಕೂ ಇದು ಲಾಭದಾಯಕವಾಗಿದೆ.
– ಅನಾರೋಗ್ಯಕರ ಜೀವನ ಶೈಲಿ ಮತ್ತು ಆಹಾರ ಸೇವನೆಯಿಂದ ಕಿಡ್ನಿ ಸಮಸ್ಯೆ ಉಂಟಾಗುತ್ತದೆ. ಅರಿಶಿನ ಟೀಯು ಕಿಡ್ನಿಯ ಹಲವು ತೊಂದರೆಗಳಿಗೆ ಔಷಧವಾಗಿದೆ.
– ಅರಿಶಿನ ಟೀ ಸೇವನೆಯಿಂದ ಮಧು ಮೇಹವನ್ನೂ ನಿಯಂತ್ರಣದಲ್ಲಿ ಇರಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.