ಓಟದ ವೇಗ ಹೆಚ್ಚಿಸಿ
Team Udayavani, Feb 4, 2020, 4:40 AM IST
ಕ್ಯಾಲರಿ ಕರಗಿಸಲು ವೇಗದ ಓಟ ಅತ್ಯುತ್ತಮ ಮಾರ್ಗ ಎನ್ನುತ್ತಾರೆ ತಜ್ಞರು. ದೂರದ ನಡಿಗೆ ಅಥವಾ ಜಾಗಿಂಗ್‌ಗಿಂತ ಕಡಿಮೆ ದೂರದ ವೇಗದ ಓಟದಿಂದ ಕೊಬ್ಬು ವೇಗವಾಗಿ ಕರಗುತ್ತದೆ ಎನ್ನುತ್ತದೆ ಅಧ್ಯಯನ. ಇನ್ನೊಂದು ಮುಖ್ಯ ವಿಚಾರ ಎಂದರೆ ಒಮ್ಮಿಂದೊಮ್ಮೆಲೇ ಇದನ್ನು ಅಳವಡಿಸಿಕೊಳ್ಳಲು ಹೋಗಬಾರದು. ಇದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಪೂರಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.
ಓಟ ಆರಂಭಿಸುವ ಮುನ್ನ 4-5 ನಿಮಿಷದ ನಡಿಗೆ, ಚಿಕ್ಕದಾದ ಜಾಗಿಂಗ್ ಮಾಡುವುದು ಉತ್ತಮ.
ಓಟ ಆರಂಭದ ಸುಮಾರು 30 ಸೆಕೆಂಡ್ ಮಧ್ಯಮ ವೇಗದಲ್ಲಿರಲಿ.
ಸುಮಾರು 20 ನಿಮಿಷ ಈ ಥರದ ಓಟವಿರಲಿ.
ಮುಂದಿನ ಹಂತ
ಈ ಥರದ ಆರಂಭಿಕ ಹಂತವನ್ನು ನೀವು ಪ್ರಾಯೋಗಿಕವಾಗಿ ಜಾರಿಗೊಳಿಸಿದ ಅನಂತರ ಮುಂದಿನ ಹೆಜ್ಜೆ ಇಡಬಹುದು. ಈಗ ನೀವು ಓಟದ ಸಮಯವನ್ನು ಹೆಚ್ಚಿಸಬಹುದು. ಇದಕ್ಕೆ ನಡೆಸಬೇಕಾದ ತಯಾರಿ:
ಆರಂಭದ ಹಂತದಂತೆ ಇಲ್ಲೂ 5 ನಿಮಿಷ ವಾಕಿಂಗ್, ಜಾಗಿಂಗ್ ನಡೆಸಿ.
ಅನಂತರ ಶೇ. 80ರಷ್ಟು ಬಲ ಪ್ರಯೋಗಿಸಿ 45 ಸೆಕೆಂಡ್ ಓಡಿ.
ಬಳಿಕ ವೇಗ ಸ್ವಲ್ಪ ತಗ್ಗಿಸಿ.
ಮತ್ತೆ ಇದನ್ನು ಪುನರಾವರ್ತಿಸಿ. ಹೀಗೆ 20ರಿಂದ 30 ನಿಮಿಷ ವ್ಯಾಯಾಮ ಮಾಡಬಹುದು.
ಉಪಯೋಗ
ಈ ಥರದ ವ್ಯಾಯಾಮ ಹೃದಯ ರಕ್ತನಾಳದ ಸಾಮರ್ಥ್ಯ ಹೆಚ್ಚಿಸುತ್ತದೆ. ಮಾತ್ರವಲ್ಲ ಕ್ಯಾಲರಿಯನ್ನು ಗರಿಷ್ಠ ಪ್ರಮಾಣದಲ್ಲಿ ಕರಗಿಸುತ್ತದೆ. ಜತೆಗೆ ಸ್ನಾಯುಗಳನ್ನು ದೃಢಗೊಳಿಸುತ್ತದೆ ಎನ್ನುತ್ತದೆ ಅಧ್ಯಯನ.
ಈ ರೀತಿಯ ವೇಗದ ಓಟಕ್ಕೆ ತುಂಬಾ ಶಕ್ತಿ ಅಗತ್ಯವಿರುವುದರಿಂದ ನಿಮ್ಮಲ್ಲಿ ಹೊಸ ಲವಲವಿಕೆ ಮೂಡುತ್ತದೆ. ಇಡೀ ದಿನ ಚಟುವಟಿಕೆಯಿಂದ ಇರಲು ನೆರವಾಗುತ್ತದೆ.
ಒತ್ತಡ ನಿವಾರಣೆ
ಸ್ಪ್ರಿಂಟ್ ವ್ಯಾಯಾಮ ಎಂದು ಕರೆಯಲ್ಪಡುವ ಈ ಮಾದರಿಯ ಓಟ ದೈಹಿಕ ದೃಢತೆ ಮಾತ್ರವಲ್ಲ ಮಾನಸಿಕ ದೃಢತೆಗೆ ಸಹಕಾರಿ. ಅಂದರೆ ಇದನ್ನು ಒತ್ತಡ ನಿವಾರಣೆಗಾಗಿಯೂ ಜೀವನದಲ್ಲಿ ಅಳವಡಿಸಿಕೊಳ್ಳಬಹುದು. ಹೀಗಾಗಿ ಸ್ಪ್ರಿಂಟ್ ವ್ಯಾಯಾಮ ನಿಮ್ಮ ದಿನಚರಿಯ ಭಾಗವಾಗಲಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.